Homeಮುಖಪುಟಪೆಗಾಸಸ್‌ ತಯಾರಕ ಸಂಸ್ಥೆಯನ್ನು ನಿಷೇಧಿಸುವ ಪ್ರಸ್ತಾಪ ಇಲ್ಲ: ಒಕ್ಕೂಟ ಸರ್ಕಾರ

ಪೆಗಾಸಸ್‌ ತಯಾರಕ ಸಂಸ್ಥೆಯನ್ನು ನಿಷೇಧಿಸುವ ಪ್ರಸ್ತಾಪ ಇಲ್ಲ: ಒಕ್ಕೂಟ ಸರ್ಕಾರ

- Advertisement -
- Advertisement -

ದೇಶದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಪೆಗಾಸಸ್‌ ತಯಾರಕ ಸಂಸ್ಥೆಯಾದ ‘ಎನ್‌ಎಸ್‌ಒ ಗ್ರೂಪ್’ ಅನ್ನು ನಿಷೇಧಿಸುವ ಯಾವುದೆ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಒಕ್ಕೂಟ ಸರ್ಕಾರ ಹೇಳಿದೆ. ಪೆಗಾಸಸ್ ಅನ್ನು ಅಭಿವೃದ್ಧಿಪಡಿಸಿದ ‘ಎನ್‌ಎಸ್‌ಒ’ ಅನ್ನು ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಒಕ್ಕೂಟ ಸರ್ಕಾರದ ಕಿರಿಯ ಐಟಿ ಸಚಿವರು ಇಂದು ಸಂಸತ್ತಿಗೆ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಸಂಸದರಾದ ವಿಶಂಭರ್ ಪ್ರಸಾದ್ ನಿಶಾದ್ ಮತ್ತು ಸುಖರಾಮ್ ಸಿಂಗ್ ಯಾದವ್ ಅವರು ಎನ್ಎಸ್ಒ ಗ್ರೂಪ್ ಮತ್ತು ಸೈಬರ್‌ ಕಣ್ಗಾವಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತೊಂದು ಇಸ್ರೇಲಿ ಸಂಸ್ಥೆಯಾದ ಕ್ಯಾಂಡಿರುವನ್ನು ಭಾರತದಲ್ಲಿ ಯಾಕೆ ನಿಷೇಧಿಸಲಾಗಿಲ್ಲ ಎಂದು ಒಕ್ಕೂಟ ಸರ್ಕಾರಕ್ಕೆ ಪ್ರಶ್ನಿಸಿದ್ದರು.

ಇದನ್ನೂ ಓದಿ:ಪೆಗಾಸಸ್‌ ಪ್ರಕರಣ: ಸ್ವತಂತ್ರ ತನಿಖೆ ನಡೆಸಲಿರುವ ಸಮಿತಿ ಸದಸ್ಯರು ಇವರು

ಆದರೆ ಸರ್ಕಾರವು ಎಲ್ಲಾ ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ನೀಡಿಲ್ಲ.

ವಾಸ್ತವದಲ್ಲಿ ಈ ತಿಂಗಳ ಆರಂಭದಲ್ಲಿ ಅಮೇರಿಕಾವು, ಅಧಿಕಾರಿಗಳು, ಪತ್ರಕರ್ತರು ಮತ್ತು ಇತರರನ್ನು ಗುರಿಯಾಗಿಸಲು ಬಳಸುವ ಸ್ಪೈವೇರ್ ಅನ್ನು ವಿದೇಶಿ ಸರ್ಕಾರಗಳಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ NSO ಗ್ರೂಪ್ ಮತ್ತು Candiru ಅನ್ನು ವ್ಯಾಪಾರ ಕಪ್ಪುಪಟ್ಟಿಗೆ ಸೇರಿಸಿದೆ.

ಈ ವರ್ಷದ ಆರಂಭದಲ್ಲಿ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಪೆಗಾಸಸ್ ಹಗರಣವು ಸ್ಫೋಟಗೊಂಡಿತ್ತು. ಬಿಜೆಪಿಯನ್ನು ಟೀಕಿಸುವ ಪ್ರತಿಪಕ್ಷ ನಾಯಕರು ಮತ್ತು ಪತ್ರಕರ್ತರ ಫೋನ್ ಸಂಖ್ಯೆಗಳು ಸಂಭಾವ್ಯ ಹ್ಯಾಕಿಂಗ್ ಗುರಿಗಳ ಡೇಟಾಬೇಸ್‌ನಲ್ಲಿ ಕಂಡುಬಂದಿದೆ ಎಂದು ದಿ ವೈರ್‌ ಸೇರಿದಂತೆ ಅಂತರರಾಷ್ಟ್ರೀಯ ಮಾಧ್ಯಮ ಒಕ್ಕೂಟವು ಹೇಳಿತ್ತು.

ಇದರ ಬಗ್ಗೆ ತನಿಖೆ ನಡೆಸಬೇಕು ಎಂಬ ಪ್ರತಿಪಕ್ಷಗಳ ಕರೆಗೆ ಒಕ್ಕೂಟ ಸರ್ಕಾರವು ವಿರೋಧಿಸಿತ್ತು. ಆದರೆ ಕಳೆದ ತಿಂಗಳು ನ್ಯಾಯಾಲಯವು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದು, ಎರಡು ತಿಂಗಳಲ್ಲಿ ವರದಿಯನ್ನು ನೀಡಬೇಕು ಎಂದು ಹೇಳಿದೆ.

ಇದನ್ನೂ ಓದಿ:ಪೆಗಾಸಸ್ ಪ್ರಕರಣ: ಕೇಂದ್ರದ ಅಸ್ಪಷ್ಟ ನಿರಾಕರಣೆ ಸಾಕಾಗದು, ಸ್ವತಂತ್ರ ತನಿಖೆ ಅಗತ್ಯ- ಸುಪ್ರೀಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಜನ ಸತ್ತರೆ ತಲೆ ಕೆಡಿಸಿ ಕೊಳ್ಳದ ಸರ್ಕಾರಕ್ಕೆ, ನಾವು ಒದರೆ ಎಷ್ಟು ಬಿಟ್ಟರೆ ಎಷ್ಟು? ನಿಷೇದಿಸಿದರೆ ಮಾಲ್ ನವರಿಗೆ ಲಾಸ್ ಅಷ್ಟೇ….

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿ ದಾರಿ ತಪ್ಪಿಸುವ ಜಾಹೀರಾತು ಪ್ರಕರಣ; ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ರಾಮ್‌ದೇವ್‌ಗೆ ಸುಪ್ರೀಂ ತಪರಾಕಿ

0
ಪತಂಜಲಿ ಉತ್ಪನ್ನಗಳ ದಾರಿತಪ್ಪಿಸುವ ಜಾಹೀರಾತು ಪ್ರಕರಣದಲ್ಲಿ ಸಾರ್ವಜನಿಕ ಕ್ಷಮೆಯಾಚಿಸುವಂತೆ ಯೋಗ ಗುರು ರಾಮ್‌ದೇವ್, ಅವರ ಸಹಾಯಕ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಒಂದು ವಾರ ಕಾಲಾವಕಾಶ ನೀಡಿದೆ. ಆದರೆ, ಈಗ ಅವರನ್ನು...