Homeಮುಖಪುಟಹಕ್ಕಿಗಾಗಿ ಹೋರಾಡಬಾರದೆ? ಮಸಿ ಬಳಿಯುವುದು ಪ್ರತಿಭಟನೆಯೇ?: ಉಡುಪಿ ಸ್ಬಾಮೀಜಿಯ ಸಮಸ್ಯೆಗಳು!

ಹಕ್ಕಿಗಾಗಿ ಹೋರಾಡಬಾರದೆ? ಮಸಿ ಬಳಿಯುವುದು ಪ್ರತಿಭಟನೆಯೇ?: ಉಡುಪಿ ಸ್ಬಾಮೀಜಿಯ ಸಮಸ್ಯೆಗಳು!

ಈ ಸ್ವಾಮೀಜಿಗೆ ರೈತರ ಹೋರಾಟ ಕಂಡರೆ ಮೈಯುರಿ. ಪಂಚಮಸಾಲಿಗಳು, ಕುರುಬರು, ವಾಲ್ಮೀಕಿಗಳು & ದಲಿತರು ಮೀಸಲಾತಿಗಾಗಿ ಬೀದಿಗಿಳಿದರೆ ಅಸಹನೆ... ಆದರೆ ಸಾಹಿತಿಯೊಬ್ಬರಿಗೆ ಮಸಿ ಬಳಿದಿದ್ದು ಮಾತ್ರ ಪ್ರತಿಭಟನೆಯಂತೆ!

- Advertisement -
- Advertisement -

ಇದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿಯವರ ಸಮಸ್ಯೆಯೋ ಅಥವಾ ಅವರ ಹಿಂದಿನ ಪೀಠಾಧಿಪತಿಗಳಿಂದ ಹರಿದು ಬಂದ ಪ್ರಭಾವವೋ ಗೊತ್ತಿಲ್ಲ. ನಿನ್ನೆ ರಾಯಚೂರಿನಲ್ಲಿ ಮಾತಾಡಿರುವ ಈ ಸ್ವಾಮೀಜಿ, (ಪ್ರಜಾವಾಣಿ ವರದಿಯಂತೆ) ಮೂರು ಗಂಭೀರ ವಿಷಯ ಎತ್ತಿದ್ದಾರೆ. ರಾಷ್ಟ್ರದ್ವಜ ಸುಟ್ಟವರನ್ನು ರೈತರೆನ್ನಬೇಕೆ ಎಂದು ಪ್ರಶ್ನಿಸಿದ್ದಾರೆ.

‘ರೈತರು ಜಮೀನುಗಳಲ್ಲಿ ದುಡಿಯುತ್ತಿದ್ದಾರೆ, ಪ್ರತಿಭಟನೆ ಮಾಡುತ್ತಿಲ್ಲ. ಖಾಲಿಸ್ಥಾನ್ ಮತ್ತು ವಿದೇಶದ ಪರವಾಗಿ ಘೋಷಣೆ ಹಾಕುವವರು ರೈತರಲ್ಲ’ ಎಂಬುದು ಸ್ವಾಮೀಜಿಯ ನವ-ಆವಿಷ್ಕಾರ.

ಅಯ್ಯೋ ಶಿವನೇ, ಕೆಂಪುಕೋಟೆಯಲ್ಲಿ ಧಾರ್ಮಿಕ ಧ್ವಜ ಹಾರಿಸಿದ್ದು ವಿವಾದ. ಆದರೆ ಪ್ರತಿಭಟನಾ ನಿರತ ರೈತರು ರಾಷ್ಟ್ರಧ್ವಜಕ್ಕೆ ಯಾವಾಗ ಬೆಂಕಿ ಇಟ್ಟರು ಮಾರಾಯ?

ಫೇಕ್‌ಸುದ್ದಿಯೊಂದು ಸ್ವಾಮೀಜಿಯ ಮೇಲೆ ಪ್ರಭಾವ ಬೀರಿರಬಹುದು.

ಜನವರಿ 27ರಂದು ಪೋಸ್ಟ್ ಆದ ವಿಡಿಯೋ ಒಂದರಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಲಾಗಿದೆ, ಬೆಂಕಿಯನ್ನೂ ಹಚ್ಚುವ ಯತ್ನ ಮಾಡಲಾಗಿದೆ. ಅದನ್ನು ರೈತರು ಮಾಡಿದ್ದಾರೆ ಎಂದು ಫೇಕ್ ಸುದ್ದಿ ಹರಡಲಾಗಿತ್ತು. ಹಲವಾರು ಫ್ಯಾಕ್ಟ್‌ಚೆಕ್ ಸಂಸ್ಥೆಗಳು ತೋರಿಸಿದಂತೆ, ಅದು ಎಂದೋ ಕ್ಯಾಲಿಫೋರ್ನಿಯಾದಲ್ಲಿ ನಡೆದ ಘಟನೆ. ನಾಲ್ಕೈದು ಖಾಲಿಸ್ಥಾನಿ ಬೆಂಬಲಿಗ ಸಿಖ್ ಯುವಕರು ಮಾಡಿದ ಮಾನಗೇಡಿ ಕೆಲಸ.

ಬಹುಷಃ ಸ್ವಾಮೀಜಿ ಇದನ್ನೇ ಇಟ್ಟುಕೊಂಡು ರೈತರು ಧ್ವಜ ಸುಟ್ಟರು ಎಂಬ ತೀರ್ಮಾನಕ್ಕೆ ಬಂದಿರಬಹುದು ಅಥವಾ ಇದು ಸುಳ್ಳು ಎಂದು ಗೊತ್ತಿದ್ದರೂ ಅವರು ಬೇಕೆಂತಲೇ, ಅಧಿಕಾರಸ್ಥರ ಒಲವು ಗಳಿಸಲು ಈ ಹೇಳಿಕೆ ನೀಡಿರಬಹುದು.

ಅವರ ಇನ್ನೊಂದು ಸಮಸ್ಯೆ ಮೀಸಲಾತಿ ಕುರಿತದ್ದು. ಜಾತಿ ಆಧಾರಿತ ಮಿಸಲಾತಿ ಬೇಡ, ಆರ್ಥಿಕತೆ ಆಧಾರಿತ ಮಿಸಲಾತಿ ಇರಲಿ ಎಂಬ ಸಂಘದ ಪುರಾತನ ಸಿದ್ದಾಂತವನ್ನು ಈ ಸ್ವಾಮೀಜಿ ಪ್ರತಿಪಾದಿಸಿದ್ದಾರೆ. ಈಗ ಪಂಚಮಸಾಲಿ, ಕುರುಬ, ವಾಲ್ಮೀಕಿ ಸಮುದಾಯದವರು ಅವರ ಸ್ವಾಮೀಜಿಗಳ ನೇತೃತ್ವದಲ್ಲಿ ಮಿಸಲಾತಿಗಾಗಿ ಪಾದಯಾತ್ರ ನಡೆಸಿ ಸರ್ಕಾರದ ಮೇಲೆ ಒತ್ತಡ ತಂದಿರುವ ವಿದ್ಯಮಾನ ಸ್ವಾಮೀಜಿಗೆ ಕಿರಿಕಿರಿ ಮಾಡಿದೆಯೇನೋ?

ಅವರ ಮೂರನೇ ಅನಿಸಿಕೆ ಭಯಂಕರವಾಗಿದೆ. ‘ಚಿಂತಕ ಪ್ರೊ ಕೆಎಸ್ ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿದ್ದು ಘಟನೆಯಲ್ಲ, ಪ್ರತಿಭಟನೆ’ ಎನ್ನುವ ಸ್ವಾಮೀಜಿ, ಘಟನೆಯಲ್ಲಿ ಇಬ್ಬರೂ ತಪ್ಪು ಮಾಡಿದ್ದಾರೆ ಎಂದು ತಿಪ್ಪೆ ಸಾರಿಸಿದ್ದಾರೆ ಕೂಡ.

ಮಸಿ ಬಳಿಯುವುದು, ಸೆಗಣಿ ಎರಚುವುದನ್ನು ಈ ಸ್ವಾಮೀಜಿ ಪ್ರತಿಭಟನೆ ಎಂದುಕೊಳ್ಳುತ್ತಾರೆ, ಕೊರೆಯುವ ಚಳಿಯಲ್ಲಿ 73 ದಿನಗಳಿಂದ ರೈತರು ಪ್ರತಿಭಟಿಸಿದರೆ, ಅದು ಇವರ ಪಾಲಿಗೆ ಪ್ರತಿಭಟನೆಯೇ ಅಲ್ಲ. ಅದು ಖಾಲಿಸ್ತಾನಿಗಳ ಹೋರಾಟ.

ಸರ್ಕಾರದ ಪರ ಟ್ವೀಟ್ ಮಾಡಿದ ಆ ಸೆಲೆಬ್ರಿಟಿಗಳಿಗೇನೋ ಲೌಕಿಕ ಜಗತ್ತಿನ ಬಯಕೆಗಳಿವೆ. ಆದರೆ ಈ ಸ್ವಾಮೀಜಿಗೆ ಏನು ಸಮಸ್ಯೆಯಿದೆ ಎಂಬ ಪ್ರಶ್ನೆ ಎದುರಾಗಿದೆ.

  • ಮಲ್ಲನಗೌಡರ್ ಪಿ.ಕೆ (ಪತ್ರಕರ್ತರು, ಅಭಿಪ್ರಾಯಗಳು ವೈಯಕ್ತಿಕವಾದವು)

ಇದನ್ನೂ ಓದಿ; ನಮ್ಮದು ರಾಷ್ಟ್ರೀಯ ಪಕ್ಷ, ಹಾಗಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಅಧಿಕಾರ ನನಗಿಲ್ಲ: ಸಿಎಂ ಯಡಿಯೂರಪ್ಪ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...