Homeಮುಖಪುಟ‘ಪಶ್ಚಾತ್ತಾಪವಿಲ್ಲ’: ಮಹಾತ್ಮ ಗಾಂಧಿ ಬಗ್ಗೆ ನೀಡಿದ್ದ ಅವಹೇಳನಕಾರಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಾಳಿಚರಣ್‌

‘ಪಶ್ಚಾತ್ತಾಪವಿಲ್ಲ’: ಮಹಾತ್ಮ ಗಾಂಧಿ ಬಗ್ಗೆ ನೀಡಿದ್ದ ಅವಹೇಳನಕಾರಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಾಳಿಚರಣ್‌

- Advertisement -
- Advertisement -

ಭಾನುವಾರ ಸಂಜೆ ರಾಯ್‌ಪುರದಲ್ಲಿ ನಡೆದ ಧಾರ್ಮಿಕ ಸಮಾವೇಶದಲ್ಲಿ ಮಹಾತ್ಮ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಾರಣಕ್ಕೆ ಮಹಾರಾಷ್ಟ್ರ ಮೂಲದ ಕಾಳಿಚರಣ್‌ ಸ್ವಾಮಿ ವಿರುದ್ದ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲಿ ಎಫ್‌ಐಆರ್‌ ದಾಖಲಾಗಿದೆ. ತನ್ನ ಮೇಲೆ ಎಫ್‌ಐಆರ್‌ ದಾಖಲಾದರೂ ತನಗೆ ಯಾವುದೇ ಪಶ್ಚಾತಾಪವಿಲ್ಲ ಎಂದು ಅವರು ತನ್ನ ಹೇಳಿಕೆಯನ್ನು ಮತ್ತೇ ಸಮರ್ಥಿಸಿಕೊಂಡಿದ್ದಾರೆ.

“ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಅದಕ್ಕೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ” ಎಂದು ಅವರು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ಧರಮ್ ಸಂಸದ್‌ನಲ್ಲಿ ಗಾಂಧಿಜಿಗೆ ಅವಹೇಳನ; ಬಲಪಂಥೀಯ ಸ್ವಾಮಿ ವಿರುದ್ದ FIR

ಕಾಳಿಚರಣ್‌ ವಿರುದ್ದ ಐಪಿಸಿ ಸೆಕ್ಷನ್ 505 (2) ಮತ್ತು 294 ರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ಅವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

“ಧರಮ್‌ ಸಂಸದ್” ಸಭೆಯ ತನ್ನ ಭಾಷಣದಲ್ಲಿ ಕಾಳಿಚರಣ್‌, ಗಾಂಧಿಯನ್ನು ಅವಹೇಳನ ಮಾಡಿ ಅವರನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ಶ್ಲಾಘಿಸಿದ್ದಾರೆ. ಆದರೆ, ಸಭೆಯ ಸಂಚಾಲಕ ಮಹಂತ್‌ ರಾಮ್‌ ಸುಂದರ್‌ ದಾಸ್‌ ಅವರು, ಕಾಳಿಚರಣ್‌ ನೀಡಿರುವ ಹೇಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿ, ಸಭೆಯನ್ನು ಬಹಿಷ್ಕರಿಸಿದ್ದಾರೆ.

ನೀಲಕಂಠ ಸೇವಾ ಸಮಿತಿ ಮತ್ತು ದೂಧಧಾರಿ ಮಠ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಪ್ರಮೋದ್ ದುಬೆ ಮತ್ತು ಬಿಜೆಪಿ ಮುಖಂಡರಾದ ಬ್ರಿಜ್‌ಮೋಹನ್ ಅಗರವಾಲ್ ಮತ್ತು ವಿಷ್ಣು ದೇವ್ ಸಾಯಿ ಉಪಸ್ಥಿತರಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಿಂದೆ ಹರಿದ್ವಾರದಲ್ಲಿ ನಡೆದ ವಿವಾದಾತ್ಮಕ ‘ಧರ್ಮ ಸಂಸದ್’ನಲ್ಲಿ ಅಲ್ಪಸಂಖ್ಯಾತರ ವಿರುದ್ದ ಹೇಳಿಕೆ ನೀಡಿದ್ದ ಸ್ವಾಮಿ ಪ್ರಭೋದಾನಂದ ಗಿರಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ಮಹಾಭಾರತದ ಬಗ್ಗೆ ರಾಹುಲ್‌ ಗಾಂಧಿ ತಪ್ಪುತಪ್ಪಾಗಿ ಹೇಳಿದ್ದಾರೆ ಎನ್ನಲಾಗಿರುವ ಈ ಟ್ವೀಟ್ ಎಡಿಟ್‌ ಮಾಡಿರುವಂತದ್ದು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...