Homeಎಚ್.ಎಸ್.ದೊರೆಸ್ವಾಮಿಕರ್ನಾಟಕಕ್ಕೆ ಎದುರಾಗಿರುವ ಸವಾಲನ್ನು ನಿಭಾಯಿಸುವರೇ ಸಿದ್ದರಾಮಯ್ಯ ಮತ್ತು ದೇವೇಗೌಡರು?

ಕರ್ನಾಟಕಕ್ಕೆ ಎದುರಾಗಿರುವ ಸವಾಲನ್ನು ನಿಭಾಯಿಸುವರೇ ಸಿದ್ದರಾಮಯ್ಯ ಮತ್ತು ದೇವೇಗೌಡರು?

- Advertisement -
- Advertisement -

ಕರ್ನಾಟಕಕ್ಕೊಂದು ಸವಾಲು ಎದುರಾಗಿದೆ- ಇದನ್ನು ಎಲ್ಲರೂ ಗಮನಿಸಬೇಕು. ಕಾಂಗ್ರೆಸ್ಸು ಒಡೆದ ಮನೆಯಾಗಿದೆ. ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಕೋಲಾರದ ಮುನಿಯಪ್ಪನವರ ನಾಯಕತ್ವ ಕೋಲಾರಕ್ಕೆ ಸೀಮಿತವಾಗಿತ್ತು. ಈಗ ಅದೂ ಇಲ್ಲವಾಗಿದೆ. ಅಲ್ಲೂ ಅವರಿಗೆ ಎದುರಾಳಿಗಳು ಹುಟ್ಟಿಕೊಂಡು ಅವರ ವರ್ಚಸ್ಸು ಕಡಿಮೆಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯ ಮತ್ತು ದೊಡ್ಡ ನಾಯಕರಾದರೂ, ಅವರ ಪ್ರಭಾವ ಹೈದರಾಬಾದ್ ಕರ್ನಾಟಕಕ್ಕೆ ಸೀಮಿತವಾಗಿತ್ತು. ಅವರು ನಾಯಕತ್ವ ವಿಸ್ತಾರಗೊಳಿಸುವ ಸಾಮಥ್ರ್ಯ ಹೊಂದಿದ್ದಾರೆ. ಎಚ್.ಕೆ.ಪಾಟೀಲರು ಉತ್ತರ ಕರ್ನಾಟಕದ ಎತ್ತರಕ್ಕೆ ಬೆಳೆದ ನಾಯಕರು. ಸಾರ್ವಜನಿಕ ಜೀವನವನ್ನು ಚೊಕ್ಕವಾಗಿ ಇಟ್ಟುಕೊಂಡಿದ್ದಾರೆ. ಸಹಕಾರಿಗಳು, ಸಾಮಾಜಿಕ ಕಳಕಳಿಯುಳ್ಳ ಉತ್ತಮ ಸಮಾಜ ಸೇವಕರು. ಅವರ ಬಗ್ಗೆ ಅಪಾರವಾದ ಗೌರವ ಇದೆ. ರಾಜಕೀಯದಲ್ಲಿ ಅವರಿನ್ನೂ ದೊಡ್ಡ ಹೆಜ್ಜೆಗಳನ್ನು ಹಾಕಿಲ್ಲ. ಪಾರ್ಲಿಮೆಂಟ್ ಚುನಾವಣೆ ಸಮಯದಲ್ಲಿ ಚುನಾವಣೆ ನಡೆಸುವ ದೊಡ್ಡ ಜವಾಬ್ದಾರಿಯನ್ನು ಪಾಟೀಲರಿಗೆ ವಹಿಸಲಾಗಿತ್ತು. ಅದನ್ನು ನಿಭಾಯಿಸುವುದರಲ್ಲಿ ಅವರು ಫಲಕಾರಿಯಾಗಿಲ್ಲ.

ಪರಮೇಶ್ವರರು ಬುದ್ಧಿವಂತರು, ರಾಜಕೀಯ ಬಲ್ಲವರು. ಅವರು ತಮ್ಮ ತಂದೆಯವರ ಮೂಸೆಯಲ್ಲಿ ಬೆಳೆದವರು. ಆದರೆ ಅವರಿಗೆ Dashing ಸ್ವಭಾವ ಇಲ್ಲ. ಸಂಘಟನೆ ಮಾಡುವ ಅನುಭವವಿಲ್ಲ. ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 3-4 ಸಾರಿ ಕಾಂಗ್ರೆಸ್ ಜಯಗಳಿಸಿರುವುದು ನಿಜ. ಅದು ಅವರ ಅದೃಷ್ಟ ಎಂದು ಹೇಳಬಹುದೇ ಹೊರತು ಅವರ ರಾಜಕೀಯ ಕೌಶಲದಿಂದ ಆದ ಗೆಲುವು ಎಂದು ಹೇಳಲು ಪುರಾವೆಗಳಿಲ್ಲ.

ಇನ್ನುಳಿದಂತೆ ಹಾಳೂರಿಗೆ ಉಳಿದವನೇ ಒಡೆಯ ಎಂಬ ಸಿದ್ದರಾಮಯ್ಯನವರು. ಸಿದ್ದರಾಮಯ್ಯನವರು ಮೇಲೆ ಹೇಳಿದ ಎಲ್ಲ ನಾಯಕರಿಗಿಂತ ಭಿನ್ನ. ಆಡಳಿತದ ಅನುಭವವುಳ್ಳವರು. ನಾಯಕತ್ವದ ಲಕ್ಷಣ ಉಳ್ಳವರು, ರಾಮಕೃಷ್ಣ ಹೆಗ್ಡೆ, ದೇವೇಗೌಡರ ಮೂಸೆಯಲ್ಲಿ ಬೆಳೆದು ಬಂದವರು. ಸ್ವಲ್ಪ ಮಟ್ಟಿಗೆ ಮೈನಾರಿಟಿಗಳಲ್ಲಿ ಮೈನಾರಿಟಿಗಳಾದ ದೇವರಾಜ ಅರಸರಂತೆ ಅಲ್ಪಸಂಖ್ಯಾತರ ಏಳ್ಗೆಯ ಬಗೆಗೆ ಗಮನ ಹರಿಸುವವರು. ಮೇಲೆ ಹೇಳಿದ ಎಲ್ಲ ನಾಯಕರಿಗಿಂತ ಹೆಚ್ಚಿನ ವರ್ಚಸ್ಸಿನ ವ್ಯಕ್ತಿ ಸಿದ್ದರಾಮಯ್ಯ. ಆದರೆ ಇವರು ಕೊನೆಯ ಪಕ್ಷ ರಾಮಕೃಷ್ಣ ಹೆಗ್ಡೆ, ದೇವರಾಜ ಅರಸರು, ದೇವೇಗೌಡರಷ್ಟು ದಕ್ಷ ಹೋರಾಟಗಾರರಲ್ಲ ಎಂಬುದು ಕಟುಸತ್ಯ. ಆದ್ದರಿಂದ ಸಿದ್ದರಾಮಯ್ಯ ಮೊದಲುಗೊಂಡು ಇತರ ನಾಯಕರು ತಮ್ಮ Ego ಬಿಟ್ಟು ಸಾಮೂಹಿಕ ನಾಯಕತ್ವ ವಹಿಸಿಕೊಂಡರೆ ಮಾತ್ರ ಕರ್ನಾಟಕ ಕಾಂಗ್ರೆಸ್‍ಗೆ ಭವಿಷ್ಯ ಇರುವುದು. ಇವರು ಸ್ಥಾನಮಾನಗಳನ್ನು ನ್ಯಾಯಯುತವಾಗಿ ಹಂಚಿಕೊಂಡು, ಒಟ್ಟಾಗಿ ನಿಂತು ಸಂಘರ್ಷಕ್ಕೆ ಇಳಿದರೆ ಮಾತ್ರ ಮೋದಿ ಮತ್ತು ಶಾರವರ onslaughtನ್ನು ಎದುರಿಸಲು ಸಾಧ್ಯವಾದೀತು.

ನನ್ನ ದೃಷ್ಟಿಯಲ್ಲಿ ಮೋದಿ ಈಗ ಕರ್ನಾಟಕವನ್ನು ಬಿಜೆಪಿ ವಶಮಾಡಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಅವರು ಲಿಂಗಾಯತ, ಒಕ್ಕಲಿಗರ ಎರಡು ರಾಜಕೀಯ ಬಲಗಳನ್ನು ಕರ್ನಾಟಕದಲ್ಲಿ ಗುರುತಿಸಿದ್ದಾರೆ. ಈ ಎರಡು ಬಣಗಳನ್ನು ಒಡೆದರೆ ತನ್ನ ಗುರಿ ಸಾಧನೆಯಾದೀತೆಂದು ನಂಬಿದ್ದಾರೆ. ಇಂಗ್ಲಿಷರ ಒಡೆದು ಆಳುವ ನೀತಿಯನ್ನು ಕರಗತ ಮಾಡಿಕೊಂಡಿರುವ ಶಾ ಮತ್ತು ಮೋದಿ ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿ ಈ ಪ್ರಯೋಗ ಮಾಡಲು ತೀರ್ಮಾನಿಸಿರುವಂತಿದೆ. ಯಡಿಯೂರಪ್ಪನವರನ್ನು ಬಹಳಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವರು ಬಿಡುವುದಿಲ್ಲ. ಅವರ ರಾಜೀನಾಮೆ ಪಡೆದು, ರಾಷ್ಟ್ರಾಧ್ಯಕ್ಷರ ಆಡಳಿತ ಹೇರಿ ಆರು ತಿಂಗಳೊಳಗೆ ಚುನಾವಣೆ ನಡೆಸುವ ನಿರ್ಧಾರ ಅವರದು. ಈ ಪ್ರಯೋಗಕ್ಕೆ ಇದು ಸಕಾಲ ಎಂಬುದು ಅವರ ಲೆಕ್ಕಾಚಾರ.

ಲಿಂಗಾಯತರಿಗೆ ಶಾಸನಸಭೆಗೆ ಸಾಕಷ್ಟು ಸೀಟು ಕೊಟ್ಟಿಲ್ಲ. ಮಂತ್ರಿ ಪದವಿ ಕೊಟ್ಟಿಲ್ಲ ಎಂದು ಹಲವು ಲಿಂಗಾಯತ ಮಠಗಳೂ ಡಿಮ್ಯಾಂಡಿಡುವುದು ಸರ್ವೇ ಸಾಮಾನ್ಯ ವಿಷಯ. ಇಷ್ಟರ ಮಟ್ಟಿಗೆ ಲಿಂಗಾಯತ ಮಠಗಳು ರಾಜಕೀಯಕ್ಕೆ ಕೈ ಹಾಕುವುದನ್ನು ಅನೇಕ ಸಾರಿ ಕಂಡಿದ್ದೇವೆ. ಈ ವಿಚಾರ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವೇದ್ಯವೇ ಸರಿ. ಅವರೆಡೆಗೆ ಲಿಂಗಾಯಿತ ಮಠಗಳಿಗೆ ಒಲವಿರುವುದು ಎಲ್ಲರಿಗೂ ತಿಳಿದ ವಿಚಾರ.

ಈಗ ಮೋದಿಯ strategy ಒಕ್ಕಲಿಗ ಲಿಂಗಾಯತರನ್ನು ಬೇರ್ಪಡಿಸುವುದೇ ಆಗಿದೆ. ಲಿಂಗಾಯತರನ್ನು ಒಲಿಸಿಕೊಳ್ಳಲು ಲಿಂಗಾಯತ ಮಠಗಳ ಸಹಾಯ ಪಡೆಯುವುದು, ಒಕ್ಕಲಿಗ ನಾಯಕರನ್ನು ಮೂಲೆ ಗುಂಪು ಮಾಡುವುದು ಮೋದಿ-ಶಾ ಲೆಕ್ಕಾಚಾರ. ಕರ್ನಾಟಕದಲ್ಲಿ ಇರುವ ಪ್ರಭಾವಶಾಲಿ ಜಾತಿಗಳು ಇವೆರಡೇ. ಇವರನ್ನು ಒಡೆದರೆ ನಮ್ಮ ಪತಾಕೆ ಹಾರಿಸಬಹುದು ಎಂಬುದು ಮೋದಿ ಅವರ ಅಂಬೋಣ.

ಕರ್ನಾಟಕದಲ್ಲಿ ಒಕ್ಕಲಿಗರನ್ನು ಒಂದುಗೂಡಿಸುವ ರಾಜಕೀಯ ಶಕ್ತಿಯಾಗಿದ್ದವರು ಎಂದರೆ ದೇವೇಗೌಡರು, ಕುಮಾರಸ್ವಾಮಿಯವರು. ಮನೆತನದ ರಾಜಕೀಯಕ್ಕೆ ಬದ್ಧ ದೇವೇಗೌಡರನ್ನೂ ಇದುವರೆಗೂ ಒಕ್ಕಲಿಗರು ಪ್ರಶ್ನಿಸಿದ್ದಿಲ್ಲ. ಈ ಸಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸಿದ 7 ಸ್ಥಾನಗಳಲ್ಲಿ 3ನ್ನು ದೇವೇಗೌಡರು ತಮ್ಮ ಮನೆಗೆ ಕೊಂಡೊಯ್ದರು. ಅವುಗಳಲ್ಲಿ ಒಂದನ್ನು ಗೆದ್ದು ಎರಡರಲ್ಲಿ ಸೋತರು. ಈಗ ಒಕ್ಕಲಿಗರು ದೇವೇಗೌಡರನ್ನು ಬಹಿರಂಗವಾಗಿ ಟೀಕೆ ಮಾಡಲು ಆರಂಭ ಮಾಡಿದ್ದಾರೆ. ಅವರ ವರ್ಚಸ್ಸು ಕುಗ್ಗುತ್ತಿದೆ. ಈ ಸುಸಂದರ್ಭವನ್ನು ಬಳಸಿಕೊಂಡು ಒಕ್ಕಲಿಗರ ಪ್ರಾಬಲ್ಯವನ್ನು ಕಡಿಮೆ ಮಾಡುವ ಹುನ್ನಾರ ಮಾಡಲೇಬೇಕೆಂದು ಮೋದಿ ತೀರ್ಮಾನಿಸಿದ್ದಾರೆ. ದೇವೇಗೌಡರಿಗೆ ಅದಕ್ಕಿಂತ ಮುಖ್ಯವಾಗಿ, ಒಕ್ಕಲಿಗ ಜನಾಂಗಕ್ಕೇ ಇದು ಒಂದು ಸವಾಲು.

ಆ ಸಮುದಾಯದ ಅಸ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಒಕ್ಕಲಿಗ ಜನಾಂಗ ಇದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಜಾತಿವಾದಿಯಾಗಿಲ್ಲ. ಜಾತಿ ಪದ್ಧತಿ ರದ್ದಾಗಬೇಕೆನ್ನುವವನು ನಾನು. ಆದರೆ ಒಂದು ಬಣವನ್ನೇ ನಾಶ ಮಾಡುವುದಕ್ಕೆ ಅಥವಾ ನಿರ್ವೀಯರನ್ನಾಗಿ ಮಾಡುವುದಕ್ಕೆ ನಾನು ಕಡು ವಿರೋಧಿ. ಆದ್ದರಿಂದ ನನ್ನದು ಈ ನಿಲುವು.

ಒಕ್ಕಲಿಗರು ಮೈ ಕೊಡವಿಕೊಂಡು ಎದ್ದು ಮೋದಿಯವರ ಈ ಸವಾಲನ್ನು ಎದುರಿಸಲು ಸೆಡ್ಡು ಹೊಡೆಯಬೇಕು. ಕೂಡಲೇ ಒಕ್ಕಲಿಗ ನಾಯಕರು, ಲಿಂಗಾಯತ ಮಠಗಳ ಸಂಪರ್ಕ ಮಾಡಿ, ನಾವು ಹಿಂದಿನಂತೆಯೇ ಸಾಮರಸ್ಯದಿಂದ ಬಾಳುವ ಸಂಕಲ್ಪ ಮಾಡೋಣವೆಂದು ಪಕ್ಷ ಭೇದ ಮರೆತು ಮನವರಿಕೆ ಮಾಡಿಕೊಡಬೇಕು. ‘ಆಲಸ್ಯಂ ಅಮೃತಂ ವಿಷಂ’.

ಸಿದ್ದರಾಮಯ್ಯನವರಿಗೂ, ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೂ ಸಖ್ಯ ಕಡಿಮೆಯಾಗುತ್ತಿದೆ. ಇದು ಮುಂದುವರೆದರೆ ಕರ್ನಾಟಕ ಕಾಂಗ್ರೆಸ್ಸು ನೆಲ ಕಚ್ಚುವುದು ಹಾಗೂ ದೇವೇಗೌಡರ ವರ್ಚಸ್ಸು ಇಳಿಮುಖವಾಗುವ ಸಾಧ್ಯತೆಗಳಿವೆ. ಆ ಉಭಯರೂ ಈಗಿನ ರಾಜಕೀಯ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗ್ರಹಿಸಿ, ಒಬ್ಬರಿಗೊಬ್ಬರು ಸ್ನೇಹಹಸ್ತ ನೀಡಬೇಕು. ಕಾಂಗ್ರೆಸ್ ಮತ್ತು ದೇವೇಗೌಡರ ಪಕ್ಷ ಎರಡೂ ತನ್ನ ಎಡವಟ್ಟುಗಳನ್ನು ಮನಗಂಡು, ಹೊಸ ಒಡಂಬಡಿಕೆ ಮಾಡಿಕೊಂಡು ಕೂಡಿ ಹೋರಾಡಬೇಕು. ನಿನ್ನದು ಎರಡು ಕಣ್ಣು ಹೋಗುವುದಾದರೆ, ನನ್ನದು ಒಂದು ಕಣ್ಣು ಹೋದರು ಸರಿ ಎಂದು ಸಿದ್ದರಾಮಯ್ಯ ಮೊದಲುಗೊಂಡು ಎಲ್ಲರೂ ತೀರ್ಮಾನಕ್ಕೆ ಬಂದಿದ್ದರೆ, ಮೋದಿಯವರ ಕೈಗೆ ಕರ್ನಾಟಕವನ್ನು ನೀವೇ ಕರೆದು ಒಪ್ಪಿಸಿದಂತೆ ಆಗುತ್ತದೆ. ಹೀಗೆ ನೀವಿಬ್ಬರು ಅವಿವೇಕಿಗಳಂತೆ ವರ್ತಿಸಿದರೆ, ಜನ ನಿಮ್ಮನ್ನು ಸುಮ್ಮನೆ ಬಿಡೊಲ್ಲ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...