Homeಮುಖಪುಟನೊಬೆಲ್‌ ಪ್ರಶಸ್ತಿ ಪುರಸ್ಕೃತ ಆಂಗ್‌ ಸಾನ್‌ ಸೂಕಿಗೆ ನಾಲ್ಕು ವರ್ಷ ಜೈಲು ಶಿಕ್ಷೆ

ನೊಬೆಲ್‌ ಪ್ರಶಸ್ತಿ ಪುರಸ್ಕೃತ ಆಂಗ್‌ ಸಾನ್‌ ಸೂಕಿಗೆ ನಾಲ್ಕು ವರ್ಷ ಜೈಲು ಶಿಕ್ಷೆ

- Advertisement -

ಮಿಲಿಟರಿ ವಿರುದ್ಧ ಭಿನ್ನಾಭಿಪ್ರಾಯವನ್ನು ಮೂಡಿಸಿದ ಆರೋಪ ಮತ್ತು ಕೋವಿಡ್ -19 ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮ್ಯಾನ್ಮಾರ್‌‌ನ ಉಚ್ಛಾಟಿತ ನಾಯಕಿ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಆಂಗ್ ಸಾನ್ ಸೂಕಿ ಅವರಿಗೆ ಮ್ಯಾನ್ಮಾರ್ ನ್ಯಾಯಾಲಯವು ಸೋಮವಾರ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

ಅಶಾಂತಿ ಉಂಟುಮಾಡುವ ಹೇಳಿಕೆಗಳಿಗಾಗಿ ಮ್ಯಾನ್ಮಾರ್ ಕಾನೂನಿನ ಸೆಕ್ಷನ್ 505[b] ಅಡಿಯಲ್ಲಿ ಸೂಕಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ನೈಸರ್ಗಿಕ ವಿಕೋಪ ಕಾನೂನಿನಡಿಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ಮ್ಯಾನ್ಮಾರ್ ಮಿಲಿಟರಿ ವಕ್ತಾರ ಮೇಜರ್ ಜನರಲ್ ಜಾವ್ ಮಿನ್ ಟುನ್ ಹೇಳಿದ್ದಾರೆ.

ಲಾಭರಹಿತ ಸಂಸ್ಥೆ ಅಸಿಸ್ಟೆನ್ಸ್ ಅಸೋಸಿಯೇಷನ್ ​​ಪ್ರಕಾರ, ಫೆಬ್ರವರಿಯಿಂದ ಮ್ಯಾನ್ಮಾರ್ ಸೇನೆಯಿಂದ ಬಂಧಿಸಲ್ಪಟ್ಟ 10,600ಕ್ಕೂ ಹೆಚ್ಚು ಜನರಲ್ಲಿ ಸೂಕಿ ಒಬ್ಬರಾಗಿದ್ದಾರೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಹತ್ತಾರು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಸೂಕಿ ಫೆಬ್ರವರಿಯಲ್ಲಿ ನಡೆದ ಸೇನಾ ದಂಗೆಯ ನಂತರ ಗೃಹಬಂಧನದಲ್ಲಿದ್ದಾರೆ. ನವೆಂಬರ್ 2020ರಲ್ಲಿ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ವಿಜಯ ಸಾಧಿಸಿ ತಿಂಗಳ ನಂತರ ಮ್ಯಾನ್ಮಾರ್‌ನ ಸೈನ್ಯವು ದೇಶದಲ್ಲಿ ಅಧಿಕಾರವನ್ನು ಪಡೆದುಕೊಂಡಿತು.

ಕೊರೋನವೈರಸ್ ಬಿಕ್ಕಟ್ಟಿನ ಹೊರತಾಗಿಯೂ ನವೆಂಬರ್ 2020ರ ಚುನಾವಣೆಯನ್ನು ವಿಳಂಬಗೊಳಿಸುವಲ್ಲಿ ಸರ್ಕಾರದ ವಿಫಲತೆಯ ಪರಿಣಾಮವೇ ದಂಗೆ ಎಂದು ಘೋಷಿಸಲಾಯಿತು. ಮಿಲಿಟರಿಯ ಸ್ವಾಧೀನವು ಹಲವಾರು ರಾಷ್ಟ್ರಗಳ ಟೀಕೆಗೆ ಗುರಿಯಾಯಿತು.

ಇದನ್ನೂ ಓದಿರಿ: ಮಯನ್ಮಾರ್ ಮಿಲಿಟರಿ ದಂಗೆಯ ವಿರುದ್ಧ ಬಂಡಾಯ 8888 ರಿಂದ 2021

ನವೆಂಬರ್ 17ರಂದು, ಮ್ಯಾನ್ಮಾರ್‌ನ ಯೂನಿಯನ್ ಚುನಾವಣಾ ಆಯೋಗವು ಚುನಾವಣೆಯಲ್ಲಿ ವಂಚನೆ ಆರೋಪದ ಮೇಲೆ ಸೂಕಿ ಮತ್ತು ಇತರ 15 ರಾಜಕಾರಣಿಗಳನ್ನು ವಿಚಾರಣೆಗೆ ಒಳಪಡಿಸುವುದಾಗಿ ಹೇಳಿದೆ. ಅವರು ಸ್ಥಳೀಯ ಚುನಾವಣಾ ಅಧಿಕಾರಿಗಳನ್ನು ಮಿಲಿಟರಿ ಮತಗಟ್ಟೆಗಳಿಗೆ ಅಡ್ಡಿಪಡಿಸಲು ಒತ್ತಾಯಿಸಿದರು ಮತ್ತು ಅನರ್ಹ ಮತದಾರರನ್ನು ಒಳಗೊಂಡಿರುವ ಮತದಾನ ಪಟ್ಟಿಗಳನ್ನು ಅನುಮೋದಿಸಲು ಅಧಿಕಾರಿಗಳನ್ನು ಒತ್ತಾಯಿಸಿದರು ಎಂದು ಹೊಸ ಚುನಾವಣಾ ಆಯೋಗ ಆರೋಪಿಸಿದೆ.

ಮ್ಯಾನ್ಮಾರ್‌ನ ಮಿಲಿಟರಿ ನಾಯಕ, ಹಿರಿಯ ಜನರಲ್ ಮಿನ್ ಆಂಗ್ ಹ್ಲೈಂಗ್, ಚುನಾಯಿತ ಸರ್ಕಾರದಿಂದ ಅಧಿಕಾರವನ್ನು ವಶಪಡಿಸಿಕೊಂಡ ಆರು ತಿಂಗಳ ನಂತರ ಸ್ವತಃ ತಾವೇ ಪ್ರಧಾನ ಮಂತ್ರಿ ಎಂದು ಘೋಷಿಸಿಕೊಂಡಿದ್ದರು. ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ.

ತೀರ್ಪಿನ ಬಳಿಕ ಹಿಂಸಾಚಾರ

ಸೂಕಿ ಅವರ ವಿರುದ್ಧ ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ಯಾಂಗೋನ್ ಸೇರಿ ದೇಶದ ಹಲವು ಭಾಗಗಳಲ್ಲಿ ಶಾಂತಿಯುತ ಮೆರವಣಿಗೆ ಭಾನುವಾರ ನಡೆದಿದ್ದು, ಯಾಂಗೋನ್​ನಲ್ಲಿ ಪ್ರತಿಭಟನಾನಿರತರ ಮೇಲೆ ಸೇನಾ ವಾಹನ ಹರಿದಿರುವ ವರದಿಗಳಾಗಿವೆ.


ಇದನ್ನೂ ಓದಿರಿ: ನಾಗಾಲ್ಯಾಂಡ್ ಹತ್ಯಾಕಾಂಡ: AFSPA ರದ್ದತಿಗೆ ಮೇಘಾಲಯ ಮತ್ತು ನಾಗಾಲ್ಯಾಂಡ್ ಸಿಎಂಗಳ ಒತ್ತಾಯ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಮಹಿಳೆಯರಿಗೆ ಕಾಂಗ್ರೆಸ್‌ ಆದ್ಯತೆ; ಉಳಿದ ಪಕ್ಷಗಳ ಕಥೆಯೇನು..?

0
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಬಿಜೆಪಿ ನೇತೃತ್ವದ ಎನ್‌ಡಿಎ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳ ನಡುವಿನ ಸ್ಪರ್ಧೆಯಾಗಿದೆ. ಮಾಯಾವತಿಯವರ ಬಿಎಸ್‌ಪಿ ಪಕ್ಷ ಈ ಬಾರಿ ಇದ್ದು ಇಲ್ಲದಂತಾಗಿದೆ. ಬಿಜೆಪಿಯ...
Wordpress Social Share Plugin powered by Ultimatelysocial