Homeಕರ್ನಾಟಕಸರೋಜಿನಿ ಮಹಿಷಿ ವರದಿ ಜಾರಿಯಾಗಲಿ, ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ: ಟ್ವಿಟರ್ ಟ್ರೆಂಡ್

ಸರೋಜಿನಿ ಮಹಿಷಿ ವರದಿ ಜಾರಿಯಾಗಲಿ, ಕರ್ನಾಟಕದ ಉದ್ಯೋಗ ಕನ್ನಡಿಗರಿಗೆ ಸಿಗಲಿ: ಟ್ವಿಟರ್ ಟ್ರೆಂಡ್

ಯಡಿಯೂರಪ್ಪನವರೆ, ಕರ್ನಾಟಕದ ಶೇ.75 ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಿ. ಸರೋಜಿನಿ ಮಹಿಷಿ ವರದಿ ಸಂಪೂರ್ಣ ಅನುಷ್ಠಾನ ಮಾಡಿ ಎಂದು ಮೊಹಮ್ಮದ್ ಹನೀಫ್ ಎಂಬುವವರು ಟ್ವೀಟ್ ಮಾಡಿದ್ದಾರೆ.

- Advertisement -
- Advertisement -

ಸರೋಜಿನಿ ಮಹಿಷಿ ವರದಿ ಸಂಪೂರ್ಣ ಅನುಷ್ಠಾನವಾಗಬೇಕು ಮತ್ತು ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಸಿಗಲಿ ಎಂಬ ಹಕ್ಕೊತ್ತಾಯಗಳನ್ನಿಟ್ಟುಕೊಂಡು ಕರ್ನಾಟಕ ಜನಾಧಿಕಾರ ಪಕ್ಷ ಮತ್ತು ಕರ್ನಾಟಕ ರಣಧೀರ ಪಡೆಯಿಂದ ಇಂದು ಟ್ವಿಟರ್ ಅಭಿಯಾನ ನಡೆಸಲಾಯಿತು.

“ಕರುನಾಡು ನಮ್ಮದು, ನಾವು ಕನ್ನಡಿಗರು ನಮ್ಮ ನೆಲ, ನಮ್ಮ ಜಲ, ನಮ್ಮ ಗಾಳಿ ಅಂತೆಯೇ ಉದ್ಯೋಗವೂ ನಮ್ಮದೇ. ಕರ್ನಾಟಕಕ್ಕೆ ಭದ್ರ ಬುನಾದಿಯೊಂದು ಬೇಕಿದೆ ಅದು ಕನ್ನಡಿಗರಿಗೆ ಉದ್ಯೋಗದ ಮೂಲಕವೇ ಆಗಬೇಕಿದೆ. ಕನ್ನಡದ ಅಸ್ಮಿತೆಗಾಗಿ ಹೋರಾಡುವ ನಾವು ಕನ್ನಡದ ಉದ್ಯೋಗಕ್ಕೂ ಹೋರಾಡುವ. ಕ್ರಾಂತಿಯ ಕಿಡಿ ಆರದಿರಲಿ. ಕನ್ನಡಿಗರ ವೀರ ಧ್ವನಿ ಗಟ್ಟಿಯಾಗಲಿ” ಎಂಬ ಘೋಷಣೆಗಳೊಂದಿಗೆ ಹತ್ತಾರು ಸಾವಿರ ಟ್ವೀಟ್‌ಗಳು ದಾಖಲಾಗಿದ್ದು, ಉದ್ಯೋಗಕ್ಕಾಗಿ ದೊಡ್ಡ ದನಿ ಕೇಳಿಬಂದಿದೆ.

“ಅನ್ನ ಕೊಡುವ ಚಿನ್ನದ ನಾಡಿದು ಕರ್ನಾಟಕ, ಇಲ್ಲಿ ಉದಯಿಸಿವ ಪ್ರತೀ ಉದ್ಯೋಗಗಳೂ ಕನ್ನಡಿಗರಿಗಾಗೇ ಮೀಸಲು, ಗಟ್ಟಿ ದನಿಯಲ್ಲಿ ಹೇಳಿ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ” ಎಂದು ಕರ್ನಾಟಕ ರಣಧೀರರ ಪಡೆಯ ರಾಜ್ಯಾಧ್ಯಕ್ಷ ಹರೀಶ್ ಕುಮಾರ್ ಬಿ ಟ್ವೀಟ್ ಮಾಡಿದ್ದಾರೆ.

ನಮ್ಮ ಉದ್ದೇಶ ಇಷ್ಟೇ ಯಾವ ಕಂಪನಿ ಬ್ಯಾಂಕ್ ಗಳಿಗೆ ಹೋದ್ರು ಕನ್ನಡ ಬಿಟ್ಟು ಮಿಕ್ಕೆಲ್ಲಾ ಭಾಷೆಗಳನ್ನು ಕೇಳುತ್ತಿದ್ದೇವೆ. ಇನ್ಮೇಲೆ ಎಂತಹ ದೊಡ್ಡ ಕಂಪನಿಗಳಿಗೆ ಹೋದ್ರು ಬರೀ ಕನ್ನಡವೇ ಕೇಳಿಸಬೇಕು ರಾಜ್ಯೋತ್ಸವ ದೊಡ್ಡದಾಗಿ ಆಚರಣೆ ಆಗಬೇಕು.. ಎಲ್ಲೆಡೆ ಕನ್ನಡಿಗರೇ ಕಾಣಬೇಕು ಎಂದು ರೂಪೇಶ್ ರಾಜಣ್ಣನವರು ಟ್ವೀಟ್ ಮಾಡಿದ್ದಾರೆ.

ಯಡಿಯೂರಪ್ಪನವರೆ, ಕರ್ನಾಟಕದ ಶೇ.75 ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಿ. ಸರೋಜಿನಿ ಮಹಿಷಿ ವರದಿ ಸಂಪೂರ್ಣ ಅನುಷ್ಠಾನ ಮಾಡಿ ಎಂದು ಮೊಹಮ್ಮದ್ ಹನೀಫ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲೊಂದಾಗಿದೆ. ಭಾರತದ ಇತರ ರಾಜ್ಯಗಳಿಗೆ ಉದ್ಯೋಗ ಒದಗಿಸಿದೆ. ಆದರೆ ಎಲ್ಲಾ ಸರ್ಕಾರಗಳು ಮತ್ತು ಖಾಸಗಿ ಕಂಪನಿಗಳಿಂದ ಕನ್ನಡಿಗರು ನಿರಂತರವಾಗಿ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ ಎಂದು ಸಿದ್ದೇಶ್ ಎಚ್ ಟ್ವೀಟ್ ಮಾಡಿದ್ದಾರೆ.

ಈ ವರದಿ ಪ್ರಕಟವಾಗುವ ಹೊತ್ತಿಗೆ 18 ಸಾವಿರ ಕನ್ನಡಿಗರು ಸಮರ್ಪಕ ಉದ್ಯೋಗ ನೀತಿಗಾಗಿ ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ. ಕೆಲವು ಇಲ್ಲಿವೆ.


ಇದನ್ನೂ ಓದಿ: “ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗಲಿ”: ಸ್ವಾತಂತ್ರ್ಯ ದಿನಾಚರಣೆಯಂದು ದಿಟ್ಟ ಹೋರಾಟ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕನ್ನಡದ ನಿರುದ್ಯೋಗಿ ಯುವಕರ ಕಣ್ಣೀರು ಒರೆಸುವವರು ಯಾರು……? ???? ಅದಕ್ಕಾಗಿ ಎಲ್ಲರೂ ಒಂದಾಗೋಣ…. ಮುಂದೆ ಯಾದರೂ ಕನ್ನಡಕ್ಕಾಗಿ ಭಾಳೋಣ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...