Homeಮುಖಪುಟವಿರೋಧ ಪಕ್ಷಗಳು ಸಹ ಇದೇ ಕೃಷಿ ಕಾನೂನು ತರಬಯಸಿದ್ದವು, ಈಗ ವಿರೋಧಿಸುವುದು ಅವರ ಇಬ್ಬಂದಿತನ -...

ವಿರೋಧ ಪಕ್ಷಗಳು ಸಹ ಇದೇ ಕೃಷಿ ಕಾನೂನು ತರಬಯಸಿದ್ದವು, ಈಗ ವಿರೋಧಿಸುವುದು ಅವರ ಇಬ್ಬಂದಿತನ – ಬಿಜೆಪಿ

ಕೃಷಿ ಕಾನೂನುಗಳು, ಎಪಿಎಂಸಿ ಕಾಯ್ದೆ ಖಾಸಗೀಕರಣದ ಪರವಾಗಿವೆ ಎಂಬುದನ್ನು ಒಪ್ಪಿಕೊಂಡ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್?

- Advertisement -

ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರು ಕರೆ ನೀಡಿರುವ ನಾಳೆಗೆ ಭಾರತ್ ಬಂದ್‌ಗೆ ಎಲ್ಲಾ ವಿರೋಧ ಪಕ್ಷಗಳು ಬೆಂಬಲ ನೀಡಿವೆ. ಈ ನಿಲುವನ್ನು ಖಂಡಿಸಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ “ಈಗ ಎನ್‌ಡಿಎ ಸರ್ಕಾರ ಯಾವ ಕಾನೂನುಗಳನ್ನು ಅಂಗೀಕರಿಸಿದೆಯೇ ಅವೆಲ್ಲವನ್ನು ಸಹ ಯುಪಿಎ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಲು ಬಯಸಿದ್ದರು. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಖಾಸಗೀಕರಣದ ಪರವಾಗಿತ್ತು. ಈಗ ಅವರೆಲ್ಲಾ ಈ ಕಾನೂನುಗಳನ್ನು ವಿರೋಧಿಸುವುದು ಅವರ ಇಬ್ಬಂದಿತನ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಪಿಎಂಸಿ ಕಾಯ್ದೆಯು 2019ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿತ್ತು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೇ ಹಲವು ರಾಜ್ಯಗಳು ಗುತ್ತಿಗೆ ಕೃಷಿ ಪದ್ದತಿಗೆ ಅನುಮೋದನೆ ನೀಡಿವೆ. ಆದರೆ ಈಗ ಮಾತ್ರ ಅವರು ನಮ್ಮ ಕಾನೂನುಗಳನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳುವ ಮೂಲಕ ತಾವು ತಂದಿರುವ ಕಾಯ್ದೆಗಳು ಖಾಸಗೀಕರಣದ ಪರವಾಗಿವೆ ಎಂದು ಕೇಂದ್ರ ಸಚಿವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಎಪಿಎಂಸಿ ಕಾಯ್ದೆಯನ್ನು ಮರುತರುವುದಾಗಿ ಮತ್ತು ಯಾವುದೇ ಅಡೆತಡೆಯಿಲ್ಲದ ಅಂತರ್‌ರಾಜ್ಯ ವ್ಯಾಪಾರಕ್ಕೆ ಅವಕಾಶ ನೀಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಬರೆದಿದೆ ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಎಪಿಎಂಸಿ ಕಾಯ್ದೆ ಆರು ತಿಂಗಳಲ್ಲಿ ಕೊನೆಗೊಳ್ಳಲಿದೆ… ಕೇಂದ್ರ ಸರ್ಕಾರವು ಯೋಜನಾ ಆಯೋಗದ ಶಿಫಾರಸ್ಸಿನ ಮೇರೆ ಅಂತರ ರಾಜ್ಯ ಕೃಷಿ ವ್ಯಾಪಾರ ಕಾಯ್ದೆಯನ್ನು ಜಾರಿಗೆ ತರಬಹುದು ಎಂದು ಯುಪಿಎ ಸರ್ಕಾರದ ಅವಧಿಯಲ್ಲಿ ಶರದ್ ಪವಾರ್ ಹೇಳಿದ್ದರು. ಈ ಸುಧಾರಣೆಗಳನ್ನು ಒಪ್ಪಿಕೊಳ್ಳದಿದ್ದರೆ ಅನುದಾನ ನೀಡಲಾಗುವುದಿಲ್ಲ ಎಂದು ಅವರು ಹೇಳುತ್ತಿದ್ದಾಗ ಎಸ್‌ಪಿ, ಟಿಡಿಪಿ, ಎಡಪಂಥೀಯರೆಲ್ಲರೂ ಮನಮೋಹನ್ ಸರ್ಕಾರವನ್ನು ಬೆಂಬಲಿಸುತ್ತಿದ್ದರು. ಇದು ಇಮ್ಮ ದ್ವಿಮುಖ ನೀತಿ. ನೀವು ಯಾವ ಮಿತಿಗೂ ಹೋಗಲು ಸಿದ್ದರಿರುವರು ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರದಿಂದ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ತೆಲಂಗಾಣ ರಾಷ್ಟ್ರ ಸಮಿತಿ, ತೃಣಮೂಲ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ಶಿರೋಮಣಿ ಅಕಾಲಿ ದಳ, ಎನ್.ಸಿ.ಪಿ, ಆರ್.ಜೆ.ಡಿ, ಡಿಎಂಕೆ, ಸಮಾಜವಾದಿ ಪಕ್ಷ, ಬಿಎಸ್‌ಪಿ ಸೇರಿ ಹಲವು ವಿರೋಧ ಪಕ್ಷಗಳು ರೈತರ ಭಾರತ್ ಬಂದ್‌ಗೆ ಬೇಷರತ್ ಬೆಂಬಲ ವ್ಯಕ್ತಪಡಿಸಿವೆ. ಆದಾಗಿನಿಂದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಮೇಲೆ ಮುಗಿಬಿದ್ದಿದೆ.

2022ರ ವೇಳೆಗೆ ರೈತರ ಆದಾಯ ಡಬಲ್ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಆದರೆ ಈಗ ಅದರ ಬದಲು ಮೂರು ಕಾಯ್ದೆಗಳನ್ನು ಜಾರಿಗೊಳಿಸಿದ್ದಾರೆ. ಆರಂಭದಿಂದಲು ಈ ಕಾಯ್ದೆ ರೈತರ ಒಳಿತಿಗಾಗಿ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಮೋದಿ ಸರ್ಕಾರ ಯಾವುದೇ ರೈತರೊಂದಿಗೆ ಚರ್ಚಿಸದೇ ಸುಗ್ರೀವಾಜ್ಞೆಗಳ ಮೂಲಕ ಈ ಕಾನೂನುಗಳನ್ನು ತಂದಿದ್ದಲ್ಲದೇ ವಿರೋಧ ಪಕ್ಷಗಳ ಮತ್ತು ರೈತರ ಭಾರೀ ವಿರೋಧದ ನಡುವೆಯೂ ಚರ್ಚೆ ನಡೆಸದೆ ಅಂಗೀಕರಿಸಿದೆ.

ಇನ್ನು ಆರಂಭದಲ್ಲಿ ರೈತರು ಈ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಆರಂಭಿಸಿದಾಗ ಅವರನ್ನು ಖಾಲಿಸ್ತಾನ್‌ಗಳು, ಭಯೋತ್ಪಾದಕರು ಎಂದು ಬಿಂಬಿಸಿದ್ದಲ್ಲದೇ ಅವರ ಮೇಲೆ ಲಾಠೀ ಪ್ರಹಾರ, ಟಿಯರ್ ಗ್ಯಾಸ್, ಜಲಫಿರಂಗಿಗಳನ್ನು ಪ್ರಯೋಗ ಮಾಡಿ ಹೋರಾಟ ಹತ್ತಿಕ್ಕಲು ಯತ್ನಿಸಿತು. ಆದರೆ ರೈತರು ಎದೆಗುಂದದೆ ದಿಟ್ಟ ಹೋರಾಟ ನಡೆಸಿದ ನಂತರ ಅನಿವಾರ್ಯವಾಗಿ ಸರ್ಕಾರ ಅವರೊಂದಿಗೆ ಮಾತುಕತೆ ನಡೆಸುತ್ತಿದೆ. ಇನ್ನೊಂದು ಕಡೆ ವಿರೋಧ ಪಕ್ಷಗಳು ರೈತರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎನ್ನುತ್ತಿದ್ದ ಕೇಂದ್ರ ಈಗ ರೈತರು ಬಗ್ಗದೇ ಇರುವುದರಿಂದ ಮತ್ತ ವಿರೋಧ ಪಕ್ಷಗಳ ಮೇಲೆ ದಾಳಿ ನಡೆಸುತ್ತಿದೆ. ಅವರೂ ಖಾಸಗೀಕರಣದ ಪರವಾಗಿದ್ದರು ಎನ್ನುವ ನೆಪ ನೀಡುವ ಮೂಲಕ ಈ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತಿದೆ. ಇದಕ್ಕೆ ರೈತರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.


ಇದನ್ನೂ ಓದಿ: ಕಾರ್ಟೂನಿಸ್ಟ್‌ಗಳ ಕಣ್ಣಲ್ಲಿ ರೈತ ಹೋರಾಟ: ವೈರಲ್ ಆದ ಹೋರಾಟದ ಚಿತ್ರಗಳು

 

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಪರೇಡ್‌ ಮೈದಾನ ಸಜ್ಜು, ಸಾರ್ವಜನಿಕರಿಗಿಲ್ಲ ಪ್ರವೇಶ

0
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬೆಂಗಳೂರಿನ  ಮಹಾತ್ಮ ಗಾಂಧಿ ರಸ್ತೆಯ ಮಾಣಿಕ್ ಷಾ ಪರೇಡ್‌ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಸಾರ್ವಜನಿಕರಿಗೆ ಅವಕಾಶ ನೀಡಿಲ್ಲ. ಆಹ್ವಾನ ಪತ್ರಗಳು ಮತ್ತು ಪಾಸ್ ಹೊಂದಿರುವವರಿಗೆ ಮಾತ್ರ ಪರೇಡ್‌ನಲ್ಲಿ...
Wordpress Social Share Plugin powered by Ultimatelysocial
Shares