ಪೊಲೀಸ್ ದೌರ್ಜನಕ್ಕೆ ಕಾರಣಕ್ಕೆ ಅಮಾಯಕರು ಶಿಕ್ಷೆ ಅನುಭವಿಸಿದ ಹಲವಾರು ಪ್ರಕರಣಗಳು ವರದಿಯಾಗಿವೆ. ಇತ್ತೀಚೆಗೆ ಕರ್ನಾಟಕದ ಮೂಡಿಗೆರೆ ಸೇರಿದಂತೆ ಹಲವು ಕಡೆ ಪೊಲೀಸ್ ದೌರ್ಜನ್ಯ ಘಟನೆಗಳು ನಡೆದಿವೆ. ‘ಅಧಿಕಾರದ ಅಹಂ’ ನಿಂದ ಪೊಲೀಸರು ಕಾನೂನು ಬಾಹಿರವಾಗಿ ನಡೆಸುವ ಕೃತ್ಯಗಳು ಒಂದೇ ದೇಶ, ಒಂದು ಪ್ರದೇಶಕ್ಕೆ ಸಿಮೀತವಾಗಿಲ್ಲ. ಅವು ವಿಶ್ವವ್ಯಾಪಿಯಾಗಿವೆ ಎಂಬುದನ್ನು ಪಾಕಿಸ್ತಾನದ ಈ ನಿದರ್ಶನ ರುಜುವಾತು ಮಾಡಿದೆ.
ಪಾಕಿಸ್ತಾನದ ಅಬುಜರ್ ಮಧು ಎಂಬ ಕಲಾವಿದನನ್ನು ಜೂನ್‌ನಲ್ಲಿ ಲಾಹೋರ್‌ನಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದರು ಮತ್ತು ಮಾಡೆಲ್ ಟೌನ್ ಪೊಲೀಸ್ ಠಾಣೆಯಲ್ಲಿ ಒಂದು ರಾತ್ರಿ ಬಂಧನದಲ್ಲಿಟ್ಟಿದ್ದರು. ಕಾರಣವೆಂದರೆ ಆತ ಉದ್ದ ಕೂದಲು ಬೆಳಿಸಿದ್ದಾಗಿತ್ತು ಎಂದು ಅವನ ಸ್ನೇಹಿತೆ, ಟ್ವಿಟರ್ ಬಳಕೆದಾರ ನತಾಶಾ ಜಾವೇದ್ ತಿಳಿಸಿದ್ದಾರೆ.
“ಅಬುಜರ್ ಒಬ್ಬ ಕಲಾವಿದ ಮತ್ತು ಶಿಕ್ಷಕ. ಅವರು ಕಲ್ಮಾ ಚಾಕ್ ಬಳಿ ರಿಕ್ಷಾಗಾಗಿ ಕಾಯುತ್ತಿದ್ದಾಗ ಪೊಲೀಸರು ಅವರ ಬಳಿ ಬಂದು ಗುರುತಿನ ಚೀಟಿಯನ್ನು ತೋರಿಸಲು ಕೇಳಿದ್ದಾರೆ. ಅವರು ಗುರುತಿನ ಚೀಟಿ ತೋರಿಸಿದರೂ ಸಹ ಅವರನ್ನು ಬಂಧಿಸಿ ಕರೆದೊಯ್ಯಲಾಯಿತು” ಎಂದು ಜಾವೇದ್ ಹೇಳಿದ್ದಾರೆ.
Abuzar kept explaining that he is a teacher and an artist. However, The police harassment did not stop and they forced him to sit in the van and he was taken to the police station.
— Natasha Javed (@natashajaved1) June 7, 2021
“ತನ್ನನ್ನು ಬಂಧಿಸಿದ್ದರ ಕಾರಣ ಕೇಳಿದರೆ “ನೀನು ದುರುಗುಟ್ಟುಕೊಂಡು ನೋಡುತ್ತಿದ್ದೆ. ಉದ್ದ ಕೂದಲು ಬೆಳಿಸಿದ್ದೆ. ಅಲ್ಲದೇ ಮುಂಜಾನೆ 3 ಗಂಟೆ ಸಮಯದಲ್ಲಿ ರಸ್ತೆಯಲ್ಲಿದ್ದೀಯ ಎಂಬ ಕಾರಣದಿಂದಲೂ ಬಂಧನ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾಗಿ ಅಬುಜಾರ್” ತಿಳಿಸಿದರು.
ನತಾಶಾ ಜಾವೇದ್ ಘಟನೆಯ ಕುರಿತು ದೀರ್ಘವಾಗಿ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಅವರ ಪ್ರಕಾರ, “ಯಾವುದೇ ಕಾರಣವಿಲ್ಲದೆ ಅಬುಜಾರ್‌ನನ್ನು ಬಂಧಿಸಲಾಯಿತು. ಈ ಬಗ್ಗೆ ಅವರು ಪ್ರಶ್ನಿಸಿದಾಗ ಅವರಿಗೆ ಬೆದರಿಕೆ ಒಡ್ಡಲಾಯಿತು. ಅವರ ಮೇಲೆ ದೌರ್ಜನ್ಯವೆಸಗಿ ಒಂದು ರಾತ್ರಿ ಜೈಲಿನಲ್ಲಿ ಕಳೆಯುವಂತೆ ಮಾಡಲಾಯಿತು. ಮಾರನೇಯ ದಿನ ಸ್ನೇಹಿತರ ಮಧ್ಯಪ್ರವೇಶದಿಂದ ಅವರನ್ನು ಬಿಡುಗಡೆ ಮಾಡಲಾಯಿತು” ಎಂದು ಆರೋಪಿಸಿದ್ದಾರೆ.
ಅವರನ್ನು ಏಕೆ ಬಂಧಿಸಲಾಯಿತು? ಅಬುಜಾರ್ ರಿಕ್ಷಾಗೆ ಕಾಯುತ್ತಿದ್ದರೆ ಹೊರತು ಅವರು ಖಾಸಗಿ ಕಾರ್‌ನಲ್ಲಿ ಕುಳಿತಿರಲಿಲ್ಲ.. ಅವರು ಉದ್ದನೆಯ ಕೂದಲು ಬಿಟ್ಟಿದ್ದರು.. ಅವರು ಹೇಗೆ ಕಾಣುತ್ತಿದ್ದಾರೆ ಎಂಬ ಕಾರಣದಿಂದ ಅವರನ್ನು ಬಂಧಿಸಬಹುದೇ? ಅವರು ಯಾವುದೇ ತಪ್ಪು ಮಾಡದೇ, ಸಮರ್ಪಕ ವಿಚಾರಣೆ ನಡೆಸದೇ ಬಂಧಿಸಬಹುದೆ? ಸೈಪುಲ್ಲ ಎಂಬ ಪೊಲೀಸ್ ಅಧಿಕಾರಿ ಬೇಕಂತಲೇ ಕಿರುಕುಳ ನೀಡಿದ್ದಾರೆ. ಈ ರೀತಿ ಅಧಿಕಾರ ದುರ್ಬಳಕೆ ಮಾಡಿದ ನಂತರವೂ ಅವರಿಗೆ ಯಾವುದೇ ಶಿಕ್ಷೆ ಇಲ್ಲ ಏಕೆ? ಎಂದು ಅವರ ಗೆಳತಿ ನತಾಶಾ ಜಾವೇದ್ ಪ್ರಶ್ನಿಸಿದ್ದಾರೆ.
ನತಾಶಾರವರ ಪೋಸ್ಟ್ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ತದನಂತರ ಬಹುತೇಕರು ಪಾಕ್ ಪೊಲೀಸ್ ದೌರ್ಜನ್ಯವನ್ನು ತೀವ್ರ ಪದಗಳಲ್ಲಿ ಟೀಕಿಸಿದ್ದಾರೆ. ಈ ದೇಶದಲ್ಲಿ ಕೂದಲು ಬೆಳೆಸುವುದು ಅಪರಾಧವೇ ಎಂದು ಹಲವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಜೈಶ್ರೀರಾಮ್ ಘೋಷಣೆ ಕೂಗುವಂತೆ ಮುಸ್ಲಿಂ ವೃದ್ಧನ ಮೇಲೆ ಹಲ್ಲೆ, ಗಡ್ಡ ಕಿತ್ತು ಚಿತ್ರಹಿಂಸೆ


