ಸುಳ್ಳು ಆರೋಪ ಹೊರಿಸಿದ್ದಕ್ಕಾಗಿ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಷಾ ಅವರು ಸಲ್ಲಿಸಿದ ಮಾನಹಾನಿ ಮೊಕದ್ದಮೆಯನ್ನು ಸೋತ ನಂತರ ದಿ ವೈರ್ ನ್ಯೂಸ್ ಪೋರ್ಟಲ್ ಸುಪ್ರೀಂ ಕೋರ್ಟಿನಲ್ಲಿ ಕ್ಷಮೆಯಾಚಿಸಿದೆ ಎಂದು ಒಂದು ಸಂದೇಶ ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಟ್ವಿಟರ್‌ನಲ್ಲಿ ಹಲವಾರು ಪ್ರಮುಖ ಹ್ಯಾಂಡಲ್‌ಗಳು ಈ ಸಂದೇಶ ಹಂಚಿಕೊಂಡಿವೆ.

ಪ್ರಧಾನಿ ನರೇಂದ್ರ ಮೋದಿಯವರ ಚುನಾವಣೆಯ ನಂತರದ ವರ್ಷದಲಿ ಜಯ್ ಷಾ ಒಡೆತನದ ಕಂಪನಿಯ ವಹಿವಾಟು 16,000 ಪಟ್ಟು ಹೆಚ್ಚಾಗಿದೆ ಎಂದು ಆರೋಪಿಸಿ ದಿ ವೈರ್ ಅಕ್ಟೋಬರ್ 8, 2017 ರಂದು ಲೇಖನವೊಂದನ್ನು ಪ್ರಕಟಿಸಿತ್ತು.

ಬಿಜೆಪಿ ಮುಖಂಡ ಮತ್ತು ಮಾಜಿ ಸಂಸದ ಹರಿಓಂ ಪಾಂಡೆ ಮಾರ್ಚ್ 19 ರಂದು ಮೇಲಿನ ಕ್ಷಮಯಾಚನೆಯ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ.

ಪತ್ರಕರ್ತ ಪುಷ್ಪೇಂದ್ರ ಕುಲಶ್ರೇಷ್ಠರ ಹೆಸರಿನಲ್ಲಿರುವ ಒಂದು ನಕಲಿ ಖಾತೆಯು ಈ ಸಂದೇಶ ಹರಡಿ 15,000 ಲೈಕ್‌ಗಳನ್ನು ಗಳಿಸಿತು. @pushpendraamu ತಮ್ಮ ಬಯೋದಲ್ಲಿ ಬಿಜೆಪಿ ದೆಹಲಿ ಸೋಷಿಯಲ್ ಮೀಡಿಯಾ ಮತ್ತು ಐಟಿ ಬೌದ್ಧಿಕ ಸೆಲ್ ಹೆಡ್ ಎಂದು ಗುರುತಿಸಿಕೊಂಡಿರುವ ಸಂದೀಪ್ ಠಾಕೂರ್ ಕೂಡ ಇದೇ ರೀತಿ ಟ್ವೀಟ್ ಮಾಡಿದ್ದಾರೆ.

@ TheShivani5, @ SaritaKaushik05 @idineshdesai ಈ ಹ್ಯಾಂಡಲ್‌ಗಳು ಕೂಡ ಇದೇ ಸಂದೇಶ ಹಂಚಿಕೊಂಡಿವೆ. ಬಲಪಂಥೀಯ ಪ್ರಚಾರ ವೆಬ್‌ಸೈಟ್‌ನಲ್ಲಿ ಲೇಖಕರೆಂದು ಹೇಳಿಕೊಳ್ಳುವ @TheAshwinRaj ಎಂಬ ಬಳಕೆದಾರರು ಮತ್ತು ಬಿಜೆಪಿ ಸದಸ್ಯ ತರುಣ್ ರತಿ ಕೂಡ ಇದನ್ನು ಹಂಚಿಕೊಂಡಿದ್ದಾರೆ.

ಸತ್ಯ: ವಿಚಾರಣೆಯೇ ಆರಂಭವಾಗಿಲ್ಲ!

“ಜಯ್ ಶಾ ಅವರು ದಿ ವೈರ್ ವಿರುದ್ಧ ಕ್ರಿಮಿನಲ್ ಮಾನಹಾನಿ ಮತ್ತು ಸಿವಿಲ್ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದರು, ಇದರಲ್ಲಿ ಅವರು 100 ಕೋಟಿ ರೂ. ಪರಿಹಾರ ಕೇಳಿದ್ದರು. ಆದರೆ ಆ ಪ್ರಕರಣದ ವಿಚಾರಣೆ ಕೂಡ ಪ್ರಾರಂಭವಾಗಿಲ್ಲ, ಮತ್ತು ಜನರು ಈ ವಿಲಕ್ಷಣ ಸುಳ್ಳುಗಳನ್ನು ಯಾವ ಆಧಾರದ ಮೇಲೆ ಮಾಡುತ್ತಿದ್ದಾರೆಂದು ನನಗೆ ತಿಳಿದಿಲ್ಲ” ಎಂದು ಆಲ್ಟ್ ನ್ಯೂಸ್‌ಗೆ ದಿ ವೈರ್‌ನ ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಹೇಳಿದ್ದಾರೆ.

ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ರದ್ದುಗೊಳಿಸಬೇಕೆಂಬ ಮನವಿಯನ್ನು ಸ್ವೀಕರಿಸಲು ಗುಜರಾತ್ ಹೈಕೋರ್ಟ್ ನಿರಾಕರಿಸಿದ ನಂತರ, 2018 ರ ಜನವರಿಯಲ್ಲಿ ವೈರ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿದೆ.

“2018 ರಲ್ಲಿ ಎರಡನೇ ಅರ್ಜಿಯನ್ನು ಸಹ ಸಲ್ಲಿಸಲಾಯಿತು, ಜಯ್ ಅಮಿತ್ ಷಾ ಅವರ ವ್ಯವಹಾರಗಳ ಕುರಿತು ಹೆಚ್ಚಿನ ಪ್ರಕಟಣೆಯ ವಿರುದ್ಧ ತಡೆಯಾಜ್ಞೆ ನೀಡಿದಾಗ, ವಿಚಾರಣಾ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತ್ತು. ನಂತರ ಗುಜರಾತ್ ಹೈಕೋರ್ಟ್ ಮಾನನಷ್ಟ ಅರ್ಜಿಯನ್ನು ಮತ್ತೆ ಎತ್ತಿ ಹಿಡಿಯಿತು ಎಂದು ದಿ ವೈರ್ ಹೇಳಿದೆ.

ನಂತರ ಪ್ರಕರಣ ವಜಾ ಮಾಡಬೇಕು ಎಂಬ ಎರಡೂ ಅರ್ಜಿಗಳನ್ನು ಹಿಂಪಡೆಯಲಾಯಿತು ಮತ್ತು ಪ್ರಕರಣವು ನೇರವಾಗಿ ವಿಚಾರಣೆಗೆ ಹೋಗಿದೆ.

ಜಯ್ ಷಾ ಕುರಿತು ಈ ವರದಿ ಮಾಡಿದ ಪತ್ರಕರ್ತೆ ರೋಹಿಣಿ ಸಿಂಗ್ ಕೂಡ, ಟ್ವಿಟರ್‌ನಲ್ಲಿ “ತಪ್ಪು ಮಾಹಿತಿ ಓಡಾಡುತ್ತಿದೆ. ವಿಚಾರಣಾ ನ್ಯಾಯಾಲಯದಲ್ಲಿ ಮೊದಲೇ ನೀವು ತೀರ್ಪನ್ನು ಉಚ್ಚರಿಸಿದ್ದೀರಿ” ಎಂದು ಬರೆದಿದ್ದಾರೆ.

ಜಯ್ ಶಾ ಸಲ್ಲಿಸಿದ ಮಾನಹಾನಿ ಪ್ರಕರಣದಲ್ಲಿ ದಿ ವೈರ್ ಸೋತಿತು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕ್ಷಮೆಯಾಚಿಸಿದೆ ಎಂದು ಸುಳ್ಳು ಸಂದೇಶವನ್ನು ಬಿಜೆಪಿಯ ಸದಸ್ಯರು ಮತ್ತು ಬೆಂಬಲಿಗರು ಹಂಚಿಕೊಂಡಿದ್ದಾರೆ, ಅಷ್ಟೇ.

(ಕೃಪೆ: ಅಲ್ಟ್ ನ್ಯೂಸ್)


ಇದನ್ನೂ ಓದಿ: ಎಡಪಕ್ಷಗಳ ಬೃಹತ್ ರ‍್ಯಾಲಿಯ ಫೋಟೊಗಳನ್ನು ಮೋದಿ ರ‍್ಯಾಲಿಯೆಂದು ತಪ್ಪಾಗಿ ಹಂಚಿದ ಬಿಜೆಪಿಗರು!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here