ನಡೆಯುತ್ತಿರುವ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ ಭತ್ತದ ಖರೀದಿ ವಿಳಂಬವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಮಾತುಕತೆಗೆ ಆಹ್ವಾನವನ್ನು ಸ್ವೀಕರಿಸಿದ್ದಾರೆ. ರಾಜ್ಯದಾದ್ಯಂತ ಧಾನ್ಯ ಮಾರುಕಟ್ಟೆಗಳು ಬೆಳೆಯನ್ನು ಖರೀದಿ ಮಾಡುವವರೆಗೆ ತಾವು ಚಂಡೀಗಢದಲ್ಲಿಯೇ ಇರುತ್ತೇವೆ ಎಂದು ರೈತರು ಪ್ರತಿಜ್ಞೆ ಮಾಡಿದ್ದಾರೆ. ಭತ್ತ ಖರೀದಿ ವಿಳಂಬ
ಪ್ರತಿಭಟನಾನಿರತ ರೈತರು ಚಂಡೀಗಢದಿಂದ ಸಿಎಂ ಮಾನ್ ಅವರ ನಿವಾಸಕ್ಕೆ ಘೇರಾವ್ ಮಾಡಲು ಪ್ರಯತ್ನಿಸಿದ್ದು, ಆದರೆ ಅವರ ಹಲವಾರು ಮುಖಂಡರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಅವರಲ್ಲಿ ಕೆಲವರು ಸೆಕ್ಟರ್ 35 ರ ಕಿಸಾನ್ ಭವನವನ್ನು ತಲುಪಿದ್ದು, ಭವನ ಪ್ರವೇಶಿಸಲು ಯಶಸ್ವಿಯಾಗಿದ್ದಾರೆ. ಭದ್ರತಾ ಪಡೆಗಳು ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಕ್ಷಿಪ್ರ ಕಾರ್ಯಾಚರಣೆ ಪಡೆ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಭತ್ತ ಖರೀದಿ ವಿಳಂಬದ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ, ಅಕ್ಕಿ ಗಿರಣಿದಾರರು ಮತ್ತು ಕಮಿಷನ್ ಏಜೆಂಟರು ರಾಜಧಾನಿ ಚಂಡೀಗಢಕ್ಕೆ ಮೆರವಣಿಗೆ ಮಾಡಲು ಕರೆ ನೀಡಿದ್ದರು. ನಿನ್ನೆ ಸಂಜೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರತಿಭಟನಾ ನಿರತ ರೈತರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಭತ್ತ ಖರೀದಿ ವಿಳಂಬ
ಪ್ರತಿಭಟನೆ ಕುರಿತು ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಹಿರಿಯ ನಾಯಕ ಹರಿಂದರ್ ಸಿಂಗ್ ಲಖೋವಾಲ್, “ಪಂಜಾಬ್ ಪೊಲೀಸರು ಮತ್ತು ಚಂಡೀಗಢ ಪೊಲೀಸರು ನಮ್ಮನ್ನು ತಡೆಯಲು ಪ್ರಯತ್ನಿಸಿದರು. ಆದರೆ ನಾವು ಚಂಡೀಗಢ ತಲುಪುವಲ್ಲಿ ಯಶಸ್ವಿಯಾಗಿದ್ದೇವೆ. ಕೆಲವು ರೈತರು ಮತ್ತು ಇತರ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ನಾವು ಕಿಸಾನ್ ಭವನವನ್ನು ತಲುಪಿದ ನಂತರ, ನಾವು ಇಲ್ಲಿಯೇ ಇರಲಿದ್ದು, ಭತ್ತದ ಖರೀದಿ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುವವರೆಗೆ ನಾವು ಹೊರಗೆ ಹೋಗುವುದಿಲ್ಲ” ಎಂದು ಹೇಳಿದ್ದಾರೆ.
“ಮುಖ್ಯಮಂತ್ರಿಯವರು ನಮ್ಮನ್ನು ಭೇಟಿಯಾಗಿ ಮಾತುಕತೆ ನಡೆಸಲು ನಮಗೆ ಆಹ್ವಾನ ನೀಡಿದ್ದಾರೆ. ನಾವು ಆಹ್ವಾನವನ್ನು ಸ್ವೀಕರಿಸಿದ್ದೇವೆ ಮತ್ತು ನಾವು ನಾಳೆ ಅವರನ್ನು ಭೇಟಿ ಮಾಡುತ್ತೇವೆ. ಆದರೂ, ಖರೀದಿ ಪ್ರಾರಂಭವಾಗುವವರೆಗೆ ನಾವು ಹಿಂತಿರುಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
“ನಮ್ಮಲ್ಲಿ ಸುಮಾರು 200 ರಿಂದ 300 ಜನರು ಕಿಸಾನ್ ಭವನದಲ್ಲಿ ಉಳಿಯುತ್ತೇವೆ. ನಾಳೆ ಸಿಎಂ ಮಾನ್ ಅವರನ್ನು ಭೇಟಿಯಾದ ನಂತರ ಮುಂದಿನ ಕ್ರಮವನ್ನು ನಿರ್ಧರಿಸಲಾಗುವುದು. ಬಲ್ಬೀರ್ ಸಿಂಗ್ ರಾಜೇವಾಲ್ ಸೇರಿದಂತೆ ಬಂಧಿತ ನಾಯಕರು ಈಗ ಇಲ್ಲಿಗೆ ತಲುಪಿದ್ದಾರೆ” ಎಂದು ಅವರು ಹೇಳಿದ್ದಾರೆ. ಹಿಂದಿನ ದಿನ ರೈತ ಮುಖಂಡರಾದ ರುಲ್ದು ಸಿಂಗ್ ಮಾನ್ಸಾ, ಮಂಜಿತ್ ಧನೆರ್, ತಾರ್ಸೆಮ್ ಸಿಂಗ್, ಅಂಗ್ರೇಜ್ ಸಿಂಗ್, ಗುರ್ಮೀತ್ ಸಿಂಗ್ ಮೆಹ್ಮಾ ಸೇರಿದಂತೆ ಇತರರನ್ನು ಪೊಲೀಸರು ಬಂಧಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅತ್ಯಚಾರ ಸಂತ್ರಸ್ತೆಯ ಅಪಹರಣ | ಭವಾನಿ ರೇವಣ್ಣಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನು ತಡೆಹಿಡಿಯಲು ಸುಪ್ರೀಂ ನಕಾರ
ಅತ್ಯಚಾರ ಸಂತ್ರಸ್ತೆಯ ಅಪಹರಣ | ಭವಾನಿ ರೇವಣ್ಣಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನು ತಡೆಹಿಡಿಯಲು ಸುಪ್ರೀಂ ನಕಾರ


