ಚಳಿಗಾಲದ ಅಧಿವೇಶನ ಪ್ರಾರಂಭವಾದ ನಂತರ ಸಂಸತ್ತಿನ ಹೊರಗೆ ವಿಪಕ್ಷಗಳು ನಡೆಸುತ್ತಿರುವ ಸರಣಿ ಪ್ರತಿಭಟನೆ ಬುಧವಾರ ಕೂಡಾ ಮುಂದುವರೆದಿದೆ. ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಆವರಣದಲ್ಲಿ ವಿನೂತನ ಪ್ರತಿಭಟನಾ ಪ್ರದರ್ಶನ ನಡೆಸಿದ್ದು, ಬಿಜೆಪಿ ಸಂಸದರಿಗೆ ಕೆಂಪು ಗುಲಾಬಿ ಮತ್ತು ತ್ರಿವರ್ಣ ಧ್ವಜವನ್ನು ನೀಡಿದರು. ಅದಾನಿ ವಿವಾದ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚೆಗಾಗಿ ವಿಪಕ್ಷಗಳು ಒತ್ತಾಯಿಸುತ್ತಿವೆ. ಸಂಸತ್ ಅಧಿವೇಶನ
ಸಂಸತ್ತಿಗೆ ಆಗಮಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕರೂ ಆದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಖುದ್ದು ಗುಲಾಬಿ ಮತ್ತು ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು. ಸಂಸತ್ ಅಧಿವೇಶನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸಂಸತ್ತಿನ ಮುಂದೆ ತಮ್ಮ ಕಾರಿನಿಂದ ಕೆಳಗಿಳಿದ ರಾಜನಾಥ್ ಸಿಂಗ್ ಅವರ ಮುಂದೆ ಇತರ ಕಾಂಗ್ರೆಸ್ ನಾಯಕರ ಜೊತೆಯಲ್ಲಿ ತೆರಳಿದ ರಾಹುಲ್ ಗಾಂಧಿ ಅವರು, ಸದನದ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಆಡಳಿತ ಪಕ್ಷವನ್ನು ಒತ್ತಾಯಿಸಿದರು. ಸಂಸತ್ತಿನ ಅಧಿವೇಶನಗಳಲ್ಲಿ ಅದಾನಿ ಸಮಸ್ಯೆ ಸೇರಿದಂತೆ ಪ್ರಮುಖ ವಿಷಯಗಳನ್ನು ಚರ್ಚಿಸಬೇಕು ಎಂದು ಪ್ರತಿಪಕ್ಷ ನಾಯಕರು ಈ ಮೂಲಕ ಆಡಳಿತರೂಢ ಸಂಸದರಿಗೆ ಸೂಚಿಸಿದ್ದಾರೆ.
Congress MP #RahulGandhi handed a rose and a Tricolour to Defence Minister Rajnath Singh at the Parliament premises.
📹ANI pic.twitter.com/4tPEnb49CD
— The New Indian Express (@NewIndianXpress) December 11, 2024
ಮಂಗಳವಾರ ಸಂಸದರು ಕಡು ನೀಲಿ ಬಣ್ಣದ ‘ಜೋಲಾ(ಬ್ಯಾಗ್)’ಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದರು. ಈ ಬ್ಯಾಗ್‌ನ ಒಂದು ಬದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಆಪ್ತ ಉದ್ಯಮಿ ಗೌತಮ್ ಅದಾನಿ ಅವರ ವ್ಯಂಗ್ಯಚಿತ್ರಗಳು ಹಾಗೂ ಮತ್ತೊಂದು ಬದಿಯಲ್ಲಿ ‘ಮೋದಿ-ಅದಾನಿ ಭಾಯಿ-ಭಾಯ್’ ಎಂದು ಬರೆಯಲಾಗಿತ್ತು.
ಸೋಮವಾರ, ಅದಾನಿ ವಿವಾದಕ್ಕೆ ಸಂಬಂಧಿಸಿದಂತೆ ಕೆಲವು ಇಂಡಿಯಾ ಒಕ್ಕೂಟದ ಪಕ್ಷಗಳ ನಾಯಕರು ಸಂಸತ್ ಕಟ್ಟಡದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರು ಮೋದಿ ಮತ್ತು ಅದಾನಿ ಮುಖವಾಡಗಳನ್ನು ಧರಿಸಿರುವ ಕಾಂಗ್ರೆಸ್ ಸದಸ್ಯರ ಜೊತೆಗೆ ಅಣಕು ‘ಸಂದರ್ಶನ’ ನಡೆಸಿದ್ದರು.
ಇದನ್ನೂ ಓದಿ: ಆಂಧ್ರ ಪ್ರದೇಶ| ದಲಿತ ಯುವಕನ ಮೇಲೆ ರಾಜಮಹೇಂದ್ರವರಂ ಪೊಲೀಸರಿಂದ ದೌರ್ಜನ್ಯ; ‘ಎನ್‌ಎಚ್‌ಆರ್‌ಸಿ’ಗೆ ದೂರು
ಆಂಧ್ರ ಪ್ರದೇಶ| ದಲಿತ ಯುವಕನ ಮೇಲೆ ರಾಜಮಹೇಂದ್ರವರಂ ಪೊಲೀಸರಿಂದ ದೌರ್ಜನ್ಯ; ‘ಎನ್‌ಎಚ್‌ಆರ್‌ಸಿ’ಗೆ ದೂರು


