ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿಯ ಅದಾನಿ ಗ್ರೂಪ್ ಮತ್ತು ತೆಲಂಗಾಣದ ಕಾಂಗ್ರೆಸ್ ಸರ್ಕಾರ ನಡುವೆ ನಡೆದ ಒಪ್ಪಂದವನ್ನು ವಿರೋಧಿಸುವ ಘೋಷವಾಕ್ಯವಿರುವ ಟಿ-ಶರ್ಟ್ ಧರಿಸಿ ರಾಜ್ಯದ ವಿಧಾನಸಭೆಯ ಅಧಿವೇಶನದ ಮೊದಲ ದಿನ ಹಾಜರಾಗಲು ಯತ್ನಿಸಿದ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಮತ್ತು ಮಾಜಿ ಸಚಿವ ಟಿ.ಹರೀಶ್ ರಾವ್ ಸೇರಿದಂತೆ ಪಕ್ಷದ ಹಲವು ಶಾಸಕರು ಮತ್ತು ಎಂಎಲ್‌ಸಿಗಳನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿಯಲ್ಲಿ ವಿರೋಧ
ಗನ್ ಪಾರ್ಕ್ ಬಳಿಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ಬಿಆರ್‌ಎಸ್ ಶಾಸಕರು ಮತ್ತು ಎಂಎಲ್‌ಸಿಗಳು ನಂತರ ವಿಧಾನಸಭೆಯತ್ತ ತೆರಳುತ್ತಿದ್ದಾಗ ಪೊಲೀಸರು ತಡೆದಿದ್ದಾರೆ. ಪೊಲೀಸರು ಅವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. ಬಿಆರ್‌ಎಸ್ ಶಾಸಕರು ಧರಿಸಿದ್ದ ಟೀ ಶರ್ಟ್‌ಗಳಲ್ಲಿ ಅದಾನಿ-ರೇವಂತ್ ಭಾಯ್ ಭಾಯಿ ಎಂಬ ಘೋಷಣೆಯನ್ನು ಬರೆಯಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಗನ್ ಪಾರ್ಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್, “ದೇಶದ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಅದಾನಿಯನ್ನು ಟೀಕಿಸುತ್ತಿದೆ. ಆದರೆ, ತೆಲಂಗಾಣದಲ್ಲಿ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಮತ್ತು ಅದಾನಿ ಒಂದಾಗಿದ್ದಾರೆ. ರೇವಂತ್ ರೆಡ್ಡಿ ಮತ್ತು ಅದಾನಿ ನಡುವಿನ ಸ್ನೇಹ ಸಂಬಂಧವನ್ನು ಈಗ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಬಹಿರಂಗಪಡಿಸುತ್ತೇವೆ” ಎಂದು ಹೇಳಿದ್ದಾರೆ. ದೆಹಲಿಯಲ್ಲಿ ವಿರೋಧ
ನಂತರ ತೆಲಂಗಾಣ ಭವನದಲ್ಲಿ ಜಮಾಯಿಸಿದ ಬಿಆರ್‌ಎಸ್ ಶಾಸಕರು ಮತ್ತು ಎಂಎಲ್‌ಸಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಜಗದೀಶ್ ರೆಡ್ಡಿ, ಇದೇ ಮೊದಲ ಬಾರಿಗೆ ಶಾಸಕರನ್ನು ವಿಧಾನಸಭೆಯ ಸದನಕ್ಕೆ ಬಿಡಲಿಲ್ಲ ಎಂದು ಆರೋಪಿಸಿದ್ದಾರೆ. “ಶಾಸಕರು ಯಾವ ರೀತಿಯ ಡ್ರೆಸ್ ಧರಿಸಬೇಕು ಎಂಬುದನ್ನು ರಾಜ್ಯ ವಿಧಾನಸಭಾಧ್ಯಕ್ಷರು ತಿಳಿಸಬೇಕೆ. ಅದಾನಿ-ರೇವಂತ್ ವಿರೋಧಿಸಿ ಟೀಶರ್ಟ್ ಧರಿಸುವುದರಲ್ಲಿ ತಪ್ಪೇನು” ಎಂದು ಅವರು ಪ್ರಶ್ನಿಸಿದ್ದಾರೆ.
ಎಐಸಿಸಿ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅದಾನಿ ವಿರುದ್ಧ ಮಾತನಾಡುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ರಾಜ್ಯದಲ್ಲಿ ಅದಾನಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಜಗದೀಶ್ ರೆಡ್ಡಿ ಹೇಳಿದ್ದಾರೆ. ಇದೇ ವಿಷಯವನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಒಳಗೆ ಬಿಡಲಾಯಿತು. ಆದರೆ ಬಿಆರ್‌ಎಸ್ ನಾಯಕರು ಅದಾನಿ ಟಿ-ಶರ್ಟ್ ಧರಿಸಿ ಕಾಣಿಸಿಕೊಂಡಾಗ ಸ್ಪೀಕರ್ ಅವರನ್ನು ವಿಧಾನಸಭೆಯೊಳಗೆ ಬಿಡಲಿಲ್ಲ ಎಂದು ಅವರು ನೆನಪಿಸಿಕೊಂಡಿದ್ದಾರೆ.
ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಮಧುಸೂದನ ಚಾರಿ ಮಾತನಾಡಿ, ಶಾಸಕರಿಗೆ ಅಧಿವೇಶನಕ್ಕೆ ಹಾಜರಾಗಲು ಅವಕಾಶ ನೀಡದಿರುವುದು ಅವರ ಹಕ್ಕುಗಳನ್ನು ಹತ್ತಿಕ್ಕುವ ಕೆಲಸವಲ್ಲದೆ ಮತ್ತೇನೂ ಅಲ್ಲ. ಪರಿಷತ್ ಸಭಾಪತಿ ಹಾಗೂ ವಿಧಾನಸಭಾಧ್ಯಕ್ಷರು ಯಾವುದೇ ಒತ್ತಡಕ್ಕೆ ಮಣಿಯದೆ ಮುಕ್ತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿರಿಯಾದಲ್ಲಿರುವ ಎಲ್ಲಾ ಭಾರತೀಯರು ಸುರಕ್ಷಿತ: ಅಧಿಕಾರಿಗಳ ಸ್ಪಷ್ಟನೆ


