Homeಮುಖಪುಟಗುಜರಾತ್ ಪರಿಸ್ಥಿತಿ ಈಗ ಬದಲಾಗಲಿದೆ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ಗುಜರಾತ್ ಪರಿಸ್ಥಿತಿ ಈಗ ಬದಲಾಗಲಿದೆ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

- Advertisement -
- Advertisement -

2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿಆಮ್ ಆದ್ಮಿ ಪಕ್ಷವು ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ. “ನಮ್ಮ ಪಕ್ಷದ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದಾರೆ” ಎಂದು ಅಹಮದಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

“ದೆಹಲಿಯಲ್ಲಿ ವಿದ್ಯುತ್  ಉಚಿತವಾಗುವುದಾದರೇ, ಗುಜರಾತ್‌ನಲ್ಲಿ ಯಾಕೆ ಇಲ್ಲ ಎಂದು ಗುಜರಾತ್ ಜನರು ಯೋಜಿಸುತ್ತಿದ್ದಾರೆ. ಕಳೆದ 70 ವರ್ಷಗಳಿಂದ ಆಸ್ಪತ್ರೆಗಳ ಪರಿಸ್ಥಿತಿ ಬದಲಾಗಿಲ್ಲ ಎಂಬ ಬಗ್ಗೆಯೂ ಜನ ಚಿಂತಿಸುತ್ತಿದ್ದಾರೆ. ಆದರೆ, ಈಗ ಪರಿಸ್ಥಿತಿ ಬದಲಾಗುತ್ತದೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಗುಜರಾತ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಸೋಮವಾರ ಚಾಲನೆ ನೀಡಲು ಗುಜರಾತ್ ತಲುಪಿದ್ದಾರೆ ಎನ್ನಲಾಗಿದೆ. “ರಾಜ್ಯವು ಈಗ ಬದಲಾಗುತ್ತದೆ. ನಾಳೆ ಗುಜರಾತ್‌ಗೆ ಬರುತ್ತೇನೆ ಮತ್ತು ರಾಜ್ಯದ ಜನರನ್ನು ಭೇಟಿಯಾಗುತ್ತೇನೆ” ಎಂದು ಕೇಜ್ರಿವಾಲ್ ಭಾನುವಾರ ಗುಜರಾತಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಸರೋಜಿನಿ ಮಹಿಷಿ ವರದಿ ಜಾರಿಯಾಗಲಿ, ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ: ಟ್ವಿಟರ್ ಟ್ರೆಂಡ್

2021 ರಲ್ಲಿ ನಡೆದ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಎಂಸಿ) ಚುನಾವಣೆಯಲ್ಲಿ 120 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಆಮ್ ಆದ್ಮಿ ಪಾರ್ಟಿ ಗಳಿಸಿತ್ತು. ಕೇಜ್ರಿವಾಲ್ ನೇತೃತ್ವದ ಪಕ್ಷವು ಎಲ್ಲಾ ಸ್ಥಳೀಯ ಸಂಸ್ಥೆಗಳಾದ ಪುರಸಭೆ ನಿಗಮಗಳು, ಪುರಸಭೆಗಳು, ಜಿಲ್ಲೆ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲೂ ಸ್ಪರ್ಧಿಸಿತ್ತು. ಈ ಗೆಲುವಿನ ನಂತರ ಕೇಜ್ರಿವಾಲ್ ಅವರ ಎರಡನೇ ಗುಜರಾತ್ ಪ್ರವಾಸವಾಗಿದೆ.

ಆಶ್ರಮ ರಸ್ತೆಯಲ್ಲಿರುವ ಎಎಪಿಯ ಹೊಸ ರಾಜ್ಯ ಕಚೇರಿಯನ್ನು ಕೇಜ್ರಿವಾಲ್ ಉದ್ಘಾಟಿಸಲಿದ್ದಾರೆ. ಗುಜರಾತ್‌ನ ಹಿರಿಯ ಪತ್ರಕರ್ತ ಇಸುದಾನ್ ಗಧ್ವಿ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಎಎಪಿಗೆ ಸೇರಿದ್ದಾರೆ.


ಇದನ್ನೂ ಓದಿ: ಭೀಮಾ ಕೋರೆಗಾಂವ್‌ ಖೈದಿಗಳ ಬಿಡುಗಡೆ ಮಾಡಿ-ಮೋದಿಗೆ ನೊಬೆಲ್ ಪ್ರಶಸ್ತಿ ವಿಜೇತರು ಮತ್ತು ಯುರೋಪಿಯನ್‌ ಸಂಸದರ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆ ಬಹಿಷ್ಕರಿಸಬೇಡಿ: ಜಮ್ಮು-ಕಾಶ್ಮೀರದ ಜನತೆಗೆ ಮೆಹಬೂಬಾ ಮುಫ್ತಿ ಮನವಿ

0
'ದಕ್ಷಿಣ ಕಾಶ್ಮೀರದಲ್ಲಿ ಚುನಾವಣೆಯನ್ನು ಬಹಿಷ್ಕರಿಸಲು, ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳನ್ನು ಬಂಧಿತ ಕಾರ್ಮಿಕರನ್ನಾಗಿ ಮಾಡಲು ಅನಾಮಧೇಯ ಶಕ್ತಿಗಳು ಪ್ರಯತ್ನಿಸುತ್ತಿವೆ' ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆತಂಕ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ರಜೌರಿ...