Homeಕರೋನಾ ತಲ್ಲಣಕೊರೋನಾ ಟೆಸ್ಟ್‌ ವೇಳೆ ಮೂಗಿನಲ್ಲಿ ಸಿಕ್ಕಿ ಹಾಕಿಕೊಂಡ ಸ್ವಾಬ್‌ ಸ್ಟಿಕ್!

ಕೊರೋನಾ ಟೆಸ್ಟ್‌ ವೇಳೆ ಮೂಗಿನಲ್ಲಿ ಸಿಕ್ಕಿ ಹಾಕಿಕೊಂಡ ಸ್ವಾಬ್‌ ಸ್ಟಿಕ್!

- Advertisement -
- Advertisement -

‌ಕೊರೋನಾ ಟೆಸ್ಟ್ ಎಂದರೆ ಬಹುತೇಕರಿಗೆ ಒಂದು ರೀತಿಯ ಭಯ. ಮೂಗಿನೊಳಗೆ, ಬಾಯಿಯೊಳಗೆ ಕಡ್ಡಿ ಹಾಕಿ ಹಿಂಸೆ ಅನುಭವಿಸುತ್ತಾರೆ. ಆದರೆ ಅನಿವಾರ್ಯ ಆಗಿರುವುದರಿಂದ ಒಂದು ಕ್ಷಣದ ನೋವಿಗೆ ಟೆಸ್ಟ್‌ ಮಾಡಿಸದೇ ಇರಲು ಸಾಧ್ಯವಿಲ್ಲ. ಇಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ತೆಲೆಂಗಾಣದಲ್ಲಿ ಊರಿನ ಸರಪಂಚರ ಮೂಗಿನಲ್ಲಿ ಕೊರೋನಾ ಸ್ವ್ಯಾಬ್‌ ಟೆಸ್ಟಿಂಗ್‌ ಸ್ಟಿಕ್‌ ಸಿಕ್ಕಿಹಾಕೊಕೊಂಡಿದೆ. ನಂತರ ಗಂಟಲು ನಾಳಕ್ಕೆ ಹೋಗಿಬಿಟ್ಟಿದೆ. ಕೊರೋನಾ ಟೆಸ್ಟ್‌ ಮಾಡಲು ಗಂಟಲು ದ್ರವ ಮತ್ತು ಮೂಗಿನ ದ್ರವ ಪಡೆಯುವ ವೇಳೆ ಈ ಘಟನೆ ನಡೆದಿದೆ. ತೆಲೆಂಗಾಣದ ಕರೀಮ್‌ನಗರ ಜಿಲ್ಲೆಯ ವಿಂಕಟರೋಪಲ್ಲಿ ಹಳ್ಳಿಯಲ್ಲಿ ನಡೆದಿದೆ. ಶುಕ್ರವಾರ ಜೂನ್‌ 11 ರಂದು ಊರಿನ ಸರಪಂಚರಾದ ಜುವಾಜಿ ಶೇಖರ್‌ ಅವರ ಕೊರೋನಾ ಟೆಸ್ಟಿಂಗ್‌ ವೇಳೆ ಈ ಘಟನೆ ನಡೆದಿದೆ.

ಪಕ್ಕದ ಗೊಲ್ಲರ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಶುಶ್ರುಕಿಯರು ಊರಿನಲ್ಲಿ ಕೊರೋನಾ ಟೆಸ್ಟ್‌ ಮಾಡುತ್ತಿದ್ದ ವೇಳೆ ಈ ಅಚಾತುರ್ಯವಾಗಿದೆ. ಸರಪಂಚರ ಗಂಟಲಲ್ಲಿ ಕಡ್ಡಿ ಸಿಕ್ಕು ಹಾಕಿಕೊಂಡು ಅವರು ಒದ್ದಾಡುವಂತೆ ಆದಾಗ ತಕ್ಷಣ ಸ್ಥಳೀಯ ವೈದ್ಯರು ಕಡ್ಡಿ ತೆಗೆಯಲು ಪ್ರಯತ್ನಿಸಿದರು. ಸ್ಥಳೀಯ ವೈದ್ಯರಿಂದ ಇದು ಸಾಧ್ಯವಾಗದೇ ಹೋದಾಗ ಜಿಲ್ಲಾಸ್ಪತ್ರೆಗೆ ಕೊಂಡು ಹೋಗಿ ಎಂಡೋ ಸ್ಕೊಪಿ ಮೂಲಕ ಸ್ಬಾಬ್‌ ಸ್ಟಿಕ್‌ ಹೊರತೆಗೆಯಲಾಗಿದೆ.


ಇದನ್ನು ಓದಿ : ತೆಲಂಗಾಣ: ಕೆರೆಗೆ ಬೈಕ್‌ ಎಸೆದು ಪೆಟ್ರೋಲ್‌ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...