Homeಮುಖಪುಟಮೋದಿ ಸರ್ಕಾರದ ಬಳಿ ಅಭಿವೃದ್ದಿಯ ಅಜೆಂಡಾವಿಲ್ಲ, ಕೋಮುವಾದ ಅಜೆಂಡಾ ಮಾತ್ರವಿದೆ: ಯುದುವೀರ್ ಸಿಂಗ್

ಮೋದಿ ಸರ್ಕಾರದ ಬಳಿ ಅಭಿವೃದ್ದಿಯ ಅಜೆಂಡಾವಿಲ್ಲ, ಕೋಮುವಾದ ಅಜೆಂಡಾ ಮಾತ್ರವಿದೆ: ಯುದುವೀರ್ ಸಿಂಗ್

- Advertisement -
- Advertisement -

ರೈತ ಆಂದೋಲನಕ್ಕೆ ನೆರವು ನೀಡಿದವರ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಒಬ್ಬ ಹೋಟೆಲ್ ಮಾಲೀಕ ಆಂದೋಲನಕ್ಕೆ ಬೆಂಬಲ ನೀಡಿದ್ದಕ್ಕೆ ಅವರ ಮೇಲೆ ಇಡಿ ದಾಳಿ ಮಾಡಲಾಗಿದೆ. ಇದು ರಾಜ್ಯ ಆಳುವ ಲಕ್ಷಣವೇ? ಇವರು ಅಧಿಕಾರಕ್ಕೆ ಬರಲು ಕಾರಣರಾದ ನಾವು ನೀವು ಈ ಕುರಿತು ಯೋಚಿಸಬೇಕು? ಎಂದು ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ಕಾರ್ಯದರ್ಶಿ ಯುದುವೀರ್ ಸಿಂಗ್ ಕರೆ ನೀಡಿದರು.

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸೌಧ ಚಲೋ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋದಿ ಸರ್ಕಾರ ಮೊದಲು ಎಂಎಸ್‌ಪಿ ಕೊಡುತ್ತೇವೆ, ಖಾಸಗಿ ಮಂಡಿಗಳ ವಿರುದ್ಧ, ಗುತ್ತಿಗೆ ಕೃಷಿ ಪದ್ದತಿ ವಿರುದ್ಧ ಮಾತನಾಡಿದರು. ಎಪಿಎಂಪಿ ಬಲಪಡಿಸುತ್ತೇವೆ, ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದರು. ಆದರೆ ಇಂದು ಅದಕ್ಕೆ ಬೆನ್ನು ತಿರುಗಿಸಿ ರೈತರ ವಿರುದ್ಧ ಸಮರ ಹೂಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ದೇಶದಲ್ಲಿ ಪ್ರಜಾತಂತ್ರ, ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೆಂದು ಹೇಳಲಾಗುತ್ತಿದೆ. ಆದರೆ ಫ್ಯಾಸಿಸ್ಟರು ಯಾವ ರೀತಿ ಆಳ್ವಿಕೆ ನಡೆಸುತ್ತಿದ್ದಾರೆ ಎಂಬುದು ಕರ್ನಾಟಕದ ಜನರಿಗೆ ತಿಳಿದಿದೆ. ಗೌರಿ ಲಂಕೇಶ್‌ರವರನ್ನು ಗುಂಡು ಹೊಡೆದು ಹತ್ಯೆ ಮಾಡಲಾಯಿತು. ಅವರು ಯಾವ ತಪ್ಪು ಮಾಡಿದ್ದರು? ಅನ್ಯಾಯದ ವಿರುದ್ಧವಾಗಿ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಮಾತನಾಡುವುದು ತಪ್ಪೇ? ಏನು ತಪ್ಪಿತ್ತು ಎಂದು ದಿಶಾರವಿಯೆಂಬ ಪುಟ್ಟು ಹುಡುಗಿಯನ್ನು ಬಂಧಿಸಿ ಹಿಂಸಿಸಲಾಯಿತು? ಇಂದು ಪೊಲೀಸರನ್ನು ಮತ್ತು ಸಂಘಪರಿವಾರದ ಗೂಂಡಾಗಳನ್ನು ಮುಂದಿಟ್ಟುಕೊಂಡು ಆಂದೋಲನವನ್ನು ದಮನಿಸುತ್ತಿರುವುದನ್ನು ದೇಶವೇ ನೋಡುತ್ತಿದೆ ಎಂದರು.

ಮೋದಿ ಸರ್ಕಾರದ ಬಳಿ ಅಭಿವೃದ್ದಿಯ ಅಜೆಂಡಾವಿಲ್ಲ, ಕೋಮುವಾದ ಅಜೆಂಡಾ ಮಾತ್ರವಿದೆ. ಶತಮಾನಗಳಿಂದ ನಾವು ಧರ್ಮದ ಗುಲಾಮರಾಗಿ ಬದುಕಿದ್ದೇವೆ, ಇಂದು ಮತ್ತೆ ಅದೇ ಧರ್ಮದ ಗುಲಾಮಗಿರಿಗೆ ತಳ್ಳಲಾಗುತ್ತಿದೆ. ಈ ಸರ್ಕಾರ ರಾಮಮಂದಿರದ ಅಜೆಂಡಾ ಇಟ್ಟುಕೊಂಡಿದೆ. ನಮ್ಮ ದೇಶದಲ್ಲಿ ಮಂದಿರಗಳು ಮುಂಚೆಯೇ ಇದ್ದವು. ಹಾಗಾಗಿ ರಾಮಮಂದಿರ ಒಂದು ಪಕ್ಷದ ಅಜೆಂಡಾವಾಗಬೇಕಿಲ್ಲ ಬದಲಿಗೆ ಬಡವರ, ಜನಸಾಮಾನ್ಯರ ಅಭಿವೃದ್ದಿ, ಯುವಜನರಿಗೆ ಉದ್ಯೋಗ, ರೈತರಿಗೆ ನ್ಯಾಯ ಎಂಬುದು ಅಜೆಂಡಾವಾಗಬೇಕಿದೆ. ಆದರೆ ಅವರ ಬಳಿ ಅದಿಲ್ಲ. ರಾಮಮಂದಿರ ಕಟ್ಟಲು ಇವರು ಬೇಕಾಗಿಲ್ಲ. ರಾಮ ಯಾರಪ್ಪನ ಆಸ್ತಿಯಲ್ಲ, ರಾಮ ಈ ದೇಶದ ಜನರ ಹೃದಯದಲ್ಲಿದ್ದಾನೆ. ರೈತರು-ಕಾರ್ಮಿಕರು ರಾಮನನ್ನು ಹುಡುಕಲು ಮಂದಿರಕ್ಕೆ ಹೋಗಬೇಕಾಗಿಲ್ಲ, ಹೊಲದಲ್ಲಿ ಮತ್ತು ಇತರೆಡೆ ದುಡಿಯುವ ರೈತ ಕಾರ್ಮಿಕರು ಬೆಳಿಗ್ಗೆಯಿಂದ ಸಂಜೆಯವರೆಗೆ ರಾಮನ ಜೊತೆಗಿರುತ್ತಾರೆ. ಅವರ ರಾಮ ಅವರ ದುಡಿಮೆಯಲ್ಲಿದ್ದಾನೆ, ಅವರ ಶ್ರಮದಲ್ಲಿದ್ದಾನೆ, ಅವರ ಬೆವರಿನಲ್ಲಿದ್ದಾನೆ ಮತ್ತು ಅವರ ಹೃದಯದಲ್ಲಿದ್ದಾನೆ ಮತ್ತು ಅವರಿಗಾಗಿ ರಾಮನ ಹೆಸರಿನಲ್ಲಿ ಜನರನ್ನು ಒಡೆದು ಆಳಬೇಕಾಗಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದರು.

ಈ ಆಂದೋಲನ ಮೂರು ಕರಾಳ ಕಾನೂನುಗಳ ರದ್ಧತಿಗೆ ಮತ್ತು ಎಂಎಸ್‌ಪಿ ಜಾರಿಗಾಗಿ ಆರಂಭವಾಯಿತು. ಆದರೆ ಇಂದು ಅದು ಅಷ್ಟಕ್ಕೆ ಸೀಮಿತವಾಗದೆ ಎಲ್ಲಾ ಜನವರ್ಗಗಳ ಆಂದೋಲನವಾಗಿ ಮಾರ್ಪಟ್ಟಿದೆ. ರೈತರು-ಕಾರ್ಮಿಕರು-ದಲಿತರು ಮತ್ತುಎಲ್ಲಾ ಶೋಷಿತರ ಹೋರಾಟವಾಗಿ ಮಾರ್ಪಟ್ಟಿದೆ. ಇದು ಸುಧೀರ್ಘ ಹೋರಾಟವಾಗಲಿದೆ. ನೀವು ದೆಹಲಿತನಕ ಬರಲು ಸಾಧ್ಯವಾಗದಿರಬಹುದು. ಹಾಗಾಗಿ ಇಲ್ಲಿರುವ ರೈತರು ಕಾರ್ಮಿಕರು ಸೇರಿ ಬೆಂಗಳೂರನ್ನೇ ದೆಹಲಿ ಮಾಡಬೇಕಾಗಿದೆ. ಉತ್ತರ ಭಾರತದ ರೈತರು ದೆಹಲಿಯಲ್ಲಿ ಯಾವ ರೀತಿ ಸುತ್ತುವರಿದಿದ್ದಾರೋ, ಅದೇ ರೀತಿ ಬೆಂಗಳೂರನ್ನು ಕರ್ನಾಟಕದ ಎಲ್ಲಾ ರೈತ-ಕಾರ್ಮಿಕರು ಮುತ್ತಿಗೆ ಹಾಕಿ ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ಯುದುವೀರ್ ಸಿಂಗ್ ಮನವಿ ಮಾಡಿದರು.

ಇದು ಒಂದು ದಿನದ ಹೋರಾಟ ಮತ್ತು ಭಾಷಣಕ್ಕೆ ಸೀಮಿತವಾಗಬಾರದು. ಇಲ್ಲಿ ಒಂದು ಖಾಯಂ ಹೋರಾಟದ ಟೆಂಟ್ ಹಾಕಬೇಕು. ನಾನು ಕರ್ನಾಟಕಕ್ಕೆ ಹಲವಾರು ಬಂದಿದ್ದೇನೆ. ಪ್ರೊ.ನಂಜುಂಡಸ್ವಾಮಿಯವರೊಂದಿಗೆ ಹೋರಾಟ ನಡೆಸಿದ್ದೇವೆ. ಇದು ಪವಿತ್ರ ಜಾಗವಾಗಿದ್ದು, ಶೋಷಣೆ ವಿರುದ್ಧದ ಹೋರಾಟಕ್ಕೆ ಸಾಕ್ಷಿಯಾಗಿದೆ. ಇಲ್ಲಿ ನೀವು ಸುದೀರ್ಘ ಹೋರಾಟ ನಡೆಸುವ ಮೂಲಕ ಬೆಂಗಳೂರಿನಿಂದ ದೇಶಕ್ಕೆ ಉತ್ತಮ ಸಂದೇಶ ನೀಡುತ್ತಿರಿ ಎಂದು ನಂಬಿದ್ದೇನೆ ಎಂದರು.

ಇಂದಿನ ಹೋರಾಟದಲ್ಲಿ ದೆಹಲಿಯ ರೈತ ಹೋರಾಟ ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ಡಾ.ದರ್ಶನ್ ಪಾಲ್, ರಾಕೇಶ್ ಟಿಕಾಯತ್, ಕುಲ್‌ಬೀರ್‌ ಸಿಂಗ್, ರಾಜ್ಯದ ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್, ನಟ ಚೇತನ್ ಸೇರಿದಂತೆ ಹಲವರು ಭಾಗವಹಿಸಿದ್ದರು.


ಇದನ್ನೂ ಓದಿ: ರೈತ ವಿರೋಧಿ ಕೃಷಿ ಕಾಯ್ದೆ ತಂದು ಶೋಷಿಸುತ್ತಿರುವವರೆ ನಿಜ ಭಯೋತ್ಪಾದಕರು- ನಟ ಚೇತನ್ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...