ಆರ್‌ಜೆಡಿ ನಾಯಕ-ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ವಿಶಿಷ್ಟವಾಗಿ ಹೋಳಿ ಆಚರಣೆ ಮಾಡಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಿವಾಸದವರೆಗೂ ಬೈಕ್ ಸವಾರಿ ನಡೆಸಿ, “ಪಲ್ಟು ಚಾಚಾ ಕಹಾ ಹೈ..'” ಎಂದು ಲೇವಡಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊ ವೈರಲ್ ಆಗಿದೆ.
ನಿತೀಶ್ ಕುಮಾರ್ ಅವರು ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಮುರಿದು, ನಂತರ ಬಿಜೆಪಿ ಸೇರಿ ಹೊಸ ಸರ್ಕಾರವನ್ನು ರಚಿಸಿದಾಗಿನಿಂದ ವಿರೋಧ ಪಕ್ಷದ ನಾಯಕರು ಅವರನ್ನು ಅಪಹಾಸ್ಯ ಮಾಡಲು ಹೆಚ್ಚಾಗಿ ‘ಪಲ್ಟು ಕುಮಾರ್’ ಪದ ಬಳಸುತ್ತಾರೆ.
ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ತೇಜ್ ಪ್ರತಾಪ್ ಹೋಳಿ ಬಣ್ಣದೊಂದಿಗೆ ಬೈಕ್ ಸವಾರಿ ಮಾಡಿದ್ದಾರೆ. ಮತ್ತೊಬ್ಬ ವ್ಯಕ್ತಿಯೊಂದಿಗೆ ಮುಖ್ಯಮಂತ್ರಿಯ ನಿವಾಸವನ್ನು ಸಮೀಪಿಸುತ್ತಿದ್ದಂತೆ ಪದೇಪದೇ “ಪಾಲ್ಟು ಚಾಚಾ ಕಹಾಂ? ಪಾಲ್ಟು ಚಾಚಾ…” ಎಂದು ಕೂಗಿದ್ದಾರೆ.
ತೇಜ್ ಪ್ರತಾಪ್ ಅವರನ್ನು ದ್ವಿಚಕ್ರ ವಾಹನಗಳಲ್ಲಿ ಅವರ ಬೆಂಬಲಿಗರ ಗುಂಪು ಹಿಂಬಾಲಿಸಿತು, ಅವರೂ ಸಹ ಘೋಷಣೆಗಳನ್ನು ಕೂಗಿದರು.
ಔರಂಗಜೇಬ್ ಸಮಾಧಿ ತೆರವಿಗೆ ಕರೆ: ಸಂಭಾಜಿನಗರ ಪ್ರವೇಶಕ್ಕೆ ಹಿಂದುತ್ವ ನಾಯಕನಿಗೆ ಏ. 5 ರವರೆಗೆ ನಿಷೇಧ


