Homeಅಂಕಣಗಳುಬಹುಜನ ಭಾರತ; ಪ್ರತಿಭಟನೆ ಸಾಂವಿಧಾನಿಕ ಹಕ್ಕು ಎಂದ ನೌದೀಪ್ ಕೌರ್: ಡಿ ಉಮಾಪತಿ

ಬಹುಜನ ಭಾರತ; ಪ್ರತಿಭಟನೆ ಸಾಂವಿಧಾನಿಕ ಹಕ್ಕು ಎಂದ ನೌದೀಪ್ ಕೌರ್: ಡಿ ಉಮಾಪತಿ

- Advertisement -
- Advertisement -

[ದೇಶದ ಜೈಲುಗಳಲ್ಲಿ ಕೊಳೆಯುತ್ತಿರುವ ದಲಿತರು ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಪ್ರಮಾಣ ಶೇ.51]

ಭರತ ಭೂಮಿಯಲ್ಲಿ ಬಡವರಾಗಿ ಹುಟ್ಟುವುದು ಅಪರಾಧ. ದಲಿತರು ಮತ್ತು ಆದಿವಾಸಿಗಳಾಗಿ ಜನಿಸುವುದು ನೂರುಪಟ್ಟು ಅಪರಾಧ. ದಲಿತರಾಗಿ ರೈತ-ಕಾರ್ಮಿಕರ ಹಕ್ಕುಗಳ ಪರವಾಗಿ ದನಿಯೆತ್ತುವುದೆಂದರೆ ಅವಹೇಳನ, ಬಂಧನ, ಅಪನಿಂದೆ, ಚಿತ್ರಹಿಂಸೆಗಳಿಗೆ ಆಹ್ವಾನ ನೀಡಿದಂತೆಯೇ. ಪಂಜಾಬ್-ಹರಿಯಾಣ ಹೈಕೋರ್ಟಿನಿಂದ ಮೊನ್ನೆ ಜಾಮೀನು ಪಡೆದು 44 ದಿನಗಳ ಬಂಧನದಿಂದ ಹೊರಬಿದ್ದ ನೌದೀಪ್ ಕೌರ್ ಬಡವರಷ್ಟೇ ಅಲ್ಲ ದಲಿತರು. ಮೇಲಾಗಿ ರೈತ ಕಾರ್ಮಿಕರ ಹಕ್ಕುಗಳಿಗೆ ಹೋರಾಡುವ ದಿಟ್ಟ ಹೆಣ್ಣುಮಗಳು.

ಈಕೆಯ ತಾಯಿ ಅಕ್ಕ ತಂಗಿ ಎಲ್ಲ ಹೋರಾಟಗಾರರೇ. ಹುಟ್ಟು ಮತ್ತು ಬಡತನದ ಕಾರಣ ಎದುರಿಸಿದ ದಬ್ಬಾಳಿಕೆಯೇ ಹೋರಾಟವನ್ನು ಕಲಿಸಿಕೊಟ್ಟಿದೆ. ನೌದೀಪ್ ಅಕ್ಕ ರಾಜವೀರ್ ಕೌರ್ ಕೂಡ ಆಂದೋಲನಗಳಲ್ಲಿ ಸಕ್ರಿಯವಾಗಿರುವ ಹೆಣ್ಣುಮಗಳು. ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.

ಅನ್ಯಾಯದ ವಿರುದ್ಧ ಸಿಡಿದೇಳುವ ದಿಟ್ಟತನ ನೌದೀಪ್‌ಗೆ ರಕ್ತಗತ. ತಾಯಿ ಪಂಜಾಬಿನ ಮುಖ್ತಸರ್ ಸಾಹೀಬ್‌ನ ಖೇತ್ ಯೂನಿಯನ್ ಸದಸ್ಯೆ. ಹೋರಾಟಗಳಿಂದಾಗಿ ಜೈಲು ಪಾಲಾಗಿದ್ದಾಕೆ. ತಮ್ಮ ಹಳ್ಳಿಯಲ್ಲಿ ಭೂಹೀನ ದಲಿತ ಹೆಣ್ಣುಮಗಳ ಮೇಲೆ ಅತ್ಯಾಚಾರ ಎಸಗಿದ ಮೇಲ್ಜಾತಿಯ ಜಮೀನುದಾರನ ವಿರುದ್ಧ ಪ್ರತಿಭಟಿಸಿದಾಕೆ. ಪರಿಣಾಮವಾಗಿ ಈ ಕುಟುಂಬ ಸಾಮಾಜಿಕ ಬಹಿಷ್ಕಾರವನ್ನು ಎದುರಿಸಿ ತೆಲಂಗಾಣಕ್ಕೆ ವಲಸೆ ಹೋಗಬೇಕಾಯಿತು. ತಂದೆ ಹೈದರಾಬಾದಿನಲ್ಲಿ ವಾಹನ ಚಾಲಕ. ನೌದೀಪ್ ಓದುಬರೆಹಕ್ಕೆ ಅಡಚಣೆಯಾಯಿತು. 12ನೆಯ ತರಗತಿಯನ್ನು ಮುಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಪೂರೈಸಬೇಕಾಯಿತು. 2019ರಲ್ಲಿ ದೆಹಲಿಗೆ ಬಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ಓದಬಯಸಿದರು.

ಅಕ್ಕ ರಾಜವೀರ್ ಜೊತೆ ವಿಶ್ವವಿದ್ಯಾಲಯದ ಭಗತ್ ಸಿಂಗ್ ವಿದ್ಯಾರ್ಥಿ ಐಕ್ಯವೇದಿಕೆಯ ಸದಸ್ಯೆಯಾಗಿ ಪೌರತ್ವ ಕಾಯಿದೆ ತಿದ್ದುಪಡಿಯ ವಿರುದ್ಧದ ಹೋರಾಟ ಸೇರಿದಂತೆ ಹಲವು ಆಂದೋಲನಗಳಲ್ಲಿ ಭಾಗವಹಿಸಿದ್ದರು. ದೇಶದ್ರೋಹದ ಆರೋಪ ಹೊತ್ತು ಜೈಲು ಪಾಲಾಗಿರುವ ವಿದ್ಯಾರ್ಥಿ ನಾಯಕಿಯರಾದ ದೇವಾಂಗನಾ ಕಾಲಿತಾ ಮತ್ತು ನತಾಶಾ ನರ್ವಾಲ್ ಸಂಗದಲ್ಲಿ ಹೋರಾಡಿದವರು. ಹಣಕಾಸಿನ ಬಿಕ್ಕಟ್ಟಿನ ಕಾರಣ ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡಲಿ ಕೈಗಾರಿಕೆ ಪ್ರದೇಶದ ಕಂಪನಿಯೊಂದನ್ನು ಸೇರಿದರು. ಅಲ್ಲಿ ಕಾರ್ಮಿಕರ ಶೋಷಣೆ ಮತ್ತು ಅವಮಾನ ಕಂಡು ಆಕೆಯ ಮನಸು ಕುದಿಯಿತು. ಕನಿಷ್ಠ ಕೂಲಿ ಕಾಯಿದೆಯ ಪ್ರಕಾರ ಕೂಲಿದರಗಳನ್ನು ನೀಡುವಂತೆ ಆಗ್ರಹಿಸಿದರು. ಮತ್ತು ಮಹಿಳೆಯರು ಪುರುಷರಿಗೆ ಸಮಾನವಾಗಿ ಕೆಲಸ ಮಾಡಿದಲ್ಲಿ ಅವರಿಗೂ ಸಮಾನ ವೇತನ ಸಲ್ಲಬೇಕೆಂಬ ಬೇಡಿಕೆ ಇಟ್ಟರು.

ಓವರ್ ಟೈಮ್‌ಗೆ ಪ್ರತ್ಯೇಕವಾಗಿ ಕೂಲಿ ಪಾವತಿಗಾಗಿ ಒತ್ತಾಯಿಸಿದರು. ಈ ದಿಸೆಯಲ್ಲಿ ಮಜದೂರ್ ಅಧಿಕಾರ್ ಸಂಘಟನೆಯನ್ನು ಸೇರಿದರು. ಸಮೀಪದ ಸಿಂಘು ಗಡಿಯಲ್ಲಿ ಜರುಗಿದ್ದ ರೈತ ಹೋರಾಟವನ್ನು ಬೆಂಬಲಿಸಿ 1,200 ಮಂದಿ ಕಾರ್ಮಿಕರನ್ನು ಸಂಘಟಿಸಿ ಮೆರವಣಿಗೆ ನಡೆಸಿದರು. ನಿತ್ಯ 300 ಮಂದಿ ಕಾರ್ಮಿಕರು ರೈತರ ಪರವಾಗಿ ಧರಣಿ ನಡೆಸುತ್ತಿದ್ದಾರೆ. ಹೀಗಾಗಿ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿದ್ದರು ನೌದೀಪ್. ಕುಂಡ್ಲಿ ಕೈಗಾರಿಕೆಗಳು ಕಾರ್ಮಿಕರನ್ನು ಮನಬಂದಂತೆ ನಡೆಸಿಕೊಳ್ಳುತ್ತಿದ್ದು, ರೈತ ಆಂದೋಲನವನ್ನು ಬೆಂಬಲಿಸಿದ ಕಾರಣಕ್ಕಾಗಿ ಅನೇಕ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿವೆ. ಹೀಗೆ ಬಂಧನಕ್ಕೆ ಮುನ್ನವೇ ನೌದೀಪ್ ಕೂಡ ಉದ್ಯೋಗ ಕಳೆದುಕೊಳ್ಳಬೇಕಾಗಿತ್ತು.

PC : Sabrang India

ಉತ್ತರಪ್ರದೇಶ, ಬಿಹಾರ, ಪಂಜಾಬಿನಿಂದ ಉದ್ಯೋಗ ಅರಸಿ ವಲಸೆ ಬಂದಿರುವ ಎರಡು ಲಕ್ಷಕ್ಕೂ ಹೆಚ್ಚು ನಿರ್ಗತಿಕರು ಕುಂಡ್ಲಿ ಕೈಗಾರಿಕೆ ಪ್ರದೇಶದಲ್ಲಿ ಕೂಲಿಗಾಗಿ ಸೇರಿದ್ದಾರೆ. ಇವರ ಪೈಕಿ ವಿಶೇಷವಾಗಿ ಭೂಹೀನ ರೈತರು, ಬಡರೈತರು, ದಲಿತರು, ಮುಸಲ್ಮಾನರದೇ ದೊಡ್ಡ ಸಂಖ್ಯೆ.

ಪುರುಷ ಪೊಲೀಸರು ರಾತ್ರಿಯ ವೇಳೆ ನೌದೀಪ್ ಅವರನ್ನು ಕುಂಡ್ಲಿ ಕೈಗಾರಿಕೆ ಪ್ರದೇಶದ ನಿರ್ಜನ ಪ್ರದೇಶಕ್ಕೆ ಎಳೆದೊಯ್ಯುತ್ತಾರೆ. ಥಳಿಸಿ ಚಿತ್ರಹಿಂಸೆ ನೀಡುತ್ತಾರೆ. ವ್ಯಾನಿನಲ್ಲಿ, ಪೊಲೀಸ್ ಠಾಣೆಯಲ್ಲಿ ಮತ್ತೆ ಮತ್ತೆ ಥಳಿಸುತ್ತಾರೆ, ಗುಪ್ತಾಂಗಗಳ ಮೇಲೆ ಲಾಠಿ ಬೂಟುಗಳಿಂದ ಬಾರಿಸುತ್ತಾರೆ. ರಕ್ತಸ್ರಾವವಾಗುತ್ತದೆ. ಇಬ್ಬಿಬ್ಬರು ಮೈಮೇಲೆ ಕುಳಿತು ಖಾಲಿ ಕಾಗದದ ಮೇಲೆ ಬಲವಂತವಾಗಿ ರುಜು ಹಾಕಿಸಿಕೊಳ್ಳುತ್ತಾರೆ. ಜಾತಿಯ ಹೆಸರಿಡಿದು ಅಶ್ಲೀಲ ಬೈಗುಳ ಬೈಯ್ಯುತ್ತಾರೆ. ತಲೆಗೂದಲು ಹಿಡಿದು ಎಳೆದಾಡಿದ್ದಾರೆ. ಕಪಾಳಕ್ಕೆ ಬಾರಿಸಿದ್ದಾರೆ. ಕೆಲ ದಿನಗಳ ಕಾಲ ನಡೆದಾಡುವುದೂ ನೌದೀಪ್‌ಗೆ ದುಸ್ತರವಾಗಿದೆ. ಚರಂಡಿ ಗಟಾರ ಸ್ವಚ್ಛ ಮಾಡುವ ಕುಲದಲ್ಲಿ ಹುಟ್ಟಿದ ನೀನು ರೈತ- ಕಾರ್ಮಿಕ ಪ್ರತಿಭಟನೆಗೆ ಯಾಕೆ ಬಂದಿದ್ದೀ ಎಂದು ಅವಹೇಳನ ಮಾಡಿದ್ದಾರೆ. ಮತ್ತು ಥಳಿಸಿದ ಮತ್ತು ನಿಂದಿಸಿದ ಆರೋಪಗಳನ್ನು ಎಂದಿನಂತೆ ತಳ್ಳಿ ಹಾಕಿದ್ದಾರೆ ಕೂಡ.

ಆಕೆಯೊಂದಿಗೆ ದಸ್ತಗಿರಿಯಾದ ಮತ್ತೊಬ್ಬ ಯುವ ಕಾರ್ಮಿಕ ಹೋರಾಟಗಾರ ಶಿವಕುಮಾರ್ ಅವರನ್ನೂ ಚಿತ್ರಹಿಂಸೆಗೆ ಗುರಿಪಡಿಸಲಾಗಿದೆ. ಎಡಗೈ ಮತ್ತು ಬಲಪಾದದಲ್ಲಿ ಮೂಳೆಗಳು ಮುರಿದಿವೆ. ನೌದೀಪ್‌ಗೆ ಎರಡು ಸಲ ಜಾಮೀನು ನಿರಾಕರಿಸಲಾಗುತ್ತದೆ. ಮಂದ ದೃಷ್ಟಿಯ ಆತ ಕನ್ನಡಕವನ್ನು ಧರಿಸಲು ಕೂಡ ಅವಕಾಶ ಕೊಡದೆ ಅಪಹರಿಸಿ ಹಲವು ದಿನಗಳ ಕಾಲ ಅನಧಿಕೃತ ಬಂಧನದಲ್ಲಿ ಇರಿಸಿ ಚಿತ್ರಹಿಂಸೆ ನೀಡಿದ್ದಾರೆ. ಇಲ್ಲಿಯವರೆಗೆ ಆತನ ಭೇಟಿಗೆ ಯಾರಿಗೂ ಅವಕಾಶ ನೀಡಲಾಗಿಲ್ಲ.

ಕಾರ್ಮಿಕರು ಮತ್ತು ರೈತರು ದೈಹಿಕ ಶ್ರಮವನ್ನೇ ನಂಬಿ ಬದುಕುವ ಶ್ರಮಜೀವಿಗಳು. ಇಬ್ಬರೂ ಉತ್ಪಾದಕರು. ರೈತ ಹೊಲಗದ್ದೆಗಳಲ್ಲಿ ಉತ್ಪಾದಿಸಿದರೆ, ಕಾರ್ಮಿಕರು ಗಿರಣಿಗಳಲ್ಲಿ ಉತ್ಪಾದನೆಯಲ್ಲಿ ತೊಡಗಿಕೊಂಡವರು. ಸರ್ಕಾರಗಳು ಈ ಇಬ್ಬರ ಹಕ್ಕುಗಳನ್ನೂ ಬಿಕರಿಗಿಟ್ಟಿದೆ. ಸರ್ಕಾರಿ ಉದ್ಯಮಗಳು ಕಂಪನಿಗಳನ್ನು ಮಾರಾಟಕ್ಕಿಡಲಾಗಿದೆ. ಹೀಗಾಗಿ ಇಬ್ಬರೂ ಒಟ್ಟಾಗಿ ಹೋರಾಡಬೇಕಿದೆ. ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡದಿದ್ದರೆ, ರೈತರ ವಿರೋಧೀ ಕಾನೂನುಗಳನ್ನು ರದ್ದು ಮಾಡದೆ ಹೋದರೆ ನಾವು ಕಾರ್ಖಾನೆಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸುತ್ತೇವೆ. ಕಂಪನಿಗಳಿಗೆ ಬೀಗ ಹಾಕಿಸುತ್ತೇವೆ ಎಂಬ ನೌದೀಪ್ ಹೇಳಿಕೆ ಕಾರ್ಖಾನೆಗಳ ಮಾಲೀಕರನ್ನು ಕೆರಳಿಸಿತ್ತು.

ದಲಿತ ಜಾತಿ ಮತ್ತು ಬಡವರ್ಗಕ್ಕೆ ಸೇರಿದ ಕಾರಣವೇ ಮುಖ್ಯವಾಹಿನಿ ಮಾಧ್ಯಮಗಳು ನೌದೀಪ್ ಅವರ ಬಂಧನ ಮತ್ತು ಚಿತ್ರಹಿಂಸೆಯನ್ನು ನಿರ್ಲಕ್ಷಿಸಿದವು. ಭಾರತದಲ್ಲಿ ದಲಿತರು ಆದಿವಾಸಿಗಳು ಹಾಗೂ ಮುಸಲ್ಮಾನರ ಪ್ರಮಾಣ ಶೇ.39. ದೇಶದ ಜೈಲು ಪಾಲಾಗಿರುವ ಬಂದಿಗಳು ಮತ್ತು ವಿಚಾರಣಾಧೀನ ಕೈದಿಗಳ ಪೈಕಿ ಈ ಸಮುದಾಯಗಳ ಪ್ರಮಾಣ ಶೇ.51.

ಶೋಷಣೆ, ಬಡತನ, ಪೂರ್ವಗ್ರಹಗಳು, ಅನಕ್ಷರತೆ, ತಾರತಮ್ಯಕ್ಕೆ ಬಲಿಯಾಗುತ್ತಿರುವ, ದನಿ ಸತ್ತ ಜನಸಮುದಾಯಗಳಿವು.

ಇತ್ತೀಚೆಗೆ ಬಿಡುಗಡೆಯಾದ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಸರ್ಕಾರಿ ಅಂಕಿಅಂಶ ಕಟುಸತ್ಯದ ಕತೆಯನ್ನು ಕಿರುಚಿ ಹೇಳುತ್ತಿದೆ. ಉಳ್ಳವರ ಕಿವಿಗಳ ಮೇಲೆ ಅದು ಬೀಳುತ್ತಿಲ್ಲ.


ಇದನ್ನೂ ಓದಿ: ಗುಜರಾತ್: ಮಗಳ ಕಣ್ಣ ಮುಂದೆಯೆ ದಲಿತ ಹೋರಾಟಗಾರನನ್ನು ಕೊಂದ ಮೇಲ್ಜಾತಿಯ ದುಷ್ಕರ್ಮಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...