Homeಕರೋನಾ ತಲ್ಲಣವಿಶ್ವದೆಲ್ಲೆಡೆ ಕೊರೊನಾ ಹೊಸ ರೂಪಾಂತರ ‘ಓಮಿಕ್ರಾನ್’ ಆತಂಕ: ತಜ್ಞರು ಹೇಳುವುದೇನು?

ವಿಶ್ವದೆಲ್ಲೆಡೆ ಕೊರೊನಾ ಹೊಸ ರೂಪಾಂತರ ‘ಓಮಿಕ್ರಾನ್’ ಆತಂಕ: ತಜ್ಞರು ಹೇಳುವುದೇನು?

- Advertisement -
- Advertisement -

ಈ ವಾರ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಂಡುಬಂದ ಕೊರೊನಾದ ಹೊಸ ರೂಪಾಂತರಕ್ಕೆ ‘ಓಮಿಕ್ರಾನ್’ ಎಂದು ಮರುನಾಮಕರಣ ಮಾಡಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ(WHO)ಯು ಈ ರೂಪಾಂತರವನ್ನು ‘ಕಳವಳಕಾರಿ ರೂಪಾಂತರ’ ಎಂದು ಕರೆದಿದೆ. ಓಮಿಕ್ರಾನ್‌ ಇತರ ರೂಪಗಳಿಗಿಂತ ಹೆಚ್ಚು ವೇಗವಾಗಿ ಹರಡಬಹುದು ಎಂದು WHO ಹೇಳಿದೆ.

“ಕೊರೊನಾ ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಹಾನಿಕಾರಕ ಬದಲಾವಣೆಯನ್ನು ಸೂಚಿಸುವ ಪುರಾವೆಗಳ ಆಧಾರದ ಮೇಲೆ… ವಿಶ್ವ ಆರೋಗ್ಯ ಸಂಸ್ಥೆಯು B.1.1.529 ಅನ್ನು ಕಳವಳಕಾರಿ ರೂಪಾಂತರ (VOC) ಎಂದು ಗೊತ್ತುಪಡಿಸಿ, ಇದನ್ನು ‘ಓಮಿಕ್ರಾನ್‌’ ಎಂದು ಹೆಸರಿಸಿದೆ” ಎಂದು ಆರೋಗ್ಯ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಕೊರೊನಾ ಮಾತ್ರೆಗಳು: ಉಪಯುಕ್ತವೇ..? ವೈದ್ಯರು ಹೇಳುವುದೇನು…?

ಈ ರೂಪಾಂತರವನ್ನು ಮೊದಲ ಬಾರಿಗೆ ಬುಧವಾರ ದಕ್ಷಿಣ ಆಫ್ರಿಕಾದಿಂದ ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡಲಾಗಿದೆ. ಓಮಿಕ್ರಾನ್ ಸೋಂಕು ನವೆಂಬರ್ 9 ರಂದು ಸಂಗ್ರಹಿಸಲಾದ ಮಾದರಿಯಿಂದ ಮೊದಲ ಬಾರಿಗೆ ದೃಢೀಕರಿಸಲ್ಪಟ್ಟಿತು. ಇತ್ತೀಚಿನ ವಾರಗಳಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ಸೋಂಕುಗಳು ತೀವ್ರವಾಗಿ ಹೆಚ್ಚಿದ್ದು, ಇದು ಇದೇ ಸೋಂಕಿನ ಪರಿಣಾಮವಾಗಿದೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾದ ಬಹುತೇಕ ಎಲ್ಲಾ ಪ್ರಾಂತ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅದು ಹೇಳಿದೆ.

ಹೊಸ ರೂಪಾಂತರ ಓಮಿಕ್ರಾನ್ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಜಾಗತಿಕ ಆರೋಗ್ಯ ಮತ್ತು ಸಾಂಕ್ರಾಮಿಕ ಪಿಡುಗುಗಳ ಸಂಶೋಧಕರಾಗಿರುವ ಡಾ. ಹಿಮಾಂಶು ಅವರು, “ಪ್ರಸ್ತುತ ಕಂಡುಬಂದಿರುವ ಓಮಿಕ್ರಾನ್ ರೂಪಾಂತರ ಇದುವರೆಗೂ ಬಂದಿರುವ ಎಲ್ಲಾ ರೂಪಾಂತರಗಳಿಗಿಂತ ತುಂಬಾ ವೇಗವಾಗಿ ಹರಡುತ್ತದೆ. ಯಾವ ಮಟ್ಟದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುವುದು ಇನ್ನಷ್ಟೇ ತಿಳಿದು ಬರಬೇಕಿದೆ. ಮುಖ್ಯವಾದ ವಿಷಯವೇನೆಂದರೆ ಲಸಿಕೆ ಪಡೆದುಕೊಂಡವರಿಗೂ ಈ ರೂಪಾಂತರ ಸೋಂಕು ಹರಡಿದೆ ಎಂಬುವುದಾಗಿದೆ. ಆದರೆ ಅವರಲ್ಲಿ ಯಾವ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುವುದು ಇನ್ನೂ ತಿಳಿದು ಬಂದಿಲ್ಲ” ಎಂದು ಹೇಳಿದ್ದಾರೆ.

“ಇದುವರೆಗೂ ಡೆಲ್ಟಾ ಪ್ಲಸ್‌ ರೂಪಾಂತರದಿಂದ ಭಾರತದಲ್ಲಿ ಮೂರನೇ ಅಲೆ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಓಮಿಕ್ರಾನ್‌ ರೂಪಾಂತರದಿಂದಲೇ ಬಹುಷಃ ಬರಬಹುದು. ಇದು ಬಂದರೆ ಭಾರೀ ವೇಗದಲ್ಲಿ ಹರಡುತ್ತದೆ. ಕಳೆದ ಎರಡು ಅಲೆಗಳಲ್ಲಿ ನಮಗೆ ಹೆಚ್ಚಿನ ಮಾಹಿತಿಗಳು ಇರಲಿಲ್ಲ. ಆದರೆ ಈಗ ಮುಂದೆ ಏನಾಗಬಹುದು ಎಂಬ ಖಚಿತವಾದ ಮಾಹಿತಿ ದೊರೆಯುವಷ್ಟು ಈ ವೈರಸ್‌ ಬಗ್ಗೆ ಅಧ್ಯಯನ ನಡೆದಿದೆ. ಸಧ್ಯಕ್ಕೆ ಬೆಂಗಳೂರಿನಲ್ಲಿ ಲಕ್ಷದಲ್ಲಿ 20 ಜನರಿಗೆ ಐಸಿಯು ಬೇಕಾದರೂ ನಮ್ಮಲ್ಲಿ ಮೂಲಭೂತ ಸೌಕರ್ಯಗಳು ಸಾಲುವುದಿಲ್ಲ. ಆದ್ದರಿಂದ ಸರ್ಕಾರಗಳು ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕು” ಎಂದು ಡಾ. ಹಿಮಾಂಶು ಹೇಳಿದ್ದಾರೆ.

ಇದನ್ನೂ ಓದಿ: ಜಗತ್ತಿನ ಹಲವೆಡೆ ಹೆಚ್ಚಿದ ಕೊರೊನಾ ಪ್ರಕರಣಗಳು: ಲಾಕ್‌ಡೌನ್‌ ಘೋಷಿಸಿದ ದೇಶಗಳಿವು

ರೂಪಾಂತರಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ತಮ್ಮ ಕಣ್ಗಾವಲು ಮತ್ತು ವೈರಸ್ ಅನುಕ್ರಮ ಪ್ರಯತ್ನಗಳನ್ನು ಹೆಚ್ಚಿಸಲು WHO ಶುಕ್ರವಾರ ವಿಶ್ವದ ದೇಶಗಳಿಗೆ ಕರೆ ನೀಡಿದೆ. ದಕ್ಷಿಣ ಆಫ್ರಿಕಾದ ಹೊರತಾಗಿ, ಇಸ್ರೇಲ್‌ನಲ್ಲಿ, ಬೋಟ್ಸ್ವಾನ, ಬೆಲ್ಜಿಯಂ ಮತ್ತು ಹಾಂಗ್ ಕಾಂಗ್‌ನಲ್ಲಿಯೂ ಈ ರೂಪಾಂತರ ಪತ್ತೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಹೊಸ ರೂಪಾಂತರವನ್ನು ವರ್ಗೀಕರಿಸಿದ ಒಂದು ದಿನದ ನಂತರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದ್ದಾರೆ. ಸಬೆಯಲ್ಲಿ ಅವರು ದೇಶದಲ್ಲಿ ಕೋವಿಡ್‌ ಪರಿಸ್ಥಿತಿ ಹಾಗೂ ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಡ್ರೈವ್ ಕುರಿತು ಚರ್ಚಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ವೈರಸ್ ಪತ್ತೆಯಾಗಿರುವುದು ಘೋಷಣೆಯಾಗುತ್ತಿದ್ದಂತೆ ಭಾರತ ಸೇರಿದಂತೆ ಹಲವಾರು ದೇಶಗಳು ಆಫ್ರಿಕಾದ ಪ್ರಯಾಣದ ಮೇಲೆ ನಿರ್ಬಂಧಗಳನ್ನು ವಿಧಿಸುವ ಹಂತಕ್ಕೆ ತಲುಪಿದೆ. ದಕ್ಷಿಣ ಆಫ್ರಿಕಾದಿಂದ ಮುಂಬೈಗೆ ಪ್ರಯಾಣಿಸುವ ಎಲ್ಲರೂ ಆಗಮಿಸಿದ ನಂತರ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ ಎಂದು ನಗರದ ಮೇಯರ್ ಕಿಶೋರಿ ಪೆಡ್ನೇಕರ್ ಶನಿವಾರ ಘೋಷಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ, ಯೂರೋಪ್ ದೇಶಗಳಲ್ಲಿ ಕೊರೊನಾ ನಾಲ್ಕನೇ ಅಲೆ; ಭಾರತ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ ಐತಿಹಾಸಿಕ...