Homeಮುಖಪುಟ‘ಮಾರಾಟ ಮತ್ತು ನಿಯಂತ್ರಣದ ಬಗ್ಗೆ ಯಾರೊಂದಿಗೂ ಮಾತುಕತೆಯಾಗಿಲ್ಲ’ - NDTV ಸ್ಪಷ್ಟೀಕರಣ

‘ಮಾರಾಟ ಮತ್ತು ನಿಯಂತ್ರಣದ ಬಗ್ಗೆ ಯಾರೊಂದಿಗೂ ಮಾತುಕತೆಯಾಗಿಲ್ಲ’ – NDTV ಸ್ಪಷ್ಟೀಕರಣ

- Advertisement -
- Advertisement -

ದೇಶದ ಪ್ರಸಿದ್ದ ಸುದ್ದಿ ಸಂಸ್ಥೆ ಎನ್‌ಡಿಟಿವಿಯನ್ನು ಗೌತಮ್ ಅದಾನಿ ಅವರ ಕಂಪೆನಿ ಖರೀದಿಸಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸೋವಾರದಂದು ಸ್ವತಃ ಎನ್‌ಡಿಟಿ ಸ್ಪಷ್ಟೀಕರಣ ನೀಡಿದ್ದು, ಸಂಸ್ಥೆಯ ನಿಯಂತ್ರಣದಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ಸಂಸ್ಥೆಯನ್ನು ಮಾರಾಟ ಮಾಡುವ ಬಗ್ಗೆ ಮಾತುಕತೆ ನಡೆದಿಲ್ಲ ಎಂದು ಅದು ಹೇಳಿದೆ.

“ಅದಾನಿ ಗ್ರೂಪ್ ಕಂಪನಿ ಎನ್‌ಡಿಟಿವಿಯನ್ನು ಸ್ವಾಧೀನಪಡಿಸಿಕೊಳ್ಳಲಿದ್ದಾರೆ. ಈ ನಡುವೆ ಸೋಮವಾರದಂದು ಎನ್‌ಡಿಟಿವಿ ಸ್ಟಾಕ್‌‌ಗಳು ಶೇರ್‌ ಮಾರುಕಟ್ಟೆಯಲ್ಲಿ 10% ದಷ್ಟು ಹೆಚ್ಚಾಗಿದೆ” ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಇದನ್ನೂ ಓದಿ: ಭಾರತದ ಮಾನವ ಹಕ್ಕುಗಳು ಬಗ್ಗೆ ಯುಎಸ್ ರಕ್ಷಣಾ ಕಾರ್ಯದರ್ಶಿ ಹೇಳಿಕೆ: ಸತ್ಯ ಹೇಳಿದ ಎನ್‌ಡಿಟಿವಿ ಟಾರ್ಗೆಟ್ ಮಾಡಿದ ಬಿಜೆಪಿಗರು!

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಎನ್‌ಡಿಟಿವಿ, “ಎನ್‌ಡಿಟಿವಿ ಲಿಮಿಟೆಡ್‌‌, ತನ್ನ ಮಾಲಿಕತ್ವದ ಬದಲಾವಣೆಗಾಗಿಯೊ ಅಥವಾ ಶೇರುಗಳ ಯಾವುದೆ ಹಂಚಿಕೆಯ ಬಗ್ಗೆ ಯಾವುದೇ ಸಂಸ್ಥೆಯೊಂದಿಗೆ ಮಾತುಕತೆಯಲ್ಲಿ ಇಲ್ಲ” ಎಂದು ಹೇಳಿದೆ.

“ಪತ್ರಕರ್ತರಾಗಿರುವ ರಾಧಿಕಾ ಮತ್ತು ಪ್ರಣೋಯ್ ರಾಯ್ ಸಂಸ್ಥೆಯ ಸಂಸ್ಥಾಪಕ ಪ್ರವರ್ತಕರಾಗಿದ್ದು, ಕಂಪೆನಿಯ 61.45% ಶೇರುಗಳನ್ನು ಹೊಂದಿದ್ದಾರೆ ಮತ್ತು ಸಂಸ್ಥೆ ಅವರದೇ ನಿಯಂತ್ರಣದಲ್ಲಿದೆ” ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ತನ್ನ ಸ್ಟಾಕ್ ಬೆಲೆಯಲ್ಲಿ ಏಕಾಏಕಿ ಏರಿಕೆಯಾದ ಬಗ್ಗೆ ಎನ್‌ಡಿಟಿವಿಗೆ ಯಾವುದೇ ಮಾಹಿತಿ ಇಲ್ಲ ಎಂದು ಅದು ಹೇಳಿದ್ದು, ಈ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ಆಧಾರರಹಿತ ವದಂತಿಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ: ಎನ್‌ಡಿಟಿವಿ ವಿಡಿಯೊ ಬಿಡುಗಡೆ: ಸುಪ್ರೀಂಕೋರ್ಟ್‌ನಲ್ಲಿ ಒಕ್ಕೂಟ ಸರ್ಕಾರ ಸುಳ್ಳು ಹೇಳಿದೆಯೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...