Homeಕೊರೊನಾಓಮಿಕ್ರಾನ್ ಆತಂಕ: ಹೆಚ್ಚಿನ ಪರೀಕ್ಷೆ, ಹಾಟ್‌ಸ್ಪಾಟ್‌ಗಳ ಮೇಲೆ ನಿಗಾ ಇರಿಸಲು ರಾಜ್ಯಗಳಿಗೆ ಕೇಂದ್ರದ ಸೂಚನೆ

ಓಮಿಕ್ರಾನ್ ಆತಂಕ: ಹೆಚ್ಚಿನ ಪರೀಕ್ಷೆ, ಹಾಟ್‌ಸ್ಪಾಟ್‌ಗಳ ಮೇಲೆ ನಿಗಾ ಇರಿಸಲು ರಾಜ್ಯಗಳಿಗೆ ಕೇಂದ್ರದ ಸೂಚನೆ

- Advertisement -
- Advertisement -

ದಕ್ಷಿಣ ಆಫ್ರಿಕಾದಲ್ಲಿ ಈ ವಾರದ ಆರಂಭದಲ್ಲಿ ಕಂಡುಬಂದ ಕೊರೊನಾದ ಹೊಸ ರೂಪಾಂತರಕ್ಕೆ ‘ಓಮಿಕ್ರಾನ್’ ಎಂದು ಮರುನಾಮಕರಣ ಮಾಡಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ(WHO)ಯು ಈ ರೂಪಾಂತರವನ್ನು ‘ಕಳವಳಕಾರಿ ರೂಪಾಂತರ’ ಎಂದು ಕರೆದಿದೆ. ’ಓಮಿಕ್ರಾನ್’ ಬಗ್ಗೆ ಹೆಚ್ಚುತ್ತಿರುವ ಆತಂಕದ ಮಧ್ಯೆಯೇ ತೀವ್ರವಾದ ನಿಯಂತ್ರಣ, ಸಕ್ರಿಯ ಕಣ್ಗಾವಲು ಮತ್ತು ಉತ್ತಮ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ಹೆಚ್ಚಿಸಲು ಒಕ್ಕೂಟ ಸರ್ಕಾರವು ಎಲ್ಲಾ ರಾಜ್ಯಗಳನ್ನು ಸೂಚಿಸಿದೆ.

“ಈ ಕೊರೊನಾ ರೂಪಾಂತರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತೀವ್ರವಾದ ನಿಯಂತ್ರಣ, ಸಕ್ರಿಯ ಕಣ್ಗಾವಲು, ವ್ಯಾಕ್ಸಿನೇಷನ್ ಹೆಚ್ಚಳ ಮತ್ತು ಕೋವಿಡ್-ಸೂಕ್ತ ಮಾರ್ಗಸೂಚಿಗಳನ್ನು ಪೂರ್ವಭಾವಿ ಕ್ರಮದಲ್ಲಿ ಜಾರಿಗೊಳಿಸುವುದು ಅತ್ಯಗತ್ಯ” ಎಂದು ಆರೋಗ್ಯ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಓಮಿಕ್ರಾನ್‌ ಇತರ ರೂಪಗಳಿಗಿಂತ ಹೆಚ್ಚು ವೇಗವಾಗಿ ಹರಡಬಹುದು ಎಂದು WHO ಹೇಳಿದೆ.

ಅಂತಾರಾಷ್ಟ್ರೀಯ ವಿಮಾನಗಳ ಮೂಲಕ ಬರುವ ಪ್ರಯಾಣಿಕರ ಹಿಂದಿನ ಪ್ರಯಾಣದ ವಿವರಗಳನ್ನು ಪಡೆದು ವರದಿ ಮಾಡುವ ಕಾರ್ಯವಿಧಾನವಿದ್ದು, ಇದನ್ನು ನಿಮ್ಮ ಮಟ್ಟದಲ್ಲಿ ಮತ್ತೆ ಪರಿಶೀಲಿಸಬೇಕು ಎಂದು ಕೇಂದ್ರವು ರಾಜ್ಯಗಳಿಗೆ ತಿಳಿಸಿದೆ.

ಇದನ್ನೂ ಓದಿ: ಜಗತ್ತಿನ ಹಲವೆಡೆ ಹೆಚ್ಚಿದ ಕೊರೊನಾ ಪ್ರಕರಣಗಳು: ಲಾಕ್‌ಡೌನ್‌ ಘೋಷಿಸಿದ ದೇಶಗಳಿವು

“ಈ ರೂಪಾಂತರಿತ ವೈರಸ್‌ನಿಂದ ಉಂಟಾಗುವ ಉಲ್ಬಣವನ್ನು ನಿಭಾಯಿಸಲು ಸಾಕಷ್ಟು ಪರೀಕ್ಷಾ ಮೂಲಸೌಕರ್ಯವನ್ನು ಕಾರ್ಯಗತಗೊಳಿಸಬೇಕಾಗಿದೆ. ಕೆಲವು ರಾಜ್ಯಗಳಲ್ಲಿ ಒಟ್ಟಾರೆ ಪರೀಕ್ಷೆ ಮತ್ತು ಆರ್‌ಟಿ-ಪಿಸಿಆರ್ ಪರೀಕ್ಷೆಗಳ ಪ್ರಮಾಣವು ಕುಸಿದಿದ್ದು, ಇದರಿಂದ ಸೋಂಕಿನ ಹರಡುವಿಕೆಯ ನಿಜವಾದ ಮಟ್ಟವನ್ನು ನಿರ್ಧರಿಸಲು ಕಷ್ಟ” ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಇತ್ತೀಚಿಗೆ ಪಾಸಿಟಿವ್ ಪ್ರಕರಣಗಳು ಕಂಡುಬಂದ ಪ್ರದೇಶಗಳ ನಿರಂತರ ಮೇಲ್ವಿಚಾರಣೆಯನ್ನು ಮಾಡಬೇಕು. ಹಾಟ್‌ಸ್ಪಾಟ್‌ಗಳಲ್ಲಿ ಸ್ಯಾಚುರೇಶನ್ ಪರೀಕ್ಷೆಯ ಅಗತ್ಯವಿದೆ. ಜೊತೆಗೆ ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಎಲ್ಲಾ ಪಾಸಿಟಿವ್ ಬಂದ ವ್ಯಕ್ತಿಗಳ ಮಾದರಿಗಳನ್ನು ಗೊತ್ತುಪಡಿಸಿದ ಲ್ಯಾಬ್‌ಗಳಿಗೆ ಕಳುಹಿಸಬೇಕು ಎಂದು ಸೂಚಿಸಿದೆ.

“ದೇಶದಲ್ಲಿ ಈ ರೂಪಾಂತರಿ ಕುರಿತು ಸಾಮಾನ್ಯವಾಗಿ ತಪ್ಪು ಮಾಹಿತಿಗಳು ಜನರಿಗೆ ತಲುಪುತ್ತಿರುತ್ತವೆ. ಇದು ಜನಸಾಮಾನ್ಯರಲ್ಲಿ ಆತಂಕಕ್ಕೆ ಕಾರಣವಾಗುತ್ತದೆ. ಇದನ್ನು ಪರಿಹರಿಸಲು, ಎಲ್ಲಾ ರಾಜ್ಯಗಳು ಪೂರ್ವಭಾವಿಯಾಗಿ ಮತ್ತು ನಿಯಮಿತವಾಗಿ ಪತ್ರಿಕಾಗೋಷ್ಠಿಗಳು, ರಾಜ್ಯ ಬುಲೆಟಿನ್ಗಳ ಮೂಲಕ ಜನರ ಕಳವಳಗಳನ್ನು ಪರಿಹರಿಸಬೇಕು” ಎಂದು ಹೇಳಲಾಗಿದೆ.

ಈ ರೂಪಾಂತರವನ್ನು ಮೊದಲ ಬಾರಿಗೆ ಬುಧವಾರ ದಕ್ಷಿಣ ಆಫ್ರಿಕಾದಿಂದ ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡಲಾಗಿದೆ. ಓಮಿಕ್ರಾನ್ ಸೋಂಕು ನವೆಂಬರ್ 9 ರಂದು ಸಂಗ್ರಹಿಸಲಾದ ಮಾದರಿಯಿಂದ ಮೊದಲ ಬಾರಿಗೆ ದೃಢೀಕರಿಸಲ್ಪಟ್ಟಿತು. ಇತ್ತೀಚಿನ ವಾರಗಳಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ಸೋಂಕುಗಳು ತೀವ್ರವಾಗಿ ಹೆಚ್ಚಿದ್ದು, ಇದು ಇದೇ ಸೋಂಕಿನ ಪರಿಣಾಮವಾಗಿದೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾದ ಬಹುತೇಕ ಎಲ್ಲಾ ಪ್ರಾಂತ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.


ಇದನ್ನೂ ಓದಿ: ವಿಶ್ವದೆಲ್ಲೆಡೆ ಕೊರೊನಾ ಹೊಸ ರೂಪಾಂತರ ‘ಓಮಿಕ್ರಾನ್’ ಆತಂಕ: ತಜ್ಞರು ಹೇಳುವುದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...