Homeಮುಖಪುಟಕೊರೊನಾ ಮಾತ್ರೆಗಳು: ಉಪಯುಕ್ತವೇ..? ವೈದ್ಯರು ಹೇಳುವುದೇನು...?

ಕೊರೊನಾ ಮಾತ್ರೆಗಳು: ಉಪಯುಕ್ತವೇ..? ವೈದ್ಯರು ಹೇಳುವುದೇನು…?

- Advertisement -
- Advertisement -

ಕೊರೊನಾ ಲಸಿಕೆ ಬಳಿಕ ಕೋವಿಡ್ ಮಾತ್ರೆಗಳ ಬಗ್ಗೆ ದೇಶದಲ್ಲಿ ಚರ್ಚೆ ನಡೆಯುತ್ತಿದೆ. ಈ ಮಾತ್ರೆಗಳ ಉಪಯುಕ್ತತೆ ಬಗ್ಗೆಯೂ ಗಂಭೀರ ಚರ್ಚೆಗಳು ನಡೆಯುತ್ತಿವೆ. ಕೊರೊನಾ ಸೋಂಕನ್ನು ನಿಭಾಯಿಸಲು ಕೋವಿಡ್‌ ಮಾತ್ರೆಗಳು ಉಪಯುಕ್ತ ಎಂದು ಹೇಳಲಾಗುತ್ತಿದ್ದರೂ, ಅವುಗಳ ಬಗ್ಗೆ ಆರೋಗ್ಯ ತಜ್ಞರು ಸಂಶಯ ಹೊಂದಿದ್ದಾರೆ.

ಸದ್ಯ, ಫೈಜರ್‌ ಕಂಪನಿಯ ಪ್ಯಾಕ್ಸಾಲೋವಿಡ್‌ ಮತ್ತು ಮೆರ್ಕ್‌ನ ಮೊಲ್ನುಪಿರಾವಿರ್ ಮಾತ್ರಗಳು ಕೊರೊನಾ ಚಿಕಿತ್ಸೆಗೆ ಆಂಟಿವೈರಲ್ ಔಷಧಿಗಳಾಗಿವೆ. ಇವುಗಳನ್ನು, ರೋಗಿಗಳು ಮನೆಯಲ್ಲಿಯೇ ತೆಗೆದುಕೊಳ್ಳಬಹುದು ಎಂದು ಕಂಪನಿಗಳು ಹೇಳಿವೆ.

ಕೊರೊನಾ ಸೋಂಕು ಹಿಡಿತಕ್ಕೆ ಬರುವ ಮೊದಲು, ಹೆಚ್ಚು ಪರಿಣಾಮಕಾರಿಯಾಗಿರಲು ಆಂಟಿವೈರಲ್‌ಗಳನ್ನು ಸಾಧ್ಯವಾದಷ್ಟು ಬೇಗ ನೀಡಬೇಕಾಗುತ್ತದೆ. ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಬಳಸುವ ಮೊನೊಕ್ಲೋನಲ್ ಮಾತ್ರೆಗಳು ಆಂಟಿಬಾಡೀಸ್‌ಗಳಂತೆಯೇ ಈ ಮಾತ್ರೆಗಳು ಕಾರ್ಯವಹಿಸುತ್ತವೆ. ಆಂಟಿಬಾಡೀಸ್‌ಗಳನ್ನು ಈಗ IV ದ್ರವದ ರೂಪದಲ್ಲಿ ಬಳಸಲಾಗುತ್ತಿದ್ದು, ಇದನ್ನು ಪಡೆಯಲು ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಇದು ದುಬಾರಿ ಕೂಡ. ಸೋಂಕು ದೃಢಪಟ್ಟ ಅಥವಾ ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ಮೊದಲ ದಿನಗಳಲ್ಲೇ ಕೋವಿಡ್ ಮಾತ್ರೆಗಳನ್ನು ತೆಗೆದುಕೊಂಡರೆ, ದೇಹದಲ್ಲಿ ಸೋಂಕಿನ ಉಲ್ಬಣವನ್ನು ತಡೆಯಬಹುದು ಮತ್ತು ಆಸ್ಪತ್ರೆಗೆ ಸೇರುವುದನ್ನು ತಡೆಯಬಹುದು ಎಂದು ಕಂಪನಿಗಳು ಹೇಳಿವೆ. 

‘ಮಾತ್ರೆಗಳಿಂದ ವೈರಸ್‌ನ ಉಲ್ಬಣಗೊಳ್ಳುವಿಕೆಯನ್ನು ಕಡಿಮೆ ಮಾಡಬಹುದು’ ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ.ಅನುಪ್ ಆರ್ ವಾರಿಯರ್ ಹೇಳಿದ್ದಾರೆ. ಯುಕೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಅನುಮೋದಿಸಲಾದ ಮೊದಲ ಕೋವಿಡ್ ವಿರೋಧಿ ಮಾತ್ರೆಯಾಗಿರುವ ಮೊಲ್ನುಪಿರಾವಿರ್‌ನ ಕ್ಲಿನಿಕಲ್ ಡೇಟಾವನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಪರಿಶೀಲಿಸುತ್ತಿದೆ.

ಇದನ್ನೂ ಓದಿ: ಕಸಾಪ ನೂತನ ಅಧ್ಯಕ್ಷರಾದ ಮಹೇಶ್‌ ಜೋಶಿ ಬಿಜೆಪಿ ಬೆಂಬಲಿತರು ಎಂಬುದಕ್ಕೆ ಇಲ್ಲಿದೆ ಪುರಾವೆ!

ಪ್ರಸ್ತುತ, ಕೊರೊನಾ ಮಾತ್ರೆಗಳ ಬಳಕೆಯನ್ನು ಅನುಮೋದಿಸುವ ಏಕೈಕ ರಾಷ್ಟ್ರ ಬ್ರಿಟನ್. ಕೋವಿಡ್‌ನ ಆಂಟಿವೈರಲ್ ಮಾತ್ರೆಯು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಪ್ರಮಾಣವನ್ನು ಸುಮಾರು 90% ರಷ್ಟು ಕಡಿತಗೊಳಿಸಿದೆ ಎಂದು ಫಿಜರ್ ಕಂಪನಿ ಹೇಳಿಕೊಂಡಿದೆ. ಆದರೆ, ಇಲ್ಲಿಯವರೆಗೂ ಕಂಪನಿಗಳು ನಡೆಸಿದ ಪ್ರಯೋಗಗಳ ಸಂಪೂರ್ಣ ಡೇಟಾವನ್ನು ಇನ್ನೂ ಪ್ರಕಟಿಸಿಲ್ಲ.

“ಹೀಗಾಗಿ ಈ ಹಂತದಲ್ಲಿ, ನಾವು ಮಾತ್ರೆಗಳನ್ನು ಸಂಪೂರ್ಣವಾಗಿ ಅವಲಂಬಿಸಲಾಗುವುದಿಲ್ಲ. ಮಾತ್ರೆಗಳು HIV ಔಷಧಿಗಳಂತೆಯೇ ಇರುತ್ತವೆ. ಆದ್ದರಿಂದ, ಯಕೃತ್ತಿ (ಲಿವರ್‌)ನ ಅಪಸಾಮಾನ್ಯ ಕ್ರಿಯೆಯನ್ನು ನಾವು ಮೇಲ್ವಿಚಾರಣೆ ಮಾಡಬೇಕಾಗಬಹುದು. ಏಕೆಂದರೆ, ಇವುಗಳು ಅಂಗಾಂಗಗಳ ಮೇಲೆ ಸೌಮ್ಯವಾದ ಪರಿಣಾಮವನ್ನು ಬೀರುತ್ತವೆ. ಹೀಗಾಗಿ, ಇದು ಗೇಮ್ ಚೇಂಜರ್ ಎಂದು ನಾವು ನಂಬುವುದಿಲ್ಲ” ಎಂದು ಕೊಚ್ಚಿ ಮೂಲದ ಶ್ವಾಸಕೋಶ ಶಾಸ್ತ್ರಜ್ಞ ಡಾ.ಮೋನು ವರ್ಗೀಸ್ ಹೇಳಿದ್ದಾರೆ.

ಈ ಹಿಂದೆ, ಲೋಪಿನಾವಿರ್ ಮತ್ತು ರಿಟೊನಾವಿರ್ – ಎಚ್‌ಐವಿ ಚಿಕಿತ್ಸೆಗಾಗಿ ಬಳಸಲಾಗುವ ಆಂಟಿವೈರಲ್ ಔಷಧಗಳನ್ನು ಕೋವಿಡ್ ರೋಗಿಗಳಿಗೆ ಬಳಸಲಾಗುತ್ತಿತ್ತು. ಆದರೆ, ಅದು ಪರಿಣಾಮಕಾರಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಬೂಸ್ಟರ್ ಡೋಸ್‌ಗಳು ಮತ್ತು ಕೋವಿಡ್ ಮಾತ್ರೆಗಳಿಗಿಂತ ಹೆಚ್ಚಾಗಿ ನಾವು ಕೋವಿಡ್ ವ್ಯಾಕ್ಸಿನೇಷನ್‌ಗೆ ಹೆಚ್ಚಿನ ಆದ್ಯತೆ ನೀಡಬೇಕು. ಲಸಿಕೆಯನ್ನು ಇನ್ನೂ ತೆಗೆದುಕೊಳ್ಳದವರಿಗೆ ಸಂಪೂರ್ಣವಾಗಿ ಲಸಿಕೆ ಹಾಕಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಲಸಿಕೆ ಅಭಿಯಾನಗಳನ್ನು ಮತ್ತು ಕ್ರಮಗಳನ್ನು ತಳಮಟ್ಟದಿಂದಲೇ ಬಲಪಡಿಸಬೇಕು. ಬಹುಶಃ, ದೀರ್ಘಾವಧಿಯಲ್ಲಿ ಮಾತ್ರೆಗಳು ಪ್ರಮುಖ ಪಾತ್ರವನ್ನು ವಹಿಸಬಹುದು. ಏಕೆಂದರೆ, ಭವಿಷ್ಯದಲ್ಲಿ ಇದು ಅಗ್ಗವಾಗಬಹುದು ಮತ್ತು ಸುಲಭವಾಗಿ ದೊರೆಯಬಹುದು” ಎಂದು ಡಾ. ಮೋನು ವರ್ಗೀಸ್‌ ತಿಳಿಸಿದ್ದಾರೆ.

 ಇನ್ನು, ಈ ಔಷಧಿಗಳು ಕೋವಿಡ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ನಂಬುವ ತಜ್ಞರೂ ಇದ್ದಾರೆ. ವಿಶೇಷವಾಗಿ, ಸೋಂಕಿನ ಆರಂಭಿಕ ಹಂತಗಳಲ್ಲಿ ಹೆಚ್ಚಿನ ಅಪಾಯದಲ್ಲಿರುವವರು, “ಕೋವಿಡ್ ಅನೇಕರ ಜೀವನವನ್ನು ಕಾಡುತ್ತಲೇ ಇದೆ. ಕೋವಿಡ್‌ ವಿರುದ್ದ ನೀಡಲಾಗುತ್ತಿರುವ ಲಸಿಕೆಗಳ ಜೊತೆಗೆ ಬೂಸ್ಟರ್ ಡೋಸ್‌ಗಳು ಮೂರನೇ ಅಲೆಯ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡಬಹುದು” ಎಂದು ಹೇಳುತ್ತಾರೆ.


ಇದನ್ನೂ ಓದಿ: ರೈತ ಹೋರಾಟ: ಸುಳ್ಳು ಸುದ್ದಿ ವರದಿ ಮಾಡಿದ್ದ ಝೀ ನ್ಯೂಸ್‌ಗೆ NBDSA ಛೀಮಾರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...