Homeಅಂತರಾಷ್ಟ್ರೀಯ'ನಮ್ಮ ಭೂಮಿ ಮಾರಾಟಕ್ಕಿಲ್ಲ' : ಬ್ರೆಝಿಲ್ ಹವಾಮಾನ ಶೃಂಗಸಭೆಗೆ ನುಗ್ಗಿ ಸ್ಥಳೀಯ ಬುಡಕಟ್ಟು ಜನರಿಂದ ಪ್ರತಿಭಟನೆ

‘ನಮ್ಮ ಭೂಮಿ ಮಾರಾಟಕ್ಕಿಲ್ಲ’ : ಬ್ರೆಝಿಲ್ ಹವಾಮಾನ ಶೃಂಗಸಭೆಗೆ ನುಗ್ಗಿ ಸ್ಥಳೀಯ ಬುಡಕಟ್ಟು ಜನರಿಂದ ಪ್ರತಿಭಟನೆ

- Advertisement -
- Advertisement -

ಬ್ರೆಝಿಲ್‌ನ ಬೆಲೆಮ್‌ನಲ್ಲಿ ನಡೆಯುತ್ತಿರುವ 30ನೇ ಹವಾಮಾನ ಶೃಂಗಸಭೆಯಲ್ಲಿ (COP30) ಸ್ಥಳೀಯ ಬುಡಕಟ್ಟು ಸಮುದಾಯಗಳು ಜನರು ಶುಕ್ರವಾರ (ನವೆಂಬರ್ 14) ಎರಡನೇ ಬಾರಿಗೆ ಪ್ರತಿಭಟನೆ ನಡೆಸಿದ್ದಾರೆ.

ಶೃಂಗಸಭೆ ನಡೆಯುತ್ತಿರುವ ಜಾಗದ ಪ್ರವೇಶದ್ವಾರದಲ್ಲಿ ನೂರಾರು ಜನರು ಜಮಾಯಿಸಿ ಅಮೆಜಾನ್‌ನಲ್ಲಿನ ತಮ್ಮ ದುಃಸ್ಥಿತಿಯ ಬಗ್ಗೆ ಜಗತ್ತು ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.

ಶೃಂಗಸಭೆಗೆ ಹತ್ತಾರು ಸಾವಿರ ಪ್ರತಿನಿಧಿಗಳು ಆಗಮಿಸುತ್ತಿದ್ದಂತೆ, ಸಾಂಪ್ರದಾಯಿಕ ಉಡುಪುಗಳು ಮತ್ತು ಶಿರಸ್ತ್ರಾಣಗಳನ್ನು ಧರಿಸಿದ ಸುಮಾರು 60 ಪುರುಷರು ಮತ್ತು ಮಹಿಳೆಯರು, ಕೆಲವರು ಮಕ್ಕಳನ್ನು ಹೊತ್ತುಕೊಂಡು ಮುಖ್ಯ ದ್ವಾರದಲ್ಲಿ ಮಾನವ ಬ್ಯಾರಿಕೇಡ್ ರಚಿಸಿದ್ದರು.

ಬ್ರೆಝಿಲ್ ಅಧ್ಯಕ್ಷ ಲೂಯಿಝ್ ಇನಾಸಿಯೊ ಲುಲಾ ಡ ಸಿಲ್ವಾ ಅವರೊಂದಿಗೆ ಸಭೆ ನಡೆಸಬೇಕೆಂದು ಪ್ರತಿಭಟನಾ ನಿರತರ ಗುಂಪು ಒತ್ತಾಯಿಸಿದೆ. ಮುಖ್ಯದ್ವಾರದಲ್ಲಿ ಪ್ರತಿಭಟನೆ ಹಿನ್ನೆಲೆ, ವಿವಿಧ ದೇಶಗಳ ಪ್ರತಿನಿಧಿಗಳನ್ನು ಸಂಘಟಕರು ಪಕ್ಕದ ಬಾಗಿಲುಗಳ ಮೂಲಕ ಕರೆದೊಯ್ಯುಲು ಪ್ರಯತ್ನಿಸಿದಾಗ, ಅಲ್ಲೂ ತಡೆಯೊಡ್ಡಿ ಜನರು ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ ವರದಿಯಾಗಿದೆ.

ವಿಶ್ವದ ಅತಿದೊಡ್ಡ ಮಳೆಕಾಡಿನ ಹೆಬ್ಬಾಗಿಲು ಮತ್ತು ಅಮೆಜಾನ್ ನದಿಯ ದಂಡೆಯ ನಗರವಾದ ಬೆಲೆಮ್‌ನಲ್ಲಿ ಹವಾಮಾನ ಮಾತುಕತೆಗೆ ಸ್ಥಳೀಯರು ಅಡ್ಡಿಪಡಿಸಿದ್ದು ಈ ವಾರದಲ್ಲಿ ಇದು ಎರಡನೇ ಬಾರಿಯಾಗಿದೆ.

ಪ್ರತಿಭಟನಾಕಾರರ ಬೇಡಿಕೆ ‘ಅತ್ಯಂತ ನ್ಯಾಯಸಮ್ಮತವಾಗಿದೆ ಮತ್ತು ಬಲವಾಗಿದೆ’ ಎಂದು ಸಿಒಪಿ-30ರ ಅಧ್ಯಕ್ಷ ಆಂಡ್ರೆ ಕೊರ್ರಿಯಾ ಡೊ ಲಾಗೋ ಹೇಳಿದ್ದಾರೆ. ಶುಕ್ರವಾರ ಬೆಳಿಗ್ಗೆಯ ಕಾರ್ಯಕ್ರಮವನ್ನು ತೊರೆದು ಸಭಾಂಗಣದ ಹೊರಗೆ ಹೋಗಿ ಅವರು ಪ್ರತಿಭಟನಾ ನಿರತರನ್ನು ಭೇಟಿ ಮಾಡಿದ್ದಾರೆ.

ಶೃಂಗಸಭೆ ನಡೆಯುತ್ತಿರುವ ಸಭಾಂಗಣದ ಪಕ್ಕದ ಹಾಲ್‌ನಲ್ಲಿ ಪ್ರತಿಭಟನಾ ನಿರತರ ಜೊತೆ ಕೊರಿಯಾ ಡೊ ಲಾಗೊ ಅವರು ಶುಕ್ರವಾರ ಸಭೆ ನಡೆಸಿದ್ದಾರೆ. ಅದಕ್ಕೂ ಮುನ್ನ ಪ್ರತಿಭಟನಾಕಾರರು ಅವರ ಬೇಡಿಕೆಗಳ ಪತ್ರವನ್ನು ಲಾಗೊ ಅವರಿಗೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಎಲ್ಲಾ ವಯಸ್ಸಿನ ಜನರಿದ್ದರು. ಅವರು ಬಡುಕಟ್ಟು ಸಮುದಾಯದ ಸಾಂಪ್ರಾದಾಯಿಕ ಹಾಡು, ನೃತ್ಯಗಳ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

“ನಾವು ತುಂಬಾ ಸಕಾರಾತ್ಮಕ, ಅತ್ಯಂತ ರಚನಾತ್ಮಕ ಸಂವಾದ ನಡೆಸಿದ್ದೇವೆ. ಅವರಿಗೆ (ಬುಡಕಟ್ಟು ಜನರಿಗೆ) ಇರುವ ಎಲ್ಲಾ ಕಳವಳಗಳನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತೇವೆ” ಎಂದು ಸಭೆಯ ನಂತರ ಕೊರಿಯಾ ಡೊ ಲಾಗೊ ಹೇಳಿದ್ದಾರೆ.

ನೂರಾರು ಸಶಸ್ತ್ರ ಸೈನಿಕರು ಮತ್ತು ಮಿಲಿಟರಿ ಪೊಲೀಸರು ಶೃಂಗಸಭೆಯ ಪ್ರವೇಶದ್ವಾರದಲ್ಲಿ ಕಾವಲು ಕಾಯುತ್ತಿದ್ದಾರೆ. ಸಭೆಗೆ ಆಗಮಿಸುವವರಿಗೆ ಯಾವುದೇ ಸಮಸ್ಯೆಗಳು ಆಗುವುದಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.

ಮುಂಡುರುಕು ಎಂಬ ಆದಿವಾಸಿ ಸಮುದಾಯದ ಪ್ರತಿಭಟನಾಕಾರರು, ತಮ್ಮ ಪೂರ್ವಜರಿಂದಲೂ ಬಳಸಿಕೊಂಡು ಬಂದಿರುವ ಸಾಂಪ್ರದಾಯಿಕ ತವರು ಭೂಮಿಗಳನ್ನು ಅಧಿಕೃತವಾಗಿ ಗುರುತಿಸಿ ಗಡಿ ನಿರ್ಣಯ ಮಾಡುವ ಪ್ರಕ್ರಿಯೆಯನ್ನು ಮುಂದುವರಿಸಬೇಕೆಂದು ಒತ್ತಾಯಿಸಿದ್ದಾರೆ.

ಧಾನ್ಯ ಉತ್ಪಾದನೆಯನ್ನು ಸಾಗಿಸುವ ಸಲುವಾಗಿ ಬ್ರೆಝಿಲ್ ಅನ್ನು ಪಶ್ಚಿಮದಿಂದ ಪೂರ್ವಕ್ಕೆ ಸಂಪರ್ಕಿಸಲು ಉದ್ದೇಶಿಸಲಾದ ಸುಮಾರು 1,000 ಕಿಲೋಮೀಟರ್ (620 ಮೈಲಿ) ಉದ್ದದ ರೈಲ್ವೆ ಯೋಜನೆ ಫೆರೋಗ್ರಾವ್‌ಗೆ ಮುಂಡುರುಕು ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ.

“ನಮ್ಮ ಭೂಮಿಗಾಗಿ ಮಾಡುತ್ತಿರುವ ಹೋರಾಟ, ನಮ್ಮ ಜೀವಕ್ಕಾಗಿ ಮಾಡುತ್ತಿರುವ ಹೋರಾಟವಾಗಿದೆ” ಎಂದು ಮುಂಡುರುಕು ಪ್ರತಿಭಟನಾಕಾರರೊಬ್ಬರು ಹಿಡಿದಿದ್ದ ಬ್ಯಾನರ್‌ನಲ್ಲಿ ಬರೆಯಲಾಗಿತ್ತು ಎಂದು ವರದಿಗಳು ವಿವರಿಸಿವೆ.

“ಬನ್ನಿ ಲುಲಾ (ಅಧ್ಯಕ್ಷ ಲೂಯಿಝ್ ಇನಾಸಿಯೊ ಲುಲಾ ಡ ಸಿಲ್ವಾ) ನೀವು ಇಲ್ಲಿ ಬಂದು ಮುಖ ತೋರಿಸಿ!” ಎಂದು ಆದಿವಾಸಿ ನಾಯಕಿ ಅಲೆಸ್ಸಾಂಡ್ರಾ ಕೊರಾಪ್ ಪ್ರತಿಭಟನೆ ವೇಳೆ ಜೋರಾಗಿ ಕೂಗಿದ್ದಾರೆ. “ನಮ್ಮ ಮಾತನ್ನು ಆಲಿಸಬೇಕು, ನಮ್ಮನ್ನೂ ಮಾತುಕತೆಗಳಲ್ಲಿ ಭಾಗಿಯಾಗಿಸಬೇಕು, ನಮಗೆ ತುಂಬಾನೇ ಸಮಸ್ಯೆಗಳಿವೆ” ಎಂದು ಅವರು ಆಗ್ರಹಿಸಿದ್ದಾರೆ. “ತಾನು ಆದಿವಾಸಿಗಳ ಪರ” ಎಂದು ಅಧ್ಯಕ್ಷ ಲುಲಾ ಹೇಳಿದ್ದಾರೆ ಎಂದು ವರದಿಗಳು ಹೇಳಿವೆ.

ಅವರು ಬುಡಕಟ್ಟು ಗುಂಪುಗಳನ್ನು ಗುರುತಿಸುವಲ್ಲಿ ಪ್ರಗತಿಪರರಾಗಿದ್ದಾರೆ, ಅಮೆಜಾನ್‌ನಲ್ಲಿ ಅರಣ್ಯನಾಶವನ್ನು ಕಡಿತಗೊಳಿಸಿದ್ದಾರೆ ಮತ್ತು ಸ್ಥಳೀಯ ಜನರ ಮೊದಲ ಸಚಿವಾಲಯದ ಮುಖ್ಯಸ್ಥರಾಗಿ ವ್ಯಾಪಕವಾಗಿ ಗೌರವಿಸಲ್ಪಟ್ಟ ವ್ಯಕ್ತಿಯನ್ನು ನೇಮಿಸಿದ್ದಾರೆ.

ಅವರು (ಲುಲಾ) ಆದಿವಾಸಿ ಬುಡಕಟು ಗುಂಪುಗಳನ್ನು ಸರ್ಕಾರದಿಂದ ಅಧಿಕೃತವಾಗಿ ಮತ್ತು ಸುಧಾರಿತ ರೀತಿಯಲ್ಲಿ ಗುರುತಿಸುವ ಕೆಲಸವನ್ನು ಮುಂದುವರಿಸಿದ್ದಾರೆ. ಅಮೆಜಾನ್ ಕಾಡುಗಳಲ್ಲಿ ಮರಗಳ ಕಡಿಯುವಿಕೆಯನ್ನು (ಕಾಡುನಾಶ) ಬಹಳಷ್ಟು ಕಡಿಮೆಗೊಳಿಸಿದ್ದಾರೆ ಮತ್ತು ಮೊದಲ ಬಾರಿಗೆ ರಚಿಸಲಾದ ಆದಿವಾಸಿ ಜನಾಂಗಗಳ ಸಚಿವಾಲಯಕ್ಕೆ ಎಲ್ಲೆಡೆ ಗೌರವ ಮತ್ತು ಒಪ್ಪಿಗೆ ಗಳಿಸಿರುವ ಒಬ್ಬ ಪ್ರಮುಖ ವ್ಯಕ್ತಿಯನ್ನು ಸಚಿವರಾಗಿ ನೇಮಿಸಿದ್ದಾರೆ. ಆದರೆ, ಸ್ಥಳೀಯರ ಭೂಮಿಯನ್ನು ಅಧಿಕೃತವಾಗಿ ಗುರುತಿಸುವ ಪ್ರಕ್ರಿಯೆಯು ತುಂಬಾ ನಿಧಾನವಾಗಿ ಸಾಗುತ್ತಿದೆ ಎಂಬುದನ್ನು ಮತ್ತು ಅಮೆಜಾನ್ ನದಿಯ ಬಳಿ ಅಕ್ಟೋಬರ್ ತಿಂಗಳಲ್ಲಿ ಆರಂಭಿಸಲಾದ ತೈಲ ಪರಿಶೋಧನೆಯನ್ನು ಬುಡಕಟ್ಟು ಜನರು ತೀವ್ರವಾಗಿ ವಿರೋಧಿಸಿದ್ದಾರೆ.

ಬುಧವಾರ, ಪ್ರಸಿದ್ಧ ಆದಿವಾಸಿ ಮುಖಂಡ ರಾವೋನಿ ಅವರು, ತೈಲ ಯೋಜನೆ ಮತ್ತು ಫೆರೋಗ್ರಾವ್‌ ಕುರಿತು ಲುಲಾ ಅವರೊಂದಿಗೆ ಸಭೆ ನಿಗದಿಪಡಿಸುವುದಾಗಿ ಹೇಳಿದ್ದಾರೆ. ಅಗತ್ಯವಿದ್ದರೆ, ಅವರಿಗೆ ಒಳ್ಳೆಯ ಉಪದೇಶವನ್ನು ಕೊಡುತ್ತೇನೆ ಎಂದು ಹೇಳಿದ್ದಾರೆ.

ಬುಧವಾರ ಆದಿವಾಸಿಗಳ ಪ್ರತಿಭಟನೆ ಹಿನ್ನೆಲೆ ಶೃಂಗಸಭೆಯ ಸಭಾಂಗಣದ ಹೊರಗೆ ಸೂರ್ಯನ ಬಿಸಿಲಿನಲ್ಲಿ ಕಾಯುತ್ತಿದ್ದ ಸಾವಿರಾರು ಪ್ರತಿನಿಧಿಗಳು ಸುಮಾರು ಎರಡು ಗಂಟೆಗಳ ನಂತರ ಮುಖ್ಯ ದ್ವಾರದ ಮೂಲಕ ಸಭಾಂಗಣ ಪ್ರವೇಶಿಸಲು ಸಾಧ್ಯವಾಯಿತು ಎಂದು ವರದಿಯಾಗಿದೆ.

ಇದಕ್ಕೂ ಮುನ್ನ ಮಂಗಳವಾರ ಸಂಜೆ, ಸ್ಥಳೀಯ ಪ್ರತಿಭಟನಾಕಾರರು ಮತ್ತು ಅವರ ಬೆಂಬಲಿಗರು ಶೃಂಗಸಭೆಗೆ ನುಗ್ಗಿ ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದ್ದರು. ಇದು ಹವಾಮಾನ ಶೃಂಗದಲ್ಲಿ ಕಂಡು ಬಂದ ಅಪರೂಪದ ಬೆಳವಣಿಗೆಯಾಗಿದೆ.

ಹವಾಮಾನ ಶೃಂಗಸಭೆ ನಡೆಯುತ್ತಿರುವ ಬೆಲೆಮ್‌ನಲ್ಲಿ ಪ್ರತಿಭಟನೆ ಹಿನ್ನೆಲೆ ಭದ್ರತೆ ಹೆಚ್ಚಿಸುತ್ತೀರ ಎಂದು ಗುರುವಾರ ಸುದ್ದಿ ಸಂಸ್ಥೆ ಎಎಫ್‌ಪಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಅಧ್ಯಕ್ಷ ಕೊರಿಯಾ ಡೊ ಲಾಗೊ “ಅಗತ್ಯವಿಲ್ಲ, ಇದು ನಿಜವಾಗಿಯೂ ಒಂದು ಸಣ್ಣ ಘಟನೆ” ಎಂದು ಹೇಳಿದ್ದರು.

COP30 | ವಿಶ್ವ ಹವಾಮಾನ ಶೃಂಗದಲ್ಲಿ ಭಾಗವಹಿಸಿದ ಪ್ರತಿ 25ರಲ್ಲಿ ಒಬ್ಬ ‘ಪಳೆಯುಳಿಕೆ ಇಂಧನ ಲಾಬಿದಾರ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...