Homeಚಳವಳಿಪ್ರಸಿದ್ದ ಇತಿಹಾಸಕಾರ ರಾಮಚಂದ್ರಗುಹಾರನ್ನು ಅರ್ಬನ್‌ ನಕ್ಸಲ್‌ ಎಂದ ಬಿಜೆಪಿ ವಿರುದ್ಧ ವ್ಯಾಪಕ ಟೀಕೆ..

ಪ್ರಸಿದ್ದ ಇತಿಹಾಸಕಾರ ರಾಮಚಂದ್ರಗುಹಾರನ್ನು ಅರ್ಬನ್‌ ನಕ್ಸಲ್‌ ಎಂದ ಬಿಜೆಪಿ ವಿರುದ್ಧ ವ್ಯಾಪಕ ಟೀಕೆ..

- Advertisement -
- Advertisement -

CAA, NRC ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಪ್ರಸಿದ್ದ ಇತಿಹಾಸಕಾರ ರಾಮಚಂದ್ರಗುಹಾರನ್ನು ಭಾರತೀಯ ಜನತಾ ಪಕ್ಷವು “ನಗರ ನಕ್ಸಲ್” ಎಂದು ಉಲ್ಲೇಖಿಸಿದೆ. ಅಲ್ಲದೇ ಅವರು “ಕತ್ತಲ ಜಗತ್ತಿನಲ್ಲಿ ಕಾರ್ಯನಿರ್ವಹಿಸುತ್ತಾರೆ, ಅವರ ಬಗ್ಗೆ ಸಾಮಾನ್ಯ ಜನರಿಗೆ ಸಂಪೂರ್ಣವಾಗಿ ತಿಳಿದಿಲ್ಲ” ಎಂದು ಬಿಜೆಪಿ ಟ್ವೀಟ್‌ ಮಾಡುವ ಮೂಲಕ ಸಾರ್ವಜನಿಕರ ಕೋಪಕ್ಕೆ ತುತ್ತಾಗಿದೆ.

“ಅವರು ತಮ್ಮ ಮಾಸ್ಟರ್‌ಗಳ ಆಜ್ಞೆಯ ಮೇರೆಗೆ ಹಿಂಸಾಚಾರವನ್ನು ಪ್ರಚೋದಿಸಲು ಪ್ರತಿಭಟನೆಗಳನ್ನು ಆಯೋಜಿಸುವ ಮೂಲಕ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುತ್ತಿದ್ದಾರೆ. ಆದರೆ ಈಗ ಅವರು ಬಹಿರಂಗಗೊಂಡಿದ್ದಾರೆ” ಎಂದು ಬಿಜೆಪಿ ಟ್ವೀಟ್ ಮಾಡಿದೆ.

 

ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಸಹ ನಿನ್ನೆ ಗುಹಾ ಬಂಧನದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದರು ಮತ್ತು ಪ್ರತಿಭಟನಾಕಾರರ ವಿರುದ್ಧ ಸಂಯಮದಿಂದ ವರ್ತಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು.

ಬಿಜೆಪಿ ವರ್ತನೆಗೆ ತೀವ್ರ ಆಕ್ರೋಶ
ಗುಹಾರವರನ್ನು “ನಗರ ನಕ್ಸಲ್” ಎಂದು ಕರೆದಿದ್ದಕ್ಕಾಗಿ ನೆಟ್ಟಿಗರು ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದು “ಆಘಾತಕಾರಿ”ಯಾಗಿದ್ದು ಬಿಜೆಪಿಯ “ಅವರ ಅಧಿಕಾರದ ದುರಹಂಕಾರವನ್ನು ತೋರಿಸುತ್ತದೆ” ಎಂದು ಶ್ರೀನಿವಾಸನ್‌ ರಂಗನಾಥ್‌ ಎಂಬುವವರು ಕಿಡಿಕಾರಿದ್ದಾರೆ.

ಝೆಬ ವಾರ್ಸಿ ಎಂಬ ಟ್ವಿಟ್ಟರ್ ಬಳಕೆದಾರರು, “ಈ ಬಿಜೆಪಿಯ ಟ್ವಿಟ್ಟರ್‌ ಹ್ಯಾಂಡಲ್ ಅನ್ನು ಯಾರು ನಿರ್ವಹಿಸುತ್ತಾರೋ ಅವರು ಓದಿದವರಂತೆ ಕಾಣುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

What the hell!! Disgusting, ಯಾವ ಹೆಟ್ಲ್ಯಾಂಡಿ ಈ ಟ್ವಿಟ್ ಮಾಡಿರೋದು ಬಿಜೆಪಿಯವರೆ! ತಲೆಲಿ ಏನು ದನದ ಸಗಣಿ ತುಂಬಿದ್ಯ? ನಿಮ್ಮ ಜನ್ಮದಲ್ಲಿ ಅವರ ಗಳಿಸಿರೋ ಜ್ಞಾನ ವಿದ್ವತ್ತು ಗಳಿಸೋಕೆ ಸಾಧ್ಯ ಇಲ್ಲ. ವಿಚಾರದಲ್ಲಿ ಭಿನ್ನಮತ ಇಟ್ಕೊಳ್ಳಿ. ಆದ್ರೆ ನಿಮ್ಮ ಸರ್ಕಾರದ ಟೀಕೆ ಕಾಯ್ದೆಯ ವಿರುದ್ಧ ಹೋರಾಟ ಮಾಡಿದ್ರು ಅಂತ ಈ ರೀತಿ ಮಾತಾಡೋದಾ? ಚಿ ಅಸಹ್ಯ ಎಂದು ಕೃಷಿಕ್‌ ಎ.ವಿ ಎಂಬುವವರು ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದ ಅಗ್ರಗಣ್ಯ ಇತಿಹಾಸಕಾರರಲ್ಲಿ ಒಬ್ಬರು ಮತ್ತು ವಿಶ್ವಪ್ರಸಿದ್ಧ ಶಿಕ್ಷಣ ತಜ್ಞರನ್ನು ಬಿಜೆಪಿ ಅಧಿಕೃತವಾಗಿ ‘ನಗರ ನಕ್ಸಲ್’ ಎಂದು ಕರೆಯುತ್ತದೆ. ಭಾರತದ ಆತ್ಮೀಯ ಯುವಜನರೆ,ಫ್ಯಾಸಿಸ್ಟ್ ಬಿಜೆಪಿ ಅದರ ವಿರುದ್ಧ ಮಾತನಾಡುವ ಪ್ರತಿಯೊಬ್ಬರನ್ನು ಲೇಬಲ್ ಮಾಡಲು ಮತ್ತು ಶುದ್ಧೀಕರಿಸಲು ಸಿದ್ಧವಾಗಿದೆ. ಇದಕ್ಕಾಗಿಯೇ, ನಿಮ್ಮ ಭವಿಷ್ಯಕ್ಕಾಗಿ, ನಮ್ಮ ಎಲ್ಲಾ ಭವಿಷ್ಯಕ್ಕಾಗಿ, ನಾವು ಅವರನ್ನು ಒಂದಾಗಿ ಸೋಲಿಸಬೇಕಾಗಿದೆ ಎಂದು ಶ್ರೀವತ್ಸ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಭಾರತದ ಆಡಳಿತಾರೂಢ ಬಿಜೆಪಿ ಪಕ್ಷವು ಖ್ಯಾತ ಲೇಖಕ ಮತ್ತು ಇತಿಹಾಸಕಾರ ರಾಮಚಂದ್ರ ಗುಹಾ ಅವರನ್ನು “ನಗರ ನಕ್ಸಲ್” ಎಂದು ಕರೆದಿದೆ, ಅಂದರೆ ಅವರನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಇದು ರಾಜಕೀಯ ಪಕ್ಷದ ಭಾಷೆಯಲ್ಲ ಎಂದು ನಥನ್‌ ಎಂಬುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...