ಫ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿರುವ ಕಾನೂನಿಗೆ ಸುಗ್ರೀವಾಜ್ಞೆಯನ್ನು ಹೊರಡಿಸಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಶ್ಲಾಘಿಸಿದ್ದಾರೆ. ದೇಶದ ಪ್ರತಿ ರಾಜ್ಯಕ್ಕೂ ಪಕ್ಷದ ದೃಷ್ಟಿಕೋನ ಇದಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಗಿಗ್ ಕಾರ್ಮಿಕರ ಕಾಯ್ದೆಗೆ
ಮಂಗಳವಾರ ಹೊರಡಿಸಲಾದ ಸುಗ್ರೀವಾಜ್ಞೆಯು ಕಲ್ಯಾಣ ಮಂಡಳಿಯ ಸ್ಥಾಪನೆ ಮತ್ತು ಗಿಗ್ ಕಾರ್ಮಿಕರಿಗಾಗಿ ಮೀಸಲಾದ ಕಲ್ಯಾಣ ನಿಧಿಯನ್ನು ರಚಿಸುವ ಪ್ರಸ್ತಾಪವನ್ನು ಹೊಂದಿದೆ.
” ‘ರೇಟಿಂಗ್ ನಹಿ, ಹಕ್ ಚಾಹಿಯೇ’. ‘ಇನ್ಸಾನ್ ಹೈ ಹಮ್, ಗುಲಾಮ್ ನಹಿ’. ಗಿಗ್ ಕಾರ್ಮಿಕರ ಈ ಪ್ರಬಲ ಮಾತುಗಳು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ನನ್ನ ಮನಸ್ಸಿನಲ್ಲಿ ಉಳಿದವು,” ಎಂದು ರಾಹುಲ್ ಗಾಂಧಿ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
“ಕರ್ನಾಟಕದ ನಮ್ಮ ಕಾಂಗ್ರೆಸ್ ಸರ್ಕಾರ ಗಿಗ್ ಕಾರ್ಮಿಕರ ಹಕ್ಕುಗಳು, ಘನತೆ ಮತ್ತು ರಕ್ಷಣೆಯನ್ನು ಖಾತರಿಪಡಿಸುವ ಸುಗ್ರೀವಾಜ್ಞೆಯನ್ನು ಹೊರಡಿಸುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ… ಈ ಕಾರ್ಮಿಕರು ನಮಗೆ ಆಹಾರವನ್ನು ತರುತ್ತಾರೆ, ಅಗತ್ಯ ವಸ್ತುಗಳನ್ನು ತಲುಪಿಸುತ್ತಾರೆ ಮತ್ತು ಸೆಕೆ, ಚಳಿ ಮತ್ತು ಮಳೆಯಲ್ಲಿ ನಮ್ಮನ್ನು ಸುರಕ್ಷಿತವಾಗಿ ಇರಿಸುತ್ತಾರೆ” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಹೇಳಿದ್ದಾರೆ.
ಇಷ್ಟೆಲ್ಲ ಕಷ್ಟ ಬಂದದೂ, ಅವರನ್ನು ಯಾವುದೆ ವಿವರಣೆಯಿಲ್ಲದೆ ಅವರ ಅಪ್ಲಿಕೇಶನ್‌ಗಳಿಂದ ಹೆಚ್ಚಾಗಿ ನಿರ್ಬಂಧಿಸಲಾಗುತ್ತದೆ, ಅನಾರೋಗ್ಯ ರಜೆ ನಿರಾಕರಿಸಲಾಗುತ್ತದೆ ಮತ್ತು ಅಪಾರದರ್ಶಕ ಅಲ್ಗಾರಿದಮ್‌ಗಳ ಪ್ರಕಾರ ಅವರಿಗೆ ಪಾವತಿ ಮಾಡಲಾಗುತ್ತದೆ ಎಂದು ರಾಹುಲ್ ಹೇಳಿದ್ದಾರೆ. “ನಾವು ಅದನ್ನು ಬದಲಾಯಿಸುತ್ತಿದ್ದೇವೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ಕರ್ನಾಟಕದ ಹೊಸ ಸುಗ್ರೀವಾಜ್ಞೆಯು ಸಾಮಾಜಿಕ ಭದ್ರತೆ, ನ್ಯಾಯಯುತ ಒಪ್ಪಂದಗಳು, ಅಲ್ಗಾರಿದಮಿಕ್ ವೇತನದಲ್ಲಿ ಪಾರದರ್ಶಕತೆ ಮತ್ತು ಅನಿಯಂತ್ರಿತ ನಿರ್ಬಂಧವನ್ನು ಕೊನೆಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
“ನಾವೀನ್ಯತೆ ಮತ್ತು ನ್ಯಾಯವಾಗಿ ನಡೆಯುವ ಮೂಲಕ ತಂತ್ರಜ್ಞಾನವು ಜನರಿಗೆ ಸೇವೆ ಸಲ್ಲಿಸಬೇಕು. ರಾಜಸ್ಥಾನವು ದಾರಿ ತೋರಿಸಿದೆ. ಕರ್ನಾಟಕ ಕಾರ್ಯನಿರ್ವಹಿಸಿದೆ. ತೆಲಂಗಾಣ ಮುಂದಿನ ಗುರಿ” ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಪ್ರಕಾರ, ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕೆಲಸವು ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಮತ್ತು ಕೆಲಸದ ಸಂಬಂಧಗಳನ್ನು ಮರುರೂಪಿಸುತ್ತಿದೆ. ಹಾಗಾಗಿ ಕಾರ್ಮಿಕರ ಹಕ್ಕುಗಳ ಈ ಹೊಸ ವ್ಯವಸ್ಥೆಯ ಕೇಂದ್ರದಲ್ಲಿರಬೇಕು ಎಂದು ಹೇಳಿದ್ದಾರೆ. “ಇದು ನಮ್ಮ ದೃಷ್ಟಿಕೋನ ಮತ್ತು ನಾವು ಅದನ್ನು ಪ್ರತಿ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಕೊಂಡೊಯ್ಯುತ್ತೇವೆ” ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿಯು 15 ಸದಸ್ಯರನ್ನು ಹೊಂದಿರುತ್ತದೆ. ಕಾರ್ಮಿಕ ಸಚಿವರ ನೇತೃತ್ವದ ಇರುವ ಈ ಮಂಡಳಿಯಲ್ಲಿ ನಾಲ್ವರು ಗಿಗ್ ಕಾರ್ಮಿಕರು, ನಾಲ್ವರು ಗಿಗ್ ಅಗ್ರಿಗೇಟರ್‌ಗಳ ಪ್ರತಿನಿಧಿಗಳು ಮತ್ತು ಕ್ಷೇತ್ರದಲ್ಲಿ ಅನುಭವ ಹೊಂದಿರುವ ನಾಗರಿಕ ಸಮಾಜದ ಇಬ್ಬರು ಪ್ರತಿನಿಧಿಗಳನ್ನು ಹೊಂದಿರುತ್ತದೆ. ಅವರೆಲ್ಲರನ್ನೂ ರಾಜ್ಯ ಸರ್ಕಾರವು ನಾಮನಿರ್ದೇಶನ ಮಾಡುತ್ತದೆ. ಗಿಗ್ ಕಾರ್ಮಿಕರ ಕಾಯ್ದೆಗೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ನಕ್ಸಲ್ ಬಸವರಾಜು ಮೃತದೇಹದ ಅಂತ್ಯಕ್ರಿಯೆ: ಪೊಲೀಸರ ವಿರುದ್ಧ ಕುಟುಂಬಸ್ಥರಿಂದ ನ್ಯಾಯಾಂಗ ನಿಂದನೆ ಅರ್ಜಿ
ನಕ್ಸಲ್ ಬಸವರಾಜು ಮೃತದೇಹದ ಅಂತ್ಯಕ್ರಿಯೆ: ಪೊಲೀಸರ ವಿರುದ್ಧ ಕುಟುಂಬಸ್ಥರಿಂದ ನ್ಯಾಯಾಂಗ ನಿಂದನೆ ಅರ್ಜಿ

