Homeಮುಖಪುಟಟಿಎಂಸಿ ನಾಯಕರ ಗೃಹಬಂಧನಕ್ಕೆ ಅವಕಾಶ: ಹೈಕೋರ್ಟ್ ಆದೇಶ ವಿರೋಧಿಸಿ ಸುಪ್ರೀಂಗೆ ಹೋದ ಸಿಬಿಐ

ಟಿಎಂಸಿ ನಾಯಕರ ಗೃಹಬಂಧನಕ್ಕೆ ಅವಕಾಶ: ಹೈಕೋರ್ಟ್ ಆದೇಶ ವಿರೋಧಿಸಿ ಸುಪ್ರೀಂಗೆ ಹೋದ ಸಿಬಿಐ

- Advertisement -

ಕೊಲ್ಕೊತ್ತಾ ಹೈಕೋರ್ಟ್ ನಡೆಸಲಿರುವ ನಾಲ್ವರು ರಾಜಕಾರಣಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ರದ್ದುಪಡಿಸಬೇಕೆಂದು ಸಿಬಿಐ ಸೋಮವಾರ ಮುಂಜಾನೆ ಸುಪ್ರಿಂಕೋರ್ಟಿಗೆ ಅರ್ಜಿ ಸಲ್ಲಿಸಿದೆ.

ನಾರದಾ ಲಂಚ ಪ್ರಕರಣದಲ್ಲಿ ಬಂಗಾಳದ ನಾಲ್ವರು ರಾಜಕೀಯ ಮುಖಂಡರ ಗೃಹಬಂಧನಕ್ಕೆ ಅವಕಾಶ ನೀಡುವ ಕೊಲ್ಕೊತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಇಂದು ಬೆಳಿಗ್ಗೆ ಸುಪ್ರೀಂಕೋರ್ಟ್‌ ಮೆಟ್ಟಿಲು ಹತ್ತಿದೆ. ಆರೋಪಿಗಳಲ್ಲಿ ಮೂವರು ಮಮತಾ ಬ್ಯಾನರ್ಜಿಯವರ ಟಿಎಂಸಿಗೆ ಸೇರಿದ್ದು, ಮತ್ತೊಬ್ಬರು ಪಕ್ಷದ ಮಾಜಿ ನಾಯಕರಾಗಿದ್ದಾರೆ.

ಇದನ್ನೂ ಓದಿ: ಸೆಪ್ಟಂಬರ್‌ ತಿಂಗಳವರೆಗೆ ಕೇಂದ್ರ ಸರ್ಕಾರ ಮಾಡಿದ ಒಟ್ಟು ಸಾಲ 107.04 ಲಕ್ಷ ಕೋಟಿ!

ಇಂದು ಹೈಕೋರ್ಟ್ ನಡೆಸಲಿರುವ ಈ ರಾಜಕಾರಣಿಗಳ ಜಾಮೀನು ಅರ್ಜಿ ವಿಚಾರಣೆ ರದ್ದು ಮಾಡಬೇಕೆಂದು ಸಿಬಿಐ ಕೇಳಿದೆ. ಶುಕ್ರವಾರ ಹೈಕೋರ್ಟ್ ಈ ನಾಲ್ವರಿಗೂ ಮಧ್ಯಂತರ ಜಾಮೀನು ನಿರಾಕರಿಸಿತ್ತು.

ಎರಡು ಸದಸ್ಯರ ಪೀಠದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಗೃಹಬಂಧನಕ್ಕೆ ಆದೇಶಿಸಿದ್ದರು, ಆದರೆ ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಮಧ್ಯಂತರ ಜಾಮೀನಿಗೆ ಆದೇಶಿಸಿದ್ದರು.

ಆದೇಶವನ್ನು ತಡೆಯಲು ಸಿಬಿಐ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಇದು ನಾಲ್ವರಿಗೆ ಜೈಲಿನಿಂದ ಹೊರಹೋಗಲು ಅವಕಾಶ ಮಾಡಿಕೊಟ್ಟಿತು. ಅವರು ಪ್ರಭಾವಿ ನಾಯಕರು ಮತ್ತು ಸಾಕ್ಷಿಗಳಿಗೆ ಬೆದರಿಕೆ ಹಾಕಬಹುದು ಎಂದು ಸಿಬಿಐ ವಾದಿಸಿತ್ತು.

ಎಲ್ಲಾ ಪ್ರಕ್ರಿಯೆಗಳು ಬೇರೆ ರಾಜ್ಯಕ್ಕೆ ವರ್ಗಾವಣೆ ಆಗಬೇಕೆಂದು ಸಿಬಿಐ ವಾದಿಸಿತ್ತು.

ಇದನ್ನೂ ಓದಿ: ಇಸ್ರೇಲ್ ವಿರುದ್ಧ ಹಮಾಸ್ ದಾಳಿಗೆ ವಿರೋಧ: ಪ್ಯಾಲೆಸ್ಟೈನ್ ಬೆಂಬಲಿಸಿದ ಭಾರತ ಸರ್ಕಾರ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial