ಕಳೆದ ವಾರ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಜನರಲ್ (ನಿವೃತ್ತ) ಲಾಯ್ಡ್ ಜೆ. ಆಸ್ಟಿನ್ ಅವರು ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದರು. ಮಾನವ ಹಕ್ಕುಗಳ ವಿಷಯದ ಬಗ್ಗೆ ಭಾರತೀಯ ಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿತ್ತು. (ಇದನ್ನು ಆಧರಿಸಿ ನಾನುಗೌರಿ.ಕಾಂ ಕೂಡ ವರದಿ ಮಾಡಿತ್ತು)

ಸಾಮಾಜಿಕ ಮಾಧ್ಯಮದಲ್ಲಿ ಎನ್‌ಡಿಟಿವಿ ಸುಳ್ಳು ವರದಿ ಮಾಡಿದೆ, ಅದು ಪಾಕಿಸ್ತಾನದ ಏಜೆಂಟ್ ಎಂದೆಲ್ಲ ಬಿಜೆಪಿ ಬೆಂಬಲಿಗರು ಎಂದು ಟೀಕಿಸಿದ್ದಾರೆ. ಎಎನ್‌ಐ ಟ್ವೀಟ್ ಒಂದರಲ್ಲಿ ಅಂತಹ ಚರ್ಚೆ ನಡೆದಿಲ್ಲ ಎಂದು ಹೇಳಿದ್ದನ್ನು ಆಧಾರವಾಗಿ ಇಟ್ಟುಕೊಂಡು ಎನ್‌ಡಿಟಿವಿ ಮೇಲೆ ಮುಗಿ ಬಿದ್ದಿದ್ದಾರೆ.

ಅವಿನಾಶ್ ಶ್ರೀವಾಸ್ತವ ಎನ್‌ಡಿಟಿವಿಯ ವರದಿಯನ್ನು ಎಎನ್‌ಐ ಟ್ವೀಟ್‌ನೊಂದಿಗೆ ಹೋಲಿಕೆ ಮಾಡಿದ್ದಾರೆ, ಎಎನ್‌ಐ ಟ್ವೀಟ್‌ನಲ್ಲಿ, ‘ಭಾರತೀಯ ಮೂಲಗಳು’ ತಿಳಿಸಿರುವಂತೆ ಮಾನವ ಹಕ್ಕುಗಳ ಕುರಿತು ಚರ್ಚೆ ನಡೆದಿಲ್ಲ ಎಂದಿದೆ.

ಇನ್ನೊಬ್ಬ ಬಳಕೆದಾರ ಅತುಲ್ ಅಹುಜಾ ಎನ್‌ಡಿಟಿವಿ ‘ಪಾಕಿಸ್ತಾನ ಮೀಡಿಯಾ ಹೌಸ್’ ಎಂದು ಬರೆದಿದ್ದಾರೆ. ಇನ್ನೂ ಹಲವರು ಇದೇ ಬಗೆಯ ಸಂದೇಶ ಹರಡಿದ್ದಾರೆ.

ಫ್ಯಾಕ್ಟ್-ಚೆಕ್

ಎನ್‌ಡಿಟಿವಿ ಮಾತ್ರ ಈ ರೀತಿಯ ಸುದ್ದಿ ವರದಿ ಮಾಡಿಲ್ಲ. ಹಲವಾರು ಮಾಧ್ಯಮಗಳು ಎನ್‌‌ಡಿಟಿವಿಯಂತೆಯೇ ವರದಿ ಮಾಡಿವೆ. ಆದರೆ ಬಿಜೆಪಿ ಬೆಂಬಲಿಗರಿಗೆ ಎನ್‌ಡಿಟಿವಿ, ದಿ ವೈರ್, ನ್ಯೂಸ್‌ಕ್ಲಿಕ್, ದಿ ಪ್ರಿಂಟ್ ನಂತಹ ಸ್ವತಂತ್ರ ಮಾಧ್ಯಮಗಳನ್ನು ಕಂಡರೆ ಆಗದೇನೋ? ಅದಿರಲಿ….

ಅಮೆರಿಕದ ರಕ್ಷಣಾ ಕಾರ್ಯದರ್ಶಿಯೊಂದಿಗಿನ ಸಭೆಯಲ್ಲಿ ಮಾನವ ಹಕ್ಕುಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ವಾಸ್ತವವಾಗಿ, ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ‘ಉನ್ನತ ಮಟ್ಟದ ಮೂಲಗಳನ್ನು’ ಉಲ್ಲೇಖಿಸಿ ಎಎನ್‌ಐ ಮಾಡಿದ ಟ್ವೀಟ್ ಅನ್ನು ಸಾಮಾಜಿಕ ಮಾಧ್ಯಮದ ಬಿಜೆಪಿ ಬೆಂಬಲಿಗ ಬಳಕೆದಾರರು ಹಂಚಿಕೊಂಡಿದ್ದಾರೆ.
ಆದರೆ ಅದಕ್ಕೂ ಮೊದಲು ಇದೇ ಎಎನ್‌ಐ ‘ವಿಶ್ವಾಸಾರ್ಹ’ ಮೂಲಗಳನ್ನು ಉಲ್ಲೇಖಿಸಿ, “ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಮತ್ತು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ನಡುವೆ ನಡೆದ ಒಂದು ಗಂಟೆಯ ಚರ್ಚೆಯಲ್ಲಿ ಮಾನವ ಹಕ್ಕುಗಳ ವಿಷಯವೂ ಸಹ ಕಾಣಿಸಿಕೊಂಡಿದೆ’ ಎಂದು ವರದಿ ಮಾಡಿದೆ.

ಮೇಲಿನ ವರದಿಯ ಎರಡು ದಿನಗಳ ನಂತರ, ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಆಸ್ಟಿನ್ ಅವರೊಂದಿಗೆ ಭಾರತದಲ್ಲಿ ಮಾನವ ಹಕ್ಕುಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ‘ಉನ್ನತ ಮಟ್ಟದ ಭಾರತೀಯ ಮೂಲಗಳು’ ಖಚಿತಪಡಿಸುತ್ತವೆ ಎಂದು ಎಎನ್‌ಐ ಹೇಳಿಕೊಂಡಿದೆ. ಈ ಎರಡನೇ ಟ್ವೀಟ್ ಅಷ್ಟೇ ಬಿಜೆಪಿ ಬೆಂಬಲಿಗರಿಗೆ ಮುಖ್ಯವಾಗಿದೆ.

ಭಾರತದಲ್ಲಿ ಮಾನವ ಹಕ್ಕುಗಳ ವಿಷಯವನ್ನು ಅಮೆರಿಕದ ರಕ್ಷಣಾ ಕಾರ್ಯದರ್ಶಿಯೊಂದಿಗೆ ಚರ್ಚಿಸಲಾಗಿದೆಯೇ?

ಲಾಯ್ಡ್ ಜೆ ಆಸ್ಟಿನ್ ಭಾಗವಹಿಸಿದ ನಡೆದ ಸಮ್ಮೇಳನದ ಸಂಪೂರ್ಣ ಪ್ರತಿಲೇಖನವನ್ನು ಯುಎಸ್ ರಕ್ಷಣಾ ಇಲಾಖೆ ಅಪ್‌ಲೋಡ್ ಮಾಡಿದೆ. ಪ್ರಧಾನಿ ಮೋದಿ ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ ಭಾರತದಲ್ಲಿ, ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯವನ್ನು ಎತ್ತಿದ್ದೀರಾ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿಯನ್ನು ಕೇಳಲಾಯಿತು.

ಪ್ರಧಾನ ಮಂತ್ರಿಯೊಂದಿಗೆ ಚರ್ಚಿಸಲು ತನಗೆ ಅವಕಾಶ ಸಿಗಲಿಲ್ಲ ಎಂದು ಆಸ್ಟಿನ್ ಉತ್ತರಿಸಿದರು ಆದರೆ ಅವರು ಕ್ಯಾಬಿನೆಟ್‌ನ ಇತರ ಸದಸ್ಯರೊಂದಿಗೆ ಸಂಭಾಷಣೆ ನಡೆಸಿದರು ಎಂದು ಹೇಳಿದ್ದಾರೆ ಎಂದು ಅಮೆರಿಕ ರಕ್ಷಣಾ ಇಲಾಖೆ ಅಪ್‌ಲೋಡ್ ಮಾಡಿದೆ.

ಅವರ ಉತ್ತರದ ವೀಡಿಯೊವನ್ನು ಸಹ ಕೆಳಗೆ ನೋಡಬಹುದು.

ಮಾನವ ಹಕ್ಕುಗಳ ಸಮಸ್ಯೆಯನ್ನು ಸಮ್ಮೇಳನದಲ್ಲಿ ತರಲಾಗಿಲ್ಲ ಎಂದು ಹೇಳಲು ಎಎನ್‌ಐ ‘ಮೂಲಗಳನ್ನು’ ಉಲ್ಲೇಖಿಸಿದೆ. ಚರ್ಚೆ ನಡೆದಿಲ್ಲ ಎಂದು ಭಾರತ ಸರ್ಕಾರ ನಿರಾಕರಣೆ ಮಾಡಿದ್ದು ದಾಖಲೆಯಲ್ಲಿಲ್ಲ. ಮತ್ತೊಂದೆಡೆ, ಅಮೆರಿಕವು ಆಸ್ಟಿನ್ ಹೇಳಿಕೆಯನ್ನು ದಾಖಲೆಯಲ್ಲಿ ಇರಿಸಿದೆ.

ಈ ದಾಖಲೆಯನ್ನು ಭಾರತ ಸರ್ಕಾರ ನಿರಾಕರಿಸಬೇಕಿದೆ ಎಂದು ಹಲವಾರು ಪತ್ರಕರ್ತರು ಗಮನಸೆಳೆದಿದ್ದಾರೆ.

ಅನೇಕ ಸುದ್ದಿವಾಹಿನಿಗಳು ನಡೆಸಿದ ವರದಿಗೆ ಎನ್‌ಡಿಟಿವಿಯನ್ನು ಮಾತ್ರ ಅನ್ಯಾಯವಾಗಿ ಗುರಿಯಾಗಿಸಲಾಗಿತ್ತು ಮಾತ್ರವಲ್ಲ, ಎನ್‌ಡಿಟಿವಿಯ ವರದಿ ತಪ್ಪಾಗಿಲ್ಲ ಎಂಬುದು ಸ್ಪಷ್ಟವಾಗಿದ್ದರೂ ಅದನ್ನು ಟೀಕಿಸಲಾಗಿತು. ಭಾರತದಲ್ಲಿ ಮಾನವ ಹಕ್ಕುಗಳ ಕುರಿತ ವಿಷಯವನ್ನು ಭಾರತೀಯ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಆಸ್ಟಿನ್ ಹೇಳಿಕೆ ದಾಖಲೆಯಲ್ಲಿದೆ.

ಆದರೆ ಎಎನ್‌ಐ ಮೊದಲಿಗೆ ಸರಿಯಾಗಿಯೇ ಟ್ವೀಟ್ ಮಾಡಿ, ನಂತರ ‘ಭಾರತ ಸರ್ಕಾರದ ಉನ್ನತ ಮೂಲಗಳನ್ನು’ ಆಧರಿಸಿ ಚರ್ಚೆ ನಡೆದಿಲ್ಲ ಎಂದಿದೆ. ಆದರೆ ಸರ್ಕಾರ ಚರ್ಚೆ ನಡೆದಿದೆ ಎಂಬುದನ್ನು ನಿರಾಕರಿಸಿಲ್ಲ.

ಅಂದರೆ, ಬೇಕೆಂತಲೇ ಎನ್‌ಡಿಟಿವಿ ವಿರುದ್ಧ ಬಿಜಿಪಿ ಬೆಂಬಲಿಗರು ಜಾಲತಾಣದಲ್ಲಿ ಅಪಪ್ರಚಾರ ಮಾಡಿದ್ದಾರೆ,

(ಕೃಪೆ: ಅಲ್ಟ್ ನ್ಯೂಸ್)


ಇದನ್ನೂ ಓದಿ; ಜಯ್ ಶಾ ಮಾನಹಾನಿ ಪ್ರಕರಣದಲ್ಲಿ ದಿ ವೈರ್ ಕ್ಷಮೆ ಕೇಳಿತೆ? ಅಸಲಿ ಸಮಾಚಾರ ಇಲ್ಲಿದೆ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here