Homeಮುಖಪುಟಪರೇಶ್ ಮೇಸ್ತ ಕುಟುಂಬಕ್ಕೆ ನಾನು ಕೊಟ್ಟ 50 ಸಾವಿರ ರೂ. ಏನಾಯಿತು? ಮಾಜಿ ಸಚಿವ ಆರ್.ವಿ.ದೇಶಪಾಂಡೆ

ಪರೇಶ್ ಮೇಸ್ತ ಕುಟುಂಬಕ್ಕೆ ನಾನು ಕೊಟ್ಟ 50 ಸಾವಿರ ರೂ. ಏನಾಯಿತು? ಮಾಜಿ ಸಚಿವ ಆರ್.ವಿ.ದೇಶಪಾಂಡೆ

- Advertisement -
- Advertisement -

ಕಳೆದ ಅಸೆಂಬ್ಲಿ ಚುನಾವಣೆ ಹೊತ್ತಲ್ಲಿ ಸ್ಥಳಿಯ ಮೀನುಗಾರ ಹುಡುಗ ಪರೇಶ್ ಮೇಸ್ತ ಮರಣವಾಗಿತ್ತು. ಹಾಗಾಗ ಬಾರದಿತ್ತು. ಆ ಬಗ್ಗೆ ನನಗೆ ನೋವಿದೆ. ಆಗ ನಾನು ಮಂತ್ರಿಯಾಗಿದ್ದೆ. ಮಾನವೀಯತೆಯಿಂದ ಪರೇಶ್ ಮನೆಗೆ ಹೋಗಿ ಸಾಂತ್ವನ ಹೇಳಿ ಆತನ ತಂದೆಗೆ ವೈಯಕ್ತಿವಾವಾಗಿ 50,000 ರೂ.ಕೊಟ್ಟು ಬಂದಿದ್ದೆ. ಈ ಸಹಾಯ ತಮಗೆ ಬೇಡವೆಂದು ಪರೇಶ್ ತಂದೆ ಕಮಲಾಕರ ಮೇಸ್ತ ಹೇಳಿದ್ದಾರೆಂದು ಕೇಳಿ ತಿಳಿದುಕೊಂಡಿದೇನೆ ಎಂದು ಹೊನ್ನಾವರದಲ್ಲಿ ನಡೆದ ಕಾಂಗ್ರೆಸ್‌ನ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.

ಆದರೆ ಆ ಹಣ ಈವರೆಗೆ ನನಗೆ ತಲುಪಿಲ್ಲ. ಅದು ಏನಾಯಿತೆಂಬುದು ಗೊತ್ತಾಗಿಲ್ಲ. ಅದು ವಾಪಸ್ ಬರಬೇಕೆಂದು ನಾನು ಬಯಸಿಲ್ಲ. ಆ ನಿರೀಕ್ಷೆಯೂ ನನಗಿಲ್ಲ. ಆ ಹಣ ಪರೇಶ್ ಕುಟುಂಬದವರು ಬಳಸಿಕೊಂಡಿದ್ದರೆ ನನಗೆ ಸಂತೋಷ. ಆ ಕಿಂಚಿತ್ತು ಸಹಾಯ ನನ್ನಿಂದಾಗಿದ್ದರೆ ನನ್ನ ಆತ್ಮಕ್ಕೂ ತೃಪ್ತಿ ಎಂದು ಹೇಳಿದ ದೇಶಪಾಂಡೆ, ಅಂದು ಆ ಸಾವಿನ ಬಗ್ಗೆ ನಮ್ಮ ಸರ್ಕಾರ ತನಿಖೆ ಮಾಡುವುದರಲ್ಲಿತ್ತು. ಆದರೆ ಬಿಜೆಪಿಯವರು ಸಿಬಿಐ ತನಿಖೆಯೇ ಬೇಕೆಂದು ಒತ್ತಾಯಿಸಿದ್ದರು. ನಾವು ಸಿಬಿಐಗೆ ಕೇಸ್ ವಹಿಸಿದ್ದೆವು. ಆದರೆ ನಾಲ್ಕು ವರ್ಷ ಕಳೆದರೂ ತನಿಖೆ ಯಾವ ಹಂತದಲ್ಲಿದೆ? ಏನಾಗಿದೆಯೆಂಬುದು ಯಾರಿಗೂ ಗೊತ್ತಿಲ್ಲ. ಈಗ ಎರಡೂ ಕಡೆ ಬಿಜೆಪಿಯವರೆ ಆಡಳಿತ ನಡೆಸಿದ್ದಾರೆಂದು ಮಾರ್ಮಿಕವಾಗಿ ನುಡಿದರು.

ದೇಶಪಾಂಡೆ ನೆರವು ತನಗೆ ಬೇಡವೆಂದು ಪರೇಶ್ ತಂದೆಯಿಂದ ಪತ್ರಿಕಾ ಗೋಷ್ಠಿ ಕರೆಯಿಸಿ ಬಿಜೆಪಿಯವರು ಹೇಳಿಸಿದ್ದರೆಂಬ ಸುದ್ದಿ ಆಗ ಮಾರ್ದನಿಸಿತ್ತು. ಪರೇಶ್ ಮೇಸ್ತ ಸಾವಿಗೀಡಾಗಿದ್ದಾಗ ಹಿಂದುತ್ವ ರಾಜಕಾರಣಕ್ಕೆ ಬಿಜೆಪಿ ಬಳಸಿಕೊಂಡಿತೆಂಬ ಆರೋಪ ಇವತ್ತಿಗೂ ಕೇಳಿಬರುತ್ತಿದೆ. ಹಾಗೆಯೆ ಅಂದು ಪರೇಶ್ ಕುಟುಂಬಕ್ಕೆ ಬಂದಿದ್ದ ಆರ್ಥಿಕ ನೆರವು ಮದ್ಯವರ್ತಿಗಳ ಪಾಲಾಗಿದೆ ಎಂಬ ಮಾತೂ ಕೇಳಿಬಂದಿತ್ತು. ಈಗ ಮಾಜಿ ಸಚಿವ ದೇಶಪಾಂಡೆಯವರು ತಾನು ನೀಡಿದ ಸಹಾಯ ಧನ ಏನಾಯಿತೆಂದು ಪ್ರಶ್ನಿಸಿರುವುದು ಆ ಅನುಮಾನವನ್ನು ಪುಷ್ಟಿಕರಿಸುವಂತಿದೆ ಎಂಬ ಚರ್ಚೆಗೆ ಗ್ರಾಸವಗಿದೆ.

ಉತ್ತರ ಕನ್ನಡದಲ್ಲಿ ವಿಧಾನ ಪರಿಷತ್ ಚುನಾವಣೆ ಕಾವೇರಿದ್ದು, ಸಮಬಲದ ಆಖಾಡದಲ್ಲಿ ಕಾಂಗ್ರೆಸ್-ಬಿಜೆಪಿ ಘಟಾನುಘಟಿಗಳು ದಾಳಿ-ಪ್ರತಿದಾಳಿ ಬಿರುಸಾಗಿ ನಡೆಸಿದ್ದಾರೆ. ಕಾರವಾರ-ಅಂಕೋಲಾದಲ್ಲಿ ಕಾಂಗ್ರೆಸ್‌ನ ಪ್ರಚಾರ ಉಸ್ತವಾರಿ ಹೊತ್ತುಕೊಂಡಿರುವ ಮಾಜಿ ಶಾಸಕ ಸತೀಶ್ ಸೈಲ್ ಹೋದಲ್ಲಿ ಬಂದಲ್ಲಿ ಬಿಜೆಪಿಗೆ ಹಿಂದುತ್ವ ಮತ್ತು ಮೀನುಗಾರರ ಮೇಲೆ ಪ್ರೀತಿ ಇದ್ದಿದ್ದರೆ ಮೀನುಗಾರರ ಹುಡುಗ ಪರೇಶ್ ಮೇಸ್ತನ ತಂದೆಯನ್ನು ಎಮ್ಮೆಲ್ಸಿ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: MLC ಚುನಾವಣೆ: ಪರೇಶ್ ಮೇಸ್ತ ತಂದೆಗೇಕೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ? ಮಾಜಿ ಶಾಸಕ ಸತೀಶ್ ಸೈಲ್ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿವಾಹವಾದ ಕಾರಣಕ್ಕೆ ಸೇನಾ ಮಹಿಳಾ ಅಧಿಕಾರಿಯ ವಜಾ; ‘ಲಿಂಗ ತಾರತಮ್ಯ’ ಎಂದ ಸುಪ್ರೀಂಕೋರ್ಟ್‌

0
ವಿವಾಹವಾದ ಕಾರಣಕ್ಕೆ ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಖಾಯಂ ನಿಯೋಜಿತ ಅಧಿಕಾರಿಯನ್ನು ವಜಾ ಮಾಡಿರುವುದು ಸ್ವೇಚ್ಛೆಯ ಹಾಗೂ ಸೂಕ್ಷ್ಮತೆ ಇಲ್ಲದ ಲಿಂಗ ತಾರತಮ್ಯ ಹಾಗೂ ಅಸಮಾನತೆಯನ್ನು ಬಿಂಬಿಸುತ್ತದೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗ‌ಳಾದ ಸಂಜೀವ್ ಖನ್ನಾ...