HomeUncategorizedಪಾಕಿಸ್ತಾನ: ಉಗ್ರರಿಂದ 11 ಜನ ಸೈನಿಕರ ಹತ್ಯೆ-ಯೋಧರ ಅಪಹರಣ

ಪಾಕಿಸ್ತಾನ: ಉಗ್ರರಿಂದ 11 ಜನ ಸೈನಿಕರ ಹತ್ಯೆ-ಯೋಧರ ಅಪಹರಣ

- Advertisement -
- Advertisement -

ಪಾಕಿಸ್ತಾನದ ಖೈಬರ್‌ ಫಕ್ತುನ್‌ಖ್ವಾ ಪ್ರಾಂತ್ಯದ ಖುರ್‍ರಮ್‌ ಗಡಿ ಭಾಗದಲ್ಲಿ ಉಗ್ರರು ಪಾಕಿಸ್ತಾನಿ ಸೈನಿಕರ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಪಾಕಿಸ್ತಾನ ಆರ್ಮಿ ಕ್ಯಾಪ್ಟನ್ ಸೇರಿದಂತೆ 11 ಜನ ಸೈನಿಕರನ್ನು ಉಗ್ರರು ಹತ್ಯೆಗೈದಿದ್ದಾರೆ. ಹುತಾತ್ಮ ಕ್ಯಾಪ್ಟನ್‌ ಅಬ್ದುಲ್‌ ಬಸಿತ್‌ ಅವರನ್ನು ಸೈನಿಕರು ಬರ್ಬರವಾಗಿ ಹತ್ಯೆಗೈದಿದ್ದಾರೆ. ದಾಳಿಯಲ್ಲಿ ಅನೇಕ ಸೈನಿಕರು ತೀವ್ರವಾಗಿ ಗಾಯಗೊಂಡಿದ್ದು ಕೆಲವು ಸೈನಿಕರನ್ನು ಉಗ್ರರು ಅಪಹರಿಸಿರುವುದು ವರದಿಯಾಗಿದೆ.

ಉಗ್ರ ಹಫೀಜ್‌ ಖಾನ್‌ 6ಜನ ಟೆಲಿಕಾಮ್‌ ಸಿಬ್ಬಂದಿಯನ್ನು ಒತ್ತೆಯಾಳುಗಳಾನ್ನಾಗಿ ಇರಿಕೊಂಡಿರುವುದನ್ನು ಪಾಕಿಸ್ತಾನದ ಪ್ರಮುಖ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಂಗಳವಾರದ ದಾಳಿಯ ಹಿಂದೆ ತೆಹ್ರಿಕ್ ಎ ತಾಲಿಬಾನ್ ಪಾಕಿಸ್ತಾನ್‌ (TTP) ಸಂಘಟನೆಯ ಕೈವಾಡವಿದೆ ಎಂದು ಪಾಕಿಸ್ತಾನ ಸೇನಾ ಮೂಲಗಳು ತಿಳಿಸಿವೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ಸೇನಾ ಪಡೆಗಳ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿ ಇದಾಗಿದೆ.

ಅಮೆರಿಕ ಅಪಘಾನಿಸ್ತಾನದಿಂದ ಸೇನಾ ಪಡೆಗಳ ಹಿಂತೆಗೆತಕ್ಕೆ ಮುಂದಾಗುತ್ತಿದ್ದಂತೆ ತಾಲಿಬಾನ್ ಮತ್ತು ಟಿಟಿಪಿ ಸಂಘಟನೆಗಳು ಕಾರ್ಯಪ್ರವ್ರತ್ತವಾಗಿದ್ದು ಪಾಕಿಸ್ತಾನ ನೆಲದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದೆ ಎಂದು ಪಾಕಿಸ್ತಾನ ಸರ್ಕಾರ ಜೂನ್‌ 13ರ ದಾಳಿಗೆ ಪ್ರತಿಕ್ರಿಯಿಸಿದೆ.

ಕಳೆದ ವಾರವಷ್ಟೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್ ದೇಶ ಹಿಂದೆಂದಿಗಿಂತಲೂ ಹೆಚ್ಚು ಅಪಾಯದಲ್ಲಿದೆ. ತೆಹ್ರಿಕ್‌ ಎ ತಾಲಿಬಾನ್‌ ಪಾಕಿಸ್ತಾನ್‌ ಸಂಘಟನೆ ದೇಶದ ಮುಂದಿರುವ ದೊಡ್ಡ ಆತಂಕವಾಗಿದೆ ಎಂದು ಸಂಸತ್‌ನಲ್ಲಿ ಹೇಳಿದ್ದರು. ಪ್ರಧಾನಿ ಹೇಳಿಕೆ ಬೆನ್ನಲ್ಲೇ ಈ ದಾಳಿ ನಡೆದಿದೆ.

TTP ಸಂಘಟನೆ ಮುಸ್ಲೀಂ ಮೂಲಭೂತ ಸಂಘಟನೆಯಾಗಿದ್ದು ಷರಿಯಾ ಕಾನೂನುಗಳನ್ನು ಪಾಕಿಸ್ತಾನದಲ್ಲಿ ಸ್ಥಾಪಿಸುವ ಗುರಗಳನ್ನಟ್ಟಿಕೊಂಡು ಭಯೋತ್ಪಾದಕ ಚಟುವಟಿಕೆಗೆಳನ್ನು ನಡೆಸುತ್ತಿದೆ.

ಇದನ್ನೂ ಓದಿ: ತಾಲಿಬಾನ್ ಆಕ್ರಮಣ: ತಜಕಿಸ್ತಾನದಲ್ಲಿ ರಕ್ಷಣೆ ಪಡೆದ 1000 ಕ್ಕೂ ಹೆಚ್ಚು ಅಫ್ಘಾನ್ ಸೈನಿಕರು

 

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...