ಬೆಂಗಳೂರಿನಲ್ಲಿ ನಡೆಯುತ್ತಿರುವ ಕೆಲವು ಪ್ರಮುಖ ಯೋಜನೆಗಳ ಕೆಲಸವನ್ನು ಅಕ್ಟೋಬರ್ 31 ರ ಒಳಗೆ ಪೂರ್ಣಗೊಳಿಸಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗಡುವನ್ನು ನಿಗದಿಪಡಿಸಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು,“ಅಕ್ಟೋಬರ್ 14 ರಂದು ಬಿಬಿಎಂಪಿ ಯೋಜನಾ ವಿಭಾಗದ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ” ಎಂದು ಶುಕ್ರವಾರ ಹೇಳಿದ್ದಾರೆ.
“ಮುಂಬರುವ ಹಬ್ಬದ ಸೀಸನ್ ಮತ್ತು ನಗರದಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಭೆಯನ್ನು ಗಮನದಲ್ಲಿಟ್ಟುಕೊಂಡು, ನಾವು ಕೆಲವು ಪ್ರಮುಖ ಚಾಲ್ತಿಯಲ್ಲಿರುವ ಯೋಜನೆಗಳನ್ನು ಗುರುತಿಸಿದ್ದೇವೆ. ಅಕ್ಟೋಬರ್ 31, 2022 ಅಥವಾ ಅದಕ್ಕೂ ಮೊದಲು ತ್ವರಿತವಾಗಿ ಪೂರ್ಣಗೊಳಿಸಲಾಗುವುದು” ಎಂದು ಪತ್ರಿಕಾ ಪ್ರಕಟಣೆ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪತ್ರಿಕಾ ಪ್ರಕಟಣೆಯ ಪ್ರಕಾರ, ಶಿವಾನಂದ ವೃತ್ತದಿಂದ ರೇಸ್ ಕೋರ್ಸ್ ಜಂಕ್ಷನ್ ಮೇಲ್ಸೇತುವೆವರೆಗಿನ ಕಾಮಗಾರಿಯು ಅಕ್ಟೋಬರ್ 23 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಶಿವಾನಂದ ಸರ್ಕಲ್ ಮೇಲ್ಸೇತುವೆಯನ್ನು ಆಗಸ್ಟ್‌ನಲ್ಲಿ ಸಾರ್ವಜನಿಕರಿಗೆ ಭಾಗಶಃ ತೆರೆಯಲಾಗಿದೆ. ಆದಾಗ್ಯೂ, ಪ್ರಯಾಣಿಕರಿಂದ ದೂರುಗಳು ಬಂದ ನಂತರ ಬಿಬಿಎಂಪಿ ಅಧಿಕಾರಿಗಳು ಸೆಪ್ಟೆಂಬರ್‌ನಲ್ಲಿ ಅದನ್ನು ಮುಚ್ಚಿದ್ದರು.
ಮೋಹನ್ ಕುಮಾರ್ ರಸ್ತೆಯಲ್ಲಿ ಮತ್ತಿಕೆರೆ ಮುಖ್ಯರಸ್ತೆ ಜಂಕ್ಷನ್‌ನಿಂದ ರೈಲ್ವೆ ಸಮಾನಾಂತರ ರಸ್ತೆ ಜಂಕ್ಷನ್‌ವರೆಗೆ ನಡೆಯುತ್ತಿರುವ ಕಾಮಗಾರಿಯನ್ನು ಅಕ್ಟೋಬರ್ 31 ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಓಲಾ-ಉಬರ್ ನಿಷೇಧಕ್ಕೆ ಮಧ್ಯಂತರ ತಡೆ; ಸರ್ಕಾರದ ಆದೇಶಕ್ಕೆ ಹಿನ್ನಡೆ
ಇದಲ್ಲದೆ, ದೊಮ್ಮಲೂರು ಮೇಲ್ಸೇತುವೆಯಿಂದ ಈಜಿಪುರದವರೆಗಿನ ಮಧ್ಯಂತರ ರಿಂಗ್ ರಸ್ತೆ ಮತ್ತು ಎನ್‌ಆರ್ ರಸ್ತೆ ಟೆಂಡರ್ ಶ್ಯೂರ್ ಅಕ್ಟೋಬರ್ 31 ರೊಳಗೆ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿಯ ಮುಖ್ಯ ಎಂಜಿನಿಯರ್ ತಿಳಿಸಿದ್ದಾರೆ.
ಅಕ್ಟೋಬರ್ 9 ರಂದು, ಬೆಂಗಳೂರಿನ ಕುಂದಲಹಳ್ಳಿ ಅಂಡರ್‌ಪಾಸ್‌ನಲ್ಲಿನ ಸರ್ವೀಸ್ ರಸ್ತೆಯ ಒಂದು ಭಾಗವು ಉದ್ಘಾಟನೆಗೊಂಡ ನಾಲ್ಕೇ ತಿಂಗಳ ಅಂತರದಲ್ಲಿ ಕುಸಿದಿತ್ತು. ರಸ್ತೆ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.


