Homeಮುಖಪುಟಭಾರತದಿಂದ ನಿರ್ಗಮಿಸಲು ಸಮಯಾವಕಾಶ ಕೋರಿದ ಪಾಕ್ ಅಪ್ರಾಪ್ತರು; ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ

ಭಾರತದಿಂದ ನಿರ್ಗಮಿಸಲು ಸಮಯಾವಕಾಶ ಕೋರಿದ ಪಾಕ್ ಅಪ್ರಾಪ್ತರು; ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ

- Advertisement -
- Advertisement -

ಅಟ್ಟಾರಿ ಗಡಿಯ ಮೂಲಕ ಭಾರತದಿಂದ ನಿರ್ಗಮಿಸಲು ಮಾಡಿದ ಪ್ರಯತ್ನ ವಿಫಲವಾದ ನಂತರ ದೇಶ ತೊರೆಯಲು ಹೆಚ್ಚಿನ ಸಮಯ ಕೋರಿ ಪಾಕಿಸ್ತಾನದ ಮೂವರು ಅಪ್ರಾಪ್ತ ವಯಸ್ಕರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮಕ್ಕಳಾದ ಬೀಬಿ ಯಮೀನಾ, ಮುಹಮ್ಮದ್ ಮುದಾಸೀರ್ ಮತ್ತು ಮುಹಮ್ಮದ್ ಯೂಸುಫ್, ಪಾಕಿಸ್ತಾನಿ ಪ್ರಜೆ ಮುಹಮ್ಮದ್ ಫಾರೂಕ್ ಮತ್ತು ಮೈಸೂರಿನ ಮಹಿಳೆ ರಂಶಾ ಜಹಾನ್ ದಂಪತಿಗೆ ಜನಿಸಿದ ಪಾಕಿಸ್ತಾನಿ ನಾಗರಿಕರು. ಅವರ ತಾಯಿ ಮೇ 15 ರವರೆಗೆ ಸಮಯ ವಿಸ್ತರಣೆಯನ್ನು ಕೋರಿ ಮಕ್ಕಳ ಪರವಾಗಿ ಅರ್ಜಿ ಸಲ್ಲಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಕುಟುಂಬವು ಜನವರಿ 4, 2025 ರಂದು ಮಾನ್ಯ ವೀಸಾಗಳ ಮೇಲೆ ಭಾರತಕ್ಕೆ ಬಂದಿತು. ರಂಶಾ 2015 ರಲ್ಲಿ ಪಾಕಿಸ್ತಾನದ ಪಿಶಿನ್‌ನಲ್ಲಿ ಷರಿಯಾ ಕಾನೂನಿನಡಿಯಲ್ಲಿ ಫಾರೂಕ್ ಅವರನ್ನು ವಿವಾಹವಾದರೂ, ಅವರು ಪಾಕಿಸ್ತಾನಿ ಪೌರತ್ವವನ್ನು ಪಡೆದಿಲ್ಲ. ಆದರೆ, ಅವರ ಮಕ್ಕಳು ಪಾಕಿಸ್ತಾನಿ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ.

ಆರಂಭದಲ್ಲಿ ಅವರಿಗೆ ಜೂನ್ 18 ರವರೆಗೆ ಮಾನ್ಯವಾಗಿರುವಂತೆ ವೀಸಾ ನೀಡಲಾಗಿತ್ತು. ಆದರೆ, ಪಹಲ್ಗಾಮ್ ದಾಳಿ ಬಳಿಕ ಭಾರತ ಸರ್ಕಾರ ವೀಸಾಗಳನ್ನು ರದ್ದುಗೊಳಿಸಿದ ನಂತರ ಏಪ್ರಿಲ್ 30 ರೊಳಗೆ ದೇಶ ತೊರೆಯುವಂತೆ ಹೇಳಲಾಯಿತು. ಅವರು ಪಾಕಿಸ್ತಾನಕ್ಕೆ ಮರಳಲು ಅಟ್ಟಾರಿ ಗಡಿಯನ್ನು ತಲುಪಿದಾಗ, ಅವರ ತಂದೆ ಬರಲಿಲ್ಲ. ಆದ್ದರಿಂದ, ಅವರು ಅನಿವಾರ್ಯವಾಗಿ ಮೈಸೂರಿಗೆ ಹಿಂತಿರುಗಬೇಕಾಯಿತು.

ಬಲವಂತದ ಗಡೀಪಾರು ಮತ್ತು ತಮ್ಮ ತಂದೆಗೆ ಸುರಕ್ಷಿತ ಹಸ್ತಾಂತರದ ಕೊರತೆಯ ಭಯವನ್ನು ಉಲ್ಲೇಖಿಸಿ, ಅರ್ಜಿದಾರರು ಪರಿಹಾರ ಕೋರಿ ಹೈಕೋರ್ಟ್ ಅನ್ನು ಸಂಪರ್ಕಿಸಿದರು. ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಪ್ರಕರಣವನ್ನು ಮೇ 8 ರಂದು ವಿಚಾರಣೆಗೆ ನಿಗದಿಪಡಿಸಿದೆ.

ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಅಲ್ಪಾವಧಿ ಮತ್ತು ಸಾರ್ಕ್ ವೀಸಾಗಳನ್ನು ಹೊಂದಿರುವ ಪಾಕಿಸ್ತಾನಿ ಪ್ರಜೆಗಳು ಏಪ್ರಿಲ್ 27 ರೊಳಗೆ ಹೊರಹೋಗುವಂತೆ ಸೂಚಿಸಲಾಯಿತು, ವೈದ್ಯಕೀಯ ವೀಸಾ ಹೊಂದಿರುವವರಿಗೆ ಏಪ್ರಿಲ್ 29 ರ ಗಡುವು ವಿಧಿಸಲಾಗಿತ್ತು.

ಕಳೆದ ವಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ, ನಿಗದಿತ ಗಡುವನ್ನು ಮೀರಿ ಯಾವುದೇ ಪಾಕಿಸ್ತಾನಿ ಭಾರತದಲ್ಲಿ ಉಳಿಯದಂತೆ ನೋಡಿಕೊಳ್ಳುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ತೆಲಂಗಾಣ| ಅನುತ್ತೀರ್ಣದ ಭೀತಿಯಿಂದ ಆತ್ಮಹತ್ಯೆಗೆ ಶರಣಾದ ಇಬ್ಬರು ನೀಟ್ ಅಭ್ಯರ್ಥಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -