ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದು, ಈ ಕುರಿತು ಚರ್ಚಿಸಿ ಬಗೆಹರಿಸಲು ಸ್ವತಂತ್ರ ಸಮಿತಿಯೊಂದನ್ನು ರಚಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. “ಈ ಸಮಿತಿಯಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಖ್ಯಾತ ಚಿಂತಕ ಪಿ.ಸಾಯಿನಾಥ್ ಅವರನ್ನೂ ಒಳಗೊಳ್ಳಬಹುದು” ಎಂದು ಸಲಹೆ ನೀಡಿದೆ.
“ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ಕಳೆದ 22 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟ ಶಾಂತಿಯುತವಾಗಿ ಮುಂದುವರೆಯಲಿ, ಪೊಲೀಸರು ಏನು ಮಾಡಲಾಗುವುದಿಲ್ಲ. ಎಲ್ಲಿಯವರೆಗೆ ಆಸ್ತಿಪಾಸ್ತಿ ನಷ್ಟ ಅಥವಾ ಮನುಷ್ಯರ ಜೀವಕ್ಕೆ ಹಾನಿಯಾಗುವುದಿಲ್ಲವೋ ಅಲ್ಲಿಯವರೆಗೆ ರೈತರು ಪ್ರತಿಭಟಿಸುವ ಸಾಂವಿಧಾನಿಕ ಹಕ್ಕು ಹೊಂದಿದ್ದಾರೆ” ಎಂದು ಸಿಜೆಐ ಎಸ್.ಎ ಬೋಬ್ಡೆ ಹೇಳಿದ್ದಾರೆ.
ಇದನ್ನೂ ಓದಿ: ರಕ್ಷಣಾ ಸ್ಥಾಯಿ ಸಮಿತಿಯ 14 ಸಭೆಗಳಲ್ಲಿ 2 ಕ್ಕೆ ಮಾತ್ರ ರಾಹುಲ್ ಭಾಗಿ: ಕೇಂದ್ರ…
Farm laws matter in Supreme Court: The independent committee can have P Sainath, Bhartiya Kisan Union and others as members, suggests CJI
You (farmers) cannot instigate violence and cannot block a city like this, adds CJI
— ANI (@ANI) December 17, 2020
ಇದನ್ನೂ ಓದಿ: ರೈತರ ಹೋರಾಟ ಮುಂದುವರೆಯಲಿ. ಪ್ರತಿಭಟಿಸುವುದು ಸಾಂವಿಧಾನಿಕ ಹಕ್ಕು: ಸುಪ್ರೀಂ ಕೋರ್ಟ್
ರೈತರು ದೆಹಲಿ ತಲುಪುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಔಷಧಿ ಪೂರೈಕೆಗೆ ತಡೆಯಾಗಿದೆ. ಹಾಗಾಗಿ ದೆಹಲಿ ಗಡಿಗಳಲ್ಲಿ ಹೋರಾಟ ನಿರತರನ್ನು ರೈತರನ್ನು ಇಲ್ಲಿಂದ ಹೊರಗೆ ಕಳಿಸಬೇಕೆಂದು ಸುಪ್ರೀಂನಲ್ಲಿ ದಾಖಲಾದ ಸರಣಿ ಪಿಐಎಲ್‌ಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ “ದೆಹಲಿಯ ರಸ್ತೆಗಳನ್ನು ನಿರ್ಬಂಧಿಸದೆ ರೈತರು ಪ್ರತಿಭಟನೆ ಮುಂದುವರೆಸಬಹುದು” ಎಂದಿದೆ.
ನಿನ್ನೆ ಈ ವಿಚಾರದ ಕುರಿತು ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಈ ಸಮಸ್ಯೆಯನ್ನು ನಿಭಾಯಿಸಲು ಸ್ವತಂತ್ರ ಸಮಿತಿಯೊಂದನ್ನು ರಚಿಸಿ, ಕೃಷಿಯ ಜ್ಞಾನ ಹೊಂದಿರುವ ಸ್ವತಂತ್ರ ಸದಸ್ಯರು ಮತ್ತು ಎರಡೂ ಕಡೆಯವರನ್ನು ಕೇಳಿ ಮತ್ತು ಏನು ಮಾಡಬೇಕೆಂಬುದರ ಬಗ್ಗೆ ವರದಿ ನೀಡಿ. ಈ ಸಮಿತಿಯಲ್ಲಿ ಪಿ.ಸಾಯಿನಾಥ್ ಸೇರಿದಂತೆ ರೈತ ಸಂಘಟನೆಗಳ ಪ್ರತಿನಿಧಿಗಳೂ ಇರಬಹುದು” ಎಂದು ಎಸ್.ಎ ಬೋಬ್ಡೆ ತಿಳಿಸಿದ್ದರು.
ಇದನ್ನೂ ಓದಿ: ಡಾ. ಕಫೀಲ್ ಖಾನ್ ವಿರುದ್ದದ ಅರ್ಜಿ ವಜಾಗೊಳಿಸಿದ ಸುಪ್ರೀಂ: ಯುಪಿ ಸರ್ಕಾರಕ್ಕೆ ಮುಖಭಂಗ
“ಸಮಾಜದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ರೈತರಿಗೂ ಪ್ರತಿಭಟಿಸುವ ಹಕ್ಕಿದ್ದು, ಅವರ ಹೋರಾಟ ಮುಂದುವರೆಯಬೇಕು. ಅಲ್ಲದೆ, ಯಾವುದೇ ಕಾರಣಕ್ಕೂ ರೈತರನ್ನು ಹೋರಾಟದ ಕಣದಿಂದ ತೆರವುಗೊಳಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ರೈತರಿಗೆ ಪ್ರತಿಭಟಿಸುವ ಹಕ್ಕಿದೆ. ಹಿಂಸಾಚಾರವಿಲ್ಲದೆ ಪ್ರತಿಭಟನೆಗಳು ಮುಂದುವರಿಯಬಹುದು. ಹೀಗಾಗಿ ಪೊಲೀಸರು ಈ ಹೋರಾಟವನ್ನು ನಿಗ್ರಹಿಸಲು ಮುಂದಾಗುವುದು ಸರಿಯಲ್ಲ. ರೈತರೂ ಸಹಾ ನಗರವೊಂದನ್ನು ಸುತ್ತುವರೆಯುವುದಾಗಲೀ, ಹಿಂಸೆಯನ್ನು ಪ್ರಚೋದಿಸುವುದನ್ನಾಗಲೀ ಮಾಡಬಾರದು” ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಪತನದಲ್ಲಿ ಮೋದಿ ಪಾತ್ರವಿತ್ತು: ಬಿಜೆಪಿ ನಾಯಕನ ಹೇಳಿಕೆ ವೈರಲ್
“ಕೇವಲ ಪ್ರತಿಭಟನೆಗಾಗಿ ಪ್ರತಿಭಟನೆಗಳಾಗಬಾರದು. ಅವು ಕೃಷಿ ದೃಷ್ಟಿಕೋನದಿಂದ ಕೂಡಿರಬೇಕು ಎಂದು ಅರ್ಜಿದಾರರ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದಾಗ ಅದನ್ನೆ ನಾವು ಹೇಳುತ್ತಿರುವುದು ಎಂದು ಸುಪ್ರೀ ಕೋರ್ಟ್ ಹೇಳಿದೆ.
“ಪ್ರತಿಭಟನೆಯ ಉದ್ದೇಶವು ಅಹಿಂಸಾತ್ಮಕ ವಿಧಾನಗಳಿಂದ ಈಡೇರಬೇಕು. ಪ್ರತಿಭಟನೆಗಳು ಸಮಸ್ಯೆಗಳ ಬಗ್ಗೆ ಇರಬೇಕು. ಅನ್ಯಾಯಕ್ಕೊಳಗಾದವರಿಗೆ ಪ್ರತಿಭಟಿಸಲು ತಮ್ಮ ಪರವಾದ ನ್ಯಾಯವನ್ನು ಮಂಡಿಸಲು ಅವಕಾಶ ನೀಡಬೇಕು ಮತ್ತು ಸಮಸ್ಯೆಗೆ ಕಾರಣವಾದ ವ್ಯಕ್ತಿಗಳು ಅದಕ್ಕೆ ತಕ್ಕ ಉತ್ತರ ನೀಡಬೇಕು” ಎಂದು ಎಸ್.ಎ ಬೋಬ್ಡೆ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಸಿಐಡಿ ವಿಭಾಗದ ಡಿವೈಎಸ್ಪಿ ಲಕ್ಷ್ಮಿ(33) ಅಸಹಜ ಸಾವು


