Homeಅಂತರಾಷ್ಟ್ರೀಯಸುಡಾನ್‌ನ ಅಲ್‌-ಪಾಶೆರ್ ನಿಯಂತ್ರಣಕ್ಕೆ ಪಡೆದ ಅರೆಸೈನಿಕ ಪಡೆ ಆರ್‌ಎಸ್‌ಎಫ್‌ : ವ್ಯಾಪಕ ಹಿಂಸಾಚಾರದ ವರದಿ

ಸುಡಾನ್‌ನ ಅಲ್‌-ಪಾಶೆರ್ ನಿಯಂತ್ರಣಕ್ಕೆ ಪಡೆದ ಅರೆಸೈನಿಕ ಪಡೆ ಆರ್‌ಎಸ್‌ಎಫ್‌ : ವ್ಯಾಪಕ ಹಿಂಸಾಚಾರದ ವರದಿ

- Advertisement -
- Advertisement -

ಸುಡಾನ್‌ನ ಉತ್ತರ ದಾರ್ಫರ್ ರಾಜ್ಯದ ರಾಜಧಾನಿ ಅಲ್- ಫಾಶೆರ್‌ ಅನ್ನು ರ‍್ಯಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಆರ್‌ಎಸ್‌ಎಫ್ ಸೂಡಾನ್‌ನ ಒಂದು ಶಕ್ತಿಶಾಲಿ ಪ್ಯಾರಾ ಮಿಲಿಟರಿ ದಳವಾಗಿದ್ದು, ಇದು ಸಾಮಾನ್ಯ ಸೇನೆಯಾದ ಸೂಡಾನೀಸ್ ಆರ್ಮ್ಡ್ ಫೋರ್ಸಸ್ (ಎಸ್‌ಎಎಫ್‌) ಗಿಂತ ಸಂಪೂರ್ಣವಾಗಿ ಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ.

2003ರಲ್ಲಿ ದಾರ್ಫರ್‌ನಲ್ಲಿ ನಡೆದ ಜನಾಂಗೀಯ ದಬ್ಬಾಳಿಕೆಯ ಸಮಯದಲ್ಲಿ ಸರ್ಕಾರಿ ಬೆಂಬಲಿತ ಜಂಜಾವೀದ್ ಮಿಲೀಷ್ಯಾಗಳಿಂದ ಉಗಮವಾದ ಈ ಗುಂಪನ್ನು 2013ರಲ್ಲಿ ಔಪಚಾರಿಕವಾಗಿ ಆರ್‌ಎಸ್‌ಎಫ್‌ ಘೋಷಿಸಲಾಯಿತು.

ಇದರ ನಾಯಕ ಮೊಹಮ್ಮದ್ ಹಮದಾನ್ ದಗಾಲೋ (ಹೆಮೆದ್ತಿ) ಚಿನ್ನದ ಗಣಿಗಳು ಮತ್ತು ಯುಎಇ ಒಡಂಬಡಿಕೆಗಳ ಮೂಲಕ ಭಾರೀ ಆರ್ಥಿಕ ಶಕ್ತಿಯನ್ನು ಸಂಗ್ರಹಿಸಿದ್ದಾನೆ. 2023ರಲ್ಲಿ ಆರಂಭವಾದ ಸೂಡಾನ್ ಆಂತರಿಕ ಯುದ್ಧದಲ್ಲಿ ಆರ್‌ಎಸ್‌ಎಫ್‌ ಮತ್ತು ಸರ್ಕಾರಿ ಸೇನೆ ನಡುವೆ ಘೋರ ಸಂಘರ್ಷ ನಡೆಯುತ್ತಿದ್ದು, ಅಕ್ಟೋಬರ್ 26,2025ರಂದು ಅಲ್‌ ಫಾಶೆರ್ ನಗರವನ್ನು ವಶಪಡಿಸಿಕೊಂಡು ದಾರ್ಫರ್‌ನ ಐದೂ ರಾಜ್ಯಗಳನ್ನು ಆರ್‌ಎಸ್‌ಎಫ್‌ ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತಂದುಕೊಂಡಿದೆ.

ಆರ್‌ಎಸ್‌ಎಫ್‌ ಮೇಲೆ ಜನಾಂಗೀಯ ಶುದ್ಧೀಕರಣ, ಅತ್ಯಾಚಾರ, ನಾಗರಿಕರ ಹತ್ಯೆ, ಆಹಾರ ಸರಬರಾಜಿಗೆ ತಡೆ ಮತ್ತು ಮಾನವೀಯತೆ ವಿರೋಧಿ ಕೃತ್ಯಗಳ ಆರೋಪಗಳಿವೆ. ಇದು ಸರ್ಕಾರಿ ಸೇನೆಯ ಭಾಗವಲ್ಲದಿದ್ದರೂ, ಹಿಂದೆ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿತ್ತು. ಈಗ ಸಂಪೂರ್ಣ ದಂಗೆಗಾರ ಶಕ್ತಿಯಾಗಿ ಪರಿಣಮಿಸಿದೆ.

ಆರ್‌ಎಸ್‌ಎಫ್‌ ಅಲ್‌-ಪಾಶೆರ್‌ ಅನ್ನು ವಶಪಡಿಸಿಕೊಂಡ ಬಳಿಕ ದಾರ್ಫರ್‌ ಪ್ರದೇಶದಲ್ಲಿ ಭಯಾನಕ ಮಾನವೀಯ ಸಂಕಷ್ಟಗಳು ಮತ್ತು ರಾಜಕೀಯ ಬದಲಾವಣೆಗಳು ಸಂಭವಿಸಿವೆ ಎಂದು ವರದಿಯಾಗಿದೆ. ಸೂಡಾನ್ ಸೇನೆಯ ನಾಯಕ ಅಬ್ದುಲ್ ಫತ್ಹ್ ಅಲ್-ಬುರ್ಹಾನ್ ಅವರು ಅಕ್ಟೋಬರ್ 27ರಂದು ಸೇನೆಯನ್ನು ‘ಸುರಕ್ಷಿತ ಸ್ಥಳಗಳಿಗೆ’ ಕರೆಸಿಕೊಂಡಿರುವುದಾಗಿ ಘೋಷಿಸಿದ್ದಾರೆ.

ಆರ್‌ಎಸ್‌ಎಫ್‌ ದೇಶವನ್ನು ವಿಭಜಿಸುವ ಆಂತಕ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾದ ವಿಡಿಯೋಗಳಲ್ಲಿ ಆರ್‌ಎಸ್‌ಎಫ್‌ನವರು ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುವ, ನಾಗರಿಕರು ಜೀವ ಉಳಿಸಿಕೊಳ್ಳಲು ಓಡುವ ಮತ್ತು ಆರ್‌ಎಸ್‌ಎಫ್‌ನವರು ಅವರನ್ನು ಹಿಡಿದು ಬೇಕಾಬಿಟ್ಟಿ ಹತ್ಯೆ ಮಾಡಿ ಸಂಭ್ರಮಿಸಿದ ಭಯಾನಕರ ದೃಶ್ಯಗಳಿವೆ.

ಆರ್‌ಎಸ್‌ಎಫ್‌ ಅಲ್‌-ಫಾಶೆರ್‌ ಅನ್ನು ವಶಪಡಿಸಿಕೊಂಡು ದಾರ್ಫರ್ ಅನ್ನು ನಿಯಂತ್ರಣಕ್ಕೆ ಪಡೆದ ಬಳಿಕ 2,000ಕ್ಕೂ ಹೆಚ್ಚು ನಾಗರಿಕರನ್ನು (ಮಹಿಳೆಯರು ಮತ್ತು ಮಕ್ಕಳು ಸೇರಿ) ನಿರ್ದಯವಾಗಿ ಕೊಂದಿದೆ ಎಂದು ಐರೋಪಾ ಸಂಸ್ಥೆಯ ಒಂದು ವರದಿಯ ಆರೋಪಿಸಿದೆ.

ಯೇಲ್ ಹ್ಯೂಮನಿಟೇರಿಯನ್ ರಿಸರ್ಚ್ ಲ್ಯಾಬ್‌ನ ಸ್ಯಾಟೆಲೈಟ್ ಚಿತ್ರಗಳು ದಾರ್ಫರ್‌ನಲ್ಲಿ ಶವಗಳ ರಾಶಿ ಮತ್ತು ಜನರು ಜೀವ ಉಳಿಸಿಕೊಳ್ಳು ಓಡುತ್ತಿರುವುದನ್ನು ತೋರಿಸಿವೆ ಎಂದು ವರದಿಯಾಗಿದೆ.

ವಿಶ್ವ ಸಂಸ್ಥೆ (ಯುಎನ್‌) ಮತ್ತು ಆಫ್ರಿಕನ್ ಯೂನಿಯನ್ (ಎಯು) ನಾಗರಿಕರ ರಕ್ಷಣೆ ಮತ್ತು ತಕ್ಷಣದ ಶಾಂತಿ ಘೋಷಣೆಗೆ ಕರೆ ನೀಡಿವೆ. ಯುಎನ್‌ ಅಧ್ಯಕ್ಷ ಅಂಟೊನಿಯೋ ಗುಟೆರೆಸ್ ಅಲ್- ಪಾಶೆರ್ ವಶಪಡಿಸಿಕೊಂಡ ಬಳಿಕದ ಬೆಳವಣಿಗಯನ್ನು ‘ಅತ್ಯಂತ ಭೀಕರ’ ಎಂದಿದ್ದಾರೆ.

ದಾರ್ಫರ್ ಗವರ್ನರ್ ಮಿನ್ನಿ ಅರ್ಕೋ ಮಿನಾವಿ ವಿದೇಶಿ ಗೌಪ್ಯ ಸೇವೆಗಳು (ಯುಎಇ ಸೇರಿ) ಆರ್‌ಎಸ್‌ಎಫ್‌ಗೆ ಸಹಾಯ ಮಾಡಿವೆ ಎಂದು ಆರೋಪಿಸಿದ್ದಾರೆ. ಅಮೆರಿಕದ ಕಾನೂನುಸಭಾ ಸದಸ್ಯರು ಯುಎಇಯನ್ನು ಹೊಣೆ ಮಾಡಲು ಆಗ್ರಹಿಸಿದ್ದಾರೆ.

ಸುಡಾನ್‌ನ ರಾಜಕೀಯ ಮತ್ತು ಮಾನವ ಹಕ್ಕು ಸಂಘಟನೆಗಳು ಮಾನವೀಯತೆ ಮೇಲಿನ ಈ ಭೀಕರ ಹಿಂಸಾಚಾರಕ್ಕೆ ಆರ್‌ಎಸ್‌ಎಫ್‌ ಮತ್ತು ಎಸ್‌ಎಎಫ್‌ ಇಬ್ಬರನ್ನೂ ಯುದ್ಧಪರಾಧದ ಹೊಣೆ ಮಾಡುವಂತೆ ಒತ್ತಾಯಿಸಿವೆ.

ಗಾಝಾ ಮೇಲೆ ‘ಪ್ರಬಲ ದಾಳಿ’ಗೆ ನೆತನ್ಯಾಹು ಆದೇಶ : 30 ಪ್ಯಾಲೆಸ್ತೀನಿಯರನ್ನು ಹತ್ಯೆಗೈದ ಇಸ್ರೇಲ್ ಸೇನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...

ಮೊದಲ ಪತ್ನಿಗೆ ಮುಸ್ಲಿಂ ಪತಿ ಜೀವನಾಂಶ ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್

ಎರಡನೇ ಪತ್ನಿಯ ಮೇಲಿನ ಆರ್ಥಿಕ ಜವಾಬ್ದಾರಿ ಕುರಿತ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ಜೀವನಾಂಶ ಪಾವತಿಸುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಎಲ್ಲ ಪತ್ನಿಯರನ್ನು ಸಮಾನವಾಗಿ...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು...

ಎಸ್‌ಐಆರ್‌ನ ನಿಜವಾದ ಉದ್ದೇಶ ಎನ್‌ಆರ್‌ಸಿ : ಮಮತಾ ಬ್ಯಾನರ್ಜಿ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್‌) ಹಿಂದಿನ ಕೇಂದ್ರ ಸರ್ಕಾರದ ನಿಜವಾದ ಉದ್ದೇಶ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮಾಡುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ನವೆಂಬರ್...

ಬೆಂಗಳೂರು ಚಲೋ: ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಚಿವ ಮಹದೇವಪ್ಪ: ಸಿಎಂ ಜೊತೆ ಚರ್ಚಿಸುವ ಭರವಸೆ 

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ‘ಬೆಂಗಳೂರು ಚಲೋ’...

ಛತ್ತೀಸ್‌ಗಢ : ಬಿಜಾಪುರದಲ್ಲಿ 41 ಮಾವೋವಾದಿಗಳು ಶರಣಾಗತಿ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಬುಧವಾರ (ನವೆಂಬರ್ 26) 41 ಮಂದಿ ನಕ್ಸಲರು ಶರಣಾಗಿದ್ದು, ಈ ಪೈಕಿ 32 ಮಂದಿಯ ತಲೆಗೆ ಒಟ್ಟು 1.19 ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿತ್ತು ಎಂದು ವರದಿಯಾಗಿದೆ. ಸರ್ಕಾರದ ಹೊಸ...

ಬೆಂಗಳೂರು ಚಲೋ: ಧರಣಿ ಸ್ಥಳಕ್ಕೆ ಬಾರದ ಸಚಿವರು, ಕೋಪಗೊಂಡು ರಸ್ತೆಗಿಳಿದ ಪ್ರತಿಭಟನಾಕಾರರು

ಕೇಂದ್ರ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ನಿರ್ಲಜ್ಜ ಧೋರಣೆಯ ವಿರುದ್ಧ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬೃಹತ್ 'ಬೆಂಗಳೂರು ಚಲೋ' ಬುಧವಾರ (ನವೆಂಬರ್ 26) ಫ್ರೀಡಂ...