ಡಿಸೆಂಬರ್ ಆರಂಭದಿಂದಲೂ ಬಿಕ್ಕಟ್ಟು ಎದುರಿಸುತ್ತಿರುವ ಇಂಡಿಗೋ ಏರ್ ಲೈಲ್ಸ್ ಸಂಸ್ಥೆಗೆ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಎಚ್ಚರಿಕೆ ನೀಡಿದ್ದಾರೆ.
“ಇಂಡಿಗೋದಲ್ಲಿನ ಅಡಚಣೆಗಳು ಸ್ಥಿರವಾಗುತ್ತಿವೆ; ದೇಶಾದ್ಯಂತ ಎಲ್ಲಾ ಇತರ ವಿಮಾನಯಾನ ಸಂಸ್ಥೆಗಳು ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ. ದೇಶಾದ್ಯಂತ ವಿಮಾನ ನಿಲ್ದಾಣಗಳು ಸಾಮಾನ್ಯ ಪರಿಸ್ಥಿತಿಯನ್ನು ವರದಿ ಮಾಡುತ್ತಿವೆ, ಯಾವುದೇ ಜನಸಂದಣಿ ಅಥವಾ ತೊಂದರೆ ಇಲ್ಲ. ಮರುಪಾವತಿ, ಸಾಮಾನು ಪತ್ತೆಹಚ್ಚುವಿಕೆ ಮತ್ತು ಪ್ರಯಾಣಿಕರ ಬೆಂಬಲ ಕ್ರಮಗಳು ಸಚಿವಾಲಯದ ಮೇಲ್ವಿಚಾರಣೆಯಲ್ಲಿವೆ. ಡಿಜಿಸಿಎ ಇಂಡಿಗೋದ ಹಿರಿಯ ನಾಯಕತ್ವಕ್ಕೆ ಶೋ-ಕಾಸ್ ನೋಟಿಸ್‌ಗಳನ್ನು ನೀಡಿದೆ ಮತ್ತು ವಿವರವಾದ ಜಾರಿ ತನಿಖೆಯನ್ನು ಪ್ರಾರಂಭಿಸಿದೆ. ವರದಿಯ ಆಧಾರದ ಮೇಲೆ, ಕಠಿಣ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾವುದೇ ವಿಮಾನಯಾನ ಸಂಸ್ಥೆ, ಎಷ್ಟೇ ದೊಡ್ಡದಾಗಿದ್ದರೂ, ಯೋಜನಾ ವೈಫಲ್ಯಗಳು, ಅನುಸರಣೆಯ ಕೊರತೆಯ ಮೂಲಕ ಪ್ರಯಾಣಿಕರಿಗೆ ಅಂತಹ ತೊಂದರೆ ಉಂಟುಮಾಡಲು ಅನುಮತಿಸಲಾಗುವುದಿಲ್ಲ…” ಎಂದಿದ್ದಾರೆ.
ಎರಡನೇ ವಾರಕ್ಕೆ ಅವ್ಯವಸ್ಥೆ ವಿಸ್ತರಿಸಿದ್ದರಿಂದ ಮಂಗಳವಾರ ಸುಮಾರು 500 ಇಂಡಿಗೋ ವಿಮಾನಗಳನ್ನು ರದ್ದುಗೊಳಿಸಲಾಯಿತು. ಆದಾಗ್ಯೂ, ಕಳೆದ ವಾರಕ್ಕಿಂತ ರದ್ದತಿಗಳು ತುಂಬಾ ಕಡಿಮೆಯಾಗಿದ್ದವು.
ವಿಮಾನ ನಿಲ್ದಾಣಗಳು ಅಸ್ತವ್ಯಸ್ತವಾಗಿರುವ ದೃಶ್ಯಗಳಿಗೆ ಸಾಕ್ಷಿಯಾಗುತ್ತಿದ್ದಂತೆ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಮಧ್ಯಪ್ರವೇಶಿಸಿ, ಹೊಸ ವಿಮಾನ ಕರ್ತವ್ಯ ಸಮಯ ಮಿತಿ (FDTL) ಮಾನದಂಡಗಳ ಅಡಿಯಲ್ಲಿ ಪೈಲಟ್‌ಗಳಿಗೆ ಕಠಿಣ ರಾತ್ರಿ ಕರ್ತವ್ಯ ನಿಯಮಗಳಿಂದ ಇಂಡಿಗೋಗೆ ತಾತ್ಕಾಲಿಕ ವಿನಾಯಿತಿ ನೀಡಿದೆ.
ಆದಾಗ್ಯೂ, ಈ ಕ್ರಮವು ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಭಾರತದ ದೇಶೀಯ ಸಂಚಾರದ ಸುಮಾರು ಮೂರನೇ ಎರಡರಷ್ಟು ಭಾಗವನ್ನು ನಿಯಂತ್ರಿಸುವ ಇಂಡಿಗೋದ ಕೈವಾಡದ ನಂತರ ಕೇಂದ್ರವು ಮಣಿದಿದೆ ಎಂದು ತಜ್ಞರು ಆರೋಪಿಸಿದ್ದಾರೆ.


