Homeಮುಖಪುಟಬಾಬರಿ ತೀರ್ಪಿತ್ತ ದಿನ ಇತರ ನ್ಯಾಯಮೂರ್ತಿ‌ಗಳನ್ನು ಡಿನ್ನರ್‌ಗೆ ಕರೆದೊಯ್ದು, ಉತ್ತಮ ವೈನ್‌ ಕೊಡಿಸಿದ್ದೆ: ನಿವೃತ್ತ ಸಿಜೆಐ...

ಬಾಬರಿ ತೀರ್ಪಿತ್ತ ದಿನ ಇತರ ನ್ಯಾಯಮೂರ್ತಿ‌ಗಳನ್ನು ಡಿನ್ನರ್‌ಗೆ ಕರೆದೊಯ್ದು, ಉತ್ತಮ ವೈನ್‌ ಕೊಡಿಸಿದ್ದೆ: ನಿವೃತ್ತ ಸಿಜೆಐ ರಂಜನ್ ಗೊಗೊಯ್

- Advertisement -
- Advertisement -

ನವೆಂಬರ್ 9, 2019 ರಂದು ಬಾಬರಿ ಮಸೀದಿ ಭೂ ವಿವಾದದ ತೀರ್ಪು ನೀಡಿದ ನಂತರ, ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಪೀಠದ ಭಾಗವಾಗಿದ್ದ ಇತರ ನ್ಯಾಯಮೂರ್ತಿಗಳನ್ನು ಹೋಟೆಲ್ ತಾಜ್ ಮಾನ್ಸಿಂಗ್‌ಗೆ ಭೋಜನಕ್ಕೆ ಕರೆದೊಯ್ದು, ಅತ್ಯುತ್ತಮವಾದ ವೈನ್‌‌ ಕುಡಿಸಿದರು ಎಂದು ತನ್ನ ಆತ್ಮ ಚರಿತ್ರೆಯಲ್ಲಿ ಹೇಳಿದ್ದಾರೆ.

ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ರಂಜನ್‌ ಗೊಗೊಯ್, “ಜಸ್ಟಿಸ್ ಫಾರ್ ದಿ ಜಡ್ಜ್: ಆನ್ ಆಟೋಬಯೋಗ್ರಫಿ” ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ವೃತ್ತಿಜೀವನಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ಘಟನೆಗಳ ಬಗ್ಗೆ ಬರೆದಿದ್ದಾರೆ.

ಇದನ್ನೂ ಓದಿ:ಬಾಬರಿ ಮಸೀದಿ ಧ್ವಂಸ ದಿನ: ರಾಮ್‌ ಕೆ ನಾಮ್ | ರಾಮನ ಹೆಸರಿನಲ್ಲಿ | In the name of god | ಸಾಕ್ಷ್ಯಚಿತ್ರ ನೋಡಿ

ಬಾಬರಿ ಮಸೀದಿ ತೀರ್ಪು ನೀಡಿದ ನಂತರದ ಸಂಜೆಯ ಬಗ್ಗೆ ಉಲ್ಲೇಖಿಸಿ, “ತೀರ್ಪಿನ ನಂತರ, ಸೆಕ್ರೆಟರಿ ಜನರಲ್ ಅವರು ಅಶೋಕ ಚಕ್ರದ ಕೆಳಗೆ ಕೋರ್ಟ್‌ ನಂ 1 ರ ಹೊರಗಿನ ನ್ಯಾಯಾಧೀಶರ ಗ್ಯಾಲರಿಯಲ್ಲಿ ಫೋಟೋ ಸೆಷನ್ ಅನ್ನು ಆಯೋಜಿಸಿದರು. ಸಂಜೆ ನಾನು ತೀರ್ಪು ನೀಡಿದ ನ್ಯಾಯಮೂರ್ತಿಗಳನ್ನು ತಾಜ್ ಮಾನ್ಸಿಂಗ್ ಹೋಟೆಲ್‌ಗೆ ಊಟಕ್ಕೆ ಕರೆದುಕೊಂಡು ಹೋದೆ. ಅಲ್ಲಿ ಲಭ್ಯವಿರುವ ಅತ್ಯುತ್ತಮವಾದ ವೈನ್ ಬಾಟಲಿಯನ್ನು ಹಂಚಿಕೊಂಡು, ನಾವು ಚೈನೀಸ್ ಆಹಾರವನ್ನು ಸೇವಿಸಿದೆವು. ಹಿರಿಯವನಾಗಿ ನಾನೇ ಅಂದು ಬಿಲ್ಲನ್ನು ಪಾವತಿಸಿದೆ” ಎಂದು ಗೊಗೊಯ್ ಬರೆದಿದ್ದಾರೆ.

ರಂಜನ್‌ ಗೊಗೊಯ್‌ ಸುಪ್ರೀಂಕೋರ್ಟ್‌‌ನ ಆಗಿನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಬಾಬರಿ ಮಸೀದಿ ವಿವಾದದ ತೀರ್ಪು ನೀಡಿದ ಐದು ನ್ಯಾಯಾಮೂರ್ತಿಗಳ ಸಂವಿಧಾನ ಪೀಠದಲ್ಲಿ ಗೊಗೊಯ್ ನಂತರ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್‌.ಎ. ಬೋಬ್ಡೆ, ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ಇದ್ದರು.

ರಂಜನ್‌ ಗೊಗೊಯ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ತನ್ನ ಮೇಲಿನ ಲೈಂಗಿಕ ಪ್ರಕರಣ, 2018 ರಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬರೆದಿದ್ದಾರೆ.

ಇದನ್ನೂ ಓದಿ: ಬಾಬರಿ ಮಸೀದಿ ಒಡೆದ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದ ನ್ಯಾಯಾಧೀಶ ಯುಪಿ ಉಪಲೋಕಾಯುಕ್ತರಾಗಿ ನೇಮಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...