ದೆಹಲಿ ವಿಧಾನಸಭಾ ಚುನಾವಣೆಗೆ ಒಂದು ವಾರ ಉಳಿದಿದ್ದು, ಈ ನಡುವೆ ಆಡಳಿತರೂಢ ಆಮ್ ಆದ್ಮಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದ್ದು, ಪಕ್ಷದ ಏಳು ಶಾಸಕರು ಶುಕ್ರವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಏಳು ಹಾಲಿ ಶಾಸಕರಲ್ಲಿ ಆರು ಮಂದಿಗೆ ಈ ಬಾರಿ ಪಕ್ಷವು ಟಿಕೆಟ್ ನಿರಾಕರಿಸಿತ್ತು ಮತ್ತು ಪಕ್ಷವು ಆ ಸ್ಥಾನಗಳಿಂದ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
ಪಾಲಂ ಶಾಸಕಿ ಭಾವನಾ ಗೌರ್ ಅವರು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಬರೆದ ಪತ್ರದಲ್ಲಿ, ತಮ್ಮ ಮತ್ತು ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಂಡ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಕಸ್ತೂರ್ಬಾ ನಗರ ಶಾಸಕ ಮದನ್ ಲಾಲ್ ಕೂಡಾ ಅವರ ಮಾತಿಗೆ ಧ್ವನಿಗೂಡಿಸಿದ್ದಾರೆ. ಚುನಾವಣೆಗೆ ಒಂದು ವಾರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ನಿಮ್ಮ ಮತ್ತು ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿರುವುದರಿಂದ ನಾನು ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಅದನ್ನು ಸ್ವೀಕರಿಸಿ” ಎಂದು ಭಾವನಾ ಗೌರ್ ಮತ್ತು ಮದನ್ ಲಾಲ್ ಎರಡು ಪ್ರತ್ಯೇಕ ಪತ್ರಗಳಲ್ಲಿ ಬರೆದಿದ್ದಾರೆ.
ತ್ರಿಲೋಕ್‌ಪುರಿ ಶಾಸಕ ರೋಹಿತ್ ಮೆಹ್ರೌಲಿಯಾ, ಜನಕ್‌ಪುರಿ ಶಾಸಕ ರಾಜೇಶ್ ರಿಷಿ, ಕಸ್ತೂರ್ಬಾ ನಗರ ಶಾಸಕ ಮದನ್ ಲಾಲ್ ಮತ್ತು ಮೆಹ್ರೌಲಿ ಶಾಸಕ ನರೇಶ್ ಯಾದವ್ ಕೂಡ ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ತೊರೆದಿದ್ದಾರೆ. ಆದರ್ಶ ನಗರದ ಪವನ್ ಶರ್ಮಾ ಮತ್ತು ಬಿಜ್ವಾಸನ್ ನ ಬಿಎಸ್ ಜೂನ್ ಪಕ್ಷ ತೊರೆದ ಇತರ ಇಬ್ಬರು ಎಎಪಿ ಶಾಸಕರಾಗಿದ್ದಾರೆ.
ಈ ಎಲ್ಲಾ ಶಾಸಕರಿಗೆ 2025 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎಎಪಿ ಪಕ್ಷದಿಂದ ಟಿಕೆಟ್ ನೀಡಿಲ್ಲ.
ದೆಹಲಿ ಚುನಾವಣೆಗೆ ಎಎಪಿ ಅಭ್ಯರ್ಥಿಗಳ ಪಟ್ಟಿಯ ಪ್ರಕಾರ, ಪಕ್ಷವು ಆದರ್ಶ ನಗರದಿಂದ ಮುಖೇಶ್ ಗೋಯೆಲ್, ಜನಕ್ಪುರಿಯಿಂದ ಪ್ರವೀಣ್ ಕುಮಾರ್, ಬಿಜಿವಾಸನ್ ನಿಂದ ಸುರೇಂದ್ರ ಭಾರದ್ವಾಜ್, ಪಾಲಂ ನಿಂದ ಜೋಗಿಂದರ್ ಸೋಲಂಕಿ, ಕಸ್ತೂರ್ಬಾ ನಗರದಿಂದ ರಮೇಶ್ ಪೆಹ್ಲ್ವಾನ್, ಮೆಹ್ರೌಲಿಯಿಂದ ನರೇಶ್ ಯಾದವ್ ಮತ್ತು ತ್ರಿಲೋಕ್ಪುರಿಯಿಂದ ಅಂಜನಾ ಪರ್ಚಾ ಅವರನ್ನು ಕಣಕ್ಕಿಳಿಸಿದೆ.
ಇದನ್ನೂಓದಿ: ಸಂಸದ ರಶೀದ್ ಬಿಡುಗಡೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ: ಕಾರ್ಯಕರ್ತರ ಬಂಧನ
ಸಂಸದ ರಶೀದ್ ಬಿಡುಗಡೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ: ಕಾರ್ಯಕರ್ತರ ಬಂಧನ


