Homeಕರೋನಾ ತಲ್ಲಣಲಸಿಕೆ ಸ್ಟಾಕ್ ಇಲ್ಲ: ಮೇ 1ರಿಂದ ‘ಎಲ್ಲರಿಗೂ ಲಸಿಕೆ’ ಅಭಿಯಾನ ಅಸಾಧ್ಯವೆಂದ 4 ರಾಜ್ಯಗಳು

ಲಸಿಕೆ ಸ್ಟಾಕ್ ಇಲ್ಲ: ಮೇ 1ರಿಂದ ‘ಎಲ್ಲರಿಗೂ ಲಸಿಕೆ’ ಅಭಿಯಾನ ಅಸಾಧ್ಯವೆಂದ 4 ರಾಜ್ಯಗಳು

- Advertisement -
- Advertisement -

ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಪೈಕಿ ರಾಜಸ್ಥಾನ, ಛತ್ತೀಸಘಡ್, ಪಂಜಾಬ್ ಮತ್ತು ಜಾರ್ಖಂಡ್ ತಮ್ಮ ಬಳಿ ಅಗತ್ಯ ಪ್ರಮಾಣದಷ್ಟು ಲಸಿಕೆಗಳ ಸಂಗ್ರಹವಿಲ್ಲ, ಪೂರೈಕೆ ವಿಳಂಬವಾಗುತ್ತಿದೆ, ಹೀಗಾಗಿ ಮೇ 1ರಿಂದ ‘ಎಲ್ಲರಿಗೂ ಲಸಿಕೆ ಅಭಿಯಾನ (18 ವರ್ಷ ಮೇಲ್ಪಟ್ಟವರಿಗೆ) ಆರಂಭಿಸುವುದು ಅಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಕೇವಲ ಐದು ದಿನಗಳ ಮೊದಲು, ಪ್ರತಿಪಕ್ಷ ಆಡಳಿತದ ನಾಲ್ಕು ರಾಜ್ಯಗಳು ಭಾನುವಾರ ಸಾಕಷ್ಟು ಲಸಿಕೆಗಳನ್ನು ಹೊಂದಿರದ ಕಾರಣ ಮೇ 1 ರಂದು ಅಭಿಯಾನ ಪ್ರಾರಂಭಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿವೆ.

ಮೇ 15 ರ ಮೊದಲು ಡೋಸೆಜ್ ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ಕೋವಿಶೀಲ್ಡ್ ತಯಾರಿಸುವ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಿಳಿಸಿದೆ ಎಂದು ಕಾಂಗ್ರೆಸ್ ಆಡಳಿತದ ರಾಜಸ್ಥಾನ ಹೇಳಿದೆ.

“ನಮಗೆ ಸೀರಮ್ ಸಂಸ್ಥೆಯೊಂದಿಗೆ ಮಾತನಾಡಲು ತಿಳಿಸಲಾಯಿತು. ಕೇಂದ್ರ ಸರ್ಕಾರದಿಂದ ನಮಗೆ ಆರ್ಡರ್‌ಗಳು ದೊರೆತಿವೆ. ಆದರೆ ಪೂರೈಸಲು ಮೇ 15 ರವರೆಗೆ ಸಮಯ ಬೇಕಾಗುತ್ತದೆ ಎಂಬುದು ಅವರ ಪ್ರತಿಕ್ರಿಯೆ. ಆದ್ದರಿಂದ ಅವರು ನಮಗೆ ಲಸಿಕೆ ನೀಡುವ ಸ್ಥಿತಿಯಲ್ಲಿಲ್ಲ. ಪ್ರಶ್ನೆಯೆಂದರೆ, ರಾಜ್ಯಗಳು ನೇರವಾಗಿ ಲಸಿಕೆಗಳನ್ನು ಸಂಗ್ರಹಿಸಲು ಬಯಸಿದರೆ ಯಾವ ಪ್ರಕ್ರಿಯೆ ಅನುಸರಿಸಬೇಕು? ಇದನ್ನು ಕೇಂದ್ರ ಸರ್ಕಾರ ನಿರ್ಧರಿಸಬೇಕು. ನಮ್ಮ ಮುಂದಿರುವ ಪ್ರಶ್ನೆ ಏನೆಂದರೆ, 18-45 ವಯೋಮಾನದವರಲ್ಲಿ ನಾವು 3.13 ಕೋಟಿ ಜನರನ್ನು ಹೊಂದಿದ್ದೇವೆ; ಸ್ಟಾಕ್ ಇಲ್ಲದೇ ನಾವು ಅವರಿಗೆ ಹೇಗೆ ಲಸಿಕೆ ನೀಡುತ್ತೇವೆ?” ಎಂದು ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾ ಹೇಳಿದ್ದಾರೆ.

“ಎಸ್‌ಐಐ ಮತ್ತು ಭಾರತ್ ಬಯೋಟೆಕ್‌ಗೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಈ ಹೆಚ್ಚಿನ ಪ್ರಮಾಣವನ್ನು ಪೂರೈಸಲು ಸೂಚಿಸಬೇಕು. ನಾವು ಹಣ ಪಾವತಿಸಲು ಸಿದ್ಧರಿದ್ದೇವೆ. ಆದರೆ ದರಗಳು ಏಕರೂಪವಾಗಿರಬೇಕು. ಇದನ್ನು ಕೇಂದ್ರ ಸರ್ಕಾರ ಗಮನಿಸಬೇಕು” ಎಂದು ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ರಾಜಸ್ಥಾನ, ಛತ್ತೀಸಘಡ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳಿವೆ ಮತ್ತು ಜಾರ್ಖಂಡ್‌ನಲ್ಲಿ ಜೆಎಂಎಂನೊಂದಿಗೆ ಕಾಂಗ್ರೆಸ್ ಅಧಿಕಾರ ಹಂಚಿಕೊಂಡಿದೆ. ಈ ನಾಲ್ಕು ರಾಜ್ಯಗಳ ಆರೋಗ್ಯ ಸಚಿವರು ಜಂಟಿ ಆನ್‌ಲೈನ್ ಪತ್ರಿಕಾಗೋಷ್ಟಿ ನಡೆಸಿ ಲಸಿಕೆ ಕೊರತೆಯ ಸಮಸ್ಯೆಯನ್ನು ಎತ್ತಿತೋರಿಸಿದ್ದಾರೆ.

ಛತ್ತೀಸಘಡ್ ಆರೋಗ್ಯ ಸಚಿವ ಟಿ.ಎಸ್ ಸಿಂಗ್ ದಿಯೋ ಮತ್ತು ಪಂಜಾಬ್ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿಧು ಶರ್ಮಾ ಅವರ ಅಭಿಪ್ರಾಯಗಳನ್ನು ಅನುಮೋದಿಸಿ ಮಾತನಾಡಿದರು.
‘ಲಸಿಕೆಗಾಗಿ ಆರ್ಡರ್ ನೀಡಲು ಅಸ್ಸಾಂ ಪ್ರಯತ್ನಿಸಿದೆ ಎಂದು ಕೇಳಿದ್ದೇನೆ, ಆದರೆ ಒಂದು ತಿಂಗಳ ನಂತರ ಅವು ಸಿಗಲಿವೆ ಎಂದು ತಿಳಿಸಲಾಗಿದೆ’ ಎಂದು ದಿಯೋ ತಿಳಿಸಿದರು. ನಾಲ್ವರೂ ಆರೋಗ್ಯ ಸಚಿವರು, ಮೇ 1 ರಿಂದ ಮುಂದಿನ ಹಂತದ ವ್ಯಾಕ್ಸಿನೇಷನ್‌ಗಳಿಗೆ ಸಿದ್ಧವಾಗಿದ್ದೇವೆ. ಆದರೆ ತಯಾರಕರು ಡೋಸೇಜ್ ನೀಡಲು ಅಸಮರ್ಥರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಇದನ್ನೂ ಓದಿ: ಲಸಿಕಾ ರಾಜಕೀಯ: ಮೇ 1 ರಿಂದ ಲಸಿಕೆ ಎಂಬುದು ನಿಜವೇ? ನಿಮಗೆ ಲಸಿಕೆ ಸಿಗಲು ಎಷ್ಟು ತಿಂಗಳು/ವರ್ಷ ಬೇಕು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...