ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಾದ ಕರ್ನಾಟಕ, ಕೇರಳ, ಪಂಜಾಬ್, ತಮಿಳುನಾಡು ಮತ್ತು ತೆಲಂಗಾಣದ ಹಣಕಾಸು ಸಚಿವರು ಕೇಂದ್ರ ಸರ್ಕಾರ ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ಹೆಚ್ಚಿಸುವುದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಇದು 16 ನೇ ಹಣಕಾಸು ಆಯೋಗದ ನಿಧಿಗಳ ಪರಿಣಾಮಕಾರಿ ಹಂಚಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ತೆರಿಗೆ ಪಾಲಿನಲ್ಲಿ ಆಗುತ್ತಿರುವ ಅನ್ಯಾಯ ವಿರೋಧಿಸಿ ಹಾಗೂ ವಿವಿಧ ವಿಷಯಗಳ ಕುರಿತು ಹಣಕಾಸು ಆಯೋಗಕ್ಕೆ ಜಂಟಿಯಾಗಿ ಒತ್ತಡ ಹೇರಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗುರುವಾರ (ಸೆ.12) ತಿರುವನಂತಪುರಂನಲ್ಲಿ ವಿರೋಧ ಪಕ್ಷದ ಆಡಳಿತದ ರಾಜ್ಯಗಳ ಹಣಕಾಸು ಸಚಿವರ ಸಮಾವೇಶ ಆಯೋಜಿಸಿದ್ದರು.
Inaugurated the Conclave of Finance Ministers. Hosted by GoK, and joined by @Bhatti_Mallu, @krishnabgowda, @HarpalCheemaMLA, @TThenarasu, @vdsatheesan, and Kerala's Finance Minister KN Balagopal, the Conclave will discuss key issues to be highlighted before the 16th Finance… pic.twitter.com/HjeB9NoBUG
— Pinarayi Vijayan (@pinarayivijayan) September 12, 2024
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಸೆಸ್ ಮತ್ತು ಹೆಚ್ಚುವರಿ ಶುಲ್ಕದ ಮೇಲೆ ಐದು ಶೇಕಡಾ ಮಿತಿಯನ್ನು ಸೂಚಿಸಿದರು. ಕೇಂದ್ರ ತೆರಿಗೆಯಲ್ಲಿ 50 ಪ್ರತಿಶತ ಪಾಲು ನೀಡಬೇಕು ಎಂದು ಆಗ್ರಹಿಸಿದರು.
“ಕಳೆದ ವರ್ಷ, ಕೇಂದ್ರದಿಂದ ಸಂಗ್ರಹಿಸಲಾದ ಸೆಸ್ ಮತ್ತು ಸರ್‌ಚಾರ್ಜ್‌ನಿಂದಾಗಿ ಕರ್ನಾಟಕ ಸುಮಾರು 53,000 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ. ಆದ್ದರಿಂದ, ನಾವು ಸೆಸ್ ಮತ್ತು ಹೆಚ್ಚುವರಿ ಶುಲ್ಕದ ಮೇಲೆ ಐದು ಶೇಕಡಾ ಮಿತಿಯನ್ನು ಶಿಫಾರಸು ಮಾಡಿದ್ದೇವೆ” ಎಂದರು.
At the conclave of Finance Ministers organized by @pinarayivijayan Govt.of Kerala at Thiruvananthapuram. #revenue #gok pic.twitter.com/bQx8jzCaP2
— Krishna Byre Gowda (@krishnabgowda) September 12, 2024
ರಾಜ್ಯಗಳಿಗೆ ಅನುದಾನ ಹಂಚಿಕೆ ಮಾಡಲು 2011ರ ಜನಗಣತಿಯನ್ನು ಆಧಾರವನ್ನಾಗಿ ಪರಿಗಣಿಸುವ ಹಣಕಾಸು ಆಯೋಗದ ಕ್ರಮವನ್ನು ದಕ್ಷಿಣ ಎಲ್ಲಾ ರಾಜ್ಯಗಳು ವಿರೋಧಿಸಿದವು. ಕೇಂದ್ರದ ಈ ಕ್ರಮವು ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ ರಾಜ್ಯಗಳಿಗೆ ದಂಡ ವಿಧಿಸಿದಂತಿದೆ. ಈ ವಿಚಾರದಲ್ಲಿ ವಿಫಲವಾಗಿರುವ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡಿದಂತಾಗಿದೆ ಎಂಬ ಅಭಿಪ್ರಾಯ ಸಮಾವೇಶದಲ್ಲಿ ವ್ಯಕ್ತವಾಯಿತು.
ತೆರಿಗೆ ಪಾಲಿನಲ್ಲಿ ಆಗುತ್ತಿರುವ ತಾರತಮ್ಯ ವಿಚಾರವಾಗಿ ಹಣಕಾಸುನ ಆಯೋಗದ ಮೇಲೆ ಒತ್ತಡ ಹೇರುವ ಉದ್ದೇಶಕ್ಕಾಗಿ ‘ಸಂಯುಕ್ತ ರಂಗ’ ರಚಿಸು ಅಗತ್ಯತೆಯನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರು ಪ್ರತಿಪಾದಿಸಿದರು.
ಇದನ್ನೂ ಓದಿ : ಸೆಸ್ ಹೆಚ್ಚಳದಿಂದ ರಾಜ್ಯಗಳ ತೆರಿಗೆ ಪಾಲು ಕುಗ್ಗುತ್ತಿದೆ: ಕೇರಳ ಸಿಎಂ ಆರೋಪ


