ನವದೆಹಲಿ: ಕೇಂದ್ರ ಸರ್ಕಾರದ ನೀತಿಯೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಖಾತೆ ತೆರೆಯಲು ಪೋಷಕರ ಅನುಮತಿ ಕಡ್ಡಾಯ ಎಂದು ತೀರ್ಮಾನಿಸಿದೆ.
ಈ ನೀತಿಗೆ ಕೇಂದ್ರ ಸರ್ಕಾರ 2023ರಲ್ಲೇ ಸಂಸತ್ತಿನ ಅನುಮೋದನೆ ಪಡೆದುಕೊಂಡು ಡಿಜಿಟಲ್ ಖಾಸಗಿ ಮಾಹಿತಿ ರಕ್ಷಣಾ ಕಾಯ್ದೆಗೆ ಕೆಲವೊಂದು ತಿದ್ದಪಡಿ ಮಾಡಿದೆ. ಅಲ್ಲದೇ ಹೊಸ ಕರಡು ವರದಿಯನ್ನು ಶುಕ್ರವಾರ(ಜ.4) ಬಿಡುಗಡೆ ಮಾಡಿದೆ.
ಇನ್ನು ಈ ಮಹತ್ವದ ನಿರ್ಧಾರದ ಬಗ್ಗೆ ಜನರು ಅಭಿಪ್ರಾಯಗಳನ್ನು ತಿಳಿಸಲು ಫೆಬ್ರವರಿ.18 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹೀಗೆ ಸಂಗ್ರಹವಾಗುವ ಅಭಿಪ್ರಾಯಗಳನ್ನು ಆಧರಿಸಿದ ಬಳಿಕ ಅಂತಿಮ ವರದಿ ಬಿಡುಗಡೆಗೆ ಸರ್ಕಾರ ಮುಂದಾಗಿದೆ. ನಂತರ ಈ ಕರಡು ವರದಿ ಅನ್ವಯ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರಯಬೇಕಾದರೆ ಪೋಷಕರ ಅನುಮತಿ ಕಡ್ಡಾಯವಾಗಿದೆ. ಅದರೊಂದಿಗೆ ಕಂಪೆನಿಗಳು ತಮ್ಮ ದಾಖಲೆಗಳನ್ನು ಅಳಿಸುವಂತೆ ಹಾಗೂ ದಾಖಲೆಗಳನ್ನು ಯಾಕೆ ಕಲೆ ಹಾಕುತ್ತಿದ್ದೀರಿ ಎಂದು ಮಾಹಿತಿ ಪಡೆಯುವ ಹಾಗೂ ಖಾಸಗಿ ಮಾಹಿತಿ ರಕ್ಷಣೆ ಮಾಡಿಕೊಳ್ಳುವ ಅಧಿಕಾರ ಬಳಕೆದಾರನಿಗೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಕರಡು ನಿಯಮದ ಪ್ರಕಾರ ಮಕ್ಕಳ ವೈಯಕ್ತಿಕ ದತ್ತಾಂಶ ದಾಖಲಿಸುವ ಮೊದಲು ಪೋಷಕರ ಒಪ್ಪಿಗೆ ಪಡೆಯಲಾಗಿದೆಯೇ ಎಂಬುದನ್ನು ಸಾಮಾಜಿಕ ಜಾಲತಾಣ ವೇದಿಕೆಗಳು ಖಚಿತಪಡಿಸಿಕ್ಳೊಬೇಕು ಎಂಬ ಷರತ್ತು ವಿಧಿಸಲಾಗಿದೆ. ಪೋಷಕರೆಂದು ಗುರುತಿಸಲಾದ ವ್ಯಕ್ತಿ ವಯಸ್ಕರೇ ಅಲ್ಲವೇ ಎಂಬುದನ್ನು ಪರಿಶೀಲಿಸಲು ಸೂಕ್ತ ವ್ಯವಸ್ಥೆ ರೂಪಿಸಿಕೊಳ್ಳಲು ಸೂಚಿಸಲಾಗಿದೆ.
ಮೆಟಾ, ಗೂಗಲ್ ಮುಂತಾದ ಬೃಹತ್ ಟೆಕ್ ಕಂಪನಿಗಳು ಕಾಯಿದೆಯಲ್ಲಿನ ಮಕ್ಕಳ ವ್ಯಾಖ್ಯಾನವನ್ನು ಬದಲಾಯಿಸಬೇಕು ಎಂದು ಬಯಸುತ್ತಿವೆ. ಮಕ್ಕಳ ವಯಸ್ಸನ್ನು 18 ವರ್ಷದ ಬದಲು 14 ವರ್ಷಕ್ಕೆ ಸೀಮಿತಗೊಳಿಸುವಂತೆ ಇವು ಬೇಡಿಕೆ ಇಟ್ಟಿವೆ.
ಪ್ರಸ್ತಾವಿತ ನಿಯಮಗಳು 2023ರ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಕಾಯ್ದೆಯ ನಿಬಂಧನೆಗಳನ್ನು ಜಾರಿಗೊಳಿಸಲು ಪ್ರಮುಖವಾಗಿವೆ. ಕಾಯ್ದೆಯು ಆಗಸ್ಟ್ 2023ರಲ್ಲಿಯೇ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದಿದ್ದರೂ ಅದರ ಜಾರಿಗಾಗಿ ನಿಯಮಗಳನ್ನು ರೂಪಿಸಲಾಗುತ್ತಿದೆ.
2023ರ ಡೇಟಾ ಸಂರಕ್ಷಣೆ ಕಾಯ್ದೆಯು ವೈಯಕ್ತಿಕ ಗೋಪ್ಯತೆಯನ್ನು ಬಲಪಡಿಸುವುದಿಲ್ಲ ಮತ್ತು ವ್ಯಕ್ತಿಗಳ ಡೇಟಾಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸರಕಾರೇತರ ಸಂಸ್ಥೆಗಳ ಮೇಲೆ ಸಾಕಷ್ಟು ಹೊಣೆಗಾರಿಕೆಯನ್ನು ಹೊರಿಸುವುದಿಲ್ಲ ಎಂಬ ಕಳವಳಗಳನ್ನು ವಿಮರ್ಶಕರು ವ್ಯಕ್ತಪಡಿಸಿದ್ದಾರೆ.
ಕೊಡಗು: ಮಸೀದಿ ನಿರ್ಮಾಣಕ್ಕೆ ಹಿಂದೂ, ಕ್ರೈಸ್ತರ ನೆರವು; ವಿಶಿಷ್ಟ ಶೈಲಿಯ ಮಸೀದಿ ಉದ್ಘಾಟನೆ


