Homeಮುಖಪುಟಆಧಾರ್ ಕಾರ್ಡ್‌ ಇಲ್ಲದೆ ದಾಖಲಿಸಿಕೊಳ್ಳದ ವೈದ್ಯರು : ಹೆರಿಗೆಗೆ ಆಸ್ಪತ್ರೆ ಸಿಗದೆ ಅಲೆಮಾರಿ ಮಹಿಳೆ ಪರದಾಟ

ಆಧಾರ್ ಕಾರ್ಡ್‌ ಇಲ್ಲದೆ ದಾಖಲಿಸಿಕೊಳ್ಳದ ವೈದ್ಯರು : ಹೆರಿಗೆಗೆ ಆಸ್ಪತ್ರೆ ಸಿಗದೆ ಅಲೆಮಾರಿ ಮಹಿಳೆ ಪರದಾಟ

- Advertisement -
- Advertisement -

ಆಧಾರ್ ಕಾರ್ಡ್‌ ಇಲ್ಲದ ಕಾರಣ ವೈದ್ಯರು ದಾಖಲಿಸಿಕೊಳ್ಳಲು ನಿರಾಕರಿಸಿದ್ದು, ಪರಿಣಾಮ ಹೆರಿಗೆಗೆ ಆಸ್ಪತ್ರೆ ಸಿಗದೆ ಅಲೆಮಾರಿ ಸಮುದಾಯದ ಮಹಿಳೆಯೊಬ್ಬರು ಪರದಾಡುತ್ತಿರುವ ಬಗ್ಗೆ ತೆಲಂಗಾಣದ ಕರೀಂನಗರ ಜಿಲ್ಲೆಯಿಂದ ವರದಿಯಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಅಲೆಮಾರಿ ಸಮುದಾಯವಾದ ಬೇಡ ಬುಡಗ ಜಂಗಮದ 23 ವರ್ಷದ ಮಹಿಳೆ ಉಬಿದಿ ರೇಖಾ ಅವರ ಹೆರಿಗೆ ದಿನಾಂಕ ಸಮೀಪಿಸುತ್ತಿದ್ದು, ಆಸ್ಪತ್ರೆಗೆ ದಾಖಲಾಗಲು ಆಧಾರ್ ಕಾರ್ಡ್‌ ಇಲ್ಲದಿರುವುದು ಆಕೆಗೆ ದೊಡ್ಡ ಸಮಸ್ಯೆಯಾಗಿದೆ. ಯಾವುದೇ ಆಸ್ಪತ್ರೆಗೆ ಹೋದರೂ, ಆಧಾರ್ ಕಾರ್ಡ್ ಇಲ್ಲದೆ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.

ರೇಖಾ ಮೂಲತಃ ಕರೀಂನಗರ ಜಿಲ್ಲೆಯ ತಿಮ್ಮಾಪುರ ಮಂಡಲದ ರಾಮಕೃಷ್ಣ ಕಾಲೋನಿ ಗ್ರಾಮದವರು. ಆದರೆ, ಅವರು ಈ ಗ್ರಾಮದ ಶಾಶ್ವತ ನಿವಾಸಿ ಎನ್ನಲಾಗದು. ಏಕೆಂದರೆ, ಗ್ರಾಮದ ಇತರ ಹಲವರಂತೆ ಇವರ ಪೋಷಕರೂ ಕೂಡ ರಾಜ್ಯದಾದ್ಯಂತ ಅಲೆದಾಡಿ ಜೀವನೋಪಾಯ ಕಂಡುಕೊಳ್ಳುವವರು. ವರದಿಯ ಪ್ರಕಾರ, ಪೋಷಕರು ರಾಜ್ಯದ ಯಾವುದೋ ಮೂಲೆಯಲ್ಲಿ ಇದ್ದಾಗ ರೇಖಾ ಅವರ ಜನನ ಆಗಿತ್ತು. ಹಾಗಾಗಿ, ಅವರ ಜನನ ಎಲ್ಲೂ ನೋಂದಣಿ ಆಗಿಲ್ಲ.

ಜನನ ನೋಂದಣಿ ಆಗದ ಕಾರಣ ರೇಖಾ ಅವರಿಗೆ ಆಧಾರ್ ಕಾರ್ಡ್ ದೊರೆತಿಲ್ಲ. ಪರಿಣಾಮ ಈಗ ಆಕೆಯ ಗರ್ಭಾವಸ್ಥೆಯಲ್ಲಿ ಸರ್ಕಾರದ ಯಾವುದೇ ಕಲ್ಯಾಣ ಯೋಜನೆಗಳನ್ನು ಪಡೆಯಲು ಆಗಿಲ್ಲ. ದಿನನಿತ್ಯದ ಆರೋಗ್ಯ ರಕ್ಷಣೆ ಮತ್ತು ಈಗ ಸುರಕ್ಷಿತ ಹೆರಿಗೆಯ ಹಕ್ಕನ್ನೂ ಪಡೆಯಲು ಹೆಣಗಾಡುವಂತಾಗಿದೆ.

ವೈದ್ಯರ ನಿರ್ದೇಶನಗಳು ಇಲ್ಲದಿದ್ದರೂ, ಸಹಜವಾಗಿ ಹೆರಿಗೆಯ ದಿನಾಂಕ ಸಮೀಪಿಸುತ್ತಿರುವುದು ಗೊತ್ತಾದ ಕಾರಣ ರೇಖಾ ಅವರು ಇತ್ತೀಚೆಗೆ ಕರೀಂನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹೋಗಿದ್ದರು. ಆದರೆ, ಅಲ್ಲಿ ಆಧಾರ್ ಕಾರ್ಡ್‌ ಇಲ್ಲದೆ ವೈದ್ಯರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ರೇಖಾ ಜಿಲ್ಲೆಯ ಇತರ ಸರ್ಕಾರಿ ಆಸ್ಪತ್ರೆಗಳಿಗೂ ಹೋಗಿ ಬಂದಿದ್ದಾರೆ. ಎಲ್ಲೂ ಆಕೆಯನ್ನು ಸೇರಿಸಿಕೊಂಡಿಲ್ಲ ಎಂದು ಆರೋಪಿಸಲಾಗಿದೆ. ಅಲೆಮಾರಿ ಸಮುದಾಯವಾಗಿರುವುದರಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗುವುದು ಆಕೆಗೆ ಕನಸಿನ ಮಾತಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಆಧಾರ್ ಕಾರ್ಡ್‌ ಅನ್ನು ಕೇವಲ ಗುರುತಿಸುವಿಕೆಗಾಗಿ ಮಾತ್ರ ಕೇಳಲಾಗುತ್ತದೆ. ಅದು ಇಲ್ಲ ಎಂಬ ಕಾರಣಕ್ಕೆ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲದಿದ್ದರೆ, ಅಂತವರನ್ನು ‘ಅಜ್ಞಾತ ಅಥವಾ ಅಪರಿಚತ ವ್ಯಕ್ತಿ’ ಎಂದು ಪರಿಗಣಿಸಲಾಗುತ್ತದೆ. ಅವರ ಬಗ್ಗೆ ಪೊಲೀಸರಿಗೆ ವರದಿ ಮಾಡಲಾಗುತ್ತದೆ. ಆದರೆ, ಅವರಿಗೆ ಚಿಕಿತ್ಸೆ ನಿರಾಕರಿಸಲಾಗುವುದಿಲ್ಲ” ಎಂದು ಜಿಲ್ಲಾ ಜನರಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಜಿ. ವೀರಾ ರೆಡ್ಡಿ ಹೇಳಿದ್ದಾರೆ. ಒಂದು ವೇಳೆ ಇಂತಹ ಯಾವುದೇ ಸಮಸ್ಯೆ ಅಥವಾ ತೊಂದರೆ ಉಂಟಾದರೆ, ಅದನ್ನು ನೇರವಾಗಿ ತಮ್ಮ ಗಮನಕ್ಕೆ ತರುವಂತೆ ಅವರು ಕೇಳಿಕೊಂಡಿದ್ದಾರೆ.

ಹಿರಿಯ ಅಧಿಕಾರಿ ಹೇಳಿಕೆ ಕೊಟ್ಟರೂ ತಳಮಟ್ಟದಲ್ಲಿ ನೈಜತೆ ಬೇರೆಯೇ ಇದೆ. ಅಲ್ಲಿ ನಿಯಮ ಮತ್ತು ಅದರ ಅನುಷ್ಠಾನದ ನಡುವೆ ಅಂತರವಿದೆ. ಯಾವುದೇ ಆಸ್ಪತ್ರೆಗೆ ಹೋದರೂ ದಾಖಲಿಸಿಕೊಳ್ಳಲು ನಿರಾಕರಿಸುತ್ತಿರುವುದು ಬಡ, ಅನಕ್ಷರಸ್ಥ, ಆರ್ಥಿಕವಾಗಿ ಸಬಲರಲ್ಲದ ರೇಖಾ ಅವರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ. ಹೆರಿಗೆಯ ದಿನಾಂಕ ಸಮೀಪಿಸಿದರೂ, ಆಕೆಗೆ ಎಲ್ಲಿ ಹೆರಿಗೆಯಾಗಲಿದೆ ಎಂಬ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ ಎಂದು ವರದಿ ಉಲ್ಲೇಖಿಸಿದೆ.

“ನನ್ನ ಬಳಿ ಆಧಾರ್ ಕಾರ್ಡ್ ಇಲ್ಲದಿದ್ದರೆ, ನಾನು ತಾಯಿಯಾಗಲು ಸಾಧ್ಯವಿಲ್ಲವೇ?” ಎಂದು ಆಕೆ ಕೇಳುತ್ತಾರೆ ಎಂದು ವರದಿ ಹೇಳಿದೆ.

ಸ್ಥಳೀಯ ಬಿಜೆಪಿ ಮುಖಂಡ ಸುಗುರ್ತಿ ಜಗದೀಶ್ವರಚಾರಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದರು. ಅವರು ಗ್ರಾಮ ಪಂಚಾಯತ್‌ನಿಂದ ವಾಸಸ್ಥಳದ ಪ್ರಮಾಣಪತ್ರವನ್ನು ಪಡೆಯಲು ರೇಖಾ ಅವರಿಗೆ ಸಹಾಯ ಮಾಡಿದ್ದರು. ಆದರೆ, ತಾಂತ್ರಿಕ ಸಮಸ್ಯೆಗಳಿಂದಾಗಿ ಆಧಾರ್ ಪೋರ್ಟಲ್ ರೇಖಾ ಅವರ ವಿವರಗಳನ್ನು ಸ್ವೀಕರಿಸಿಲ್ಲ. ಅವರ ಅರ್ಜಿ ಸ್ಥಗಿತಗೊಂಡಿದೆ.

ರೇಖಾ ಅವರ ಪ್ರಕರಣವು ದೊಡ್ಡ ಸಮಸ್ಯೆಯನ್ನು ಪ್ರತಿಬಿಂಬಿಸುತ್ತದೆ ಎಂದು ಜಗದೀಶ್ವರಚಾರಿ ಹೇಳಿದ್ದಾರೆ.

ಅಲೆಮಾರಿ ಸಮುದಾಯಗಳ ಅನೇಕ ಮಹಿಳೆಯರು ಮತ್ತು ಮಕ್ಕಳು, ಮನೆ ಜನನ, ವಲಸೆ ನೋಂದಣಿಗಳ ಕೊರತೆಯಿಂದಾಗಿ ಔಪಚಾರಿಕ ದಾಖಲೆಗಳಿಂದ ಹೊರಗೆ ಉಳಿದಿದ್ದಾರೆ. ಪರಿಣಾಮ ಅವರ ಮಕ್ಕಳು ಶಿಕ್ಷಣದಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಕಲ್ಯಾಣ ಯೋಜನೆಗಳು ಆ ಸಮುದಾಯದ ಜನರಿಗೆ ಸಿಗುತ್ತಿಲ್ಲ. ಅಲೆಮಾರಿ ಸಮುದಾಯಕ್ಕೆಂದೇ ಮೀಸಲಾದ ಯೋಜನೆಗಳ ಲಾಭವನ್ನೂ ಪಡೆಯಲು ಆಗುತ್ತಿಲ್ಲ ಎಂದು ಜಗದೀಶ್ವರಚಾರಿ ವಿಷಾದ ವ್ಯಕ್ತಪಡಿಸಿದ್ದಾರೆ.

ತುರ್ತು ಆಸ್ಪತ್ರೆ ದಾಖಲಾತಿಗಳಿಗೆ ಆಧಾರ್ ಕಡ್ಡಾಯಗೊಳಿಸುವ ಕಾನೂನುಬದ್ಧತೆಯ ಬಗ್ಗೆ ತೆಲಂಗಾಣ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತ್ತು. ಆಧಾರ್ ಇಲ್ಲದ ಕಾರಣಕ್ಕೆ ತೆಲಂಗಾಣದಲ್ಲಿ ಕುಟುಂಬಗಳನ್ನು ಮಹಾಲಕ್ಷ್ಮಿ ಯೋಜನೆ (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) ಮತ್ತು ಕಲ್ಯಾಣ ಲಕ್ಷ್ಮಿಯಂತಹ ಯೋಜನೆಗಳಿಂದ ಹೊರಗಿಡಲಾಗುತ್ತದೆ ಎಂದು ವರದಿಯಾಗಿದೆ.

ಈ ಸಮಸ್ಯೆಗಳನ್ನು ತಗ್ಗಿಸಲು, ತೆಲಂಗಾಣ ಸರ್ಕಾರ ಜನವರಿ 2026ರಲ್ಲಿ ಉಚಿತ ಮಹಿಳಾ ಬಸ್ ಪ್ರಯಾಣಕ್ಕಾಗಿ ಸ್ಮಾರ್ಟ್ ಐಡಿ ಕಾರ್ಡ್‌ಗಳನ್ನು ಪರಿಚಯಿಸಿದೆ. ಇದು ಆಧಾರ್ ಪರಿಶೀಲನೆಯಲ್ಲಿ ತೊಂದರೆ ಎದುರಿಸಬಹುದಾದವರಿಗೆ ಪರಿಹಾರವನ್ನು ನೀಡುವ ಗುರಿಯನ್ನು ಹೊಂದಿದೆ.

Courtesy : newindianexpress.com

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಜಿಟಲ್ ಅರೆಸ್ಟ್‌ನಲ್ಲಿ ಬರೋಬ್ಬರಿ 23 ಕೋಟಿ ರೂ. ಕಳೆದುಕೊಂಡ ವ್ಯಕ್ತಿ : ಹಣ ಮರುಪಾವತಿ, ವಂಚನೆ ತಡೆಗೆ ಮಾರ್ಗಸೂಚಿ ಕೋರಿ ಸುಪ್ರೀಂ ಮೊರೆ

ಸೈಬರ್ ವಂಚನೆಯಾದ ಡಿಜಿಟಲ್ ಅರೆಸ್ಟ್‌ನಲ್ಲಿ ಬರೋಬ್ಬರಿ 23 ಕೋಟಿ ರೂಪಾಯಿ (22.92 ಕೋಟಿ) ಕಳೆದುಕೊಂಡ 82 ವರ್ಷದ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು, ಈ ಸಂಬಂಧ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್...

ಒಡಿಶಾ| ಗುಂಪು ಹಲ್ಲೆಯ ನಂತರ ಪಾದ್ರಿ ಕುಟುಂಬ ವಾಸವಿದ್ದ ಬಾಡಿಗೆ ಮನೆ ಖಾಲಿ ಮಾಡುವಂತೆ ಒತ್ತಡ

ಈ ತಿಂಗಳ ಆರಂಭದಲ್ಲಿ ಗುಂಪೊಂದು ಹಲ್ಲೆ ನಡೆಸಿ ಸಾರ್ವಜನಿಕವಾಗಿ ಅವಮಾನಿಸಿತ್ತು ಎನ್ನಲಾದ ಒಡಿಶಾ ಪಾದ್ರಿ ಕುಟುಂಬ ಎಂಟು ವರ್ಷಗಳ ಕಾಲ ವಾಸಿಸುತ್ತಿದ್ದ ಮನೆಯಿಂದ ಖಾಲಿ ಮಾಡುವಂತೆ ಒತ್ತಾಯಿಸಲಾಗಿದೆ. ಇದರಿಂದಾಗಿ ಅವರ ಕುಟುಂಬ ಭಯಭೀತರಾಗಿ...

ಲ್ಯಾಂಡ್‌ಲಾರ್ಡ್: ಜಮೀನ್ದಾರಿ ವ್ಯವಸ್ಥೆ, ಜಾತಿ ಪ್ರಶ್ನೆ ಮತ್ತು ಸಂವಿಧಾನ – ಕನ್ನಡ ಚಿತ್ರರಂಗದ ಒಂದು ಮಹತ್ವದ ತಿರುವು

ಕನ್ನಡ ಮುಖ್ಯವಾಹಿನಿ ಸಿನೆಮಾ ಅಪರೂಪಕ್ಕೊಮ್ಮೆ ಮಾತ್ರ ಸಮಾಜದ ಮೂಲಭೂತ ಪ್ರಶ್ನೆಗಳತ್ತ ನೇರವಾಗಿ ಮುಖ ಮಾಡುತ್ತದೆ. ಜಾತಿ, ಭೂಮಿ, ಅಧಿಕಾರ ಎಲ್ಲವನ್ನು ಒಟ್ಟಿಗೆ ಹಿಡಿದು ಪ್ರಶ್ನಿಸುವ ಚಿತ್ರಗಳು ಇನ್ನೂ ವಿರಳ. ನಿರ್ದೇಶಕ–ಕಥಾಲೇಖಕ ಜಡೆಶ್ ಕೆ....

ಕುಡುಪು ಗುಂಪು ಹತ್ಯೆ : ಮತ್ತೊಬ್ಬ ಆರೋಪಿಗೆ ಜಾಮೀನು

ಮಂಗಳೂರು ಹೊರವಲಯದ ಕುಡುಪು ಬಳಿ 2025ರ ಏಪ್ರಿಲ್ 27ರಂದು ನಡೆದ ಕೇರಳ ಮೂಲದ ಮುಹಮ್ಮದ್ ಅಶ್ರಫ್ ಅವರ ಗುಂಪು ಹತ್ಯೆ ಪ್ರಕರಣದ ಆರೋಪಿ ನಟೇಶ್ ಕುಮಾರ್‌ಗೆ ಹೈಕೋರ್ಟ್ ಶುಕ್ರವಾರ (ಜ.23) ಜಾಮೀನು ಮಂಜೂರು...

ಬಂಗಾಳದಲ್ಲಿ ಎಸ್‌ಐಆರ್ ಭಯದಿಂದ 110 ಮಂದಿ ಆತ್ಮಹತ್ಯೆ : ಸಿಎಂ ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಭಯದಿಂದ ಪ್ರತಿದಿನ ಪಶ್ಚಿಮ ಬಂಗಾಳದಲ್ಲಿ ಮೂರ್ನಾಲ್ಕು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ (ಜ.23) ಹೇಳಿದ್ದಾರೆ. ಚುನಾವಣಾ ಆಯೋಗ ಮತ್ತು ಕೇಂದ್ರ...

ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ಬೆದರಿಕೆ: ಕಾಂಗ್ರೆಸ್ ನಿಂದ ರಾಜೀವ್ ಗೌಡ ಅಮಾನತು

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅಭಿನಯದ ಕಲ್ಟ್ ಚಿತ್ರದ ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಕರೆ ಮಾಡಿ ಅಸಭ್ಯವಾಗಿ ನಿಂದಿಸಿ,...

ಭೀಮಾ ಕೋರೆಗಾಂವ್ ಪ್ರಕರಣ: ನಾಲ್ಕು ವರ್ಷಗಳ ನಂತರ ಇಬ್ಬರಿಗೆ ಬಾಂಬೆ ಹೈಕೋರ್ಟ್‌ನಿಂದ ಜಾಮೀನು

ಎಲ್ಗರ್ ಪರಿಷತ್ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಾಲ್ಕು ವರ್ಷಗಳ ನಂತರ, ಸಾಮಾಜಿಕ ಕಾರ್ಯಕರ್ತರಾದ ಸಾಗರ್ ಗೋರ್ಖೆ ಮತ್ತು ರಮೇಶ್ ಗೈಚೋರ್ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಈಗಾಗಲೇ ಬಿಡುಗಡೆಯಾದ...

‘ಗುಜರಾತ್‌ನಂತೆಯೇ ಕೇರಳವೂ ಈಗ ಬಿಜೆಪಿಯ ಮೇಲೆ ನಂಬಿಕೆ ಇಟ್ಟಿದೆ’: ಪ್ರಧಾನಿ ನರೇಂದ್ರ ಮೋದಿ 

ತಿರುವನಂತಪುರಂ: ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಿರುವನಂತಪುರಂ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ವಿಜಯವನ್ನು "ಬದಲಾವಣೆಗೆ ಮಹತ್ವದ ಜನಾದೇಶ" ಎಂದು ಶ್ಲಾಘಿಸಿದ್ದಾರೆ.  ಇದೇ ವೇಳೆ "ಜನಪರ ಮತ್ತು...

ರಾಜಸ್ಥಾನ: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ನಡುವೆ ಪ್ರೀತಿ: ಮದುವೆಗಾಗಿ ಪೆರೋಲ್ ಮೇಲೆ ಹೊರ ಬಂದ ಕೊಲೆ ಅಪರಾಧಿಗಳು

ಜೈಪುರದ ಸಂಗನೇರ್ ಓಪನ್ ಜೈಲಿನಲ್ಲಿ(ಮುಕ್ತ ಜೈಲು) ಪ್ರಾರಂಭವಾದ ಇಬ್ಬರು ಕೊಲೆ ಅಪರಾಧಿಗಳ ನಡುವಿನ ಪ್ರಣಯವು ಸಾರ್ವಜನಿಕ ಜೀವನಕ್ಕೂ ಕಾಲಿರಿಸಿದೆ. ಕೊಲೆ ಪ್ರಕರಣಗಳಲ್ಲಿ ಜೀವಾವಧಿಗೆ ಒಳಗಾಗಿರುವ ಇಬ್ಬರು ಕೈದಿಗಳು ಮದುವೆಯಾಗಲು ಪೆರೋಲ್ ಮೇಲೆ ಹೊರಬಂದಿದ್ದಾರೆ. ಅಪರಾಧ...

‘ಅತ್ಯಾಚಾರ-ಕೊಲೆ ಸಣ್ಣ ಘಟನೆ’: ಸಂಸದ ರಾಜಶೇಖರ್ ಹಿಟ್ನಾಳ್ ವಿವಾದಾತ್ಮಕ ಹೇಳಿಕೆ: ಸಂಸದರ ಹೇಳಿಕೆಗೆ ವ್ಯಾಪಕ ಖಂಡನೆ 

ಕೊಪ್ಪಳ: ಒಂದು ವರ್ಷದ ಹಿಂದೆ ಸಾಣಾಪುರದಲ್ಲಿ ವಿದೇಶಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಹಾಗೂ ವ್ಯಕ್ತಿಯ ಕೊಲೆ ಪ್ರಕರಣ ಸಣ್ಣದಾಗಿದ್ದರೂ ಮಾಧ್ಯಮಗಳು ವೈಭವೀಕರಿಸಿದ್ದರಿಂದ ಪ್ರವಾಸೋದ್ಯಮಕ್ಕೆ ವ್ಯಾಪಕ ಪೆಟ್ಟು ಬಿದ್ದಿದೆ ಎಂದು ಸಂಸದ ರಾಜಶೇಖರ...