Homeಚಳವಳಿರೈತರ ಹೋರಾಟ ಬೆಂಬಲಿಸಿ ಪ್ರಶಸ್ತಿ ಹಿಂತಿರುಗಿಸಲು ಪಂಜಾಬ್ ಕ್ರೀಡಾಪಟುಗಳ ರ್‍ಯಾಲಿ: ಪೊಲೀಸರಿಂದ ತಡೆ

ರೈತರ ಹೋರಾಟ ಬೆಂಬಲಿಸಿ ಪ್ರಶಸ್ತಿ ಹಿಂತಿರುಗಿಸಲು ಪಂಜಾಬ್ ಕ್ರೀಡಾಪಟುಗಳ ರ್‍ಯಾಲಿ: ಪೊಲೀಸರಿಂದ ತಡೆ

'ರೈತರಿಗೆ ಬೆಂಬಲವಾಗಿ ಪದ್ಮಶ್ರೀ ಅನ್ನು ಹಿಂದಿರುಗಿಸಲು ನಾನು ನಿರ್ಧರಿಸಿದ್ದೇನೆ’ ಎಂದು ಪಂಜಾಬಿ ಬರಹಗಾರ ಮತ್ತು ಕವಿ ಸುರ್ಜಿತ್ ಪತಾರ್ ಹೇಳಿದ್ದಾರೆ.

- Advertisement -
- Advertisement -

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾನೂನುಗಳ ವಿರುದ್ದ ರೈತರು ನಡೆಸುತ್ತಿರುವ ಹೋರಾಟಕ್ಕೆ ಪಂಜಾಬ್‌ನ 30ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಇತರರು ತಮ್ಮ ಪ್ರಶಸ್ತಿ ಹಿಂತಿರುಗಿಸಲು ನಿರ್ಧರಿಸಿ ಬೆಂಬಲ ಸೂಚಿಸಿದ್ದಾರೆ.

ಕರಾಳ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕ್ರೀಡಾಪಟುಗಳು ಮತ್ತು ಹಲವು ಪ್ರಶಸ್ತಿ ಪುರಸ್ಕೃತರು ರಾಷ್ಟ್ರಪತಿ ಭವನದತ್ತ ಮೆರವಣಿಗೆ ಹೊರಟಿದ್ದರು. ಆದರೆ, ರಸ್ತೆ ಮಧ್ಯೆಯೇ ಇವರನ್ನು ದೆಹಲಿ ಪೊಲೀಸರು ತಡೆದಿದ್ದಾರೆ.

“ಪಂಜಾಬ್‌ನ 30 ಕ್ರೀಡಾಪಟುಗಳು ಮತ್ತು ಇತರರು ರೈತರ ಪ್ರತಿಭಟನೆಯನ್ನು ಬೆಂಬಲಿಸಿ ತಮ್ಮ ಪ್ರಶಸ್ತಿಯನ್ನು  ಹಿಂತಿರುಗಿಸಲು ಬಯಸುತ್ತಾರೆ” ಎಂದು ಕುಸ್ತಿಪಟು ಕರ್ತಾರ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ’ಈ ಹೋರಾಟ ಕೇವಲ ರೈತರದ್ದಲ್ಲ, ಎಲ್ಲಾ ದೇಶವಾಸಿಗಳದ್ದು’: ಭಾರತ್ ಬಂದ್ ಬೆಂಬಲಿಸಿದ ಆಪ್

ನಿನ್ನೆ ಕೂಡ ಒಲಂಪಿಕ್ ಬಾಕ್ಸಿಂಗ್ ಚಾಂಪಿಯನ್ ಮತ್ತು ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ವಿಜೇಂದರ್‌ ಸಿಂಗ್ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ನೀಡಿದ್ದಾರೆ. ಕರಾಳ ಕೃಷಿ ನೀತಿಯನ್ನು ಹಿಂಪಡೆಯದಿದ್ದರೆ ತನಗೆ ಸಿಕ್ಕಿರುವ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನವನ್ನು ಹಿಂದಿರುಗಿಸುವುದಾಗಿ ಅವರು ಘೋಷಿಸಿದ್ದಾರೆ.

ಇದನ್ನೂ ಓದಿ: ಕೃಷಿ ಕಾನೂನು ಹಿಂಪಡೆಯದಿದ್ದರೆ ಖೇಲ್ ರತ್ನ ಪ್ರಶಸ್ತಿ ವಾಪಾಸ್: ಬಾಕ್ಸರ್‌ ವಿಜೇಂದರ್‌ ಸಿಂಗ್

ಪಂಜಾಬ್, ಹರಿಯಾಣದ ಕ್ರೀಡಾಪಟುಗಳ ಜೊತೆಗೆ ಕವಿಗಳು, ಸಾಹಿತಿಗಳು ಕೃಷಿ ಮಸೂದೆಗಳಿಗೆ ತಮ್ಮ ಪ್ರತಿರೋಧ ತೋರಿ, ರೈತರ ಜೊತೆಗೆ ನಿಲ್ಲುತ್ತಿದ್ದಾರೆ. ಪಂಜಾಬ್‌ ಕವಿ, ಪದ್ಮಶ್ರೀ ಪುರಸ್ಕೃತ ಸುರ್ಜಿತ್ ಪತಾರ್‌ ಅನ್ನದಾತರ ಪ್ರತಿಭಟನೆಗೆ ಕೇಂದ್ರ ಸರ್ಕಾರ ತೋರುತ್ತಿರುವ ವರ್ತನೆಯಿಂದ ನೋವಾಗಿದೆ ಎಂದಿದ್ದಾರೆ.

“ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವಾಗ ಕೇಂದ್ರದ ವರ್ತನೆಯಿಂದ ನನಗೆ ತೀವ್ರ ನೋವಾಗಿದೆ. ಹಲವು ಬಾರಿ ಪ್ರಯತ್ನಗಳನ್ನು ಮಾಡಿದರೂ, ರೈತರ ಬೇಡಿಕೆಗಳನ್ನು ಪೂರೈಸಲು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಯಾವುದೇ ಪ್ರಯತ್ನ ಮಾಡಲಾಗಿಲ್ಲ. ರೈತರಿಗೆ ಬೆಂಬಲವಾಗಿ ಪದ್ಮಶ್ರೀ ಅನ್ನು ಹಿಂದಿರುಗಿಸಲು ನಾನು ನಿರ್ಧರಿಸಿದ್ದೇನೆ’ ಎಂದು ಪಂಜಾಬಿ ಬರಹಗಾರ ಮತ್ತು ಕವಿ ಸುರ್ಜಿತ್ ಪತಾರ್ ಹೇಳಿದ್ದಾರೆ.

ಈ ಹಿಂದೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ತಮ್ಮ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಘೋಷಿಸಿದ್ದರು. ರೈತರ ಪ್ರತಿಭಟನೆಗೆ ಇಡೀ ಪಂಜಾಬ್ ಒಟ್ಟಾಗಿ ನಿಂತಿದೆ. ಪಂಜಾಬ್ ಚಿತ್ರರಂಗ, ನಟ-ನಟಿಯರು, ಕ್ರೀಡಾಪಟುಗಳು, ಜೊತೆಗೆ ಬಾಲಿವುಡ್ ಕಲಾವಿದರು ರೈತರ ಹೋರಾಟಕ್ಕೆ ಸಾಥ್ ನೀಡಿದ್ದಾರೆ.

ಬಾಲಿವುಡ್ ಗಾಯಕ, ನಟ ದಿಲ್ಜಿತ್ ದೋಸಾಂಜ್ ಪ್ರತಿಭಟನಾಕಾರರಿಗೆ ಚಳಿಗಾಲದ ಉಡುಪುಗಳನ್ನು ಕೊಳ್ಳಲು ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ರೈತರ ಪ್ರತಿಭಟನೆ ವಿಚಾರವಾಗಿ ಅವಹೇಳನ ಮಾಡಿದ್ದ ನಟಿ ಕಂಗನಾ ರಣಾವತ್ ವಿರುದ್ಧ ದಿಲ್ಜಿತ್ ಟೀಕೆಗಳು ಟ್ವಿಟರ್‌ ಸಮರಕ್ಕೆ ಕಾರಣವಾಗಿದ್ದವು.


ಇದನ್ನೂ ಓದಿ: ಭಾರತವನ್ನು ತಾರತಮ್ಯಗಳಿಂದ ಮುಕ್ತಗೊಳಿಸುವುದೇ ಅಂಬೇಡ್ಕರ್‌ರಿಗೆ ಗೌರವ ಸಲ್ಲಿಸುವ ಏಕೈಕ ಮಾರ್ಗ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...