ನಾಪತ್ತೆಯಾದ 20 ವರ್ಷದ ಭಾರತೀಯ ವಿದ್ಯಾರ್ಥಿನಿ ಸುದೀಕ್ಷಾ ಕೊನಾಂಕಿ ಮೃತಪಟ್ಟಿದ್ದಾರೆಂದು ಘೋಷಿಸುವಂತೆ ಆಕೆಯ ಪೋಷಕರು ಡೊಮಿನಿಕನ್ ರಿಪಬ್ಲಿಕ್‌ನ ಪೊಲೀಸರನ್ನು ಕೋರಿದ್ದಾರೆ ಎಂದು ಅಮೆರಿಕದ ಮಾಧ್ಯಮ ವರದಿಗಳು ತಿಳಿಸಿವೆ.
ಭಾರತದ ಪ್ರಜೆ ಹಾಗೂ ಅಮೆರಿಕದ ಖಾಯಂ ನಿವಾಸಿಯಾಗಿರುವ ಸುದೀಕ್ಷಾ ಅವರು ಮಾರ್ಚ್ 6ರಂದು ಪಂಟಾ ಕಾನಾ ಪಟ್ಟಣದ ರಿಯು ರಿಪಬ್ಲಿಕ್ ರೆಸಾರ್ಟ್‌ನಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದರು. ನಂತರ ಡೊಮಿನಿಕನ್ ರಿಪಬ್ಲಿಕ್‌ಗೆ ರಜಾದಿನ ಕಳೆಯಲು ತೆರಳಿದ ಆಕೆ ಕಾಣೆಯಾಗಿದ್ದಾರೆ. ವ್ಯಾಪಕ ಹುಡುಕಾಟದ ಹೊರತಾಗಿಯೂ, ಆಕೆ ಪತ್ತೆಯಾಗಿಲ್ಲ ಎನ್ನಲಾಗಿದೆ.
ಕೆರಿಬಿಯನ್ ದೇಶವಾದ ಡೊಮಿನಿಕನ್ ರಿಪಬ್ಲಿಕ್ ಮತ್ತು ಅಮೆರಿಕದ ಫೆಡರಲ್ ಕಾನೂನು ಜಾರಿ ಸಂಸ್ಥೆಗಳ ಅಧಿಕಾರಿಗಳು ಸುದೀಕ್ಷಾ ಅವರ ನಾಪತ್ತೆ ಕುರಿತು ತನಿಖೆ ಕೈಗೊಂಡಿದ್ದಾರೆ.
ಸುದೀಕ್ಷಾ ಸಾವನ್ನಪ್ಪಿದ್ದಾಗಿ ಘೋಷಿಸಲು ಕೋರಿ ಆಕೆಯ ಪೋಷಕರು ಪತ್ರ ಬರೆದಿದ್ದಾರೆ ಎಂದು ಡೊಮಿನಿಕನ್ ರಿಪಬ್ಲಿಕ್ ರಾಷ್ಟ್ರೀಯ ಪೊಲೀಸ್ ವಕ್ತಾರ ಡಿಯಾಗೋ ಪೆಸ್ಕ್ವೇರಾ ಹೇಳಿದ್ದಾರೆ ಎಂದು ಎನ್‌ಬಿಸಿ ನ್ಯೂಸ್ ಮಂಗಳವಾರ ವರದಿ ಮಾಡಿದೆ.
ಡೊಮಿನಿಕನ್ ರಿಪಬ್ಲಿಕ್ ಅಧಿಕಾರಿಗಳು ಕೊನೆಯದಾಗಿ ಸುದೀಕ್ಷಾ ಅವರ ಜೊತೆಗಿದ್ದವರು ಎಂದು ಹೇಳಲಾದ ಸ್ಟೀವನ್ ರೈಬೆ ಎಂಬಾತನ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್ ನ್ಯೂಸ್ ವರದಿ ಮಾಡಿದೆ.
ಡೊಮಿನಿಕನ್ ರಿಪಬ್ಲಿಕ್ ಅಟಾರ್ನಿ ಜನರಲ್ ಯೆನಿ ಬೆರೆನಿಸ್ ರೆನೊಸೊ ಅವರು ಸ್ಟೀವನ್ ರೈಬೆ ಅವರನ್ನು ಆರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದಾರೆ ಮತ್ತು ಸ್ಥಳೀಯ ಪ್ರಾಸಿಕ್ಯೂಟರ್‌ಗಳು ವಿಚಾರಣೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣದಲ್ಲಿ ರೈಬೆ ಅವರನ್ನು ಶಂಕಿತ ಎಂದು ಪರಿಗಣಿಸಲಾಗಿಲ್ಲ ಮತ್ತು ಅವರ ಮೇಲೆ ಯಾವುದೇ ಆರೋಪ ಹೊರಿಸಲಾಗಿಲ್ಲ. ರೈಬೆ ಅವರ ಪಾಸ್‌ಪೋರ್ಟ್ ಅನ್ನು ಏಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಮಾರ್ಚ್ 6ರ ಮುಂಜಾನೆ ಕೊನಾಂಕಿ ಕಾಣೆಯಾದಾಗಿನಿಂದ, ಮಿನ್ನೇಸೋಟದ ಸೇಂಟ್ ಕ್ಲೌಡ್ ಸ್ಟೇಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾದ 22 ವರ್ಷದ ರೈಬೆ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಪೊಲೀಸ್ ಕಣ್ಗಾವಲಿನಲ್ಲಿದ್ದಾರೆ. ಅವರನ್ನು ಹಲವು ಬಾರಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಆತನ ಪೋಷಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 6ರ ಮುಂಜಾನೆ ಪಂಟಾ ಕಾನಾ ಬೀಚ್‌ನಿಂದ ಸುದೀಕ್ಷಾ ಅವರು ನಾಪತ್ತೆಯಾದ ಬಳಿಕ ಅವರ ಶಂಕಿತ ಸಾವಿನ ವಿಚಾರದಲ್ಲಿ ಯಾರ ಮೇಲೆಯೂ ಅಥವಾ ಯಾವುದೇ ಅನುಮಾನ ಇಲ್ಲ ಎಂದಿರುವ ಸುದೀಕ್ಷಾ ಪೋಷಕರು, ಸೋಮವಾರ ಅಧಿಕಾರಿಗಳಿಗೆ ಔಪಚಾರಿಕ ಪತ್ರ ಬರೆದಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಕದನ ವಿರಾಮ ಮುರಿದ ಇಸ್ರೇಲ್, ಗಾಝಾ ಪಟ್ಟಿಯಾದ್ಯಂತ ವೈಮಾನಿಕ ದಾಳಿ; 200ಕ್ಕೂ ಅಧಿಕ ಜನರು ಸಾವು


