Homeಮುಖಪುಟಹಲವು ದೇಶಗಳಿಗೆ ‘ಪೆಗಾಸಸ್‌‌’ ಅನ್ನು ತಾತ್ಕಾಲಿಕವಾಗಿ ತಡೆಹಿಡಿದ ಎನ್‌ಎಸ್‌‌ಒ!

ಹಲವು ದೇಶಗಳಿಗೆ ‘ಪೆಗಾಸಸ್‌‌’ ಅನ್ನು ತಾತ್ಕಾಲಿಕವಾಗಿ ತಡೆಹಿಡಿದ ಎನ್‌ಎಸ್‌‌ಒ!

- Advertisement -
- Advertisement -

ತನ್ನ ಗೂಡಾಚಾರ ತಂತ್ರಾಂಶವನ್ನು ಬಳಕೆದಾರರು ದುರುಪಯೋಗ ಮಾಡಿರುವುದು ಬಹಿರಂಗವಾದ ಹಿನ್ನಲೆಯಲ್ಲಿ, ಇಸ್ರೇಲಿ ಕಣ್ಗಾವಲು ತಂತ್ರಾಂಶ ಪೆಗಾಸಸ್‌‌‌‌ನ ಮಾತೃ ಕಂಪನಿಯಾದ ‘ಎನ್‌ಎಸ್‌ಒ ಗ್ರೂಪ್’ ತನ್ನ ಹಲವಾರು ಸರ್ಕಾರಿ ಗ್ರಾಹಕರಿಗೆ ತಂತ್ರಾಂಶವನ್ನು ಬಳಸದಂತೆ ತಾತ್ಕಾಲಿಕವಾಗಿ ತಡೆಹಿಡಿದಿದೆ. ಈ ಬಗ್ಗೆ ವಾಶಿಂಗ್ಟನ್‌ ಮೂಲದ ಲಾಭ ರಹಿತ ಮಾಧ್ಯಮ ಸಂಸ್ಥೆ ಗುರುವಾರ ವರದಿ ಮಾಡಿದೆ.

ಪೆಗಾಸಸ್‌‌ ತಯಾರಕರಾದ ಎನ್‌ಎಸ್‌ಒನ ಉದ್ಯೋಗಿಯೊಬ್ಬರು, ತಮ್ಮ ಕಂಪೆನಿಯು ತಂತ್ರಾಂಶದ ದುರ್ಬಳಕೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾಗಿ ಮಾಧ್ಯಮ ವರದಿ ಮಾಡಿದೆ.

“ನಮ್ಮ ಕೆಲವು ಬಳಕೆದಾರರ ಬಗ್ಗೆ ತನಿಖೆ ನಡೆಯುತ್ತಿದೆ. ಆ ಬಳಕೆದಾರರಲ್ಲಿ ಕೆಲವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ” ಎಂದು ಎನ್‌ಎಸ್‌ಒ ಉದ್ಯೋಗಿ ಹೇಳಿದ್ದಾರೆ. ಆದರೆ ಪೆಗಾಸಸ್ ಅಮಾನತುಗೊಳಿಸಿದ ಸರ್ಕಾರಿ ಏಜೆನ್ಸಿಗಳು ಅಥವಾ ದೇಶಗಳ ಹೆಸರನ್ನು ಅವರು ಬಹಿರಂಗ ಪಡಿಸಲಿಲ್ಲ.

ಇದನ್ನೂ ಓದಿ: ಪೆಗಾಸಸ್ ಬಗ್ಗೆ ತನಿಖೆ ನಡೆಯಲಿ: ಪ್ರಧಾನಿ ಭೇಟಿ ಬಳಿಕ ಮಮತಾ ಬ್ಯಾನರ್ಜಿ ಹೇಳಿಕೆ

ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು, ರಾಜಕಾರಣಿಗಳು ಮತ್ತು ಇತರರ ಜನರ ಮೇಲೆ ಕಣ್ಣಿಡಲು ಪೆಗಾಸಸ್ ತಂತ್ರಾಂಶವನ್ನು ಬಳಸಲಾಗಿದೆ ಎಂದು ಇತ್ತೀಚೆಗೆ ಬಹಿರಂಗವಾಗಿತ್ತು. ಈ ಆರೋಪವು ಖಾಸಗಿತನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.

ಎನ್‌ಎಸ್‌ಒ ಕಂಪನಿಯು ಇಸ್ರೇಲಿ ಅಧಿಕಾರಿಗಳೊಂದಿಗೆ ಸಂಪೂರ್ಣ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ ಎಂದು ಕಂಪೆನಿಯನ್ನು ಪ್ರತಿನಿಧಿಸುತ್ತಿರುವ ಸಂಸ್ಥೆಯೊಂದು ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಎನ್‌ಎಸ್‌ಒ ತಾನು ಪೆಗಾಸಸ್‌‌ ತಂತ್ರಾಂಶವನ್ನು 40 ದೇಶಗಳ 60 ಗ್ರಾಹಕರನ್ನು ಹೊಂದಿದ್ದೇನೆ ಎಂದು ಹೇಳುತ್ತಿದ್ದು, ಅವರೆಲ್ಲರೂ ಗುಪ್ತಚರ ಸಂಸ್ಥೆಗಳು, ಕಾನೂನು ಜಾರಿ ಸಂಸ್ಥೆಗಳು ಮತ್ತು ಮಿಲಿಟರಿಗಳು ಎಂದು ಹೇಳಿದ್ದಾಗಿ ವರದಿಯಾಗಿದೆ.

ಮಾಧ್ಯಮಗಳು ತಂತ್ರಾಶದ ದುರುಪಯೋಗವಾಗುತ್ತಿದೆ ಎಂದು ವರದಿ ಮಾಡುವ ಮೊದಲೇ, ತನ್ನ ಸಾಫ್ಟ್‌ವೇರ್ ಅನ್ನು ದುರುಪಯೋಗ ಮಾಡುತ್ತಿದೆ ಎಂದು ಸಾಕ್ಷಿ ಸಮೇತವಾಗಿ ಕಂಡುಕೊಂಡ ಕಾರಣ ಕಳೆದ ವರ್ಷದಲ್ಲಿ ಎರಡು ಸರ್ಕಾರಿ ಸಂಸ್ಥೆಗಳನ್ನು ಕಂಪೆನಿಯು ನಿರ್ಬಂಧಿಸಿತ್ತು.

ಇದನ್ನೂ ಓದಿ: ಪೆಗಾಸಸ್ ಗೂಢಚರ್ಯೆ ಸಮಸ್ಯೆಯಲ್ಲ: ವಿವಾದಿತ ಹೇಳಿಕೆ ನೀಡಿದ ಕೇಂದ್ರ ಸಚಿವ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...