Homeಮುಖಪುಟರಕ್ಷಣಾ ಸ್ಥಾಯಿ ಸಮಿತಿಯ 14 ಸಭೆಗಳಲ್ಲಿ 2 ಕ್ಕೆ ಮಾತ್ರ ರಾಹುಲ್ ಭಾಗಿ: ಕೇಂದ್ರ ಸಚಿವ...

ರಕ್ಷಣಾ ಸ್ಥಾಯಿ ಸಮಿತಿಯ 14 ಸಭೆಗಳಲ್ಲಿ 2 ಕ್ಕೆ ಮಾತ್ರ ರಾಹುಲ್ ಭಾಗಿ: ಕೇಂದ್ರ ಸಚಿವ ಆರೋಪ

"ಸಬೆಗೆ ಹಾಜರಾಗದಿರುವುದು. ಚರ್ಚೆ ಮಾಡ ಬಯಸಿದ ವಿಷಯವನ್ನು ಪ್ರಸ್ತಾಪಿಸದಿರುವುದು, ನಂತರ 'ಪ್ರಮುಖ ವಿಷಯಗಳ' ಚರ್ಚೆ ಮಾಡುತ್ತಿಲ್ಲ ಎಂದು ದೂಷಿಸುವುದು"

- Advertisement -
- Advertisement -

‘ಕಳೆದ ಒಂದೂವರೆ ವರ್ಷಗಳಲ್ಲಿ ರಕ್ಷಣಾ ಸ್ಥಾಯಿ ಸಮಿತಿಯ 14 ಸಭೆಗಳಲ್ಲಿ ಕೇವಲ 2 ರಲ್ಲಿ ಮಾತ್ರ ರಾಹುಲ್ ಗಾಂಧಿ ಭಾಗವಗಹಿಸಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ. ನಿನ್ನೆ ನಡೆದ ರಕ್ಷಣಾ ಸಂಸದೀಯ ಸಮಿತಿ ಸಭೆಯ ನಡುವೆಯೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಎದ್ದು ಹೊರ ನಡೆದಿದ್ದರು.

“ರಕ್ಷಣಾ ಸಂಸದೀಯ ಸಮಿತಿ ಸಭೆಯಲ್ಲಿ ಸೈನಿಕರನ್ನು ಹೇಗೆ ಉತ್ತಮವಾಗಿ ಸಜ್ಜುಗೊಳಿಸಬೇಕು ಎಂಬುದರ ಕುರಿತು ಚರ್ಚಿಸುವ ಬದಲು, ಸಶಸ್ತ್ರ ಪಡೆಗಳ ಸಮವಸ್ತ್ರಗಳ ಬಗ್ಗೆ ಚರ್ಚೆ ನಡೆಸುತ್ತಾ ಸಮಯವನ್ನು ವ್ಯರ್ಥ ಮಾಡಲಾಯಿತು” ಎಂದು ನಿನ್ನೆ ರಾಹುಲ್ ಗಾಂಧಿ ಆರೋಪಿಸಿದ್ದರು.

ಇದನ್ನೂ ಓದಿ: ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಪತನದಲ್ಲಿ ಮೋದಿ ಪಾತ್ರವಿತ್ತು: ಬಿಜೆಪಿ ನಾಯಕನ ಹೇಳಿಕೆ ವೈರಲ್

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, “ಕಳೆದ ಒಂದೂವರೆ ವರ್ಷಗಳಲ್ಲಿ ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿಯ 14 ಸಭೆಗಳಲ್ಲಿ ಕೇವಲ 2 ರಲ್ಲಿ ಮಾತ್ರ ರಾಹುಲ್ ಗಾಂಧಿ ಭಾಗವಹಿಸಿದ್ದರು. ಸ್ವತಃ ಅವರೇ ಗೈರುಹಾಜರಾಗಿ ನಂತರ ಸರ್ಕಾರ ಎಲ್ಲಾ ಕಾರ್ಯವಿಧಾನಗಳನ್ನು ದೂಷಿಸುತ್ತಾರೆ. ಸಭೆಯನ್ನೂ ಪ್ರತಿಭಟಿಸಿ ಹೊರನಡೆಯುತ್ತಾರೆ. ಸ್ಥಾಯಿ ಸಮಿತಿ ಪ್ರತಿಭಟನಾ ಸ್ಥಳವಲ್ಲ” ಎಂದು ಹೇಳಿದ್ದಾರೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.

ಇದನ್ನೂ ಓದಿ: ತೀವ್ರ ಚಳಿಗಾಳಿಯಿಂದಾಗಿ ಪಂಜಾಬ್- ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತ ಸಾವು

ಇದನ್ನೂ ಓದಿ: ಸಿಐಡಿ ವಿಭಾಗದ ಡಿವೈಎಸ್ಪಿ ಲಕ್ಷ್ಮಿ(33) ಅಸಹಜ ಸಾವು

“ಸಭೆಗೆ ಗೈರಾಗುವುದು, ಅವರು ಚರ್ಚೆ ಮಾಡ ಬಯಸಿದ ವಿಷಯವನ್ನು ಬಹಿರಂಗಪಡಿಸದಿರುವುದು, ನಂತರ ‘ಪ್ರಮುಖ ವಿಷಯಗಳ’ ಚರ್ಚೆ ಮಾಡುತ್ತಿಲ್ಲ ಎಂದು ದೂಷಿಸುವುದು. ಇವು ಸಂಸತ್ತಿನ ಕಾರ್ಯವಿಧಾನಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಮಾಡಿದ ಅವಮಾನ. ಈ ಮನೋಭಾವವನ್ನು ನಾವು ಖಂಡಿಸುತ್ತೇವೆ” ಎಂದು ಆರೋಪಿಸಿದರು.

ಸಭೆಯಲ್ಲಿ ಭೂ ಸೇನೆ, ಜಲಸೇನೆ ಮತ್ತು ವಾಯುಸೇನೆಯ ಸಮವಸ್ತ್ರದ ಬಗ್ಗೆ ಸಮಿತಿ ಚರ್ಚಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ರಾಹುಲ್ ಗಾಂಧಿ, ಇದನ್ನು ಸಶಸ್ತ್ರ ಪಡೆಗಳ ಹಿರಿಯ ರಕ್ಷಣಾ ಅಧಿಕಾರಿಗಳು ನಿರ್ಧರಿಸಬಹುದು ಎಂದು ಹೇಳಿದ ನಂತರ ಎಲ್‌ಎಸಿ (ಲಡಾಖ್ ಗಡಿ)ಯಲ್ಲಿ ಹೋರಾಡುತ್ತಿರುವ ಸೈನಿಕರ ವಿಷಯವನ್ನು ಚರ್ಚಿಸಲು ಮುಂದಾದರು.

ಇದನ್ನೂ ಓದಿ: 189 ದೇಶಗಳಲ್ಲಿ 131ನೇ ಸ್ಥಾನ: ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಮತ್ತೆರೆಡು ಸ್ಥಾನ ಕುಸಿದ ಭಾರತ!

ಈ ಸಮಯದಲ್ಲಿ ಸಮಿತಿಯ ಅಧ್ಯಕ್ಷ, ಬಿಜೆಪಿ ಸಂಸದ ಜುವಾಲ್ ಓರಮ್, ರಾಹುಲ್ ಗಾಂಧಿಯವರಿಗೆ ಮಾತನಾಡಲು ಅನುಮತಿಸಲಿಲ್ಲ ಹಾಗಾಗಿ ಅವರು ಸಭೆಯಿಂದ ಹೊರನಡೆದರು ಎಂದು ಮೂಲಗಳು ಮಾಹಿತಿ ನೀಡಿವೆ.

ರಾಹುಲ್ ಗಾಂಧಿ ಸಭೆಯನ್ನು ಸಮಯ ವ್ಯರ್ಥ ಎಂದು ಹೇಳಿ ಹೊರ ನಡೆಯುತ್ತಿದ್ದಂತೆ, ಅವರ ಹಿಂದೆಯೇ ಕಾಂಗ್ರೆಸ್ ಸದಸ್ಯ ರಾಜೀವ್ ಸತವ್ ಮತ್ತು ರೇವಂತ್ ರೆಡ್ಡಿ ಕೂಡ ಹೊರನಡೆದಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: ಶಾಲಾ ಪಠ್ಯಪುಸ್ತಕದಲ್ಲಿ ಬ್ರಾಹ್ಮಣರ ಅವಹೇಳನ ಆರೋಪ: ಕ್ರಮಕ್ಕೆ ಸೂಚಿಸಿದ ಮುಖ್ಯಮಂತ್ರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...