ಇಂಡಿಗೋ ಏರ್‌ಲೈನ್ಸ್‌ನ ದಲಿತ ಸಮುದಾಯದ ತರಬೇತಿ ಪೈಲಟ್ ಒಬ್ಬರಿಗೆ ಕೆಲಸದ ಸ್ಥಳದಲ್ಲಿ ಮೂವರು ಸಹೋದ್ಯೋಗಿಗಳು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಇಂಡಿಯಾ ಟುಡೆ ಸೋಮವಾರ ವರದಿ ಮಾಡಿದೆ. ಮೂವರು ಆರೋಪಿಗಳು ದಲಿತ ಪೈಲಟ್ ಅನ್ನು ಅವಹೇಳನ ಮಾಡಿದ್ದು, ಅವರು ಕಾಕ್‌ಪಿಟ್‌ನಲ್ಲಿ ಕುಳಿತುಕೊಳ್ಳಲು ಅಥವಾ ವಿಮಾನ ಹಾರಿಸಲು ಅರ್ಹನಲ್ಲ ಎಂದು ಅರೋಪಿಗಳು ಹೇಳಿದ್ದಾಗಿ ದೂರಲಾಗಿದೆ. ‘ಪೈಲಟ್ ಆಗಲು ಅರ್ಹತೆಯಿಲ್ಲ
ಜಾತಿ ನಿಂದನೆ ಮಾಡಿದ ಆರೋಪಿಗಳನ್ನು ತಪಸ್ ಡೇ, ಮನೀಶ್ ಸಹಾನಿ ಮತ್ತು ರಾಹುಲ್ ಪಾಟೀಲ್ ಎಂದು ಗುರುತಿಸಲಾಗಿದ್ದು, ಮೂವರು ಆರೋಪಿಗಳು “ಚಪ್ಪಲಿ ಹೊಲಿಯುವ ಕೆಲಸಕ್ಕೆ ಹಿಂತಿರುಗಿ ಹೋಗು” ಎಂದು ಹೇಳಿದ್ದಾಗಿ ಸಂತ್ರಸ್ತ ಶರಣ್ ಕುಮಾರ್ ಅವರ ತಂದರೆ ಅಶೋಕ್ ಕುಮಾರ್ ಆರೋಪಿಸಿದ್ದಾರೆ.
“ಇತರರ ಮುಂದೆ ಜಾತಿವಾದಿ ಮತ್ತು ನಿಂದನೀಯ ಹೇಳಿಕೆಗಳನ್ನು ನೀಡಲಾಗಿದ್ದು, ಇದು ಕಾನೂನಿನ ಅಡಿಯಲ್ಲಿ ಗಂಭೀರ ಅಪರಾಧಗಳಾಗಿವೆ: ನನ್ನ ಪೂರ್ವಜರ ಜಾತಿಯ ಕೆಲಸವನ್ನು ಉಲ್ಲೇಖಿಸಿ, ನೀವು ವಿಮಾನ ಹಾರಿಸಲು ಯೋಗ್ಯರಲ್ಲ, ಹಿಂತಿರುಗಿ ಚಪ್ಪಲಿ ಹೊಲಿಯಿರಿ” ಎಂದು ಹೇಳಿದ್ದಾಗಿ ಶರಣ್ ಅವರ ತಂದೆ ಅಶೋಕ್ ಕುಮಾರ್ ಅವರು ನೀಡಿರುವ ದೂರಿದ್ದಾರೆ ತಿಳಿಸಿದ್ದಾರೆ.
ನೀವು ನನ್ನ ಶೂ ನೆಕ್ಕಲು ಸಹ ಅರ್ಹರಲ್ಲ ಎಂದು ಆರೋಪಿಗಳು ಹೇಳಿದ್ದಾಗಿ ಶರಣ್ ಅವರ ತಂದೆ ಅಶೋಕ್ ಕುಮಾರ್ ಹೇಳಿದ್ದರೆ. “ಒಬ್ಬ %#$@ ವ್ಯಕ್ತಿಗೆ ನನ್ನ ಮುಂದೆ ಕುಳಿತು ವಿವರಣೆ ಕೇಳುವ ಧೈರ್ಯವಿದೆಯೇ? ಈ ಕಟ್ಟಡಕ್ಕೆ ಕಾವಲುಗಾರನಾಗಲು ಕೂಡಾ ನಿಮಗೆ ಅರ್ಹತೆ ಇಲ್ಲ, ಅಂತದ್ದರಲ್ಲಿ ನೀವು ವಿವರಣೆ ಕೇಳುತ್ತಿದ್ದೀರಾ?” ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಅಶೋಕ್ ಕುಮಾರ್ ಆರೋಪಿಸಿದ್ದಾರೆ.
ಅಶೋಕ್ ಅವರ ದೂರಿನ ಆಧಾರದ ಮೇಲೆ, ಮೂವರು ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಸಹೋದ್ಯೋಗಿಗಳು ತಮ್ಮ ಮಗನನ್ನು ಗುರಿಯಾಗಿಸಿ ನಿರಂತರ ಕಿರುಕುಳ ಮತ್ತು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅಶೋಕ್ ಕುಮಾರ್, ಈ ಹೇಳಿಕೆಗಳನ್ನು ತಮ್ಮ ಮಗನ ಜಾತಿಯ ಬಗ್ಗೆ ಸ್ಪಷ್ಟ ಉಲ್ಲೇಖದೊಂದಿಗೆ, ಅವರನ್ನು ಅವಮಾನಿಸುವ ಉದ್ದೇಶದಿಂದ ಮತ್ತು ಪರಿಶಿಷ್ಟ ಜಾತಿಯ ವ್ಯಕ್ತಿಯಾಗಿ ಅವರ ಘನತೆ ಮತ್ತು ಸ್ಥಾನಮಾನವನ್ನು ಕುಗ್ಗಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕೆಲಸಕ್ಕೆ ಲಭ್ಯವಿದ್ದರೂ ಅನಧಿಕೃತ ವೇತನ ಕಡಿತ, ಯಾವುದೇ ಮಾನ್ಯ ಕಾರಣವಿಲ್ಲದೆ ಅನಾರೋಗ್ಯ ರಜೆ ಕಡಿತ, ಸಿಬ್ಬಂದಿ ಪ್ರಯಾಣ ಮತ್ತು ಎಸಿಎಂ ಸವಲತ್ತುಗಳನ್ನು ರದ್ದುಪಡಿಸುವುದು ಮತ್ತು ಪುರಾವೆಗಳಿಲ್ಲದೆ ಎಚ್ಚರಿಕೆ ಪತ್ರವನ್ನು ನೀಡುವುದು ಸೇರಿದಂತೆ ಯಾವುದೇ ವೈಫಲ್ಯವಿಲ್ಲದೆ ಸರಿಪಡಿಸುವ ತರಬೇತಿಗೆ ಒಳಗಾಗಲು “ಬಲವಂತವಾಗಿ” ತನ್ನ ಮಗ ಶರಣ್ ಅವರನ್ನು ಮತ್ತಷ್ಟು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂದು ಅಶೋಕ್ ಕುಮಾರ್ ಹೇಳಿದ್ದಾರೆ. ‘ಪೈಲಟ್ ಆಗಲು ಅರ್ಹತೆಯಿಲ್ಲ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ವಿಧಾನಸಭೆ ಉಪಚುನಾವಣೆ | ಕೇರಳದ ನಿಲಂಬೂರಿನಲ್ಲಿ ಯುಡಿಎಫ್ ಅಭ್ಯರ್ಥಿ ಆರ್ಯಡನ್ ಶೌಕತ್‌ಗೆ ಭರ್ಜರಿ ಜಯ
ವಿಧಾನಸಭೆ ಉಪಚುನಾವಣೆ | ಕೇರಳದ ನಿಲಂಬೂರಿನಲ್ಲಿ ಯುಡಿಎಫ್ ಅಭ್ಯರ್ಥಿ ಆರ್ಯಡನ್ ಶೌಕತ್‌ಗೆ ಭರ್ಜರಿ ಜಯ

