ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಮಾಧ್ಯಮಗಳ ‘ಜಾತಿ ಅಜೆಂಡಾ’ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತಿವಾದಿ ಮಾಧ್ಯಮಗಳು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅವಕಾಶಕ್ಕೆ ಪೆಟ್ಟು ನೀಡಿದೆ ಎಂದು ಹೇಳಿರುವ ಮಾಯಾವತಿ, ಬಹುಜನ ಸಮಾಜ ಪಕ್ಷವು ಮುಂದಕ್ಕೆ ಟಿವಿ ಚರ್ಚೆಗಳನ್ನು ಬಹಿಷ್ಕರಿಸಲಿದೆ ಎಂದು ಹೇಳಿದ್ದಾರೆ.
ಈ ಬಾರಿಯ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಕೇವಲ ಒಂದು ಸ್ಥಾನವನ್ನು ಗಳಿಸಿದ್ದು, ಅತ್ಯಂತ ಕಡಿಮೆ ಸ್ಥಾನಕ್ಕೆ ಕುಸಿದಿದೆ.
ಇದನ್ನೂ ಓದಿ: ಬಿಜೆಪಿ ಗೆಲುವಿಗಾಗಿ ಓವೈಸಿ & ಮಾಯಾವತಿಗೆ ಪದ್ಮಪ್ರಶಸ್ತಿ, ಭಾರತ ರತ್ನ ನೀಡಬೇಕು: ಶಿವಸೇನೆ
“ಯುಪಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಮಾಧ್ಯಮಗಳು ತಮ್ಮ ಯಜಮಾನರ ಅಣತಿಯಂತೆ ಜಾತಿ ದ್ವೇಷ ಮತ್ತು ದ್ವೇಷದ ಮನೋಭಾವವನ್ನು ಅಳವಡಿಸಿಕೊಂಡು ಅಂಬೇಡ್ಕರ್‌ವಾದಿ ಬಿಎಸ್‌ಪಿ ಚಳವಳಿಗೆ ಮಾಡಿರುವ ಹಾನಿಯನ್ನು ಯಾರಿಂದಲೂ ಮರೆ ಮಾಡಲು ಸಾಧ್ಯವಿಲ್ಲ” ಎಂದು ಮಾಯಾವತಿ ಟ್ವಿಟರ್‌ನಲ್ಲಿ ಹೇಳಿದ್ದಾರೆ.
1. यूपी विधानसभा आमचुनाव के दौरान मीडिया द्वारा अपने आक़ाओं के दिशा-निर्देशन में जो जातिवादी द्वेषपूर्ण व घृणित रवैया अपनाकर अम्बेडकरवादी बीएसपी मूवमेन्ट को नुकसान पहुंचाने का काम किया गया है वह किसी से भी छिपा नहीं है। इस हालत में पार्टी प्रवक्ताओं को भी नई जिम्मेदारी दी जाएगी।
— Mayawati (@Mayawati) March 12, 2022
ಈ ಸಂದರ್ಭದಲ್ಲಿ ಪಕ್ಷದ ವಕ್ತಾರರಿಗೂ ಹೊಸ ಜವಾಬ್ದಾರಿ ನೀಡಲಾಗುವುದು ಎಂದು ಹೇಳಿರುವ ಮಾಯಾವತಿ, “ಪಕ್ಷದ ವಕ್ತಾರರಾದ ಸುಧೀಂದ್ರ ಭದೌರಿಯಾ, ಧರಂವೀರ್ ಚೌಧರಿ, ಡಾ.ಎಂ.ಎಚ್.ಖಾನ್, ಫೈಜಾನ್ ಖಾನ್ ಮತ್ತು ಸೀಮಾ ಕುಶ್ವಾಹ ಅವರು ಇನ್ನು ಮುಂದೆ ಟಿವಿ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ” ಎಂದು ಹೇಳಿದ್ದಾರೆ.
ಶುಕ್ರವಾರದಂದು ಮಾಯಾವತಿ ಅವರು, “ಬಿಎಸ್ಪಿಯನ್ನು ‘ಬಿಜೆಪಿಯ ಬಿ ಟೀಮ್’ ಎಂದು ತೋರಿಸುವ ಮೂಲಕ ಮಾಧ್ಯಮಗಳು ಆಕ್ರಮಣಕಾರಿ ಪ್ರಚಾರ ಮಾಡಿತ್ತು. ಇದರಿಂದಾಗಿ ಮುಸ್ಲಿಮರು ಮತ್ತು ಬಿಜೆಪಿ ವಿರೋಧಿ ಮತದಾರರು ಪಕ್ಷದಿಂದ ದೂರವಾದರು” ಎಂದು ಆರೋಪಿಸಿದ್ದರು.
ಇದನ್ನೂ ಓದಿ: ರೈತ ಆಂದೋಲನದ ಹೆಸರಲ್ಲಿ ಚುನಾವಣಾ ರಾಜಕಾರಣ ಮಾಡುವುದು ಘೋರ ಅನ್ಯಾಯ: ಮಾಯಾವತಿ



ಖಾಸಗೀ ಮಾಧ್ಯಮಗಳನ್ನ ಕೆಲವು ದಿನಗಳ ಮಟ್ಟಿಗೆ ಬಂದ್ ಮಾಡಬೇಕು.