Homeಚಳವಳಿರೈತ ಹೋರಾಟ: ಸುಳ್ಳು ಸುದ್ದಿ ವರದಿ ಮಾಡಿದ್ದ ಝೀ ನ್ಯೂಸ್‌ಗೆ NBDSA ಛೀಮಾರಿ

ರೈತ ಹೋರಾಟ: ಸುಳ್ಳು ಸುದ್ದಿ ವರದಿ ಮಾಡಿದ್ದ ಝೀ ನ್ಯೂಸ್‌ಗೆ NBDSA ಛೀಮಾರಿ

ಜೊತೆಗೆ ಕೆಂಪು ಕೋಟೆಯಿಂದ ಭಾರತದ ತ್ರಿವರ್ಣ ಧ್ವಜವನ್ನು ತೆಗೆದುಹಾಕಲಾಗಿದೆ ಎಂದು ಝೀ ನ್ಯೂಸ್ ಸುಳ್ಳು ವರದಿ ಮಾಡಿತ್ತು

- Advertisement -
- Advertisement -

ರೈತ ಹೋರಾಟದ ವರದಿಗಾರಿಕೆಯ ವೇಳೆ ಸುಳ್ಳು ವರದಿ ಮಾಡಿದ್ದಕ್ಕಾಗಿ ಝೀ ನ್ಯೂಸ್‌ ಚಾನಲ್‌ ವಿರುದ್ದ ಸಲ್ಲಿಸಲಾಗಿದ್ದ ದೂರನ್ನು News Broadcasting and Digital Standards Authority (NBDSA) ಪರಿಶೀಲನೆ ನಡೆಸಿ ಸುದ್ದಿ ಸಂಸ್ಥೆಗೆ ಛೀಮಾರಿ ಹಾಕಿದೆ. ಮಾತ್ರವಲ್ಲದೆ, ರೈತ ಹೋರಾಟದ ವಿರುದ್ದ ಪ್ರಸಾರ ಮಾಡಲಾಗಿದ್ದ, ಸುಳ್ಳು ವರದಿಗಳ ವೀಡಿಯೊಗಳನ್ನು ತಕ್ಷಣ ತೆಗೆದುಹಾಕಬೇಕೆಂದು ಸೂಚನೆ ನೀಡಿದೆ.

ಝೀ ನ್ಯೂಸ್ 2021 ರ ಗಣರಾಜ್ಯೋತ್ಸವದಂದು ರೈತರ ಪ್ರತಿಭಟನೆಯನ್ನು ‘ಖಲಿಸ್ತಾನಿಗಳಿಗೆ’ ಲಿಂಕ್ ಮಾಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. 2020 ರ ದೆಹಲಿ ಗಲಭೆ ಪ್ರಕರಣದ ಕುರಿತು ಟೈಮ್ಸ್ ನೌ ನಡೆಸಿದ ಎರಡು ಕಾರ್ಯಕ್ರಮಗಳು ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು NBDSA ತಿಳಿಸಿದೆ.  

2021 ರ ಗಣರಾಜ್ಯೋತ್ಸವದಂದು ನಡೆಯಲು ಘೋಷಿಸಿದ್ದ ಟ್ಯ್ರಾಕ್ಟರ್‌ ರ್‍ಯಾಲಿ ರೈತರ ಪ್ರತಿಭಟನೆಯನ್ನು ಝೀ ನ್ಯೂಸ್ “ತಾಲ್ ಥೋಕ್ ಕೆ: ಖಲಿಸ್ತಾನ್ ಸೆ ಕಬ್ ಸಾವಧಾನ್ ಹೋಗಾ ಕಿಸಾನ್?” (ಖಲಿಸ್ತಾನ್ ಬಗ್ಗೆ ರೈತರು ಯಾವಾಗ ಎಚ್ಚರವಹಿಸುತ್ತಾರೆ?) ಮತ್ತು “ತಾಲ್ ಥೋಕ್ ಕೆ: ನಹೀ ಮಾನೆ ಕಿಸಾನ್ ತೋ ಕ್ಯಾ ಗಣರಾಜ್ಯೋತ್ಸವದ ಪರ ಹೋಗಾ ‘ಗೃಹ ಯುದ್ಧ’?” (ರೈತರು ಒಪ್ಪದಿದ್ದರೆ ಗಣರಾಜ್ಯೋತ್ಸವದಂದು ‘ಅಂತರ್ಯುದ್ಧ’ ನಡೆಯುವುದೇ?) ಎಂಬ ಎರಡು ಕಾರ್ಯಕ್ರಮ ಮಾಡಿ ಖಲಿಸ್ತಾನಿಗಳಿಗೆ ಲಿಂಕ್ ಮಾಡುವ ಪ್ರಯತ್ನ ಮಾಡಿತ್ತು. ಈ ಕಾರ್ಯಕ್ರಮ ಜನವರಿ 19 ಮತ್ತು ಜನವರಿ 20, 2021 ರಂದು ಝೀ ನ್ಯೂಸ್‌ನಲ್ಲಿ ಪ್ರಸಾರವಾಗಿತ್ತು. ಈ ಕಾರ್ಯಕ್ರಮಗಳಲ್ಲಿ ಝೀ ನ್ಯೂಸ್  ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದೆ ಎಂದು NBDSA ತಿಳಿಸಿದೆ ಆಕ್ಷೇಪ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಉಂಡ ಮನೆಗೆ ದ್ರೋಹ ಬಗೆದ ಭಾರತೀಯ ಮಾಧ್ಯಮಗಳು; ಅನ್ನದಾತರನ್ನೇ ಭಯೋತ್ಪಾದಕರು-ದೇಶದ್ರೋಹಿಗಳು ಎನ್ನುತ್ತಿವೆ!

ಈ ಎರಡೂ ಸುದ್ದಿಗಳ ವಿರುದ್ದ ದೂರುದಾರ ಇಂದ್ರಜಿತ್‌ ಘೋರ್ಪಡೆ ಎಂಬುವವರು NBDSAಗೆ ದೂರು ನೀಡಿದ್ದರು. ಅವರು ತಮ್ಮ ದೂರಿನಲ್ಲಿ ಜೀ ನ್ಯೂಸ್‌ 19.1.2021 ಮತ್ತು 20.1.2021. ರಂದು ಪ್ರಸಾರ ಮಾಡಿದ ಸುದ್ದಿಗಳು ಆಕ್ಷೇಪಾರ್ಹವಾಗಿದ್ದು, ಇವು NBDA ಮಾರ್ಗಸೂಚಿಗಳನ್ನು ಉಲ್ಲಂಘಿಸಿವೆ ಎಂದು ಹೇಳಿದ್ದರು.

ದೂರಿನ ವಿಚಾರಣೆ ನಡೆಸಿರುವ NBDSA ಜೀ ನ್ಯೂಸ್‌ಗೆ ವಿಡಿಯೋಗಳನ್ನು ಡಿಲೀಟ್‌ ಮಾಡಲು ಸೂಚಿಸಿದ್ದು, ಈ ವಿಡಿಯೋಗಳು ಈ ಕೆಳಗಿನ NBDSA ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ:

  1. ವರದಿ ಮಾಡುವುದು ವೀಕ್ಷಕರಲ್ಲಿ ಸಂವೇದನಾಶೀಲನೆಯನ್ನು ತೊಡೆದು ಹಾಕಬಾರದು, ಭಯ, ಸಂಕಟ ಅಥವಾ ಅನಗತ್ಯ ಭಯವನ್ನು ಸೃಷ್ಟಿಸಬಾರದು.
  2. ಯಾವುದೇ ವಿವಾದಾತ್ಮಕ ಸಾರ್ವಜನಿಕ ಸಮಸ್ಯೆಯ ಸಂದರ್ಭದಲ್ಲಿ ಯಾವುದಾದರೂ ಒಂದು ಬದಿಯವರಿಗೆ ಅಡ್ಡಿಪಡಿಸುವ ಉದ್ದೇಶಕ್ಕಾಗಿ ಸುದ್ದಿಗಳನ್ನು ಆಯ್ಕೆ ಮಾಡಬಾರದು.
  3. ಸುದ್ದಿ ಪ್ರಸಾರಕ್ಕೂ ಮುನ್ನ, ಸಾಧ್ಯವಾದರೆ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಮಾಹಿತಿಯನ್ನು ನೇರವಾಗಿ ಸಂಗ್ರಹಿಸಬೇಕು.
  4. ಸತ್ಯಗಳು ಸ್ಪಷ್ಟವಾಗಿ ಭಿನ್ನವಾಗಿರಬೇಕು. ಅವುಗಳು ಅಭಿಪ್ರಾಯ, ವಿಶ್ಲೇಷಣೆ ಮತ್ತು ಕಾಮೆಂಟ್‌ಗಳೊಂದಿಗೆ ಬೆರೆಸಬಾರದು.
  5. ಸತ್ಯದ ವಿರುದ್ದ ವಿದ್ದಲ್ಲಿ, ಅಂತಹ ದೋಷಗಳನ್ನು ಆದಷ್ಟು ಬೇಗ ಸರಿಪಡಿಸಬೇಕು, ಸತ್ಯದ ಸರಿಯಾದ ಆವೃತ್ತಿಯ ಪ್ರಸಾರಕ್ಕೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಬೇಕು.
  6. ಸಮತೋಲಿತ ವರದಿಗಾಗಿ, ಪ್ರಸಾರಕರು ತಟಸ್ಥವಾಗಿರಬೇಕು. ವಿಶೇಷವಾಗಿ ವಿವಾದಾತ್ಮಕ ವಿಷಯದ ಕುರಿತು ಯಾವುದೇ ನಿರ್ದಿಷ್ಟವಾದ ದೃಷ್ಟಿಕೋನಕ್ಕೆ ಅನಗತ್ಯ ಪ್ರಾಮುಖ್ಯತೆಯನ್ನು ನೀಡಬಾರದು.
  7. ರಾಷ್ಟ್ರೀಯ ಸಂಸ್ಥೆಗಳ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ಸಾರ್ವಜನಿಕ ವಿಶ್ವಾಸವನ್ನು ಕುಗ್ಗಿಸುವ ವರದಿಯನ್ನು ಮಾಡಬಾರದು.
  8. ಮೂಢನಂಬಿಕೆಯನ್ನು ನಂಬಿಕೆ ವಿಷಯವೆಂದು ಪ್ರಚಾರ ಮಾಡಬಾರದು.

ಝೀ ವಾಹಿನಿಯ ಈ ಎರಡೂ ಕಾರ್ಯಕ್ರಮಗಳು NBDAಯ ಮೇಲಿನ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಪರಿಶೀಲನೆ ವೇಳೆ ತಿಳಿದು ಬಂದಿದೆ. ಅಲ್ಲದೆ, ಈ ಕಾರ್ಯಕ್ರಮಗಳಲ್ಲಿ ಸಾಮಾಜಿಕ-ಮಾಧ್ಯಮದಿಂದ ಪರಿಶೀಲಿಸದ ಮಾರ್ಪಾಡು ಮಾಡಿದ ವೀಡಿಯೊಗಳನ್ನು ಪ್ರಸಾರ ಮಾಡಲಾಗಿದೆ ಎಂದು ದೂರುದಾರರು ಹೇಳಿದ್ದಾರೆ.

ಝೀ ವಾಹಿನಿಯ ಈ ಕಾರ್ಯಕ್ರಮಗಳಲ್ಲಿ, ಡಿಸೆಂಬರ್ 2020ರಲ್ಲಿ ಜರ್ಮನಿಯಲ್ಲಿ ನಡೆದ ಚಾರಿಟಿ ಈವೆಂಟ್‌ ಸಂದರ್ಭದಲ್ಲಿ ದೀಪಗಳಿಂದ ಅಲಂಕರಿಸಲ್ಪಟ್ಟ ಟ್ರಾಕ್ಟರುಗಳ ವೀಡಿಯೊವನ್ನು, ಪ್ರತಿಭಟನಾನಿರತ ರೈತರು ಜನವರಿ 26 ರಂದು ನಡೆಸಲಿರುವ ಟ್ರ್ಯಾಕ್ಟರ್-ಮಾರ್ಚ್‌ಗೆ ಸಿದ್ಧವಾಗುತ್ತಿರುವ ಟ್ರಾಕ್ಟರ್‌ಗಳು ಎಂದು ಪ್ರಸಾರ ಮಾಡಲಾಗಿತ್ತು. ಇದರ ಬಗ್ಗೆ ಹಲವು ಏಜೆನ್ಸಿಗಳು ಫ್ಯಾಕ್ಟ್‌ಚೆಕ್‌ ನಡೆಸಿ, ಪರಿಶೀಲನೆ ನಡೆಸಿವೆ. ಆದರೂ, ತನ್ನ ವೀಕ್ಷಕರನ್ನು ದಾರಿ ತಪ್ಪಿಸಿದ್ದಕ್ಕಾಗಿ ಝೀ ನ್ಯೂಸ್‌ ಪ್ರಸಾರಕರು ಇನ್ನೂ ಕ್ಷಮೆಯಾಚಿಸಿಲ್ಲ ಎಂದು ದೂರುದಾರರು ಹೇಳಿದ್ದಾರೆ.

ಇದನ್ನೂ ಓದಿ: ಮಾಧ್ಯಮಗಳು ಸುಳ್ಳು ಹೇಳುತ್ತಿವೆ: ರೈತರ ಮಹಾಪಂಚಾಯತ್‌ ವೇದಿಕೆಯಲ್ಲಿ ABP ಚಾನೆಲ್‌ ವರದಿಗಾರನ ರಾಜೀನಾಮೆ!

ಜೊತೆಗೆ ಕೆಂಪು ಕೋಟೆಯಿಂದ ಭಾರತದ ತ್ರಿವರ್ಣ ಧ್ವಜವನ್ನು ತೆಗೆದುಹಾಕಲಾಗಿದೆ ಎಂದು ಝೀ ನ್ಯೂಸ್ ಸುಳ್ಳು ವರದಿ ಮಾಡಿದೆ ಎಂದು ಪ್ರಾಧಿಕಾರವು ಕಂಡು ಹಿಡಿದಿದೆ. ಝೀ ನ್ಯೂಸ್ ರೈತರ ಪ್ರತಿಭಟನೆಗಳನ್ನು ಖಲಿಸ್ತಾನಿಗಳಿಗೆ ಸಂಬಂಧಿಸಿ ಪ್ರಸಾರ ಮಾಡಿದ ಮೂರು ವೀಡಿಯೊಗಳಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಹೇಳಿದೆ.

ಈ ಎಲ್ಲಾ ಅಂಶಗಳನ್ನು ಗಮನಿಸಿರುವ NBDSA, ಝೀ ವಾಹಿನಿಯ ಈ ಎರಡೂ ಕಾರ್ಯಕ್ರಮಗಳ ಬಗ್ಗೆ ತನ್ನ ಅಸಮ್ಮತಿಯನ್ನು ಸೂಚಿಸಿದೆ. ಅಲ್ಲದೆ, ಪ್ರಸಾರ ಮಾಡಲಾಗಿರುವ ಆ ಎರಡೂ ವೀಡಿಯೊಗಳು ಚಾನಲ್‌ನ ವೆಬ್‌ಸೈಟ್ ಅಥವಾ YouTube ಅಥವಾ ಯಾವುದೇ ಇತರ ಲಿಂಕ್‌ಗಳಲ್ಲಿ ಇನ್ನೂ ಲಭ್ಯವಿದ್ದರೆ, ತಕ್ಷಣವೇ ತೆಗೆದುಹಾಕಬೇಕು ಮತ್ತು ಆ ಬಗ್ಗೆ 7 ದಿನಗಳಲ್ಲಿ NBDSA ಗೆ ಲಿಖಿತ ರೂಪದಲ್ಲಿ ದೃಢೀಕರಿಸಬೇಕು ಎಂದು ನಿರ್ದೇಶಿಸಿದೆ.

ಯಾವುದೇ ಸುದ್ದಿಯನ್ನು ವರದಿ ಮಾಡುವಾಗ ಜಾಗರೂಕತೆ ಮತ್ತು ಎಚ್ಚರಿಕೆಯನ್ನು ವಹಿಸಬೇಕು. ಪತ್ರಿಕಾ ನೀತಿ ಸಂಹಿತೆ ಮತ್ತು ಬ್ರಾಡ್‌ಕಾಸ್ಟಿಂಗ್ ಮಾನದಂಡಗಳ ಮೂಲಭೂತ ತತ್ವಗಳನ್ನು ಅನುಸರಿಸಬೇಕು ಅಲ್ಲದೆ, ಸರಿಯಾದ ನಿಖರತೆ ಮತ್ತು ನಿಷ್ಪಕ್ಷಪಾತದ ತತ್ವ, ಪ್ರಸಾರದ ಸಂದರ್ಭದಲ್ಲಿ ಮಾಡಿದ ಗಮನಾರ್ಹ ತಪ್ಪುಗಳನ್ನು ತಕ್ಷಣವೇ ಸರಿಪಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.

ಮಾತ್ರವಲ್ಲದೆ, ಮುಂದೆ ಪ್ರಸಾರ ಮಾಡಲಾಗುವ ಸುದ್ದಿಗಳಿಗೆ ಟ್ಯಾಗ್‌ಲೈನ್‌ಗಳು, ಹ್ಯಾಶ್‌ಟ್ಯಾಗ್‌ಗಳು ಮತ್ತು ಚಿತ್ರಗಳು/ಛಾಯಾಚಿತ್ರಗಳ ಬಳಕೆಯನ್ನು ಪ್ರಸಾರ ಮಾಡಲು/ಪ್ರಕಟಿಸಲು ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡಲು ನಿರ್ಧರಿಸಿದೆ.

ಇತ್ತ ದುಬೈನ ಚಾರ್ಟರ್ಡ್ ಅಕೌಂಟೆಂಟ್‍ಗಳ ಅಬುಧಾಬಿ ಸಂಘ ಝೀ ನ್ಯೂಸ್ ನಿರೂಪಕ ಸುಧೀರ್ ಚೌಧರಿಯನ್ನು ಎಮಿರೇಟ್ಸ್‌ಗೆ ಸ್ವಾಗತಿಸಲು ಸಿದ್ಧವಾಗಿತ್ತು. ಆದರೆ, ತೀವ್ರ ಟೀಕೆಗಳಿಂದಾಗಿ ಅವರನ್ನು ಕಾರ್ಯಕ್ರಮದಿಂದ ಹೊರಗಿಡಲಾಗಿದೆ.


ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ಧ್ವಜ ಹಾರಾಟ – ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಮತ್ತು ಮಾಧ್ಯಮಗಳು: ಭಾರಿ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...