ಊಟದ ಬುತ್ತಿಯಲ್ಲಿ ಮಾಂಸಾಹಾರ ತಂದ ಆರೋಪದ ಮೇಲೆ ಶಾಲೆಯಿಂದ ಹೊರಹಾಕಲ್ಪಟ್ಟ ಮೂವರು ಅಪ್ರಾಪ್ತ ಮಕ್ಕಳ ನೆರವಿಗೆ ಅಲಹಾಬಾದ್ ಹೈಕೋರ್ಟ್ ಬಂದಿದ್ದು, ಎರಡು ವಾರಗಳಲ್ಲಿ ಅವರನ್ನು ಬೇರೆ ಶಾಲೆಗೆ ಸೇರಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದೆ. ಶಾಲೆಗೆ ಮಾಂಸಾಹಾರ
ಅಮ್ರೋಹಾದ ಸಬ್ರಾ ಮತ್ತು ಇತರ ಮೂವರು ಸಲ್ಲಿಸಿದ ರಿಟ್ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮತ್ತು ಎಸ್.ಸಿ. ಶರ್ಮಾ ಅವರನ್ನೊಳಗೊಂಡ ಪೀಠವು ಎರಡು ವಾರಗಳ ಅವಧಿಯಲ್ಲಿ ಈ ಮಕ್ಕಳನ್ನು ಸಿಬಿಎಸ್‌ಇಗೆ ಸಂಯೋಜಿತವಾಗಿರುವ ಬೇರೆ ಯಾವುದಾದರೂ ಶಾಲೆಗೆ ಸೇರಿಸುವಂತೆ ಅಮ್ರೋಹದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನಿರ್ದೇಶಿಸಿದೆ. ಈ ನ್ಯಾಯಾಲಯದ ಮುಂದೆ ಅನುಸರಣೆಯ ಅಫಿಡವಿಟ್.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮತ್ತು ಎಸ್.ಸಿ. ಶರ್ಮಾ ಅವರನ್ನೊಳಗೊಂಡ ಪೀಠವು ಎರಡು ವಾರಗಳ ಅವಧಿಯಲ್ಲಿ ಸಿಬಿಎಸ್‌ಇಗೆ ಸಂಯೋಜಿತವಾಗಿರುವ ಬೇರೆ ಯಾವುದಾದರೂ ಶಾಲೆಯಲ್ಲಿ ಮಕ್ಕಳನ್ನು ಸೇರಿಸುವಂತೆ ಅಮ್ರೋಹದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ನಿರ್ದೇಶಿಸಿದೆ. ಜೊತೆಗೆ ನ್ಯಾಯಾಲಯದ ಮುಂದೆ ಅನುಸರಣೆಯ ಅಫಿಡವಿಟ್ ಅನ್ನು ಸಲ್ಲಿಸುವಂತೆ ಅದು ಆದೇಶಿಸಿದೆ. ಶಾಲೆಗೆ ಮಾಂಸಾಹಾರ
ಮಕ್ಕಳು ಶಾಲೆಯಲ್ಲಿ ಮಾಂಸಾಹಾರ ತಂದಿರುವುದಕ್ಕೆ ಆಕ್ಷೇಪಿಸಿ ಶಾಲೆಯ ಪ್ರಾಂಶುಪಾಲರು ಅವರನ್ನು ಹೊರ ಹಾಕಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಶಾಲೆಯ ನಡವಳಿಕೆಯಿಂದ ಮಕ್ಕಳ ಶಿಕ್ಷಣದ ಹಕ್ಕಿಗೆ ಧಕ್ಕೆಯಾಗಿದೆ ಎಂದು ಹೇಳಿದ್ದಾರೆ.
ಡಿಸೆಂಬರ್ 17 ರಂದು ತನ್ನ ಆದೇಶದಲ್ಲಿ, ಜನವರಿ 6, 2025 ರಂದು ನ್ಯಾಯಾಲಯವು ಅರ್ಜಿಯನ್ನು ಹೊಸದಾಗಿ ವಿಚಾರಣೆಗೆ ಒಳಪಡಿಸುತ್ತದೆ ಎಂದು ಹೇಳಿದೆ. ಜೊತೆಗೆ,”ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮ್ರೋಹಾ ಅವರು ಯಾವುದೇ ಅಫಿಡವಿಟ್ ಸಲ್ಲಿಸದಿದ್ದಲ್ಲಿ, ಅವರು ಮುಂದಿನ ದಿನಾಂಕದಂದು ಖುದ್ದಾಗಿ ಹಾಜರಾಗಬೇಕು” ಎಂದು ಹೇಳಿದೆ.
ಇದನ್ನೂ ಓದಿ: ಅಂಬೇಡ್ಕರ್‌ಗೆ ಅವಮಾನ| ‘ಅಮಿತ್ ಶಾಗೆ ಹುಚ್ಚು ಹಿಡಿದಿದೆ, ಅವರು ರಾಜಕೀಯ ತ್ಯಜಿಸಬೇಕು’ ಎಂದ ಲಾಲು ಪ್ರಸಾದ್
ಅಂಬೇಡ್ಕರ್‌ಗೆ ಅವಮಾನ| ‘ಅಮಿತ್ ಶಾಗೆ ಹುಚ್ಚು ಹಿಡಿದಿದೆ, ಅವರು ರಾಜಕೀಯ ತ್ಯಜಿಸಬೇಕು’ ಎಂದ ಲಾಲು ಪ್ರಸಾದ್


