Homeಚಳವಳಿದೆಹಲಿ ರೈತರ ಹೋರಾಟ ಬೆಂಬಲಿಸಿ ಬೆಂಗಳೂರಿನಲ್ಲಿ ಧರಣಿ ಆರಂಭ: ಭಾರತ್ ಬಂದ್‌ಗೆ ಸಿದ್ದತೆ

ದೆಹಲಿ ರೈತರ ಹೋರಾಟ ಬೆಂಬಲಿಸಿ ಬೆಂಗಳೂರಿನಲ್ಲಿ ಧರಣಿ ಆರಂಭ: ಭಾರತ್ ಬಂದ್‌ಗೆ ಸಿದ್ದತೆ

ಈ ಪ್ರತಿಭಟನೆಯಲ್ಲಿ ಮಾತನಾಡಿದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್. ನಾಗಮೊಹನ್ ದಾಸ್, "ನಾನೂ ಕೂಡಾ ರೈತನ ಮಗನೆ. ರೈತರಿಗೆ ಆಗಿರುವ ಅನ್ಯಾಯವನ್ನು ನೋಡಿಕೊಂಡು ಇರಲು ನನ್ನಿಂದ ಆಗಲಿಲ್ಲ. ಅದಕ್ಕೆ ನಾನಿಲ್ಲಿದ್ದೀನಿ" ಎಂದು ಹೇಳಿದರು.

- Advertisement -
- Advertisement -

ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಕರ್ನಾಟಕದ ಐಕ್ಯ ಹೋರಾಟ ಸಮಿತಿಯ ವತಿಯಿಂದ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ ಬಾರಿಯ ರಾಜ್ಯದ ಅಧಿವೇಶನದ ಸಮಯದಲ್ಲಿ ರೈತ, ದಲಿತ ಮತ್ತು ಕಾರ್ಮಿಕ ಸಂಘಟನೆಗಳು ಒಟ್ಟುಗೂಡಿ ರಚಿಸಿಕೊಂಡಿದ್ದ ಈ ಐಕ್ಯ ಹೋರಾಟ ಸಮಿತಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ದಲಿತ, ಕಾರ್ಮಿಕ ಮತ್ತು ರೈತವಿರೋಧಿ ಕ್ರಮಗಳನ್ನು ವಿರೋಧಿಸುವ ಸಲುವಾಗಿ ಹುಟ್ಟಿಕೊಂಡಿತ್ತು.

ಇದನ್ನೂ ಓದಿ: ಕೃಷಿ ಕಾಯ್ದೆಗಳ ತಿದ್ದುಪಡಿಗೆ ಕೇಂದ್ರದ ಒಪ್ಪಿಗೆ: ಹಿಂತೆಗೆದುಕೊಳ್ಳಬೇಕೆಂದು ಪಟ್ಟು ಹಿಡಿದ ರೈತರು!

ಕಳೆದ 12 ದಿನಗಳಿಂದ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸರ್ಕಾರವು ನಡೆಸುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ರಾಜ್ಯವ್ಯಾಪಿ ಜನಾಂದೋಲನ ಹಾಗೂ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ನಾಳೆ ದೇಶದಾದ್ಯಂತ ಹಮ್ಮಿಕೊಂಡಿರುವ ‘ಭಾರತ್ ಬಂದ್’ಗೆ ಬೆಂಬಲ ನೀಡಲು ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ.

ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ವಿರುದ್ಧ ನಾಳೆ ನಡೆಯುವ ಬಂದ್‌ನ ರೂಪುರೇಷೆಗಳ ಕುರಿತು, ರೈತ-ದಲಿತ-ಕಾರ್ಮಿಕ-ಜನಪರ ಸಂಘಟನೆಗಳ ‘ಐಕ್ಯ ಹೋರಾಟ ವೇದಿಕೆ’ಯ ಪತ್ರಿಕಾಗೋಷ್ಠಿ…

ಇದನ್ನೂ ಓದಿ: ರೈತರು ಮೋದಿ ಸರ್ಕಾರದ ಅಹಂಕಾರವನ್ನು ಮಟ್ಟಹಾಕುತ್ತಾರೆ: ಪ್ರತಿಭಟನಾ ನಿರತ ರೈತರು

ಇದನ್ನೂ ಓದಿ: ‘ನಮ್ಮ‌ ಊಟ ನಾವೇ ತಂದಿದ್ದೇವೆ’: ಸರ್ಕಾರದ ಜೊತೆಗಿನ ಸಭೆಯಲ್ಲಿ ಊಟ ಮಾಡಲು ನಿರಾಕರಿಸಿದ ರೈತರು!

ಈ ಪ್ರತಿಭಟನೆಯಲ್ಲಿ ಮಾತನಾಡಿದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್. ನಾಗಮೊಹನ್ ದಾಸ್, “ನಾನೂ ಕೂಡಾ ರೈತನ ಮಗನೆ. ರೈತರಿಗೆ ಆಗಿರುವ ಅನ್ಯಾಯವನ್ನು ನೋಡಿಕೊಂಡು ಸುಮ್ಮನಿರಲು ನನ್ನಿಂದ ಆಗಲಿಲ್ಲ. ಅದಕ್ಕೆ ನಾನಿಲ್ಲಿದ್ದೀನಿ. ಕಳೆದ ಎಪ್ಪತ್ತು ವರ್ಷಗಳಿಂದ ನಾವು ಕಟ್ಟಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಗಳು ತಮ್ಮ ಸ್ವಾತಂತ್ರ್ಯ ಮತ್ತು ಮಾನ್ಯತೆಯನ್ನು ಕಳೆದುಕೊಳ್ಳುತ್ತಿವೆ. ಅವುಗಳನ್ನು ಅಪ್ರಸ್ತುತಗೊಳಿಸಲಾಗುತ್ತಿದೆ. ಅಂತಾರಾಷ್ಟ್ರೀಯ ವರದಿಗಳು ಭಾರತ ಅಂತ್ಯಂತ ಭ್ರಷ್ಟ ದೇಶ ಎಂದು ಹೇಳುತ್ತಿದೆ. ನ್ಯಾಯಾಂಗ ಜನರ ನಂಬಿಕೆಗಳನ್ನು ಕಳೆದುಕೊಳ್ಳುತ್ತಿದೆ. ರಿಸರ್ವ್ ಬ್ಯಾಂಕ್, ಚುನಾವಣಾ ಆಯೋಗ, ಸಿಬಿಐ ಸೇರಿದಂತೆ ಎಲ್ಲಾ ಸಂಸ್ಥೆಗಳು ಸ್ವಾತಂತ್ರ್ಯ ಕಳೆದುಕೊಂಡು ಸರ್ಕಾರದ ಕೈಗೊಂಬೆಯಾಗಿದೆ. ಅಪ್ರಜಾಪ್ರಭುತ್ವ ಸುಧಾರಣೆಗಳು ಬರುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ, ಕೃಷಿ ಬಿಕ್ಕಟ್ಟನ್ನು ಸರಿ ಪಡಿಸಿ ರೈತರ ಹಿತವನ್ನು ಕಾಪಾಡಿ ಎಂದರೆ ಅದರ ವಿರುದ್ಧ ಕಾನೂನುಗಳನ್ನು ತರುತ್ತಾ ರೈತರನ್ನು ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಬದುಕಿಗೆ ಬೇಕಾದ ವಿಷಯಗಳನ್ನು ಬಿಟ್ಟು ಲವ್ ಜಿಹಾದ್, ಗೋಹತ್ಯೆ ವಿಷಯಗಳಂತಹ ಭಾವನಾತ್ಮಕ ವಿಷಯಗಳ ಬಗ್ಗೆ ಕಾನೂನು ತರುತ್ತಾರೆ. ಆದರೆ ಹದಿನೈದು ವರ್ಷದಿಂದ ಸ್ವಾಮಿನಾಥನ್ ಆಯೋಗದ ವರದಿ ಚರ್ಚೆಯಿಲ್ಲದೆ ಹಾಗೆ ಬಿದ್ದಿದದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಝೀ ನ್ಯೂಸ್, ರಿಪಬ್ಲಿಕ್ ಟಿವಿ ಮತ್ತು ಆಜ್‌‌ತಕ್‌ ಚಾನೆಲ್‌‌ಗಳನ್ನು ’ಗೋದಿ ಮೀಡಿಯಾ’ ಎಂದ ರೈತರು!

ರೈತ ಹೋರಾಟಗಾರರಾದ ಪ್ರಕಾಶ್ ಕಮ್ಮರಡಿ ಮಾತನಾಡಿ, “ಕೊರೆಯುವ ಚಳಿಯಲ್ಲಿ ದೇಶದ ಅನ್ನದಾತರು ಬೀದಿಗಿಳಿದಿದ್ದಾರೆ. ವಿಶ್ವದಲ್ಲೇ ಅತ್ಯಂತ ಪ್ರಭಲ ಪ್ರತಿಭಟನೆ ನಡೆಯುತ್ತಿದೆ. ಆದರೆ ಆಳುವ ಸರ್ಕಾರಕ್ಕೆ ತಮ್ಮಲ್ಲಿರುವ ಸಂಖ್ಯಾಬಲದ ಭ್ರಮೆಯಿದೆ. ನೇಗಿಲು ಹಿಡಿದ ರೈತರನ್ನು ಭಯೋತ್ಪಾದಕ ಎಂದು ಬಿಂಬಿಸುತ್ತಿದ್ದಾರೆ. ಸಾಂಕ್ರಾಮಿಕದ ಸಮಯದಲ್ಲಿ ದೇಶದ ರೈತರು ಕೈಚೆಲ್ಲಿ ಕುಳಿತಿದ್ದರೆ, ಬೆಲೆ ಏರಿಕೆಯಾಗಿ ಮೋದಿಯ ಆಟವು ನಡೆಯುತ್ತಾ ಇರಲಿಲ್ಲ. ದೇಶದ ಅರ್ಥವ್ಯವಸ್ಥೆಯನ್ನು ರೈತರು ಎತ್ತಿ ಹಿಡಿದಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಕೃತಘ್ನ ಸರ್ಕಾರ ರೈತರ ಆಶೋತ್ತರಗಳನ್ನು ಈಡೇರಿಸಬೇಕಿತ್ತು. ಆದರೆ ಸರ್ಕಾರ ಆಶ್ವಾಸನೆ ಕೂಡಾ ಕೊಡುತ್ತಿಲ್ಲ. ಜೊತೆಗೆ ಯಾವುದೇ ಚರ್ಚೆಯಿಲ್ಲದೆ ರೈತ ವಿರೋಧಿ ಕಾನೂನನ್ನು ಜಾರಿಗೆ ತರುತ್ತಿದ್ದಾರೆ. ಇದು ದ್ರೋಹಿ ಸರ್ಕಾರ” ಎಂದು ಕಿಡಿಕಾರಿದರು.

ಇದನ್ನೂ ಓದಿ: ದೆಹಲಿ ಚಲೋ: ರೈತರನ್ನು ತಡೆದ ಪೊಲೀಸರು; ಬ್ಯಾರಿಕೇಡ್‌ಗಳನ್ನು ನದಿಗೆಸೆದ ರೈತರು!

ಕೇಂದ್ರದ ಬಿಜೆಪಿ ಸರ್ಕಾರವು ಮೂರು ಪ್ರಮುಖ ಕೃಷಿ ಮಸೂದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಿ ಕಾಯ್ದೆ ಜಾರಿಗೊಳಿಸಲು ಮುಂದಾಗಿತ್ತು. ಇದನ್ನು ವಿರೋಧಿಸಿ ದೇಶದಾದ್ಯಂತ ಲಕ್ಷಾಂತರ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಇದೀಗ ಲಕ್ಷಾಂತರ ಪಂಜಾಬ್ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದು 12 ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಸಾಕಷ್ಟು ಸುತ್ತಿನ ಮಾತುಕತೆಗಳು ನಡೆದರೂ ಅವುಗಳೆಲ್ಲಾ ವಿಫಲವಾಗಿವೆ.

ರೈತರ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ಅಮಾನವೀಯ ಕ್ರಮಗಳನ್ನು ಕೈಗೊಂಡಿತ್ತು. ಇವುಗಳನ್ನೆಲ್ಲಾ ಲೆಕ್ಕಿಸದ ರೈತರು ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ರೈತರು ಮೋದಿಗೆ ಕೃತಜ್ಞತೆ ಹೇಳುತ್ತಿದ್ದಾರೆ ಎಂದು ಹಳೆಯ ಫೋಟೋ ಹಂಚಿಕೊಂಡ ಬಿಜೆಪಿ ನಾಯಕ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...