Homeಮುಖಪುಟಮಹುವಾ ಹೂವಿನಿಂದ ತಯಾರಿಸಿದ ಮದ್ಯಕ್ಕೆ ಹೆರಿಟೇಜ್‌ ಸ್ಥಾನಮಾನ: ಮಧ್ಯಪ್ರದೇಶ ಸರ್ಕಾರ

ಮಹುವಾ ಹೂವಿನಿಂದ ತಯಾರಿಸಿದ ಮದ್ಯಕ್ಕೆ ಹೆರಿಟೇಜ್‌ ಸ್ಥಾನಮಾನ: ಮಧ್ಯಪ್ರದೇಶ ಸರ್ಕಾರ

- Advertisement -
- Advertisement -

ಮಹುವಾ ಹೂವಿನಿಂದ ತಯಾರಿಸಿದ ಮದ್ಯವನ್ನು ಪಾರಂಪರಿಕ ಮದ್ಯವೆಂದು ಮಾರಾಟ ಮಾಡಲಾಗುವುದು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

ಹೊಸ ಅಬಕಾರಿ ನೀತಿಯ ಅಡಿಯಲ್ಲಿ ರಾಜ್ಯದಲ್ಲಿ ಮಹುವಾ ಹೂವಿನಿಂದ ತಯಾರಿಸಿದ ಮದ್ಯವನ್ನು ಪಾರಂಪರಿಕ ಮದ್ಯವಾಗಿ ಮಾರಾಟ ಮಾಡಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಮಹುವಾ ಮಾರಾಟ ಅಥವಾ ಸೇವನೆಯು ಇಲ್ಲಿಯವರೆಗೆ ಕಾನೂನುಬಾಹಿರವಾಗಿತ್ತು!

“ಸರ್ಕಾರವು ಅಬಕಾರಿ ನೀತಿಯನ್ನು ರೂಪಿಸುತ್ತಿದೆ, ಅದರ ಅಡಿಯಲ್ಲಿ ಯಾರಾದರೂ ಸಾಂಪ್ರದಾಯಿಕ ರೀತಿಯಲ್ಲಿ ಮಹುವಾದಿಂದ ಮದ್ಯವನ್ನು ತಯಾರಿಸಿದರೆ, ಅದು ಇನ್ನು ಮುಂದೆ ಅಕ್ರಮವಾಗುವುದಿಲ್ಲ” ಎಂದು ಚೌಹಾಣ್ ಹೇಳಿದ್ದಾರೆ. ಇದನ್ನು “ಹೆರಿಟೇಜ್ ಮದ್ಯ” (ಪಾರಂಪರಿಕ ಮದ್ಯ) ಎಂಬ ಹೆಸರಿನಲ್ಲಿ ಮದ್ಯದ ಅಂಗಡಿಗಳಲ್ಲಿ ಮಾರಾಟ ಮಾಡಲಾಗುವುದು. ಈ ನೀತಿಯಿಂದಾಗಿ ಮಹುವಾ ಮದ್ಯವನ್ನು ತಯಾರಿಸುವ ಬುಡಕಟ್ಟು ಜನರಿಗೆ ಉದ್ಯೋಗ ಮತ್ತು ಆದಾಯ ದೊರಕಲಿದೆ ಎಂದು ಪ್ರತಿಪಾದಿಸಲಾಗಿದೆ.

ಬಿಜೆಪಿ ಸರ್ಕಾರದ ನಡೆಯನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. “ಭಾರತೀಯ ಜನತಾ ಪಾರ್ಟಿಯ ನೈತಿಕ ಅಧಃಪತನ” ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. ಕಾಂಗ್ರೆಸ್ ವಕ್ತಾರ ಕೆ.ಕೆ.ಮಿಶ್ರಾ ಪ್ರತಿಕ್ರಿಯಿಸಿ, ‘ಕಚ್ಚಿ ಶರಬ್ (ದೇಸಿ ಮದ್ಯ) ಅನ್ನು ಕಾನೂನುಬದ್ಧಗೊಳಿಸಲು ಸರ್ಕಾರ ಯೋಚಿಸುತ್ತಿರುವುದು ದುರದೃಷ್ಟಕರ’ ಎಂದಿದ್ದಾರೆ.

ಇದರ ನಡುವೆ, ಸಮುದಾಯ ಅರಣ್ಯದ ಹಕ್ಕನ್ನು ಆದಿವಾಸಿಗಳನ್ನು ಹೊಂದಿದ್ದಾರೆ. ಅಲ್ಲಿ ಅವರು ಮರಗಳನ್ನು ನೆಡಬಹುದು, ಮರ ಮತ್ತು ಹಣ್ಣುಗಳನ್ನು ಏನು ಮಾಡಬೇಕೆಂದು ನಿರ್ಧರಿಸಬಹುದು ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಬುಡಕಟ್ಟು ಸಮುದಾಯದ ವ್ಯಕ್ತಿಗಳ ಮೇಲಿರುವ ಸುಳ್ಳು ಹಾಗೂ ಸಣ್ಣ ಪ್ರಮಾಣದ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಚೌಹಾಣ್ ಘೋಷಿಸಿದ್ದಾರೆ. ಟೆಂಡು ಎಲೆ ಮಾರಾಟ ಮಾಡುವ ಹಕ್ಕನ್ನು ಬುಡಕಟ್ಟು ಜನಾಂಗದವರಿಗೂ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ. ಟೆಂಡು ಎಲೆಗಳನ್ನು ಬೀಡಿ ಸುತ್ತಲು ಬಳಸಲಾಗುತ್ತದೆ.

ಬುಡಕಟ್ಟು ಸಮುದಾಯಗಳಲ್ಲಿ ಕುಡಿತ ಬಹುದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂಬುದು ಎಲ್ಲ ಸಾಮಾಜಿಕ ಚಿಂತಕರ ಆತಂಕ. ಗೌರವಯುತ ಹಾಗೂ ಬುಡಕಟ್ಟು ಪರಂಪರೆಯನ್ನೇ ಪ್ರತಿನಿಧಿಸುವ ಪರ್ಯಾಯ ಉದ್ಯೋಗಗಳು ಸಾಕಷ್ಟಿದ್ದರೂ, ಕುಡಿತವನ್ನು ಪ್ರಚೋದಿಸುವ ಉದ್ಯೋಗದತ್ತ ಈ ಸಮುದಾಯವನ್ನು ತಳ್ಳುವುದು ಎಷ್ಟು ಸರಿ ಎಂಬುದು ಚರ್ಚೆಯಾಗುತ್ತಿದೆ.

ಸರ್ಕಾರದ ನಿರ್ಧಾರವನ್ನು ಅನೇಕರು ಟೀಕಿಸಿದ್ದಾರೆ. ‘ಪ್ರಾಚೀನ ಧೂಮಪಾನ’ ಎಂದು ಹೆಸರಿಸಿ ಗಾಂಜಾವನ್ನು ಕಾನೂನುಬದ್ಧಗೊಳಿಸಿ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.


ಇದನ್ನೂ ಓದಿರಿ: ಬಿಜೆಪಿ ನಂತರ ಕಾಂಗ್ರೆಸ್ ಸರದಿ: ಇಂದು ಟಿಎಂಸಿ ಸೇರಲಿರುವ ಬಿಹಾರ ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...