Homeಮುಖಪುಟಅಲ್ಪಸಂಖ್ಯಾತರ ಹಕ್ಕು ಕಸಿಯುವ ಕರ್ನಾಟಕ ಸೊಸೈಟಿ ತಿದ್ದುಪಡಿ ವಿಧೇಯಕ ಸೋಲಿಸಿ: PFI

ಅಲ್ಪಸಂಖ್ಯಾತರ ಹಕ್ಕು ಕಸಿಯುವ ಕರ್ನಾಟಕ ಸೊಸೈಟಿ ತಿದ್ದುಪಡಿ ವಿಧೇಯಕ ಸೋಲಿಸಿ: PFI

- Advertisement -
- Advertisement -

ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವ ಕರ್ನಾಟಕ ಸೊಸೈಟಿಗಳ ತಿದ್ದುಪಡಿ ವಿಧೇಯಕವು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುವ ಹುನ್ನಾರವಾಗಿದೆ. ಹಾಗಾಗಿ ತಿದ್ದುಪಡಿ ವಿಧೇಯಕವನ್ನು ಮೇಲ್ಮನೆಯಲ್ಲಿ ವಿಫಲಗೊಳಿಸಲು ಜಾತ್ಯತೀತ ಪಕ್ಷಗಳಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಕರೆ ನೀಡಿದ್ದಾರೆ.

ವಿಧೇಯಕ ಕಾನೂನಾಗಿ ಜಾರಿಯಾದ ನಂತರ, ಕೆಲವೊಂದು ಸಬೂಬುಗಳನ್ನು ಮುಂದಿಟ್ಟುಕೊಂಡು ಸರಕಾರವು ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಮೂಲಕ ಅಲ್ಪಸಂಖ್ಯಾತರ ಸಂಸ್ಥೆಗಳ ನಿಯಂತ್ರಣವನ್ನು ತನ್ನ ಸುಪರ್ದಿಗೆ ಪಡೆಯುವ ಹುನ್ನಾರ ನಡೆಸುತ್ತಿದೆ. ಸರಕಾರದಿಂದ ರಚಿಸಲಾದ ಸಂಸ್ಥೆಗಳಿಗೆ ಸರಕಾರವು ಆಡಳಿತಾಧಿಕಾರಿಯನ್ನು ನೇಮಿಸಲು ಯಾವುದೇ ತೊಡಕಿಲ್ಲ. ಆದರೆ ಸಹಕಾರಿ ಸಂಸ್ಥೆಗಳು ಸರಕಾರೇತರ ಸಂಸ್ಥೆಗಳಾಗಿದ್ದು, ಇವು ಸರಕಾರದಿಂದ ಯಾವುದೇ ಅನುದಾನ ಪಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರಸಕ್ತ ತಿದ್ದುಪಡಿಯ ಮೂಲಕ ಅಲ್ಪಸಂಖ್ಯಾತರ ಸೊಸೈಟಿಗಳಲ್ಲಿ ಸರಕಾರ ಮಾಡುತ್ತಿರುವ ಹಸ್ತಕ್ಷೇಪವು ಸಂವಿಧಾನ ವಿರೋಧಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, “ಅಲ್ಪ ಸಂಖ್ಯಾತ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಅವಕಾಶ ಸಂವಿಧಾನಬಾಹಿರ ಎಂದು ಕರ್ನಾಟಕ ಹೈಕೋರ್ಟ್ 1987ರಲ್ಲೇ ಆದೇಶ ನೀಡಿದೆ. ಆದರೂ ಬಿಜೆಪಿ ಸರಕಾರವು ಇದಕ್ಕೆ ಕಾನೂನಿನ ಮಾನ್ಯತೆ ನೀಡಲು ತಿದ್ದುಪಡಿಯನ್ನು ತಂದಿದೆ” ಎಂದು ಕಿಡಿಕಾರಿದ್ದಾರೆ.

ಅಲ್ಪಸಂಖ್ಯಾತರ ವಿರೋಧಿ ನಿಲುವು ಹೊಂದಿರುವ ಬಿಜೆಪಿ ಸರಕಾರವು ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಯೋಜನೆ, ಅನುದಾನಗಳನ್ನು ನಿರಂತರವಾಗಿ ಕಡಿತಗೊಳಿಸುತ್ತಾ ತಾರತಮ್ಯ ಎಸಗುತ್ತಿರುವುದು ಖಂಡನಾರ್ಹವಾಗಿದೆ. ಈ ಮಧ್ಯೆ ಸಿಡಿ ಪ್ರಕರಣದ ಗದ್ದಲದ ನಡುವೆ ಯಾವುದೇ ಚರ್ಚೆಗಳಿಲ್ಲದೆ ವಿಧೇಯಕಕ್ಕೆ ಅನುಮೋದನೆ ದೊರಕಿರುವುದು ವಿರೋಧ ಪಕ್ಷಗಳ ವೈಫಲ್ಯವನ್ನು ಬೊಟ್ಟು ಮಾಡುತ್ತದೆ. ಹಲವು ಸಮಯಗಳಿಂದ ಈ ವಿಚಾರ ಚರ್ಚೆಯಲ್ಲಿತ್ತಾದರೂ ಜಾತ್ಯತೀತ ಪಕ್ಷಗಳು ಇದಕ್ಕೆ ಮಹತ್ವ ನೀಡದಿರುವುದು ಅಲ್ಪಸಂಖ್ಯಾತರ ಪರವಾದ ಅವರ ನಿರ್ಲಕ್ಷ್ಯ ಭಾವವನ್ನು ಸ್ಟಷ್ಟಪಡಿಸುತ್ತದೆ ಎಂದು ಯಾಸಿರ್ ಹಸನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾತ್ಯತೀತ ಪಕ್ಷಗಳ ಪ್ರಾಬಲ್ಯವಿದ್ದರೂ, ಬಿಜೆಪಿ ಸರಕಾರವು ಹಿಂಬಾಗಿಲ ಮೂಲಕ ಮೇಲ್ಮನೆಯಲ್ಲಿ ರೈತವಿರೋಧಿ, ಜನವಿರೋಧಿ ಗೋ ಹತ್ಯೆ ಮಸೂದೆ ಅಂಗೀಕರಿಸಲು ಇತ್ತೀಚಿಗೆ ಸಫಲವಾಗಿತ್ತು. ಆದರೆ ಈ ಬಾರಿ ಅಲ್ಪಸಂಖ್ಯಾತರ ಪರವಾದ ತಮ್ಮ ಬದ್ಧತೆಯನ್ನು ಖಾತರಿಪಡಿಸಲು ವಿಪಕ್ಷಗಳು ಒಗ್ಗಟ್ಟಾಗಿ ಈ ವಿಧೇಯಕವನ್ನು ವಿಫಲಗೊಳಿಸಬೇಕೆಂದು ಅವರು ಕರೆ ನೀಡಿದ್ದಾರೆ.


ಇದನ್ನೂ ಓದಿ: ಪಿಎಂ ವಸತಿ ಯೋಜನೆ: 2.6 ಲಕ್ಷ ಫೇಕ್ ಅಕೌಂಟ್, 14 ಸಾವಿರ ಕೋಟಿ ರೂ ಗುಳುಂ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...